ಚಿಕ್ಕೋಡಿ ಬಿಎಸ್ಎಫ್ ಯೋಧ ಸೂರಜ್ ಸುತಾರ್ ಪಾರ್ಥಿವ ಶರೀರಕ್ಕೆ ಗಣ್ಯರಿಂದ ಅಂತಿಮ ನಮನ, ಮೆರವಣಿಗೆಯುದ್ದಕ್ಕೂ ಮೊಳಗಿದ ಅಮರ್​ ರಹೆ ಘೋಷಣೆ

ಮೃತ ಯೋಧನ ಪಾರ್ಥಿವ ಶರೀರಕ್ಕೆ ಚಿಕ್ಕೋಡಿ ತಾಲೂಕು ಆಡಲಿತ ಹಾಗೂ ಸ್ಥಳೀಯ ಜನಪ್ರತಿನಿಧಿಗಳು ಗೌರವ ಸಲ್ಲಿಸಿದ್ದಾರೆ. ಚಿಕ್ಕೋಡಿ ಉಪವಿಭಾಗಾಧಿಕಾರಿ ಸಂತೋಷ್ ಕಾಮಗೌಡರು ಅಂತಿಮ ಗೌರವ ಸಲ್ಲಿಸಿದ್ದಾರೆ.

ಚಿಕ್ಕೋಡಿ ಬಿಎಸ್ಎಫ್ ಯೋಧ ಸೂರಜ್ ಸುತಾರ್ ಪಾರ್ಥಿವ ಶರೀರಕ್ಕೆ ಗಣ್ಯರಿಂದ ಅಂತಿಮ ನಮನ, ಮೆರವಣಿಗೆಯುದ್ದಕ್ಕೂ ಮೊಳಗಿದ ಅಮರ್​ ರಹೆ ಘೋಷಣೆ
ಚಿಕ್ಕೋಡಿ ಬಿಎಸ್ಎಫ್ ಯೋಧ ಸೂರಜ್ ಸುತಾರ್ ಪಾರ್ಥಿವ ಶರೀರಕ್ಕೆ ಗಣ್ಯರಿಂದ ಅಂತಿಮ ನಮನ
TV9kannada Web Team

| Edited By: Ayesha Banu

Jul 20, 2022 | 3:44 PM

ಚಿಕ್ಕೋಡಿ: ರಸ್ತೆ ಅಪಘಾತದಲ್ಲಿ ಬೆಳಗಾವಿ ಮೂಲದ ಬಿಎಸ್ಎಫ್ ಯೋಧ(BSF jawan) ಸಾವನ್ನಪ್ಪಿದ್ದರು. ಮೃತ ಬಿಎಸ್ಎಫ್ ಯೋಧ ಸೂರಜ್ ಸುತಾರ್ ಪಾರ್ಥಿವ ಶರೀರ ಸ್ವಗ್ರಾಮ ಯಡೂರುವಾಡಿಗೆ ಆಗಮಿಸಿದ್ದು ಇಡೀ ಗ್ರಾಮ ಕಣ್ಣೀರಲ್ಲಿ ಮುಳುಗಿದೆ. ಗಣ್ಯರು ಪಾರ್ಥಿವ ಶರೀರಕ್ಕೆ ಅಂತಿಮ ನಮನ ಸಲ್ಲಿಸಿದ್ದಾರೆ.

ಮೃತ ಯೋಧನ ಪಾರ್ಥಿವ ಶರೀರಕ್ಕೆ ಚಿಕ್ಕೋಡಿ ತಾಲೂಕು ಆಡಲಿತ ಹಾಗೂ ಸ್ಥಳೀಯ ಜನಪ್ರತಿನಿಧಿಗಳು ಗೌರವ ಸಲ್ಲಿಸಿದ್ದಾರೆ. ಚಿಕ್ಕೋಡಿ ಉಪವಿಭಾಗಾಧಿಕಾರಿ ಸಂತೋಷ್ ಕಾಮಗೌಡರು ಅಂತಿಮ ಗೌರವ ಸಲ್ಲಿಸಿದ್ದಾರೆ. ಹಾಗೂ ಸಚಿವೆ ಶಶಿಕಲಾ ಜೊಲ್ಲೆ, ಶಾಸಕ ಗಣೇಶ್ ಹುಕ್ಕೇರಿ, ಮಾಜಿ ಎಂಎಲ್ಸಿ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದಿದ್ದಾರೆ. ಮೃತ ಯೋಧನ ಕುಟುಂಬಕ್ಕೆ ಸಾಂತ್ವನ ಹೇಳಿದ್ದಾರೆ. ಗ್ರಾಮದ ಪ್ರಮುಖ ಬೀದಿಗಳಲ್ಲಿ ಪಾರ್ಥಿವ ಶರೀರ ಮೆರವಣಿಗೆ ನಡೆಸಲಾಗಿದ್ದು ಮೆರವಣಿಗೆ ವೇಳೆ ಪುಷ್ಪನಮನ, ಮನೆ ಮನೆಯವರಿಂದಲೂ ಆರತಿ ಬೆಳಗಿ ಅಂತಿಮ ದರ್ಶನ ಪಡೆಯಲಾಗಿದೆ. ಮೆರವಣಿಗೆಯಲ್ಲಿ ಊರಿನ ಗ್ರಾಮಸ್ಥರು ಹಾಗೂ ಚಿಕ್ಕ ಮಕ್ಕಳು ಭಾಗಿಯಾಗಿದ್ದರು. ಮೆರವಣಿಗೆಯುದ್ದಕ್ಕೂ ಘೋಷ ವಾಕ್ಯ ಘೋಷಣೆ ಮೊಳಗಿತ್ತು.

ಲಾರಿ ಡಿಕ್ಕಿಯಾಘಿ ಯೋಧ ಸಾವು

2012ರಲ್ಲಿ ಭಾರತೀಯ ಗಡಿ ಭದ್ರತಾ ಪಡೆಯಲ್ಲಿ ಸೇವೆಗೆ ಹಾಜರಾಗಿದ್ದ ಸೂರಜ್ ದೊಂಡಿರಾಮ್ ಸುತಾರ್ ಸುಮಾರು 10 ವರ್ಷಗಳ ಕಾಲ ಸೇನೆಯಲ್ಲಿ ಪಶ್ಚಿಮ ಬಂಗಾಳ, ಕಾಶ್ಮೀರದಲ್ಲಿ ಸೇವೆ ಸಲ್ಲಿಸಿ ಮತ್ತೆ ಪ್ರಸ್ತುತ ಪಶ್ಚಿಮ ಬಂಗಾಳದ ಪನಜಿಪರಾದ ಉತ್ತರ ದೀನಜಪುರ್ ನ 152 ಬಟಾಲಿಯನ್ ಲ್ಲಿ ಸೇವೆಯನ್ನ ಸಲ್ಲಿಸುತ್ತಿದ್ದರು. ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಯಡೂರವಾಡಿ ಗ್ರಾಮದ ಬಿಎಸ್​ಎಫ್ ಯೋಧ ಸೂರಜ್ ಸುತಾರ್ (32) ಕಳೆದ 18 ನೇ ತಾರೀಖಿನಂದು ಸೇವೆ ಸಲ್ಲಿಸುವಾಗಲೇ ಆಸ್ಸಾಂ ನ ಕಿಶನ್ ಗಂಜ್ ರೇಲ್ವೆ ಸ್ಟೇಷನ್ ಗೆ ತನ್ನ ಹೆಂಡತಿ ಮಗುವನ್ನ ಕರೆ ತರಲು ಹೋದಾಗ ಆಟೋದಿಂದ ಇಳಿದು ರಸ್ತೆ ದಾಟುವಾಗ ಲಾರಿ ಡಿಕ್ಕಿಯಾಗಿ ಸಾವನ್ನಪ್ಪಿದ್ದಾರೆ.

ಪಶ್ಚಿಮ ಬಂಗಾಳದ ರುಬೀನಾ ಎಂಬ ಹೆಸರಿನ ಯುವತಿಯೊಬ್ಬಳನ್ನ ಲವ್ ಮಾಡಿ ಐದು ವರ್ಷದ ಹಿಂದೆ ಯಡೂರುವಾಡಿಯಲ್ಲೆ ಮನೆಯವರ ಸಮ್ಮುಖದಲ್ಲೆ ಮದುವೆ ಆಗಿದ್ದ ಸೂರಜ್ ರೂಬೀನಾ ದಂಪತಿಗೆ ಮೂರು ವರ್ಷದ ಪುಟ್ಟ ಹೆಣ್ಣು ಮಗು ಇದೆ. ಕಳೆದ ಎರಡು ವರ್ಷಗಳಿಂದ ರಜೆ ಇಲ್ಲದ ಕಾರಣ ಸ್ವಗ್ರಾಮ ಯಡೂರವಾಡಿಗೆ ಬಂದಿರಲಿಲ್ಲ ರಜೆ ತಗೆದುಕೊಂಡು ಊರಿಗೆ ಬರುತ್ತೀನಿ ಅಂತ ಹೇಳಿದ್ದ ಮನೆ ಮಗ ಈ ರೀತಿ ಹೆಣವಾಗಿ ಬಂದಿದ್ದಕ್ಕೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು ಇನ್ನೂ ಸೂಸೆ ಮೊಮ್ಮಗಳ ಮುಂದಿನ ಭವಿಷ್ಯ ಹೇಗೆ ಎಂಬ ಚಿಂತೆ ಅಂತ ಕಣ್ಣಿರು ಹಾಕುತ್ತಿದ್ದಾರೆ.

ಸ್ವಗ್ರಾಮ ಯಡೂರವಾಡಿಯಲ್ಲಿ ಮೃತ ಯೋಧ ಸೂರಜ್ ಪಾರ್ಥಿವ್ ಶರೀರ ಗ್ರಾಮದ ಪ್ರಮುಖ ಬೀದಿಗಳಲ್ಲಿ ತೆರೆದ ವಾಹನದಲ್ಲಿ ಮೆರವಣಿಗೆ ಮಾಡಲಾಯಿತು ಮೆರವಣಿಗೆ ವೇಳೆ ಪುಷ್ಪನಮನ, ಮನೆ ಮನೆಯವರಿಂದ ಆರತಿ ಬೆಳಗಿ ಯೋಧನ ಪಾರ್ಥಿವ ಶರೀರ ಅಂತಿಮ ದರ್ಶನ ಪಡೆದುಕೊಂಡರು. ಮೆರವಣಿಗೆಯಲ್ಲಿ ಊರಿನ ಗ್ರಾಮಸ್ಥರು ಸೇರಿದಂತೆ ಅಕ್ಕ ಪಕ್ಕದ ಗ್ರಾಮಸ್ಥರು ಭಾಗಿಯಾಗಿದ್ರು. ಚಿಕ್ಕ ಮಕ್ಕಳು ರಾಷ್ಟ್ರಧ್ವಜ ಹಿಡಿದು ಭಾಗಿಯಾಗಿ ಮೆರವಣಿಗೆಯೂದ್ಧಕ್ಕೂ ಘೋಷಣೆ ಕೂಗಿದ್ರು, ಇನ್ನೂ ಮೆರವಣಿಗೆ ಮುಂಚೆ ಗ್ರಾಮದ ಲಕ್ಷ್ಮೀ ದೇವಸ್ಥಾನದ ಮುಂದೆ ಸಾರ್ವಜನಿಕರಿಗೆ ಅಂತಿಮ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿತ್ತು.

ಮೃತ ಯೋಧನ ಪಾರ್ಥಿವ ಶರೀರಕ್ಕೆ ಚಿಕ್ಕೋಡಿ ತಾಲೂಕು ಆಡಳಿತ ಹಾಗೂ ಸ್ಥಳೀಯ ಜನಪ್ರತಿನಿಧಿಗಳು ಗೌರವ ಸಲ್ಲಿಸಿದರು. ಇನ್ನೂ ಯೋಧನ ಅಂತಿಮ ದರ್ಶನ ವೇಳೆ ಸಚಿವೆ ಶಶಿಕಲಾ ಜೊಲ್ಲೆ ಕಣ್ಣಿರು ಹಾಕಿದರು. ಅಣ್ಣ ಸೂರಜ್ ಪ್ರೇರಣೆಯಿಂದ ತಮ್ಮ ಕಿರಣ್ ಕೂಡ ಭಾರತೀಯ ಸೇನೆಯ ಸಿ.ಐ.ಎಸ್. ಎಫ್ ನ ಓರಿಸ್ಸಾದಲ್ಲಿ ಒಂದು ವರ್ಷದಿಂದ ಸೇವೆ ಸಲ್ಲಿಸುತ್ತಿದ್ದು ಟ್ರೈನಿಂಗ್ ಮುಗಿಸಿ 12 ದಿನವಷ್ಟೇ ಆಗಿದೆ. ದೇಶಕ್ಕಗಿ 10 ವರ್ಷ ದೇಶಕ್ಕಾಗಿ ಸೇವೆ ಸಲ್ಲಿಸಿದ ಯೋಧ ಹೀಗೆ ತನ್ನ ಕುಟುಂಬವನ್ನು ಕರೆದುಕೊಂಡು ಬರಲು ಹೋಗಿ ಅಪಘಾತದಲ್ಲಿ ಮೃತ ಪಟ್ಟಿರುವುದು ದುರಂತ. ಇನ್ನೂ ಸಕಲ ಸರ್ಕಾರಿ ಗೌರವ ಮರ್ಯಾದೆಯೊಂದಿಗೆ ಗ್ರಾಮದ ಹೊರಲವಲಯದಲ್ಲಿ ಮೃತ ಸೂರಜ್ ಅಂತ್ಯಕ್ರಿಯೆ ನೆರವೇರಿತು.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada