Maharashtra Political Crisis ಏಕನಾಥ್ ಶಿಂಧೆಗೆ ಕೊಕ್ ನೀಡಿದ ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ
Eknath Shinde ಬಿಜೆಪಿ ಆಡಳಿತವಿರುವ ಗುಜರಾತ್‌ನಲ್ಲಿ ಕನಿಷ್ಠ 12 ಶಾಸಕರೊಂದಿಗೆ ಶಿವಸೇನಾ ಸಚಿವ ಏಕನಾಥ್ ಶಿಂಧೆ ಬೀಡುಬಿಟ್ಟಿದ್ದು, ಶಿವಸೇನಾ ಶಿಂಧೆ ವಿರುದ್ಧ ಕ್ರಮ ಕೈಗೊಂಡಿದೆ. ಶಿಂಧೆ ಸ್ಥಾನಕ್ಕೆ ಶಾಸಕ ಅಜಯ್ ಚೌಧರಿ ಬರಲಿದ್ದಾರೆ.
ಮುಂಬೈ: ಮಹಾರಾಷ್ಟ್ರದ (Maharashtra )ಆಡಳಿತಾರೂಢ ಮಹಾ ವಿಕಾಸ್ ಅಘಾಡಿ ಮೈತ್ರಿಕೂಟಕ್ಕೆ ಮತ್ತೊಂದು ಹಿನ್ನಡೆಯಾಗಿದ್ದು, ಮಹಾರಾಷ್ಟ್ರದ ನಗರಾಭಿವೃದ್ಧಿ ಸಚಿವ ಏಕನಾಥ್ ಶಿಂಧೆ (Eknath Shinde) ಅವರನ್ನು ಶಿವಸೇನಾ ಶಾಸಕಾಂಗ ಪಕ್ಷದ ನಾಯಕನ ಸ್ಥಾನದಿಂದ ತೆಗೆದುಹಾಕಲಾಗಿದೆ. ಬಿಜೆಪಿ ಆಡಳಿತವಿರುವ ಗುಜರಾತ್‌ನಲ್ಲಿ ಕನಿಷ್ಠ 12 ಶಾಸಕರೊಂದಿಗೆ ಶಿವಸೇನಾ ಸಚಿವ ಏಕನಾಥ್ ಶಿಂಧೆ ಬೀಡುಬಿಟ್ಟಿದ್ದು, ಶಿವಸೇನಾ ಶಿಂಧೆ ವಿರುದ್ಧ ಕ್ರಮ ಕೈಗೊಂಡಿದೆ. ಶಿಂಧೆ ಸ್ಥಾನಕ್ಕೆ ಶಾಸಕ ಅಜಯ್ ಚೌಧರಿ ಬರಲಿದ್ದಾರೆ. ಸಿಎಂ ಉದ್ಧವ್ ಠಾಕ್ರೆ (Uddhav Thackeray)ಅವರ ಅಧಿಕೃತ ನಿವಾಸದಲ್ಲಿ ನಡೆದ ಸಭೆಯಲ್ಲಿ ಶಿಂಧೆಯನ್ನು ತೆಗೆದುಹಾಕುವ ನಿರ್ಧಾರ ಕೈಗೊಳ್ಳಲಾಗಿದೆ. ಶಿವಸೇನಾ ಕ್ರಮ ಕೈಗೊಂಡ ಬೆನ್ನಲ್ಲೇ ಟ್ವೀಟ್ ಮಾಡಿದ ಶಿಂಧೆ “ನಾವು ಬಾಳಾಸಾಹೇಬರ ನಿಷ್ಠ ಶಿವಸೈನಿಕರು.ಬಾಳಾಸಾಹೇಬರು ನಮಗೆ ಹಿಂದುತ್ವದ ಬಗ್ಗೆ ಕಲಿಸಿದ್ದಾರೆ. ಬಾಬಾಸಾಹೇಬರ ಚಿಂತನೆಗಳು ಮತ್ತು ಧರ್ಮವೀರ್ ಆನಂದ್ ದಿಘೆ ಸಾಹೇಬ್ ಅವರ ಬೋಧನೆಯಿಂದ ನಾವು ಎಂದಿಗೂ ಮತ್ತು ಅಧಿಕಾರಕ್ಕಾಗಿ ಏನನ್ನೂ ಮಾಡಿಲ್ಲ” ಎಂದಿದ್ದಾರೆ.
आम्ही बाळासाहेबांचे कट्टर शिवसैनिक आहोत… बाळासाहेबांनी आम्हाला हिंदुत्वाची शिकवण दिली आहे.. बाळासाहेबांचे विचार आणि धर्मवीर आनंद दिघे साहेबांची शिकवण यांच्याबाबत आम्ही सत्तेसाठी कधीही प्रतारणा केली नाही आणि करणार नाही
ಇದನ್ನೂ ಓದಿ— Eknath Shinde – एकनाथ शिंदे (@mieknathshinde) June 21, 2022
ಮಹಾರಾಷ್ಟ್ರದ ವೀಕ್ಷಕರಾಗಿ ಕಮಲ್ ನಾಥ್ ಅವರನ್ನು ನಿಯೋಜಿಸಿದ ಕಾಂಗ್ರೆಸ್
ಮಹಾರಾಷ್ಟ್ರದಲ್ಲಿ ಆಡಳಿತಾರೂಢ ಶಿವಸೇನಾದಲ್ಲಿನ ರಾಜಕೀಯ ಬಿಕ್ಕಟ್ಟು ನಡುವ, ಕಾಂಗ್ರೆಸ್ ಮಂಗಳವಾರ ತನ್ನ ಹಿರಿಯ ನಾಯಕ ಮತ್ತು ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಕಮಲ್ ನಾಥ್ ಅವರನ್ನು ರಾಜ್ಯದಲ್ಲಿ ಎಐಸಿಸಿ ವೀಕ್ಷಕರನ್ನಾಗಿ ನಿಯೋಜಿಸಿದೆ. ಭಿನ್ನಮತೀಯ ನಾಯಕ ಏಕನಾಥ್ ಶಿಂಧೆ ನೇತೃತ್ವದ ಕೆಲವು ಶಿವಸೇನಾ ಶಾಸಕರು ಗುಜರಾತ್‌ನಲ್ಲಿ ಮೊಕ್ಕಾಂ ಹೂಡಿದ್ದು, ಆಡಳಿತಾರೂಢ ಮಹಾ ವಿಕಾಸ್ ಅಘಾಡಿ (ಎಂವಿಎ) ಸರ್ಕಾರಕ್ಕೆ ಅಪಾಯವನ್ನುಂಟು ಮಾಡಬಹುದು ಎಂಬ ವರದಿಗಳ ನಂತರ ಈ ನಿರ್ಧಾರವು ಹೊರಬಿದ್ದಿದೆ.
“ರಾಜ್ಯದಲ್ಲಿ ಇತ್ತೀಚಿನ ರಾಜಕೀಯ ಬೆಳವಣಿಗೆಗಳ ಹಿನ್ನೆಲೆಯಲ್ಲಿ ತಕ್ಷಣವೇ ಜಾರಿಗೆ ಬರುವಂತೆ ಕಾಂಗ್ರೆಸ್ ಅಧ್ಯಕ್ಷರು ಕಮಲ್ ನಾಥ್ ಅವರನ್ನು ಅಖಿಲ ಭಾರತ ಕಾಂಗ್ರೆಸ್ ಸಮಿತಿ (ಎಐಸಿಸಿ) ವೀಕ್ಷಕರನ್ನಾಗಿ ನಿಯೋಜಿಸಿದ್ದಾರೆ” ಎಂದು ಕಾಂಗ್ರೆಸ್ ಹೇಳಿದೆ. ಮಹಾರಾಷ್ಟ್ರದ ಎಂವಿಎ ಸರ್ಕಾರದಲ್ಲಿ ಕಾಂಗ್ರೆಸ್ ಪಕ್ಷವು ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿ (ಎನ್‌ಸಿಪಿ) ಮತ್ತು ಶಿವಸೇನಾಯೊಂದಿಗೆ ಅಧಿಕಾರವನ್ನು ಹಂಚಿಕೊಂಡಿದೆ.
ಏಕನಾಥ್ ಶಿಂಧೆ ಬಂಡಾಯ ಶಿವಸೇನೆಯ ಆಂತರಿಕ ವಿಚಾರ: ಶರದ್ ಪವಾರ್
ಮಹಾರಾಷ್ಟ್ರದ ಸಚಿವ ಮತ್ತು ಶಿವಸೇನೆ ನಾಯಕ ಏಕನಾಥ್ ಶಿಂಧೆ ಮಂಗಳವಾರ ಬೆಳಗ್ಗೆ ಬಿಜೆಪಿ ಆಡಳಿತವಿರುವ ಗುಜರಾತ್‌ಗೆ ಕನಿಷ್ಠ 12 ಶಾಸಕರನ್ನು ಕರೆದೊಯ್ದ ನಂತರ, ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷದ (ಎನ್‌ಸಿಪಿ) ಮುಖ್ಯಸ್ಥ ಶರದ್ ಪವಾರ್ ಇದನ್ನು ಶಿವಸೇನಾದ “ಆಂತರಿಕ ವಿಷಯ” ಎಂದು ಹೇಳಿದ್ದಾರೆ.
ದೇಶದ ಇತರ ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ ಪ್ರಮುಖ ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ
Published On - 3:07 pm, Tue, 21 June 22