AQI: ದೆಹಲಿಯಲ್ಲಿ 5 ವರ್ಷದಲ್ಲೇ ಅತಿಹೆಚ್ಚು ವಾಯುಮಾಲಿನ್ಯ; ಬೆಂಗಳೂರಿನ ವಾಯುಗುಣಮಟ್ಟ ಹೇಗಿದೆ? ಇಲ್ಲಿದೆ ವಿವರ

Delhi, Bengaluru AQI: ಏರ್ ಕ್ವಾಲಿಟಿ ಇಂಡೆಕ್ಸ್​ನಲ್ಲಿ PM 2.5, 100 ಕ್ಕಿಂತ ಕಡಿಮೆ ಇರಬೇಕು. ಅದನ್ನು ಉತ್ತಮ ಗುಣಮಟ್ಟದ ಗಾಳಿ ಎಂದು ವರ್ಗೀಕರಣ ಮಾಡಲಾಗುತ್ತದೆ. ಆದರೆ ದೆಹಲಿ, ಸುತ್ತಮುತ್ತಲಿನ ಗಾಳಿಯ ಗುಣಮಟ್ಟ ಸದ್ಯ ತೀರ ಕಳಪೆ ಗುಣಮಟ್ಟ ಹೊಂದಿದೆ.

AQI: ದೆಹಲಿಯಲ್ಲಿ 5 ವರ್ಷದಲ್ಲೇ ಅತಿಹೆಚ್ಚು ವಾಯುಮಾಲಿನ್ಯ; ಬೆಂಗಳೂರಿನ ವಾಯುಗುಣಮಟ್ಟ ಹೇಗಿದೆ? ಇಲ್ಲಿದೆ ವಿವರ
ದೆಹಲಿಯಲ್ಲಿ ಹದಗೆಟ್ಟ ಗಾಳಿ
Follow us
TV9 Web
| Updated By: ganapathi bhat

Updated on: Nov 06, 2021 | 11:12 AM

ದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ನಿಷೇಧದ ನಡುವೆ ಪಟಾಕಿ ಸಿಡಿಸಿದ ಹಿನ್ನೆಲೆ ವಾಯುಮಾಲಿನ್ಯ ಪ್ರಮಾಣ ಹೆಚ್ಚಾಗಿದೆ. ಏರ್ ಕ್ವಾಲಿಟಿ ಇಂಡೆಕ್ಸ್‌ನಲ್ಲಿ ಗುಣಮಟ್ಟ 462ಕ್ಕೆ ಕುಸಿತ ಕಂಡಿದೆ. ದೆಹಲಿಯಲ್ಲಿ 5 ವರ್ಷದಲ್ಲೇ ಅತಿ ಹೆಚ್ಚು ವಾಯುಮಾಲಿನ್ಯ ದಾಖಲಾಗಿದೆ. ಈ ಬಗ್ಗೆ, ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಮಾಹಿತಿ ಲಭ್ಯವಾಗಿದೆ, ದೆಹಲಿ, ಸುತ್ತಮುತ್ತಲಿನ ನಗರಗಳಲ್ಲಿ ಹೊಗೆ ಆವರಿಸಿದೆ. ರಾಷ್ಟ್ರ ರಾಜಧಾನಿ ದೆಹಲಿಯ ಜನರಿಗೆ ಉಸಿರಾಟದ ಸಮಸ್ಯೆ ಕಂಡುಬಂದಿದೆ. ಜನರಿಗೆ ಕಣ್ಣುರಿ, ಕಣ್ಣಿನಲ್ಲಿ ನೀರು, ಗಂಟಲು ನೋವಿನ ಸಮಸ್ಯೆ ಕಂಡುಬಂದಿದೆ.

ನಿಷೇಧದ ಮಧ್ಯೆ ಪಟಾಕಿ ಸಿಡಿಸಿದ ಹಿನ್ನೆಲೆ ಪ್ರಕರಣ ದಾಖಲು ಮಾಡಲಾಗಿದೆ. ದೆಹಲಿಯಲ್ಲಿ 50ಕ್ಕೂ ಹೆಚ್ಚು ಜನರ ವಿರುದ್ಧ ಪ್ರಕರಣ ದಾಖಲು ಮಾಡಲಾಗಿದೆ. ದೆಹಲಿ ಪಕ್ಕದ ಫರಿದಾಬಾದ್​ನಲ್ಲಿ ಏರ್ ಕ್ವಾಲಿಟಿ ಇಂಡೆಕ್ಸ್​ನಲ್ಲಿ ವಾಯು ಗುಣಮಟ್ಟ 469ಕ್ಕೆ ಕುಸಿತ ಕಂಡಿದೆ. ಗ್ರೇಟರ್ ನೋಯ್ಡಾದಲ್ಲಿ 464, ಗಾಜಿಯಾಬಾದ್​ನಲ್ಲಿ 470, ಗುರುಗ್ರಾಮದಲ್ಲಿ 472, ನೋಯ್ಡಾದಲ್ಲಿ 475ಕ್ಕೆ ವಾಯುಗುಣಮಟ್ಟ ಕುಸಿತವಾಗಿದೆ.

ಏರ್ ಕ್ವಾಲಿಟಿ ಇಂಡೆಕ್ಸ್​ನಲ್ಲಿ PM 2.5, 100 ಕ್ಕಿಂತ ಕಡಿಮೆ ಇರಬೇಕು. ಅದನ್ನು ಉತ್ತಮ ಗುಣಮಟ್ಟದ ಗಾಳಿ ಎಂದು ವರ್ಗೀಕರಣ ಮಾಡಲಾಗುತ್ತದೆ. ಆದರೆ ದೆಹಲಿ, ಸುತ್ತಮುತ್ತಲಿನ ಗಾಳಿಯ ಗುಣಮಟ್ಟ ಸದ್ಯ ತೀರ ಕಳಪೆ ಗುಣಮಟ್ಟ ಹೊಂದಿದೆ.

ವಾಯುಮಾಲಿನ್ಯದಿಂದ ಕೊರೊನಾ ಹೆಚ್ಚಾಗಬಹುದು: ರಣದೀಪ್ ಗುಲೇರಿಯಾ ದೆಹಲಿಯಲ್ಲಿ ವಾಯುಮಾಲಿನ್ಯ ಹೆಚ್ಚಳವಾದ ಹಿನ್ನೆಲೆ, ವಾಯುಮಾಲಿನ್ಯದಿಂದ ಕೊರೊನಾ ಹೆಚ್ಚಾಗಬಹುದು ಎಂದು ದೆಹಲಿ ಏಮ್ಸ್ ಆಸ್ಪತ್ರೆಯ ನಿರ್ದೇಶಕ ಡಾ. ರಣದೀಪ್ ಗುಲೇರಿಯಾ ಹೇಳಿಕೆ ನೀಡಿದ್ದಾರೆ. ಮಾಲಿನ್ಯದ ಗಾಳಿಯಲ್ಲಿ ಹೆಚ್ಚು ಸಮಯ ವೈರಸ್ ಇರುತ್ತೆ. ಇಂತಹ ಗಾಳಿ ಸೇವನೆಯಿಂದ ಜನರು ಸೋಂಕಿಗೆ ತುತ್ತಾಗುತ್ತಾರೆ. ಹೃದಯ, ಕಿಡ್ನಿ ಸಮಸ್ಯೆ ಇರುವವರಿಗೆ ತೊಂದರೆ ಹೆಚ್ಚಾಗಲಿದೆ. ಹೈಪರ್ ಟೆನ್ಷನ್ ಇದ್ರೆ ಹೈರಿಸ್ಕ್ ಹೃದಯದ ಸಮಸ್ಯೆ ಸಾಧ್ಯತೆ ಇದೆ. ವಾಯುಮಾಲಿನ್ಯದಿಂದ ಕೊರೊನಾ ಸಾವು ಹೆಚ್ಚಾಗಬಹುದು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಬೆಂಗಳೂರಿನ ವಾಯುಗುಣಮಟ್ಟ ಹೇಗಿದೆ? ಬೆಂಗಳೂರಿನ ಬಾಪೂಜಿ ನಗರ ವಾಯುಗುಣಮಟ್ಟ 129 ಆಗಿದೆ. ಅಂದರೆ, ಸೂಕ್ಷ್ಮ ಗುಂಪಿನ‌ ಜನರಿಗೆ ಇದರಿಂದ ತೊಂದರೆ ಉಂಟಾಗಬಹುದು. BWSSB ಕಾಡಬೀಸನಹಳ್ಳಿಯಲ್ಲಿ 33 ಅಂದರೆ ಉತ್ತಮ ಗುಣಮಟ್ಟದ ಗಾಳಿ ಇದೆ. ಪೀಣ್ಯದಲ್ಲಿ ವಾಯುಗುಣಮಟ್ಟ 62, ಅಂದರೆ ಸಾಧಾರಣ ಆಗಿದೆ. ಹೆಬ್ಬಾಳದಲ್ಲಿ ವಾಯುಗುಣಮಟ್ಟ 53, ಜಯನಗರ ಐದನೇ ಬ್ಲಾಕ್ ವಾಯುಗುಣಮಟ್ಟ 78, ಬಿಟಿಎಂ‌ ಲೇಔಟ್ 61 ಅಂದರೆ ಇಲ್ಲಿ ಸಾಧಾರಣ ವಾಯುಗುಣಮಟ್ಟ ಕಂಡುಬಂದಿದೆ.

ಇದನ್ನೂ ಓದಿ: Diwali 2021: ದೀಪಾವಳಿ ಸಮಯದಲ್ಲಿ ಆರೋಗ್ಯವಾಗಿರಲು ಮತ್ತು ವಾಯು ಮಾಲಿನ್ಯ ತಡೆಗಟ್ಟಲು ಇಲ್ಲಿವೆ ಕೆಲವು ಸರಳ ಸಲಹೆಗಳು

ಇದನ್ನೂ ಓದಿ: ಮನೆಯ ಹೊರಗೆ ಅಷ್ಟೇ ಅಲ್ಲ ಮನೆಯೊಳಗೆ ಕೂಡ ವಾಯು ಮಾಲಿನ್ಯ ಉಂಟಾಗಬಹುದು; ಅಗತ್ಯ ಕ್ರಮದ ಬಗ್ಗೆ ಎಚ್ಚರ ವಹಿಸಿ

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್