ಬೆಳಗಾವಿ: ಇಡೀ ಬದುಕನ್ನೇ ತನ್ನ ಮಗುವಿಗಾಗಿ ಮೀಸಲಿಡುವ ಕಣ್ಣಿಗೆ ಕಾಣುವ ದೇವರು ಅಂದರೆ ಅದು ತಾಯಿ (Mother). ಜನ್ಮ ನೀಡಿದ ದಿನದಿಂದ ಮಗುವಿನ (Baby) ಬಗ್ಗೆ ಕನಸು ಕಾಣುತ್ತಾಳೆ. ಕಷ್ಟ – ಸುಖನೋ ಚೆನ್ನಾಗಿ ಓದಿಸಬೇಕು ಅಂತ ಪರದಾಡುತ್ತಾಳೆ. ಹೀಗೆ ಮಕ್ಕಳ ಏಳಿಗೆಗಾಗಿ ಸದಾ ಶ್ರಮಿಸುವ ಜಗನ್ಮಾತೆ ತನ್ನ ಕಂದನ ಜೀವಕ್ಕೆ ಏನಾದರೂ ತೊಂದರೆಯಾದರೆ ಅಕ್ಷರಶಃ ಕೊರಗುತ್ತಾಳೆ. ಮಗುವನ್ನು ಉಳಿಸಿಕೊಳ್ಳಲು ಇಲ್ಲಸಲ್ಲದ ಕಷ್ಟಗಳನ್ನ ಎದುರಿಸುತ್ತಾಳೆ. ಯಾವುದು ಪ್ರಯೋಜನಕ್ಕೆ ಬಾರದಿದ್ದಾಗ ದೇವರೇ ನೀನು ಕಾಪಾಡು ಅಂತ ಕಣ್ಣೀರು ಹಾಕುತ್ತಾಳೆ. ಹೀಗೆ ಜಿಲ್ಲೆಯಲ್ಲಿ ತಾಯಿಯೊಬ್ಬರು ತನ್ನ ಮಗನನ್ನು ಉಳಿಸಿಕೊಳ್ಳಲು ದೇವರ ಮೊರೆ ಹೋಗಿರುವ ಘಟನೆ ನಡೆದಿದೆ.
ಖಾನಾಪುರ ತಾಲೂಕಿನ ನಂದಗಡ ಗ್ರಾಮದಲ್ಲಿ ಪಶ್ಚಿಮ ಘಟ್ಟದ ಬೆಟ್ಟದ ಮೇಲಿರುವ ಐತಿಹಾಸಿಕ ಶಿಲುಬೆ (Holy Cross) ಬಳಿ ತನ್ನ ಮಗನನ್ನು ಮಲಗಿಸಿ ಮಗನನ್ನು ಕಾಪಾಡು ಎಂದು ತಾಯಿ ಪ್ರಾರ್ಥಿಸಿದ್ದಾಳೆ. ಕಳೆದ ಕೆಲ ತಿಂಗಳಿಂದ ಏಳು ವರ್ಷದ ಶೈಲೇಶ್ ಎಂಬ ಬಾಲಕ ಮೆದುಳು ಜ್ವರದಿಂದ ಬಳಲುತ್ತಿದ್ದಾನೆ. ಎರಡು ತಿಂಗಳು ಕಳೆದರೂ ಗುಣಮುಖನಾಗಿಲ್ಲ. ಹೀಗಾಗಿ ದಿಕ್ಕೇ ತೋಚದ ತಾಯಿ ದೇವರ ಮುಂದೆ ನಿಂತು ಕಣ್ಣೀರು ಹಾಕಿದ್ದಾಳೆ.
ಇದನ್ನೂ ಓದಿ: ಆಗಸ್ಟ್ 11ಕ್ಕೆ ಆಮಿರ್ ಖಾನ್ ವರ್ಸಸ್ ಅಕ್ಷಯ್ ಕುಮಾರ್; ಪ್ರೇಕ್ಷಕರ ಬೆಂಬಲ ಯಾರ ಸಿನಿಮಾಗೆ?
ಶೈಲೇಶ್ ಉತ್ತರ ಕನ್ನಡ ಜಿಲ್ಲೆಯ ಜೋಯಿಡಾ ತಾಲೂಕಿನ ಅಂಬರಡಾ ಗ್ರಾಮದ ಕೃಷ್ಣಾ ಮತ್ತು ಸುತ್ರಾವಿ ದಂಪತಿ ಪುತ್ರ. ಕೃಷ್ಣಾ, ಸುತ್ರಾವಿ ಕೂಲಿ ಮಾಡಿ ಜೀವನ ಸಾಗಿಸುತ್ತಿದ್ದಾರೆ. ಏಳು ವರ್ಷದ ಮಗನಿಗಾಗಿ ಆಸ್ಪತ್ರೆಯಿಂದ ಆಸ್ಪತ್ರೆಗೆ ಅಲೆದಾಡಿ ಸುಸ್ತಾಗಿದ್ದಾರೆ. ಸುಮಾರು ಎರಡು ತಿಂಗಳು ಕಳೆದರೂ ಶೈಲೇಶ್ ಗುಣಮುಖನಾಗಿಲ್ಲ. ಹೀಗಾಗಿ ಮನೆಗೆ ಕರೆದೊಯ್ಯಲು ವೈದ್ಯರು ತಿಳಿಸಿದ್ದಾರೆ. ಅರ್ಧ ಗಂಟೆ ಮಾತ್ರ ಬದುಕುತ್ತಾನೆ ಎಂದು ವೈದ್ಯರು ಹೇಳಿದ್ದಾರಂತೆ.
ಕುಟುಂಬಸ್ಥರು ಆರು ದಿನ ಮನೆಯಲ್ಲಿ ಇಟ್ಟುಕೊಂಡು ನಂದಗಡಕ್ಕೆ ಬಂದಿದ್ದಾರೆ. ಈ ವೇಳೆ ಶಿಲುಬೆ ಎದುರು ಮಗುವನ್ನು ಮಲಗಿಸಿ ಮಗನನ್ನು ಬದುಕಿಸಿಕೊಡುವಂತೆ ಕುಟುಂಬಸ್ಥರು ಪ್ರಾರ್ಥಿಸಿ ಮನೆಗೆ ಕರೆದುಕೊಂಡು ಹೋಗಿದ್ದಾರೆ.
ತಾಜಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 9:10 am, Wed, 22 June 22