ನೇಹಾ ಕೊಲೆ ಪ್ರಕರಣ: 3 ತಿಂಗಳ ಹಿಂದೆ ತಂದೆಯ ಮೇಲೆಯೇ ಹಲ್ಲೆ ಮಾಡಿದ್ದ ಆರೋಪಿ ಫಯಾಜ್

ಗುರುವಾರ ಮಧ್ಯಾಹ್ನ ಹುಬ್ಬಳ್ಳಿಯ ಬಿವಿಬಿ ಕಾಲೇಜು ಆವರಣದಲ್ಲಿ ನಡೆದ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಸದಸ್ಯ ನಿರಂಜನ ಹಿರೇಮಠ ಅವರ ಪುತ್ರಿ ವಿದ್ಯಾರ್ಥಿನಿ ನೇಹಾ ಕೊಲೆಯಾಗಿದೆ. ಕೊಲೆ ಆರೋಪಿ ಫಯಾಜ್​ ಬಗ್ಗೆ ಹಲವು ವಿಚಾರಗಳು ಬೆಳಕಿಗೆ ಬರುತ್ತಿವೆ. ಇದೀಗ ಆರೋಪಿ ಫಯಾಜ್​ ಕುರಿತು ಸ್ಫೋಟಕ ಮಾಹಿತಿ ತಿಳಿದು ಬಂದಿದೆ.

ನೇಹಾ ಕೊಲೆ ಪ್ರಕರಣ: 3 ತಿಂಗಳ ಹಿಂದೆ ತಂದೆಯ ಮೇಲೆಯೇ ಹಲ್ಲೆ ಮಾಡಿದ್ದ ಆರೋಪಿ ಫಯಾಜ್
ಆರೋಪಿ ಫಯಾಜ್​
Updated By: ವಿವೇಕ ಬಿರಾದಾರ

Updated on: Apr 20, 2024 | 1:16 PM

ಬೆಳಗಾವಿ, ಏಪ್ರಿಲ್​ 20: ಹುಬ್ಬಳ್ಳಿಯ ವಿದ್ಯಾರ್ಥಿನಿ ನೇಹಾ ಹಿರೇಮಠ ಕೊಲೆ (Neha Hiremath Murder) ಪ್ರಕರಣ ರಾಜ್ಯದಲ್ಲಿ ಸಾಕಷ್ಟು ಸದ್ದು ಮಾಡುತ್ತಿದೆ. ಇದೀಗ ನೇಹಾ ಹಿರೇಮಠರನ್ನು ಕೊಲೆ ಮಾಡಿದ್ದ ಆರೋಪಿ ಫಯಾಜ್ (Fayaz)​ ಕುರಿತು ಸ್ಫೋಟಕ ವಿಚಾರವೊಂದು ಬೆಳಕಿಗೆ ಬಂದಿದೆ. ಮೂರು ತಿಂಗಳ ಹಿಂದೆ ಆಸ್ತಿ ವಿಚಾರವಾಗಿ ಆರೋಪಿ ಫಯಾಜ್ ತಂದೆ-ತಾಯಿ ಮಧ್ಯೆ ಗಲಾಟೆ ನಡೆದಿತ್ತು. ಈ ವೇಳೆ ಆರೋಪಿ ಫಯಾಜ್​ ತಾಯಿ ಪರವಾಗಿ ನಿಂತು, ತಂದೆಯೊಂದಿಗೆ ಜಗಳವಾಡಿದ್ದನು.

​ಜಗಳ ತಾರಕಕ್ಕೆ ಏರಿದ್ದು, ಆರೋಪಿ ಫಯಾಜ್​ ತಂದೆ ಬಾಬಾಸಾಹೇಬ್ ಕೊಂಡುನಾಯ್ಕ್ ಮೇಲಯೇ ಹಲ್ಲೆ ಮಾಡಿದ್ದನು ಎಂಬ ಅಂಶ ಟಿವಿ9ಗೆ ತಿಳಿದು ಬಂದಿದೆ. ಆಗ ಬಾಬಾಸಾಹೇಬ್ ಕೊಂಡುನಾಯ್ಕ್ ಮಗನಿಂದ ರಕ್ಷಣೆ ಕೊಡಿಸಿ ಅಂತ ಸವದತ್ತಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದರು.

ಈ ವೇಳೆ ಸವದತ್ತಿ ಪೊಲೀಸ್​ ಠಾಣೆ ಪಿಎಸ್ಐ ಆನಂದ ಆರೋಪಿ ಕುಟುಂಬವನ್ನು ಪೊಲೀಸ್​ ಠಾಣೆಗೆ ಕರೆಸಿ ಬುದ್ದಿವಾದ ಹೇಳಿದ್ದರು. ಆರೋಪಿ ಫಯಾಜ್​ ಬುದ್ದಿವಾದ ಹೇಳಿ, ಮುಚ್ಚಳಿಕೆ ಬರೆಯಿಸಿಕೊಂಡು ಕಳಸಿದ್ದರು. ಮತ್ತೆನಾದರೂ ತಂದೆ ಮೇಲೆ ಹಲ್ಲೆ ಮಾಡಿದರೆ ಜೈಲಿಗೆ ಕಳುಹಿಸುವುದಾಗಿ ಎಚ್ಚರಿಕೆ ನೀಡಿದ್ದರು ಎಂಬ ಮಾಹಿತಿ ಟಿವಿ9ಗೆ ಸವದತ್ತಿ ಪೊಲೀಸ್ ಮೂಲಗಳಿಂದ ತಿಳಿದು ಬಂದಿದೆ.

ಇದನ್ನೂ ಓದಿ: ಮದುವೆಗಾಗಿ ಫಯಾಜ್ ನಮಗೆ ಪೀಡಿಸುತ್ತಿದ್ದ, ಮಗಳಿಗೆ ಜೀವ ಬೆದರಿಕೆ ಹಾಕಿದ್ದ: ನೇಹಾ ತಂದೆ​

ಆರೋಪಿ ಫಯಾಜ್​ ತಂದೆ ಕಾಣೆ

ಇನ್ನು ಆರೋಪಿ ಫಯಾಜ್​ ತಂದೆ ಬಾಬಾಸಾಬ್ ಕಾಣೆಯಾಗಿದ್ದಾರೆ. ಬಾಬಾಸಾಬ್​ ನಿನ್ನೆ (ಏ.19) ಸಂಜೆಯಿಂದ ಕಾಣೆಯಾಗಿದ್ದು, ಬೆಳಗಾವಿ ಮತ್ತು ಹುಬ್ಬಳ್ಳಿ ಪೊಲೀಸರು ಹುಡುಕಾಟ ನಡೆಸಿದ್ದಾರೆ. ಬಾಬಾಸಾಬ್​ ಪೋನ್ ಸ್ವಿಚ್ ಆಫ್ ಮಾಡಿಕೊಂಡು ಯಾರ ಸಂಪರ್ಕಕ್ಕೂ ಸಿಗುತ್ತಿಲ್ಲ.

ನೇಹಾ ಹಿರೇಮಠ, ತಂದೆ ನಿರಂಜನ ಹಿರೇಮಠ, ಆರೋಪಿ ಫಯಾಜ್​

ನನ್ನ ಮಗಳು ಹೊಲಸು ಕೆಲಸ ಮಾಡಲ್ಲ: ನೇಹಾ ತಾಯಿ

ನನ್ನ ಮಗಳು ನೇಹಾ ಹೊಲಸು ಕೆಲಸ ಮಾಡಲ್ಲ. ಕ್ಷಮೆ ತೆಗೆದುಕೊಂಡು ಏನು ಮಾಡಲಿ. ಮಗಳು ಕಾಲೇಜಿಗೆ ಹೋಗುತ್ತಿದ್ದಳು, ಮದುವೆ ಬಗ್ಗೆ ಮಾತಾಡಿಲ್ಲ. ಫೋಟೋವನ್ನು ಹೇಗೆ ಬೇಕು ಹಾಗೆ ಎಡಿಟ್​ ಮಾಡುತ್ತಾರೆ. ಮಗಳಿಗೆ ಶಾಂತಿ ಸಿಗಬೇಕು ಅಂದರೆ ಅವನು ಬದುಕಬಾರದು. ನನ್ನ ಮಗಳ ಕೊಲೆ ಮಾಡಿದವನನ್ನು ಜನರ ಕೈಗೆ ಕೊಡಿ. ಕಾಲೇಜಿಗೆ 3 ಗೇಟ್​ ಇದೆ, ಯಾರಾದರೂ ಸಹ ಬರುತ್ತಾರೆ. ನನ್ನ ಕಣ್ಣ ಮುಂದೆ ಘಟನೆ ನಡೆದಿದೆ.
ಕಲಿಯೋಕೆ ಕಳುಹಿಸಿದರೆ ಹೆಣ ಆಗಿ ಬರ್ತಾರೆ ಅಂದರೆ ಹೇಗೆ. ಹೆಣ್ಣು ಮಕ್ಕಳಿಗೆ ರಕ್ಷಣೆ ಇಲ್ಲ ಎಂದು ನೇಹಾ ತಾಯಿ ಗೀತಾ ಅಳಲು ತೋಡಿಕೊಂಡರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 1:15 pm, Sat, 20 April 24