ಯುಎಸ್​ನಲ್ಲಿ 2-18 ವರ್ಷದವರಿಗೆ ಕೊವ್ಯಾಕ್ಸಿನ್​ ಲಸಿಕೆ ತುರ್ತು ಬಳಕೆಗೆ ಅನುಮತಿ ಕೋರಿದ ಒಕುಜೆನ್​ ಕಂಪನಿ

ಯುಎಸ್​​ನಲ್ಲಿ ಮಕ್ಕಳ ಮೇಲೆ ಕೊವ್ಯಾಕ್ಸಿನ್​ ಲಸಿಕೆಯ ತುರ್ತು ಬಳಕೆಗೆ ಅವಕಾಶ ಕೋರಿ ಮನವಿ ಮಾಡಿರುವುದು ಕೊವಿಡ್​ 19 ವಿರುದ್ಧ ಹೋರಾಟದಲ್ಲಿ ಇಟ್ಟ ಮತ್ತೊಂದು ಮಹತ್ವದ ಶಂಕರ್​ ಮುಸುನುರಿ ತಿಳಿಸಿದ್ದಾರೆ.

ಯುಎಸ್​ನಲ್ಲಿ 2-18 ವರ್ಷದವರಿಗೆ ಕೊವ್ಯಾಕ್ಸಿನ್​ ಲಸಿಕೆ  ತುರ್ತು ಬಳಕೆಗೆ ಅನುಮತಿ ಕೋರಿದ ಒಕುಜೆನ್​ ಕಂಪನಿ
ಕೊವ್ಯಾಕ್ಸಿನ್​
Follow us
| Updated By: Lakshmi Hegde

Updated on:Nov 06, 2021 | 12:15 PM

ಭಾರತ್​ ಬಯೋಟೆಕ್​​ನ ಕೊವ್ಯಾಕ್ಸಿನ್​ ಲಸಿಕೆಯನ್ನು ಮಕ್ಕಳ ಮೇಲೆ ತುರ್ತು ಬಳಕೆಗೆ ಅನುಮೋದನೆ ನೀಡಬೇಕು ಎಂದು ಯುಎಸ್​ ಆಹಾರ ಮತ್ತು ಔಷಧ ಆಡಳಿತ (US Food And Drug Administration)ಕ್ಕೆ ಭಾರತ್​​ ಬಯೋಟೆಕ್​ ಕಂಪನಿಯ ಅಮೆರಿಕ ಪಾಲುದಾರ ಕಂಪನಿ Ocugen Inc ಮನವಿ ಸಲ್ಲಿಸಿದೆ. ಭಾರತದಲ್ಲಿ ಭಾರತ್​ ಬಯೋಟೆಕ್​ ಕಂಪನಿಯು 2-18ವರ್ಷದ ಸುಮಾರು 526 ಜನರ ಮೇಲೆ ಕೊವ್ಯಾಕ್ಸಿನ್​ 2/3ನೇ ಹಂತದ ಪ್ರಯೋಗ ನಡೆಸಿದ ವರದಿಯನ್ನು ಆಧರಿಸಿ ಈ Ocugen Inc (ಒಕುಜೆನ್​) ಕಂಪನಿ ಅಮೆರಿಕದಲ್ಲೂ ಮಕ್ಕಳ ಮೇಲೆ ಕೊವ್ಯಾಕ್ಸಿನ್​ ಲಸಿಕೆ ಬಳಸಲು ಅನುಮತಿ ನೀಡಬೇಕು ಎಂದು ಮನವಿ ಮಾಡಿದೆ.  

ಯುಎಸ್​​ನಲ್ಲಿ ಮಕ್ಕಳ ಮೇಲೆ ಕೊವ್ಯಾಕ್ಸಿನ್​ ಲಸಿಕೆಯ ತುರ್ತು ಬಳಕೆಗೆ ಅವಕಾಶ ಕೋರಿ ಮನವಿ ಮಾಡಿರುವುದು ಕೊವಿಡ್​ 19 ವಿರುದ್ಧ ಹೋರಾಟದಲ್ಲಿ ಇಟ್ಟ ಮತ್ತೊಂದು ಮಹತ್ವದ ಹೆಜ್ಜೆಯಾಗಿದೆ ಎಂದು ಒಕುಜೆನ್​ ಕಂಪನಿಯ ಸಹ-ಸಂಸ್ಥಾಪಕ, ಸಿಇಒ ಶಂಕರ್​ ಮುಸುನುರಿ ತಿಳಿಸಿದ್ದಾರೆ. ಹಾಗೇ, ಕೊವಿಡ್ 19 ಸಾಂಕ್ರಾಮಿಕ ಜಗತ್ತಿನಾದ್ಯಂತ 5 ಮಿಲಿಯನ್​ ಗೂ ಅಧಿಕ ಜನರನ್ನು ಬಲಿಪಡೆದಿದೆ. ಈ ರೋಗದ ವಿರುದ್ಧ ಮಕ್ಕಳಿಗೆ ಲಸಿಕೆ ನೀಡುವುದು ಅತ್ಯಗತ್ಯ. ಇದೀಗ ಕೊವ್ಯಾಕ್ಸಿನ್​ ಲಸಿಕೆಯನ್ನು 2-18ವರ್ಷದವರೆಗಿನವರಿಗೆ ನೀಡಲು ಯುಎಸ್​ ಆಹಾರ ಮತ್ತು ಔಷಧ ಆಡಳಿತ ಅನುಮತಿ ನೀಡಿದರೆ, ಪಾಲಕರಿಗೆ ತಮ್ಮ ಮಕ್ಕಳನ್ನು ಕೊವಿಡ್​ 19 ನಿಂದ ಸುರಕ್ಷಿತ ಮಾಡಲು ದಾರಿ ಸಿಕ್ಕಂತಾಗುತ್ತದೆ ಎಂದೂ ಶಂಕರ್​ ಅಭಿಪ್ರಾಯಪಟ್ಟಿದ್ದಾರೆ.

ಕೊವ್ಯಾಕ್ಸಿನ್​ ಲಸಿಕೆ 2-18ವರ್ಷದವರ ಮೇಲೆ ಉಂಟು ಮಾಡುವ ರಿಯಾಕ್ಟೋಜೆನಿಸಿಟಿ ಮತ್ತು ಇಮ್ಯುನೊಜೆನಿಸಿಟಿಗೆ ಸಂಬಂಧಪಟ್ಟಂತೆ ಈ ವರ್ಷ ಮೇ ತಿಂಗಳಿನಿಂದ ಜುಲೈವರೆಗೆ ಅಧ್ಯಯನ ನಡೆದಿತ್ತು. 2-6, 6-12 ಮತ್ತು 12-18 ಹೀಗೆ ಮೂರು ಹಂತದಲ್ಲಿ ಕ್ಲಿನಿಕಲ್​ ಟ್ರಯಲ್​ ನಡೆದಿದೆ. ಒಟ್ಟು 526 ಮಕ್ಕಳ ಮೇಲೆ ಪ್ರಯೋಗ ನಡೆದಿತ್ತು..ಯಾರಿಗೂ ಯಾವುದೇ ದೊಡ್ಡ ಮಟ್ಟದ ಪ್ರತಿಕೂಲ ಆಗಿಲ್ಲ. ಯಾರೂ ಆಸ್ಪತ್ರೆಗೆ ದಾಖಲಾಗಿಲ್ಲ ಎಂದು ವರದಿಯಾಗಿದೆ. ಅಂದಹಾಗೆ ಸದ್ಯ ಯುಎಸ್​​ನ ಫೈಜರ್​ ಕೊರೊನಾ ಲಸಿಕೆಯೊಂದನ್ನು ಮಕ್ಕಳ ಮೇಲೆ ತುರ್ತು ಬಳಕೆಗೆ ಅವಕಾಶ ನೀಡಲಾಗಿದೆ.

ಇದನ್ನೂ ಓದಿ: Coronavirus cases in India: ದೇಶದಲ್ಲಿ 10,929 ಹೊಸ ಕೊವಿಡ್ ಪ್ರಕರಣ, 392 ಮಂದಿ ಸಾವು

Published On - 12:04 pm, Sat, 6 November 21

ಬಾಗಲಕೋಟ: ಜಾತ್ರೆಗೆ 500 ನೋಟುಗಳ ಅಂಗಿ ತೊಟ್ಟುಕೊಂಡು ಬಂದ ಯುವಕ
ಬಾಗಲಕೋಟ: ಜಾತ್ರೆಗೆ 500 ನೋಟುಗಳ ಅಂಗಿ ತೊಟ್ಟುಕೊಂಡು ಬಂದ ಯುವಕ
ಬಿಗ್​ಬಾಸ್ ಮನೆಯ ಫೇಕ್ ಸ್ಪರ್ಧಿ ಯಾರು? ಊಸರವಳ್ಳಿ ಯಾರು?
ಬಿಗ್​ಬಾಸ್ ಮನೆಯ ಫೇಕ್ ಸ್ಪರ್ಧಿ ಯಾರು? ಊಸರವಳ್ಳಿ ಯಾರು?
Daily Devotional: ಪೂಜೆಯ ಫಲ ಪಡೆಯುವುದು ಹೇಗೆ? ವಿಡಿಯೋ ನೋಡಿ
Daily Devotional: ಪೂಜೆಯ ಫಲ ಪಡೆಯುವುದು ಹೇಗೆ? ವಿಡಿಯೋ ನೋಡಿ
ವಾರ ಭವಿಷ್ಯ: ನವೆಂಬರ್​ 11 ರಿಂದ ​17ರವರೆಗೆ ವಾರ ಭವಿಷ್ಯ ಹೀಗಿದೆ
ವಾರ ಭವಿಷ್ಯ: ನವೆಂಬರ್​ 11 ರಿಂದ ​17ರವರೆಗೆ ವಾರ ಭವಿಷ್ಯ ಹೀಗಿದೆ
Nithya Bhavishya: ಈ ರಾಶಿಯವರಿಗೆ 5 ಗ್ರಹಗಳ ಶುಭ ಫಲವಿದೆ
Nithya Bhavishya: ಈ ರಾಶಿಯವರಿಗೆ 5 ಗ್ರಹಗಳ ಶುಭ ಫಲವಿದೆ
ನಾಗೇಂದ್ರರನ್ನು ಪುನಃ ಸಂಪುಟಕ್ಕೆ ಸೇರಿಸಿಕೊಳ್ಳುವ ಸುಳಿವು ನೀಡಿದ ಸಿಎಂ
ನಾಗೇಂದ್ರರನ್ನು ಪುನಃ ಸಂಪುಟಕ್ಕೆ ಸೇರಿಸಿಕೊಳ್ಳುವ ಸುಳಿವು ನೀಡಿದ ಸಿಎಂ
ಬಿಜೆಪಿಯ ನಿಷ್ಠಾವಂತ ನಾಯಕರಿಂದ ಸರ್ಕಾರದ ವಿರುದ್ಧ ಪುನಃ ಹೋರಾಟ: ಯತ್ನಾಳ್
ಬಿಜೆಪಿಯ ನಿಷ್ಠಾವಂತ ನಾಯಕರಿಂದ ಸರ್ಕಾರದ ವಿರುದ್ಧ ಪುನಃ ಹೋರಾಟ: ಯತ್ನಾಳ್
ಮೂರು ಬಾರಿ ಸಂಸದರಾಗಿದ್ದ ಸುರೇಶ್ ಚನ್ನಪಟ್ಟಣಕ್ಕೆ ನೀಡಿದ್ದೇನು? ನಿಖಿಲ್
ಮೂರು ಬಾರಿ ಸಂಸದರಾಗಿದ್ದ ಸುರೇಶ್ ಚನ್ನಪಟ್ಟಣಕ್ಕೆ ನೀಡಿದ್ದೇನು? ನಿಖಿಲ್
ಆರಂಭಿಕ ಹಂತದಲ್ಲಿ ಕಾಂಗ್ರೆಸ್ ಪಕ್ಷದ ಕುತಂತ್ರ ಅಡ್ಡಿಯಾಗಿತ್ತು:ಕುಮಾರಸ್ವಾಮಿ
ಆರಂಭಿಕ ಹಂತದಲ್ಲಿ ಕಾಂಗ್ರೆಸ್ ಪಕ್ಷದ ಕುತಂತ್ರ ಅಡ್ಡಿಯಾಗಿತ್ತು:ಕುಮಾರಸ್ವಾಮಿ
ಮುಂಬೈ-ಪುಣೆ ಎಕ್ಸ್‌ಪ್ರೆಸ್‌ವೇಯಲ್ಲಿ ಟ್ರಕ್‌ಗೆ ಬಸ್ ಡಿಕ್ಕಿ;18 ಮಂದಿಗೆ ಗಾಯ
ಮುಂಬೈ-ಪುಣೆ ಎಕ್ಸ್‌ಪ್ರೆಸ್‌ವೇಯಲ್ಲಿ ಟ್ರಕ್‌ಗೆ ಬಸ್ ಡಿಕ್ಕಿ;18 ಮಂದಿಗೆ ಗಾಯ