ಬೆಳಗಾವಿ, ಅ.01: ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಮಾಂಗನೂರ ಗ್ರಾಮದಲ್ಲಿ 17 ತಿಂಗಳ ಮಗುವಿನೊಂದಿಗೆ ತಾಯಿ ಬಾವಿಗೆ ಹಾರಿಗೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಗಾಯತ್ರಿ ವಾಗಮೋರೆ(26), ಮಗು ಕುಶಾಲ್ ಮೃತರು. ಕೌಟುಂಬಿಕ ಕಲಹ ಹಿನ್ನಲೆ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದ್ದು, ಘಟನಾ ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ, ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮಗು ಹಾಗೂ ತಾಯಿ ಶವವನ್ನು ಹೊರ ತೆಗೆಯಲಾಗಿದ್ದು, ಮರಣೋತ್ತರ ಪರೀಕ್ಷೆಗೆ ಆಸ್ಪತ್ರೆಗೆ ರವಾನಿಸಲಾಗಿದೆ. ಇನ್ನು ಸ್ಥಳದಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ಉಡುಪಿ: ಕಾಲೇಜು ಮುಗಿಸಿ ಸ್ನೇಹಿತರೊಂದಿಗೆ ತೆರಳುತ್ತಿದ್ದ ಪ್ರಥಮ ಬಿಎಸ್ಸಿ ವಿದ್ಯಾರ್ಥಿ ಮೇಲೆ ಟಿಪ್ಪರ್ ಲಾರಿ ಹರಿದು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಕೋಟೇಶ್ವರ-ಹಾಲಾಡಿ ರಸ್ತೆಯ ಕಾಗೇರಿ ಪ್ರದೇಶದಲ್ಲಿ ನಡೆದಿದೆ. ವಿದ್ಯಾರ್ಥಿ ಧನುಷ್(19) ಸ್ಥಳದಲ್ಲೇ ಕೊನೆಯುಸಿರೆಳದ ವಿದ್ಯಾರ್ಥಿ. ಇತ ಕೋಟೇಶ್ವರದ ವರದರಾಜ ಶೆಟ್ಟಿ ಸರ್ಕಾರಿ ಕಾಲೇಜಿನಲ್ಲಿ ಓದುತ್ತಿದ್ದ.
ಇದನ್ನೂ ಓದಿ:ಬೆಂಗಳೂರಿನ ಮಹಾಲಕ್ಷ್ಮೀಯನ್ನು 50ಕ್ಕೂ ಹೆಚ್ಚು ಪೀಸ್ ಪೀಸ್ ಮಾಡಿದ್ದ ಹಂತಕ ಆತ್ಮಹತ್ಯೆ
ಪ್ರತಿದಿನದಂತೆ ಇಂದು ಕೂಡ ಕಾಲೇಜು ಮುಗಿಸಿ ಸ್ನೇಹಿತರ ಜೊತೆ ತೆರಳುತ್ತಿದ್ದ ಧನುಷ್, ಫುಟ್ಪಾತ್ ಮೇಲೆ ನಡೆದುಕೊಂಡು ಹೋಗುತ್ತಿದ್ದ. ಈ ವೇಳೆ ಎದುರಿನಿಂದ ಬರುತ್ತಿದ್ದ ಕಾರನ್ನು ತಪ್ಪಿಸಲು ಹೋದ ಲಾರಿ ಚಾಲಕ, ಧನುಷ್ಗೆ ಡಿಕ್ಕಿ ಹೊಡೆದಿದ್ದಾನೆ. ಪರಿಣಾಮ ಧನುಷ್ ಸ್ಥಳದಲ್ಲೇ ಜೀವಬಿಟ್ಟಿದ್ದಾನೆ. ಈ ಕುರಿತು ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇತ್ತ ಪೋಷಕರ ಆಕ್ರಂದನ ಮುಗಿಲುಮುಟ್ಟಿದೆ.
ಗದಗ: ಹೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ವಿದ್ಯುತ್ ಪ್ರವಹಿಸಿ 11 ಕುರಿ ಹಾಗೂ 1 ಶ್ವಾನ ಬಲಿಯಾದ ಘಟನೆ ಗದಗ ಜಿಲ್ಲೆಯ ಗಜೇಂದ್ರಗಡ ತಾಲೂಕಿನ ನರೇಗಲ್ ಹೊರವಲಯದಲ್ಲಿ ನಡೆದಿದೆ. ಜಮೀನೊಂದರಲ್ಲಿ ವಿದ್ಯುತ್ ಕಂಬ ನೆಲಕ್ಕುರುಳಿ ಕರೆಂಟ್ ಶಾಕ್ ಹೊಡೆದಿದ್ದು, ವಿದ್ಯುತ್ ನಿಷ್ಕ್ರೀಯಗೊಳಿಸದೇ ಹೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯ ತೋರಿದ್ದಾರೆ. ಇದರಿಂದ ದುರ್ಘಟನೆ ನಡೆದಿದೆ ಎನ್ನಲಾಗಿದೆ.
ಇನ್ನು ಬೆಳಗಾವಿ ಜಿಲ್ಲೆಯ ನವಲಪ್ಪ ಹೆಗಡೆ ಎನ್ನುವ ಕುರಿಗಾಹಿಗೆ ಸೇರಿದ ಕುರಿಗಳಾಗಿದ್ದು, ನರೇಗಲ್ ಗ್ರಾಮದ ಜಮೀನೊಂದರಲ್ಲಿ 300 ಕುರಿಗಳ ಹಿಂಡಿನೊಂದಿಗೆ ಕುರಿ ಮೇಯಿಸುತ್ತಿದ್ದರು. ತಕ್ಷಣ ಎಚ್ಚೆತ್ತ ಕುರಿಗಾಹಿಯಿಂದ ಹೆಚ್ಚಿನ ಕುರಿಗಳು ಅಪಾಯದಿಂದ ಬಚಾವ್ ಆಗಿದೆ. ಓರ್ವ ಕುರಿಗಾಹಿಗೆ ವಿದ್ಯುತ್ ಶಾಕ್, ಹೆಚ್ಚಿನ ಹಾನಿ ಸಂಭವಿಸಿಲ್ಲ. ಈ ಘಟನೆ
ಗಜೇಂದ್ರಗಡ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ