Gold Smuggling Case: ಕೇರಳ ಚಿನ್ನ ಸಾಗಣೆ ಪ್ರಮುಖ ಆರೋಪಿ ಸ್ವಪ್ನಾ ಸುರೇಶ್ ಜೈಲಿನಿಂದ ಬಿಡುಗಡೆ
ನವೆಂಬರ್ 2ರಂದು ಸ್ವಪ್ನ ಸುರೇಶ್ಗೆ ಮಾತ್ರವಲ್ಲ, ಅವರೊಂದಿಗೆ ಉಳಿದ ಏಳುಮಂದಿಗೆ ಕೂಡ ಜಾಮೀನು ಸಿಕ್ಕಿದೆ. ಆದರೆ ಎನ್ಐಎ ಪ್ರಕರಣ ಬಾಕಿ ಇದ್ದುದರಿಂದ ಸ್ವಪ್ನಾ ಜೈಲಿನಲ್ಲಿಯೇ ಉಳಿಯುವಂತಾಗಿತ್ತು.
ದೆಹಲಿ: ದೇಶಾದ್ಯಂತ ಸಂಚಲನ ಮೂಡಿಸಿದ್ದ ಕೇರಳ ಏರ್ಪೋರ್ಟ್ ಚಿನ್ನಸಾಗಣೆ ಪ್ರಕರಣದ ಪ್ರಮುಖ ಆರೋಪಿ ಸ್ವಪ್ನಾ ಸುರೇಶ್ ಇಂದು ಜೈಲಿನಿಂದ ಬಿಡುಗಡೆ ಆಗಿದ್ದಾರೆ. ಸುಮಾರು 16 ತಿಂಗಳ ನಂತರ ಸ್ವಪ್ನಾ ಸುರೇಶ್ ಜೈಲಿನಿಂದ ಹೊರಬರುತ್ತಿದ್ದಾರೆ. ಸ್ವಪ್ನಾ ಸುರೇಶ್ರಿಗೆ ನವೆಂಬರ್ 2ರಂದು ಕೇರಳ ಹೈಕೋರ್ಟ್ ಜಾಮೀನು ನೀಡಿತ್ತು. 25 ಲಕ್ಷ ರೂ.ಬಾಂಡ್ ಮತ್ತು 2 ಶ್ಯೂರಿಟಿಗಳೊಂದಿಗೆ ಜಾಮೀನು ನೀಡಲಾಗಿತ್ತು.
ಇನ್ನು ನವೆಂಬರ್ 2ರಂದು ಸ್ವಪ್ನ ಸುರೇಶ್ಗೆ ಮಾತ್ರವಲ್ಲ, ಅವರೊಂದಿಗೆ ಉಳಿದ ಏಳುಮಂದಿಗೆ ಕೂಡ ಜಾಮೀನು ಸಿಕ್ಕಿದೆ. ಆದರೆ ಎನ್ಐಎ ಪ್ರಕರಣ ಬಾಕಿ ಇದ್ದುದರಿಂದ ಸ್ವಪ್ನಾ ಜೈಲಿನಲ್ಲಿಯೇ ಉಳಿಯುವಂತಾಗಿತ್ತು. ನ್ಯಾಯಮೂರ್ತಿಗಳಾದ ಕೆ.ವಿನೋದ್ ಚಂದ್ರನ್ ಮತ್ತು ಸಿ.ಜಯಚಂದ್ರನ್ ಅವರನ್ನೊಳಗೊಂಡ ವಿಭಾಗೀಯ ಪೀಠವು ಪ್ರಕರಣದ ವಿಚಾರಣೆ ನಡೆಸಿತ್ತು.
ಈ ಹಿಂದೆ ಯುಎಇ ಕಾನ್ಸುಲೇಟ್‌ನಲ್ಲಿ ಕೆಲಸ ಮಾಡಿದ್ದ ಸ್ವಪ್ನಾ ಸುರೇಶ್ ಮತ್ತು ಆಕೆಯ ಸಹಚರ ಸಂದೀಪ್ ನಾಯರ್ ಬಂಧನಕ್ಕೀಡಾಗಿದ್ದರು. ರಾಜತಾಂತ್ರಿಕ ಮಾರ್ಗಗಳ ಮೂಲಕ ಚಿನ್ನವನ್ನು ಕಳ್ಳಸಾಗಣೆ ಮಾಡಿದ್ದಕ್ಕಾಗಿ ಮತ್ತು ವಿದೇಶಗಳಿಂದ ಹೆಚ್ಚಿನ ಪ್ರಮಾಣದ ಚಿನ್ನವನ್ನು ಅಕ್ರಮವಾಗಿ ಸಾಗಿಸುವುದಕ್ಕಾಗಿ ಈ ಬಂಧನ ನಡೆದಿತ್ತು. ತಿರುವನಂತಪುರಂನಲ್ಲಿರುವ ಯುಎಇ ಕಾನ್ಸುಲೇಟ್‌ಗೆ ರವಾನಿಸಲಾದ ರಾಜತಾಂತ್ರಿಕ ಸರಕುಗಳ ಮೂಲಕ 30 ಕಿಲೋಗ್ರಾಂಗಳಷ್ಟು ಚಿನ್ನವನ್ನು ಕಳ್ಳಸಾಗಣೆ ಮಾಡಿದ ಆರೋಪ ಅವರ ಮೇಲಿತ್ತು. ಇಂದು ಸ್ವಪ್ನಾ ಸುರೇಶ್ರನ್ನು ಜೈಲಿನಿಂದ ಕರೆತರಲು ಅವರ ತಾಯಿಯೇ ಅಲ್ಲಿಗೆ ಹೋಗಿದ್ದರು ಎನ್ನಲಾಗಿದೆ.
ಇದನ್ನೂ ಓದಿ: ಯುಎಸ್ನಲ್ಲಿ 2-18 ವರ್ಷದವರಿಗೆ ಕೊವ್ಯಾಕ್ಸಿನ್ ಲಸಿಕೆ ತುರ್ತು ಬಳಕೆಗೆ ಅನುಮತಿ ಕೋರಿದ ಒಕುಜೆನ್ ಕಂಪನಿ
AQI: ದೆಹಲಿಯಲ್ಲಿ 5 ವರ್ಷದಲ್ಲೇ ಅತಿಹೆಚ್ಚು ವಾಯುಮಾಲಿನ್ಯ; ಬೆಂಗಳೂರಿನ ವಾಯುಗುಣಮಟ್ಟ ಹೇಗಿದೆ? ಇಲ್ಲಿದೆ ವಿವರ