275 ಪಶು ಸಂಜೀವಿನಿ ಆ್ಯಂಬುಲೆನ್ಸ್ ಲೋಕಾರ್ಪಣೆ; ಶೀಘ್ರದಲ್ಲೇ 400 ಪಶು ವೈದ್ಯರ ನೇಮಕ: ಸಚಿವ ಪ್ರಭು ಚವ್ಹಾಣ್ 

| Updated By: ವಿವೇಕ ಬಿರಾದಾರ

Updated on: Jul 19, 2022 | 4:29 PM

ಗೋಪಾಲಕ, ಗೋರಕ್ಷಕ ನರೇಂದ್ರ ಮೋದಿ ಆಶೀರ್ವಾದದಿಂದ 275 ಆ್ಯಂಬುಲೆನ್ಸ್‌ ಕರ್ನಾಟಕಕ್ಕೆ ಬಂದಿದ್ದು, ಹೀಗಾಗಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅಭಿನಂದನೆ ಸಲ್ಲಿಸುವೆ ಎಂದು ಪಶುಸಂಗೋಪನಾ ಸಚಿವ ಪ್ರಭು ಚವ್ಹಾಣ್  ಬೆಳಗಾವಿಯ ಸುವರ್ಣಸೌಧದಲ್ಲಿ ಹೇಳಿದ್ದಾರೆ. 

275 ಪಶು ಸಂಜೀವಿನಿ ಆ್ಯಂಬುಲೆನ್ಸ್ ಲೋಕಾರ್ಪಣೆ; ಶೀಘ್ರದಲ್ಲೇ 400 ಪಶು ವೈದ್ಯರ ನೇಮಕ:  ಸಚಿವ ಪ್ರಭು ಚವ್ಹಾಣ್ 
ಪಶು ಸಂಜೀವಿನಿ ಆ್ಯಂಬುಲೆನ್ಸ್ ಉದ್ಘಾಟಿಸಿ ಸಚಿವ ಪ್ರಭು ಚೌಹಾಣ
Follow us on

ಬೆಳಗಾವಿ: ಗೋಪಾಲಕ, ಗೋರಕ್ಷಕ ಪ್ರಧಾನಿ ನರೇಂದ್ರ ಮೋದಿ (Narendra Modi) ಆಶೀರ್ವಾದದಿಂದ 275 ಆ್ಯಂಬುಲೆನ್ಸ್‌ (Ambulance) ಕರ್ನಾಟಕಕ್ಕೆ ಬಂದಿದ್ದು, ಹೀಗಾಗಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅಭಿನಂದನೆ ಸಲ್ಲಿಸುವೆ ಎಂದು ಪಶುಸಂಗೋಪನಾ ಸಚಿವ ಪ್ರಭು ಚವ್ಹಾಣ್ (Prabhu Chavan)  ಬೆಳಗಾವಿಯ ಸುವರ್ಣಸೌಧದಲ್ಲಿ ಹೇಳಿದ್ದಾರೆ.  ಬೆಳಗಾವಿಯ (Belagavi) ಸುವರ್ಣಸೌಧದ (Suvarnsoudha) ಸಭಾಂಗಣದಲ್ಲಿ  ಸಂಚಾರಿ ಪಶು ಚಿಕಿತ್ಸಾ ಘಟಕಗಳನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದ ಅವರು ನಮ್ಮ ದೇಶ ಕೃಷಿ ಪ್ರಧಾನ ದೇಶ. ನಮ್ಮ ಗೋಮಾತಾ, ಮೂಖಪ್ರಾಣಿಗಳಿಗೆ ದೊಡ್ಡ ಸ್ಥಾನಮಾನ ಇದೆ ಎಂದು ತಿಳಿಸಿದರು.

ನಾನು ಸಚಿವನಾದ ಮೇಲೆ 15 ಪಶು ಸಂಜೀವಿನಿ ಆ್ಯಂಬುಲೆನ್ಸ್​​ಗಳಿಗೆ ಚಾಲನೆ ನೀಡಿದ್ದೇನೆ . ಆಗ ನನ್ನನ್ನು ಕೇಂದ್ರ ಸರ್ಕಾರ ಕರೆದು ಕರ್ನಾಟಕದಲ್ಲಿ ಯಾವ ರೀತಿ ಪಶುಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಆ್ಯಂಬುಲೆನ್ಸ್​ಗಳ ಕಾರ್ಯವೈಖರಿ ಬಗ್ಗೆ ಚರ್ಚಿಸಿದರು. ನಮ್ಮ ಕರ್ನಾಟಕ ಸರ್ಕಾರದ ಪ್ರಯೋಗ ಇದು. ಆ್ಯಂಬುಲೆನ್ಸ್‌ ಗಳ ನಿರ್ವಹಣೆ ಶೇಕಡ 60ರಷ್ಟು ಹಣ ಕೇಂದ್ರ ಸರ್ಕಾರ ನೀಡಿದೆ. ಮತ್ತು ಶೇಕಡ 40ರಷ್ಟು ರಾಜ್ಯ ಸರ್ಕಾರ ನೀಡಿದೆ ಎಂದು ತಿಳಿಸಿದ್ದಾರೆ.

ಬೆಳಗಾವಿ ಜಿಲ್ಲೆಯ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದ್ದೇನೆ. ಪಶುವೈದ್ಯಕೀಯ ಸ್ಪೆಶಾಲಿಟಿ ಆಸ್ಪತ್ರೆ, ಪಶುವೈದ್ಯಕೀಯ ತರಬೇತಿ ಕೇಂದ್ರ, ರೈತರ ತರಬೇತಿ ಕೇಂದ್ರ, ಪಶು ರೋಗ ತನಿಖಾ ಪ್ರಯೋಗಾಲಯ ಮತ್ತು ಮಾಹಿತಿ ಕೇಂದ್ರ ಕಟ್ಟಡಗಳನ್ನು ಲೋಕಾರ್ಪಣೆಗೊಳಿಸಿದ್ದೇನೆ ಎಂದರು.

ನಾನು ಸಚಿವನಾದ ಮೇಲೆ 20 ಸಾವಿರ ಗೋವು ರಕ್ಷಣೆ ಮಾಡಿ ಗೋಶಾಲೆಗೆ ಕಳಿಸಿದ್ದೇನೆ. 900 ಕೇಸ್ ಬುಕ್ ಮಾಡಿದ್ದೇನೆ, ಬಕ್ರೀದ್ ವೇಳೆ ಕಠಿಣ ಕ್ರಮ ಕೈಗೊಂಡಿದ್ದು, ಶೇಕಡ 60 ರಿಂದ 70ರಷ್ಟು ಗೋವುಗಳ ರಕ್ಷಣೆ ಮಾಡಲಾಗಿದೆ. ಪ್ರತಿ ಜಿಲ್ಲೆಗೆ ಸರ್ಕಾರಿ ಗೋಶಾಲೆಗಳ  ನಿರ್ಮಿಸಲು ಕ್ರಮ ಕೈಗೊಳ್ಳಲಾಗುವುದು. ಪ್ರತಿ ರೈತರ ಮನೆ ಮುಂದೆ ಎಮ್ಮೆ, ಕರು, ಆಕಳು ಇರಬೇಕು ಎಂದು ಸೂಚಿಸಿದರು.

ಗೋಮೂತ್ರ, ಸಗಣಿಯಿಂದ ಸಾಬೂನು, ಶಾಂಪೂ ಸೇರಿ ವಿವಿಧ ಉತ್ನನ್ನ ನಿರ್ಮಿಸಲು ಆತ್ಮನಿರ್ಭರ ಗೋಶಾಲಾ ಇರಬೇಕು. ಗೋವುಗಳ ಗೋಮೂತ್ರ, ಸಗಣಿ, ಹಾಲಿನಿಂದ ಉಪಯೋಗವಿದೆ. ಮೂಕ ಪ್ರಾಣಿಗಳ ಸೇವೆಗೆ ಅವಕಾಶ ಸಿಕ್ಕಿದ್ದು ಖುಷಿಯಾಗಿದೆ. ರೈತರು ಅಧಿಕಾರಿಗಳು ನಮಗೆ ಬೆಂಬಲ ನೀಡುತ್ತಿದ್ದಾರೆ. ನಮ್ಮ ಗೋಮಾತಾ ಕಸಾಯಿಖಾನೆ ಹೋಗಬಾರದು. ನಮಗೆ ಹುಷಾರಿಲ್ಲ ಅಂದರೆ  108ಗೆ ಕರೆ ಮಾಡುತ್ತೀರರಿ. ನಿಮ್ಮ ಜಾನುವಾರುಗೆ ಹುಷಾರಿಲ್ಲ ಅಂದ್ರೆ 1962ಗೆ ಕರೆ ಮಾಡಿದರೆ ಮನೆ ಬಾಗಿಲಿಗೆ ಆಂಬುಲೆನ್ಸ್​​ ಬರುತ್ತೆ ಎಂದು ಮಾತನಾಡಿದರು.

ಪ್ರಾಣಿ ಸಹಾಯವಾಣಿ ಕೇಂದ್ರದಲ್ಲಿ 24X7 ಕೆಲಸ ಮಾಡುತ್ತಿದ್ದಾರೆ. ಬಜೆಟ್​ನಲ್ಲಿ ರಾಜ್ಯದಲ್ಲಿ ನೂರು ಗೋಶಾಲಾ ಸ್ಥಾಪನೆಯ ಬಗ್ಗೆ ಘೋಷಣೆ ಮಾಡಲಾಗಿದೆ. ಹಂದಿಗೆ ಮಾರ್ಕೆಟ್ ನಲ್ಲಿ ಬಹಳ ಡಿಮ್ಯಾಂಡ್ ಇದೆ, ಹಂದಿ ಸಾಕಾಣಿಕೆಗೆ ಉತ್ತೇಜನ ನೀಡಲಾಗುವುದು. ಗೋಹತ್ಯೆ ನಿಷೇಧ ಆದಮೇಲೆ ಅತಿ ಹೆಚ್ಚು ಜನರು ಕೋಳಿ ಸಾಕಾಣಿಕೆ ಮಾಡುತ್ತಿದ್ದಾರೆ.

ಪಶುವೈದ್ಯರ ಕೊರತೆ ಇದೆ ನಾನು ಒಪ್ಪಿಕೊಳ್ಳುನೆ. ಶೀಘ್ರದಲ್ಲೇ 400 ಪಶು ವೈದ್ಯರ ನೇಮಕ ಮಾಡಿಕೊಳ್ಳಲಾಗುತ್ತದೆ. ಕೆಲವರು ಪಿಐಎಲ್ ಹೋಗಿದ್ದರಿಂದ ವಿಳಂಬ ಆಗಿದೆ. 12 ವರ್ಷಗಳಿಂದ ಪಶುಸಂಗೋಪನೆ ಇಲಾಖೆಯಲ್ಲಿ ಬಡ್ತಿ ಆಗಿರಲಿಲ್ಲ. ನಾನು ಬಂದ ಮೇಲೆ ಸಿಬ್ಬಂದಿಗಳ ಬಡ್ತಿ ಮಾಡಲಾಗಿದೆ. ಶೀಘ್ರವೇ 250 ಕಿರಿಯ ಪಶು ವೈದ್ಯಾಧಿಕಾರಿಗಳ ನೇಮಕ ಮಾಡಲಾಗುತ್ತದೆ ಎಂದು ನುಡಿದರು.

Published On - 4:28 pm, Tue, 19 July 22