ತವರು ಮನೆಗೆ ತೆರಳುವ ವಿಚಾರದಲ್ಲಿ ದಂಪತಿ ಕಲಹ, ಮಗುವನ್ನೂ ಲೆಕ್ಕಿಸದೆ ಆತ್ಮಹತ್ಯೆ ಮಾಡಿಕೊಂಡ ಮಹಿಳೆ
ಸಾಲು ಸಾಲು ರಜೆ ಹಿನ್ನೆಲೆ ಮೂರು ದಿನ ಹುಳಿಯಾರಿನಲ್ಲಿರುವ ತನ್ನ ತವರು ಮನೆಗೆ ಹೋಗಲು ಪತ್ನಿ ಹೇಳಿದ್ದಾಳೆ. ಆಗ ಪತ್ನಿ ಮಾತು ನಿರಾಕರಿಸಿ ತನ್ನೂರು ಹಿರಿಯೂರಿಗೆ ಹೋಗಲು ಪತಿ ವಾಗ್ವಾದ ಮಾಡಿದ್ದಾನೆ. ಈ ರೀತಿ ಶುರುವಾಗ ಜಗಳ ತಾರಕಕ್ಕೇರಿದ್ದು ಸಿಟ್ಟಿನಿಂದ ಪವಿತ್ರಾ ಆತ್ಮಹತ್ಯೆಗೆ ಶರಣಾಗಿದ್ದಾರೆ.
ನೆಲಮಂಗಲ, ಡಿ. 24: ತವರು ಮನೆಗೆ ತೆರಳುವ ವಿಚಾರದಲ್ಲಿ ದಂಪತಿ ನಡುವೆ ಕಲಹವಾಗಿದ್ದು ಪತ್ನಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲದಲ್ಲಿ ನಡೆದಿದೆ. ಹನ್ನೊಂದು ತಿಂಗಳ ಗಂಡು ಮಗು ಬಿಟ್ಟು ಪವಿತ್ರಾ (28) ಆತ್ಮಹತ್ಯೆಗೆ ಶರಣಾಗಿದ್ದಾರೆ. ಎರಡು ವರ್ಷದ ಹಿಂದೆ ಹಿರಿಯೂರು ಮೂಲದ ಚೇತನ್ ಜೊತೆ ಪವಿತ್ರಾಳ ಮದುವೆಯಾಗಿತ್ತು. ಸದ್ಯ ಸಾಲು ಸಾಲು ರಜೆ ಹಿನ್ನೆಲೆ ಮೂರು ದಿನ ಹುಳಿಯಾರಿನಲ್ಲಿರುವ ತನ್ನ ತವರು ಮನೆಗೆ ಹೋಗಲು ಪತ್ನಿ ಹೇಳಿದ್ದಾಳೆ. ಆಗ ಪತ್ನಿ ಮಾತು ನಿರಾಕರಿಸಿ ತನ್ನೂರು ಹಿರಿಯೂರಿಗೆ ಹೋಗಲು ಪತಿ ವಾಗ್ವಾದ ಮಾಡಿದ್ದಾನೆ. ಈ ರೀತಿ ಶುರುವಾಗ ಜಗಳ ತಾರಕಕ್ಕೇರಿದ್ದು ಸಿಟ್ಟಿನಿಂದ ಪವಿತ್ರಾ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಇನ್ನು ಮತ್ತೊಂದೆಡೆ ಇಂದು ಸಂಜೆ ಪವಿತ್ರ ಮಾವನ ಮಗಳ ಆರಕ್ಷತೆ ಕಾರ್ಯಕ್ರಮವಿತ್ತು. ಹೀಗಾಗಿ ಊರಿಗೆ ಹೋಗಲು ಪವಿತ್ರಾ ಒತ್ತಾಯಿಸಿದ್ದರು. ಆದರೆ ತನ್ನ ಊರಿಗೆ ಹೋಗೋಣ ಎಂದು ಪತಿ ಕೂಡ ವಾಗ್ವಾದ ಮಾಡಿದ್ದಾರೆ. ಮಾತಿಗೆ ಮಾತು ಬೆಳೆದು ಜಗಳ ಹೆಚ್ಚಾಗಿದ್ದು ಸಿಟ್ಟಿನಿಂದ ಚೇತನ್ ತನ್ನ ಮಗುವನ್ನು ಎತ್ತಿಕೊಂಡು ಹೊರಗೆ ಹೋಗಿದ್ದು ಪವಿತ್ರಾ ಪ್ಯಾನಿಗೆ ಸೀರೆಯಿಂದ ನೇಣುಬಿಗಿದು ಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪತಿ ಚೇತನ್ ಮನೆ ಬಳಿ ಬಂದಾಗ ಘಟನೆ ಬೆಳಕಿಗೆ ಬಂದಿದೆ. ಮರಣೋತ್ತರ ಪರೀಕ್ಷೆಗಾಗಿ ನೆಲಮಂಗಲ ಸಾರ್ವಜನಿಕ ಅಸ್ಪತ್ರೆಗೆ ಮೃತ ದೇಹ ರವಾನಿಸಲಾಗಿದೆ. ನೆಲಮಂಗಲ ಟೌನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಬೆಂಗಳೂರು: ಸಿಲಿಂಡರ್ ಸ್ಫೋಟದಿಂದ ಗಾಯಗೊಂಡಿದ್ದ ಎರಡೂವರೆ ವರ್ಷದ ಮಗು ಹಾಗೂ ತಂದೆ ಸಾವು
BMTC ಬಸ್ ಚಾಲಕನ ಮೇಲೆ ಹಲ್ಲೆ
ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ಟೌನ್ ಬಳಿ ಕಾರಿಗೆ ಸೈಡ್ ಬಿಡುವ ವಿಚಾರವಾಗಿ BMTC ಬಸ್ ಚಾಲಕನ ಮೇಲೆ ಹಲ್ಲೆ ನಡೆದಿದೆ. ಬಿಎಂಟಿಸಿ ಬಸ್ನ ಗ್ಲಾಸ್ ಹೊಡೆದು ಬಸ್ ಚಾಲಕ ಯಂಕಪ್ಪ ಮೇಲೆ ಹಲ್ಲೆ ನಡೆಸಿ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ. ಸಿಗೇಹಳ್ಳಿಯ 35ನೇ ಡಿಪೋಗೆ ಸೇರಿದ ಬಿಎಂಟಿಸಿ ಬಸ್ ಇದಾಗಿದ್ದು ನೆಲಮಂಗಲದಿಂದ ತಾವರೆಕೆರೆಗೆ BMTC ಬಸ್ ತೆರಳುತ್ತಿದ್ದಾಗ ಘಟನೆ ನಡೆದಿದೆ.
ಕಾರಿಗೆ ಸೈಡ್ ಬಿಟ್ಟಿಲ್ಲ ಎಂದು ಕೋಪಗೊಂಡ ಕಾರಿನಲ್ಲಿದ್ದವರು ಕಾರಿಗೆ ಬಸ್ ಟಚ್ ಆಗಿದೆ ಎಂದು ಗಲಾಟೆ ನಡೆಸಿ ಚಾಲಕನ ಮೇಲೆ ಹಲ್ಲೆ ನಡೆಸಿದ್ದಾರೆ. ಸದ್ಯ ನೆಲಮಂಗಲ ಟೌನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಕಾರಿನ ನಂಬರ್ ಪಡೆದು ಹಲ್ಲೆ ಮಾಡಿದ ಆರೋಪಿಗಳಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ