ಬಳ್ಳಾರಿ: ನಾನು ಮನಸ್ಸು ಮಾಡಿದ್ರೆ ಮುಂದೊಂದು ದಿನ ಸಿಎಂ ಆಗುತ್ತೇನೆ: ಮಾಜಿ ಸಚಿವ ಜನಾರ್ದನ ರೆಡ್ಡಿ
ಇಂದು ರೆಡ್ಡಿ, ರಾಮುಲು ಸೋದರರಿಗೆ ಹಣದ ಅವಶ್ಯಕತೆ ಇಲ್ಲ. ನನಗೆ ಶಾಸಕ ಆಗಬೇಕು, ಮಂತ್ರಿ ಆಗಬೇಕೆಂಬ ಆಸೆಯಿಲ್ಲ. ನಾನು ಮನಸ್ಸು ಮಾಡಿದ್ರೆ ಮುಂದೊಂದು ದಿನ ಸಿಎಂ ಆಗುತ್ತೇನೆ ಎಂದು ಮಾಜಿ ಸಚಿವ ಜನಾರ್ದನ ರೆಡ್ಡಿ ಹೇಳಿಕೆ ನೀಡಿದ್ದಾರೆ.
ಬಳ್ಳಾರಿ: ನಾನು ಮನಸ್ಸು ಮಾಡಿದರೆ ಮುಂದೊಂದು ದಿನ ಸಿಎಂ (CM) ಆಗುತ್ತೇನೆ. ಮನಸ್ಸು ಮಾಡಿದರೆ ಯಾವಾಗ ಬೇಕಾದರು ಸಿಎಂ ಆಗಬಹುದು ಎಂದು ಜಿಲ್ಲೆಯಲ್ಲಿ ಕಳೆದ ರಾತ್ರಿ ಜರುಗಿದ ಶಾಸಕ ಸೋಮಶೇಖರರೆಡ್ಡಿ ಹುಟ್ಟುಹಬ್ಬದ ಅಭಿನಂದನಾ ಸಮಾರಂಭ ಕಾರ್ಯಕ್ರದಲ್ಲಿ ಮಾಜಿ ಸಚಿವ ಜನಾರ್ದನ ರೆಡ್ಡಿ ಹೇಳಿಕೆ ನೀಡಿದರು. ನಾನು ಸಿಎಂ ಆಗುವ ಸಮಯ ಬರುತ್ತೇ ಅದಕ್ಕಾಗಿ ಕಾಯುತ್ತೇನೆ. ಇಂದು ರೆಡ್ಡಿ ರಾಮುಲು ಸೋದರರಿಗೆ ಹಣದ ಅವಶ್ಯಕತೆ ಇಲ್ಲ. ನನಗೆ ಶಾಸಕ ಆಗಬೇಕು, ಮಂತ್ರಿ ಆಗಬೇಕೆಂಬ ಆಸೆಯಿಲ್ಲ. ನನಗಂತೂ ಯಾರಿಗೂ ಕೊಡಲಾರದಷ್ಟು ಕಷ್ಟ ಕೊಟ್ಟರು. ಆದರೂ ನಾನಿಂದು ನಿಮ್ಮ ಮುಂದೆ ಬಂದು ನಿಂತಿದ್ದೇನೆ. ಅಂತಹ ವಿಶೇಷ ಆಶೀರ್ವಾದ ಕನಕದುರ್ಗಮ್ಮ ನೀಡಿದ್ದಾಳೆ. ನನ್ನ ಜಾಗದಲ್ಲಿ ಬೇರೆಯವರು ಇದ್ದಿದರೆ ಎದುರಿಸುತ್ತಿರಲಿಲ್ಲ. ಅಷ್ಟು ತೊಂದರೆ ನನಗೆ ನೀಡಿದರು ಎಂದು ಮಾಜಿ ಸಚಿವ ಜನಾರ್ದನ ರೆಡ್ಡಿ ಹೇಳಿದರು.
ಸಾಮಾನ್ಯ ಲೋಕಸಭಾ ಕ್ಷೇತ್ರದ ಕೊನೆಯ ಸದಸ್ಯರಾಗಿ ಕರುಣಾಕರ ರೆಡ್ಡಿ ಕೆಲಸ ಮಾಡಿದರು. ಸೋಮಶೇಖರರೆಡ್ಡಿ ಬಳ್ಳಾರಿ ನಗರಸಭೆ ಅಧ್ಯಕ್ಷ ಆಗಿ ಕೆಲಸ ಮಾಡಿದರು. ನನ್ನ ಬಂಧನ ಮಾಡಲು ಬಂದಿದ್ದ ಸಿಬಿಐ ಅಧಿಕಾರಿಗಳೇ ಖುದ್ದು ಹೇಳಿದರು. ರೆಡ್ಡಿಯವರೇ ನಿಮಗೆ ತೊಂದರೆ ಮಾಡಬೇಕೆಂದು ಮೇಲಿನವರ ಆದೇಶ ಇದೆ. ಆದರೆ ಬಳ್ಳಾರಿಯ ಜನರಿಗೆ ನಿಮ್ಮ ಬಗ್ಗೆ ಒಳ್ಳೆಯ ಅಭಿಪ್ರಾಯ ಇದೆ ಎಂದು ಸಿಬಿಐನವರು ಹೇಳಿದ್ದರು ಎಂದು ಜನಾರ್ದನ ರೆಡ್ಡಿ ಹೇಳಿದರು.
ಇದನ್ನೂ ಓದಿ: ಆಗಸ್ಟ್ 11ಕ್ಕೆ ಆಮಿರ್ ಖಾನ್ ವರ್ಸಸ್ ಅಕ್ಷಯ್ ಕುಮಾರ್; ಪ್ರೇಕ್ಷಕರ ಬೆಂಬಲ ಯಾರ ಸಿನಿಮಾಗೆ?
ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 9:00 am, Wed, 22 June 22