Gold smuggling case ಚಿನ್ನ ಕಳ್ಳಸಾಗಣೆ ಪ್ರಕರಣ: ಕೇರಳ ಸಿಎಂ ಮತ್ತು ಕುಟುಂಬ ವಿರುದ್ಧ ಸಿಬಿಐ ತನಿಖೆ ಒತ್ತಾಯಿಸಿ ಮೋದಿಗೆ ಪತ್ರ ಬರೆದ ಸ್ವಪ್ನಾ ಸುರೇಶ್

ಕೇರಳ ಸಿಎಂ ಪಿಣರಾಯಿ ವಿಜಯನ್ ಅವರ ಮಾಜಿ ಪ್ರಧಾನ ಕಾರ್ಯದರ್ಶಿ ಎಂ.ಶಿವಶಂಕರ್ ಅವರು ಈ ಕಳ್ಳಸಾಗಣೆ ಮಾಡಿದ ವ್ಯಕ್ತಿ ಎಂದು ಸ್ವಪ್ನಾ ತಮ್ಮ ಪತ್ರದಲ್ಲಿ ಆರೋಪಿಸಿದ್ದಾರೆ. ಅಧಿಕಾರಿಗಳ ಉನ್ನತ ಶ್ರೇಣಿಯ ಕಾರಣದಿಂದಾಗಿ, ನನ್ನಂತಹ ಕೆಲವು ಉದ್ಯೋಗಿಗಳು ಪರಿಣಾಮ...

Gold smuggling case ಚಿನ್ನ ಕಳ್ಳಸಾಗಣೆ ಪ್ರಕರಣ: ಕೇರಳ ಸಿಎಂ ಮತ್ತು ಕುಟುಂಬ ವಿರುದ್ಧ ಸಿಬಿಐ ತನಿಖೆ ಒತ್ತಾಯಿಸಿ ಮೋದಿಗೆ ಪತ್ರ ಬರೆದ ಸ್ವಪ್ನಾ ಸುರೇಶ್
ಸ್ವಪ್ನಾ ಸುರೇಶ್
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on:Jun 21, 2022 | 3:01 PM

ಕೊಚ್ಚಿ: ಕೇರಳದ ಚಿನ್ನ ಕಳ್ಳಸಾಗಣೆ ಪ್ರಕರಣದ (Kerala Gold smuggling case)ಆರೋಪಿ ಸ್ವಪ್ನಾ ಸುರೇಶ್ (Swapna Suresh) ಅವರು ಪ್ರಧಾನಿ ನರೇಂದ್ರ ಮೋದಿ (Narendra Modi) ಅವರಿಗೆ ಪತ್ರ ಬರೆದಿದ್ದು, ಚಿನ್ನ ಕಳ್ಳಸಾಗಣೆ ಪ್ರಕರಣದಲ್ಲಿ ಕೇರಳ ಮುಖ್ಯಮಂತ್ರಿ ಮತ್ತು ಅವರ ಕುಟುಂಬ ಸದಸ್ಯರ ವಿರುದ್ಧ ಸಿಬಿಐ ತನಿಖೆಗೆ ಕೋರಿದ್ದಾರೆ. ಸರ್ಕಾರದ ಪ್ರಭಾವದ ಹಿನ್ನೆಲೆಯಲ್ಲಿ ಪ್ರಕರಣದ ತನಿಖೆಯನ್ನು ಕಸ್ಟಮ್ಸ್ ಮತ್ತು ರಾಷ್ಟ್ರೀಯ ತನಿಖಾ ಸಂಸ್ಥೆಗೆ ಹಸ್ತಾಂತರಿಸಲಾಗಿದೆ ಎಂದು ಆಕೆಯನ್ನು ಮಹಿಳಾ ಸಬಲೀಕರಣದ ನಿರ್ದೇಶಕಿಯಾಗಿ ನೇಮಕ ಮಾಡಿದ್ದ ಎನ್‌ಜಿಒದ ಲೆಟರ್‌ಹೆಡ್‌ನಲ್ಲಿ ನೀಡಿರುವ ಪತ್ರದಲ್ಲಿ ಸ್ವಪ್ನಾ ಆರೋಪಿಸಿದ್ದಾರೆ. ಎರಡು ಏಜೆನ್ಸಿಗಳು ತನಿಖೆಯ ದಿಕ್ಕನ್ನು ತಿರುಗಿಸಲು ಪ್ರಯತ್ನಿಸುತ್ತಿವೆ ಎಂದು ಅವರು ದೂರಿದ್ದಾರೆ. ಜಾರಿ ನಿರ್ದೇಶನಾಲಯ ಮತ್ತು ಕಸ್ಟಮ್ಸ್ ವಿರುದ್ಧ ನ್ಯಾಯಾಂಗ ತನಿಖೆಗೆ ಆದೇಶಿಸಿದ್ದಕ್ಕಾಗಿ ರಾಜ್ಯ ಸರ್ಕಾರವನ್ನು ದೂಷಿಸಿದ ಸ್ವಪ್ನಾ, ಜಾರಿ ನಿರ್ದೇಶನಾಲಯವು ಈಗ ತನ್ನ ಕರ್ತವ್ಯವನ್ನು ಸಂಪೂರ್ಣವಾಗಿ ನಿರ್ವಹಿಸುತ್ತಿದೆ ಎಂದು ಹೇಳಿದ್ದಾರೆ. ಇತ್ತೀಚೆಗೆ ಮ್ಯಾಜಿಸ್ಟ್ರೇಟ್ ಮುಂದೆ ತನ್ನ ತಪ್ಪೊಪ್ಪಿಗೆ ಹೇಳಿಕೆಯ ನಂತರ ತನಗೆ ಮತ್ತು ತನ್ನ ಸಂಬಂಧಿಕರಿಗೆ ಕಿರುಕುಳ ನೀಡಲಾಗುತ್ತಿದೆ ಎಂದು ದೂರಿರುವ ಸ್ವಪ್ನಾ ಕೇರಳ ಸರ್ಕಾರವು “ವಂಚನೆ” ಯಲ್ಲಿ ತೊಡಗಿದೆ. ಲಾಭಕ್ಕಾಗಿ ತನ್ನನ್ನು ಹರಕೆಯ ಕುರಿ ಮಾಡಲಾಗಿದೆ ಎಂದು ಹೇಳಿದ್ದಾರೆ. ಅದೇ ವೇಳೆ ಪ್ರಧಾನ ಮಂತ್ರಿಯನ್ನು ಖುದ್ದಾಗಿ ಭೇಟಿ ಮಾಡಲು ಮತ್ತು ಅವರ ಮುಂದೆ ತನ್ನ ಕಳವಳ ಮತ್ತು ದುಗುಡವನ್ನು ಹೇಳಲು ಅವಕಾಶ ನೀಡಬೇಕೆಂದು ಸ್ವಪ್ನಾ ಮನವಿ ಮಾಡಿದ್ದಾರೆ.

ಪತ್ರದಲ್ಲೇನಿದೆ?

ಕೇರಳ ಸಿಎಂ ಪಿಣರಾಯಿ ವಿಜಯನ್ (Pinarayi Vijayan) ಅವರ ಮಾಜಿ ಪ್ರಧಾನ ಕಾರ್ಯದರ್ಶಿ ಎಂ.ಶಿವಶಂಕರ್ ಅವರು ಈ ಕಳ್ಳಸಾಗಣೆ ಮಾಡಿದ ವ್ಯಕ್ತಿ ಎಂದು ಸ್ವಪ್ನಾ ತಮ್ಮ ಪತ್ರದಲ್ಲಿ ಆರೋಪಿಸಿದ್ದಾರೆ. ಅಧಿಕಾರಿಗಳ ಉನ್ನತ ಶ್ರೇಣಿಯ ಕಾರಣದಿಂದಾಗಿ, ನನ್ನಂತಹ ಕೆಲವು ಉದ್ಯೋಗಿಗಳು ಪರಿಣಾಮ ಎದುರಿಸಬೇಕಾಯಿತು.ನಾನು ನನ್ನ ಲೈನ್ ಮ್ಯಾನೇಜರ್‌ಗಳ ಆದೇಶಗಳನ್ನು ಸರಳವಾಗಿ ಪಾಲಿಸುತ್ತಿದ್ದೆ ಮತ್ತು ಇದನ್ನು ಯುಎಇ ಕಾನ್ಸುಲೇಟ್ ರಾಜತಾಂತ್ರಿಕ ಚಾನೆಲ್ ಮೂಲಕ ಮಾಡುತ್ತಿದ್ದೇನೆ. ನಾನು ಈ ವಿಷಯಗಳಲ್ಲಿ ಯಾವುದೇ ಹೇಳಿಕೆಯನ್ನು ಹೊಂದಿರಲಿಲ್ಲ. ಇದು ಕಸ್ಟಮ್ಸ್ ಮೂಲಕ ಬೆಳಕಿಗೆ ಬಂದಾಗ, ಅವರು ಏನನ್ನೂ ಬಹಿರಂಗಪಡಿಸದೆ 15 ತಿಂಗಳ ಕಾಲ ಜೈಲಿಗೆ ಹಾಕಿದ್ದಾರೆ. ಶಿವಶಂಕರ್ ಕೂಡ 3 ತಿಂಗಳು ಜೈಲಿನಲ್ಲಿದ್ದರು. ಆದರೆ ಕೇರಳ ಸರ್ಕಾರವು ಅವರಿಗೆ ಜಾಮೀನು ನೀಡಿತು. ಗೌರವಾನ್ವಿತ ಜೀವನವನ್ನು ನಡೆಸಲು ಅವರಿಗೆ ಪ್ರತಿಷ್ಠಿತ ಉದ್ಯೋಗವನ್ನು ನೀಡಿತು.

ಇದನ್ನೂ ಓದಿ
Image
ಕೇರಳ ಚಿನ್ನ ಕಳ್ಳಸಾಗಣೆ ಪ್ರಕರಣ: ಆರೋಪಿ ಸ್ವಪ್ನಾ ಸುರೇಶ್ ಆರೋಪಗಳಿಗೆ ಪ್ರತಿಯಾಗಿ ವಿಡಿಯೊ ಬಿಡುಗಡೆ ಮಾಡಿದ ಕೇರಳ ಸಿಎಂ ಕಚೇರಿ
Image
Kerala gold smuggling case ಚಿನ್ನ ಕಳ್ಳ ಸಾಗಾಣಿಕೆ ಪ್ರಕರಣ: ಪಿಣರಾಯಿ ವಿಜಯನ್ ಮೇಲೆ ಸ್ವಪ್ನಾ ಸುರೇಶ್ ಗಂಭೀರ ಆರೋಪ
Image
ಕೇರಳ ಚಿನ್ನ ಕಳ್ಳಸಾಗಣೆ ಪ್ರಕರಣ: ಎಂ ಶಿವಶಂಕರ್ ವಿರುದ್ಧದ ಆರೋಪದ ನಂತರ ಸ್ವಪ್ನಾ ಸುರೇಶ್‌ಗೆ ಇಡಿ ಸಮನ್ಸ್
Image
Gold Smuggling Case: ಕೇರಳ ಚಿನ್ನ ಸಾಗಣೆ ಪ್ರಮುಖ ಆರೋಪಿ ಸ್ವಪ್ನಾ ಸುರೇಶ್​ ಜೈಲಿನಿಂದ ಬಿಡುಗಡೆ

ಸರ್ಕಾರ ತನ್ನ ಪ್ರಭಾವ ಬಳಸಿ ಪ್ರಕರಣವನ್ನು ಕಸ್ಟಮ್ಸ್ ಮತ್ತು ಎನ್‌ಐಎ ತನಿಖೆಗೆ ಒಪ್ಪಿಸಿದೆ ಎಂದು ಸ್ವಪ್ನಾ ಆರೋಪಿಸಿದ್ದಾರೆ. ಏಜೆನ್ಸಿಗಳು ಪ್ರಕರಣವನ್ನು ದಿಕ್ಕು ತಪ್ಪಿಸುತ್ತಿವೆ. ಪ್ರಕರಣಕ್ಕೆ ಸಂಬಂಧಿಸಿದಂತೆ 164 ಹೇಳಿಕೆ ನೀಡಿದ ನಂತರ ಕೇರಳ ಸರ್ಕಾರ ತನಗೆ, ತನ್ನ ಸಂಬಂಧಿಕರಿಗೆ ಮತ್ತು ತನ್ನ ವಕೀಲರಿಗೆ ಕಿರುಕುಳ ನೀಡುತ್ತಿದೆ. ನನ್ನಂತಹ ವಂಚಿತ ಮತ್ತು ಅದೃಷ್ಟವಿಲ್ಲದ ಉದ್ಯೋಗಿಗಳಿಗೆ ಮಾತ್ರ ಶಿಕ್ಷೆಯಾಗುತ್ತದೆ, ಆದರೆ ನಿಜವಾದ ಆರೋಪಿಗಳು ತಪ್ಪಿಸಿಕೊಳ್ಳುತ್ತಿದ್ದಾರೆ. ದೊಡ್ಡ ಹಗರಣದಲ್ಲಿ ಪ್ರಧಾನ ಕಾರ್ಯದರ್ಶಿ ಹೊರತುಪಡಿಸಿ, ಕೇರಳ ಮುಖ್ಯಮಂತ್ರಿ ಅವರ ಕುಟುಂಬದ ಸದಸ್ಯರು ನೇರವಾಗಿ ಭಾಗಿಯಾಗಿದ್ದಾರೆ ಎಂದು ಸ್ವಪ್ನಾ ಆರೋಪಿಸಿದ್ದಾರೆ.

ಬೊಫೋರ್ಸ್, ವೇದಾಂತ, ಲಾವಲಿನ್ ಅಥವಾ 2ಜಿ ಸ್ಪೆಕ್ಟ್ರಮ್‌ನಂತಹ ಇತರ ಹಗರಣಗಳಿಗಿಂತ ಭಿನ್ನವಾಗಿ, ಚಿನ್ನದ ಕಳ್ಳಸಾಗಣೆಯ ಪ್ರಕರಣ ದೊಡ್ಡದಾಗಿದೆ. ಏಕೆಂದರೆ ಇದನ್ನು ಭಾರತದ ವಿರುದ್ಧ ಮತ್ತೊಂದು ದೇಶದ ದೂತಾವಾಸದೊಂದಿಗೆ ಜಂಟಿಯಾಗಿ ಕಾರ್ಯಗತಗೊಳಿಸಲಾಗಿದೆ ಎಂದು ಹೇಳಲಾಗಿದೆ. ಸತ್ಯಾಂಶ ಹೊರಬರಲು ಸಿಬಿಐ ತನಿಖೆ ಕಡ್ಡಾಯ ಎಂದು ಹೇಳಿದ್ದಾರೆ.

ದೇಶದ ಇತರ ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ ಪ್ರಮುಖ  ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ

Published On - 2:52 pm, Tue, 21 June 22

ಟೆಸ್ಟ್ ಸ್ಪೆಷಲಿಸ್ಟ್​​ನ ಔಟ್ ಮಾಡಿದ ಕನ್ನಡಿಗ ಪ್ರಸಿದ್ಧ್ ಕೃಷ್ಣ
ಟೆಸ್ಟ್ ಸ್ಪೆಷಲಿಸ್ಟ್​​ನ ಔಟ್ ಮಾಡಿದ ಕನ್ನಡಿಗ ಪ್ರಸಿದ್ಧ್ ಕೃಷ್ಣ
ದೇವಾಲಯಗಳಲ್ಲಿ ಮುಡಿ ಕೊಡುವುದರ ಹಿಂದಿನ ರಹಸ್ಯ ತಿಳಿಯಿರಿ
ದೇವಾಲಯಗಳಲ್ಲಿ ಮುಡಿ ಕೊಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily Horoscope: ಈ ರಾಶಿಯವರು ಇಂದು ಹೊಸ ವಾಹನ ಖರೀದಿಸುವರು
Daily Horoscope: ಈ ರಾಶಿಯವರು ಇಂದು ಹೊಸ ವಾಹನ ಖರೀದಿಸುವರು
ಆವೇಶ, ಆಕ್ರೋಶ... ಸ್ಯಾಮ್ ಕೊನ್​ಸ್ಟಾಸ್ ಮುಂದೆ ಘರ್ಜಿಸಿದ ವಿರಾಟ್ ಕೊಹ್ಲಿ
ಆವೇಶ, ಆಕ್ರೋಶ... ಸ್ಯಾಮ್ ಕೊನ್​ಸ್ಟಾಸ್ ಮುಂದೆ ಘರ್ಜಿಸಿದ ವಿರಾಟ್ ಕೊಹ್ಲಿ
ಜಸ್​ಪ್ರೀತ್ ಬುಮ್ರಾ ಖಡಕ್ ಲುಕ್​ಗೆ ಸ್ಯಾಮ್​ ಕೊನ್​ಸ್ಟಾಸ್ ಗಪ್ ಚುಪ್
ಜಸ್​ಪ್ರೀತ್ ಬುಮ್ರಾ ಖಡಕ್ ಲುಕ್​ಗೆ ಸ್ಯಾಮ್​ ಕೊನ್​ಸ್ಟಾಸ್ ಗಪ್ ಚುಪ್
ವೆಂಕಟೇಶ್ವರ ಸ್ವಾಮಿಗೆ 150 ಕೆಜಿ ಪುಳಿಯೋಗರೆಯಿಂದ ಅಲಂಕಾರ
ವೆಂಕಟೇಶ್ವರ ಸ್ವಾಮಿಗೆ 150 ಕೆಜಿ ಪುಳಿಯೋಗರೆಯಿಂದ ಅಲಂಕಾರ
ಬಿಗ್ ಬಾಸ್​ಗೆ ಬಂದಿದ್ದಕ್ಕೆ ಸಾರ್ಥಕ ಆಯ್ತು: ಸುದೀಪ್ ನೀಡಿದ ಸರ್ಪ್ರೈಸ್​
ಬಿಗ್ ಬಾಸ್​ಗೆ ಬಂದಿದ್ದಕ್ಕೆ ಸಾರ್ಥಕ ಆಯ್ತು: ಸುದೀಪ್ ನೀಡಿದ ಸರ್ಪ್ರೈಸ್​
ಅಶೋಕ ಸಾರಿಗೆ ಸಚಿವರಾಗಿದ್ದಾಗ ಬಸ್ ಟಿಕೆಟ್ ದರ ಹೆಚ್ಚಿಸಿರಲಿಲ್ಲವೇ? ಸಿಎಂ
ಅಶೋಕ ಸಾರಿಗೆ ಸಚಿವರಾಗಿದ್ದಾಗ ಬಸ್ ಟಿಕೆಟ್ ದರ ಹೆಚ್ಚಿಸಿರಲಿಲ್ಲವೇ? ಸಿಎಂ
ಬಿಜೆಪಿ ನಾಯಕರೊಂದಿಗೆ ರಾಜ್ಯದ ಪ್ರಸಕ್ತ ವಿದ್ಯಮಾನಗಳ ಬಗ್ಗೆ ನಡ್ಡಾ ಚರ್ಚೆ
ಬಿಜೆಪಿ ನಾಯಕರೊಂದಿಗೆ ರಾಜ್ಯದ ಪ್ರಸಕ್ತ ವಿದ್ಯಮಾನಗಳ ಬಗ್ಗೆ ನಡ್ಡಾ ಚರ್ಚೆ
ಸೊಸೆ ಇದೇ ರೀತಿ ಬಟ್ಟೆ ಹಾಕಬೇಕು: ಹನುಮಂತನ ತಾಯಿ ಹಾಕಿದ ಷರತ್ತು ಇದು
ಸೊಸೆ ಇದೇ ರೀತಿ ಬಟ್ಟೆ ಹಾಕಬೇಕು: ಹನುಮಂತನ ತಾಯಿ ಹಾಕಿದ ಷರತ್ತು ಇದು