ಕರಾವಳಿ ಭಾಗದಲ್ಲಿ ಮಳೆ, ಉತ್ತರ ಕರ್ನಾಟಕದಲ್ಲಿ ಬರ: ಹವಾಮಾನ ಇಲಾಖೆಯನ್ನು ನಂಬಿಕೊಂಡು ಪ್ಲ್ಯಾನ್ ಮಾಡಬೇಡಿ ಎಂದ ಬೊಮ್ಮಾಯಿ

ಬೆಳಗಾವಿ ಭಾಗದಲ್ಲಿ ಮಳೆ ಕೊರತೆ ಉಂಟಾಗಿದೆ. ಯಳ್ಳೂರ, ಶಹಾಪುರ, ವಡಗಾಂವ ಸೇರಿದಂತೆ ಹಲವು ಭಾಗದಲ್ಲಿ ಭತ್ತದ ಬೆಳೆ ಒಣಗುತ್ತಿದೆ.

ಕರಾವಳಿ ಭಾಗದಲ್ಲಿ ಮಳೆ, ಉತ್ತರ ಕರ್ನಾಟಕದಲ್ಲಿ ಬರ: ಹವಾಮಾನ ಇಲಾಖೆಯನ್ನು ನಂಬಿಕೊಂಡು ಪ್ಲ್ಯಾನ್ ಮಾಡಬೇಡಿ ಎಂದ ಬೊಮ್ಮಾಯಿ
ಬೆಳಗಾವಿಯಲ್ಲಿ ಬರ
Follow us
Sahadev Mane
| Updated By: ಆಯೇಷಾ ಬಾನು

Updated on:Jul 06, 2023 | 3:37 PM

ಬೆಳಗಾವಿ: ರಾಜ್ಯದ ಕರಾವಳಿ ಭಾಗದಲ್ಲಿ ವರುಣನ ಅಬ್ಬರ ಜೋರಾಗಿದೆ. ಮನೆಗಳು, ಸೇತುವೆಗಳು ಮುಳುಗಿವೆ. ಪ್ರವಾಹದ ಭೀತಿ ಎದುರಾಗಿದೆ(Karnataka Rain). ಆದ್ರೆ ಉತ್ತರ ಕರ್ನಾಟಕದಲ್ಲಿ(Uttara Karnataka) ಮಳೆ ಕೈಕೊಟ್ಟಿದೆ. ಬರದ ಛಾಯೆ ಆವರಿಸಿದೆ. ಪಶ್ಚಿಮ ಘಟ್ಟಗಳ ಪ್ರದೇಶ, ಬೆಳಗಾವಿ ಭಾಗದಲ್ಲಿ ಮಳೆ ಕೊರತೆ ಉಂಟಾಗಿದೆ. ಯಳ್ಳೂರ, ಶಹಾಪುರ, ವಡಗಾಂವ ಸೇರಿದಂತೆ ಹಲವು ಭಾಗದಲ್ಲಿ ಭತ್ತದ ಬೆಳೆ ಒಣಗುತ್ತಿದೆ. ಸಾವಿರಾರು ರೂಪಾಯಿ ಖರ್ಚು ಮಾಡಿ ಭತ್ತ ಬಿತ್ತನೆ ಮಾಡಿದ್ದ ರೈತರು ಕಂಗಾಲಾಗಿದ್ದಾರೆ. ಮಳೆ ಕೊರತೆ ಬಗ್ಗೆ ಇಂದಿನ ಸದನದಲ್ಲಿ ಪ್ರಸ್ತಾಪ ಮಾಡಲಾಗಿದೆ.

ಮಳೆಯಾಗದ ಕಾರಣ ಅಲ್ಪಸ್ವಲ್ಪ ಚಿಗುರೊಡೆದ ಬೆಳೆಗಳ ಮಧ್ಯೆ ಜಮೀನು ಬಿರುಕು ಬಿಡ್ತಿವೆ. ಮೂವತ್ತು ಸಾವಿರ ವರೆಗೂ ಖರ್ಚು ಮಾಡಿ ಭತ್ತ ಬಿತ್ತನೆ ಮಾಡಿದ್ದೀವಿ. ಮಳೆಯಾಗದ ಹಿನ್ನೆಲೆ ಬೆಳೆ ಕೈಕೊಟ್ಟಿದೆ. ಮಳೆ ಬರುತ್ತೆ ಅಂತ ಒಂದೂವರೆ ತಿಂಗಳ ಹಿಂದೆ ಭತ್ತ ಬಿತ್ತನೆ ಮಾಡಿದ್ದೀವಿ. ಹನ್ನೆರಡನೂರು ಎಕರೆ ಪ್ರದೇಶದಲ್ಲಿ ಬಿತ್ತನೆ ಮಾಡಿದ್ದ ಭತ್ತ ಹಾಳಾಗುವ ಭೀತಿ ಎದುರಾಗಿದೆ. ಹೀಗಾಗಿ ಹೆಕ್ಟೇರ್‌ಗೆ ಐವತ್ತು ಸಾವಿರ ಪರಿಹಾರ ನೀಡುವಂತೆ ಸರ್ಕಾರಕ್ಕೆ ರೈತರು ಒತ್ತಾಯಿಸಿದ್ದಾರೆ.

ಮಳೆ ಇಲ್ಲದೆ ಖಾಲಿ ಖಾಲಿಯಾಗಿರುವ ಜಲಾಶಯಗಳು

ಇನ್ನು ಮಳೆ ಇಲ್ಲದ ಕಾರಣ ಜಲಾಶಯಗಳಿಗೆ ಇನ್ನೂ ನೀರಿನ ಒಳ ಹರಿವು‌ ಆರಂಭವಾಗಿಲ್ಲ. ಬೆಳಗಾವಿ ಜಿಲ್ಲೆಯಲ್ಲಿ ಶೇ‌ 62 ರಷ್ಟು ಮಳೆಯ ಕೊರತೆ ಇದೆ. ಜೂನ್ 1 ರಿಂದ ಇಲ್ಲಿಯ ವರೆಗೆ 165 ಮಿ.ಮೀ ವಾಡಿಕೆ ಮಳೆ ಆಗಬೇಕಿತ್ತು. ಈವರೆಗೆ ಕೇವಲ 62 ಮಿ.ಮೀ ಮಳೆಯಾಗಿದೆ. ಬೆಳಗಾವಿಯ ಘಟಪ್ರಭಾ, ಮಲಪ್ರಭಾ ಜಲಾಶಯಕ್ಕೆ ಇನ್ನೂ ಒಳ ಹರಿವು ಆರಂಭ ಆಗಿಲ್ಲ. 51 ಟಿಎಂಸಿ ಸಾಮರ್ಥ್ಯದ ಘಟಪ್ರಭಾ ಜಲಾಶಯ ಸಂಪೂರ್ಣ ಖಾಲಿ‌ಯಾಗಿದೆ. 37 ಟಿಎಂಸಿ ಸಾಮರ್ಥ್ಯದ ಮಲಪ್ರಭಾ ಜಲಾಶಯವೂ ಖಾಲಿ‌ಯಾಗಿದೆ.

ಇದನ್ನೂ ಓದಿ: ದಕ್ಷಿಣ ಕನ್ನಡದಲ್ಲಿ ಮಳೆ ಅವಾಂತರ; ಹಲವೆಡೆ ಜಲ ದಿಗ್ಬಂಧನ, ಗುಡ್ಡ ಕುಸಿತ

ಮಹಾರಾಷ್ಟ್ರದ ಪಶ್ಚಿಮ ಘಟ್ಟ ಪ್ರದೇಶದಲ್ಲಿ ಮುಂಗಾರು ಮಳೆ ಆಗುತ್ತಿಲ್ಲ. ಹೀಗಾಗಿ ಎರಡು ನದಿಗಳಲ್ಲಿ ಇನ್ನೂ ನಿರೀಕ್ಷಿತ ಪ್ರಮಾಣದ ನೀರಿ ಹರಿದು ಬರುತ್ತಿಲ್ಲ. ಕೇವಲ ಜಿಟಿಜಿಟಿ ಮಳೆಯಾಗುತ್ತಿದ್ದು ಈ ವರೆಗೂ ದೊಡ್ಡ ಮಳೆ ಆಗಿಲ್ಲ. ಜಿಲ್ಲೆಯಲ್ಲಿ 7.11 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಭತ್ತ, ಗೋವಿನಜೋಳ ಹೆಸರು, ಉದ್ದು, ಸೋಯಾಬಿನ್, ಶೇಂಗಾ ಬಿತ್ತನೆಯ ಗುರಿ ಇದೆ. ಇಷ್ಟೊತ್ತಿಗೆ ಆಗಲೇ ಶೇ 80ರಷ್ಟು ಬಿತ್ತನೆ ಕಾರ್ಯ ಆಗಬೇಕಿತ್ತು. ಕಬ್ಬು ಹೊರತು ಪಡಿಸಿ ಕೇವಲ ಶೇಕಡಾ 18ರಷ್ಟು ಮಾತ್ರ ಬಿತ್ತನೆ ಕಾರ್ಯ ಆಗಿದೆ. ಮಳೆ ಕೈ ಕೊಟ್ಟ ಹಿನ್ನೆಲೆ ರೈತರ ಲೆಕ್ಕಾಚಾರ ತಲೆಕೆಳಗಾಗಿದೆ.

ಸದನದಲ್ಲಿ ಮಳೆ ಕೊರತೆ ಹಾಗೂ ಬರ ನಿಯಂತ್ರಣ ಪ್ರಸ್ತಾಪ

ವಿಧಾನಸಭೆಯಲ್ಲಿ ಕಾಂಗ್ರೆಸ್ ಶಾಸಕ ಅಲ್ಲಮಪ್ರಭು ಪಾಟೀಲ್ ಅವರು ಮಳೆ ಕೊರತೆ ಹಾಗೂ ಬರ ನಿಯಂತ್ರಣದ ಬಗ್ಗೆ ಪ್ರಸ್ತಾಪ ಮಾಡಿದರು. ಈ ವೇಳೆ ಮಧ್ಯಪ್ರವೇಶಿಸಿದ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಹವಾಮಾನ ಇಲಾಖೆಯನ್ನು ನಂಬಿಕೊಂಡು ಪ್ಲ್ಯಾನ್ ಮಾಡಬೇಡಿ. ಇಡೀ‌ ರಾಜ್ಯದಲ್ಲಿ ಈ ಬಾರಿ ಮಳೆ ಸರಿಯಾಗಿ ಆಗಿಲ್ಲ. ಕೂಡಲೇ ವಿಪತ್ತು ನಿರ್ವಹಣಾ ಇಲಾಖೆ ಗಮನಹರಿಸಬೇಕು. ಪ್ರತಿ ತಾಲೂಕಿಗೆ ಕುಡಿಯುವ ನೀರಿಗೆ 50 ಲಕ್ಷ ಬಿಡುಗಡೆ ಮಾಡಿ. ಸಮಸ್ಯೆ ನಿವಾರಣೆಗೆ ಶಾಶ್ವತ ಟಾಸ್ಕ್​ಫೋರ್ಸ್ ಮಾಡಬೇಕು. ತಡಮಾಡದೇ ಕ್ರಿಯಾ ಯೋಜನೆಗೆ ಅನುಮೋದನೆ ಮಾಡಲು ಎಸಿ ಅಥವಾ ತಹಸೀಲ್ದಾರ್​​ಗೆ ಅಧಿಕಾರ ನೀಡಿ. ಮಳೆ ಕೊರತೆ ಆಗಿ ಮೊಳಕೆ ಆಗದಿದ್ರೆ ಬೆಳೆ ವಿಮೆ ಬರುವುದಿಲ್ಲ. ಈ ಬಗ್ಗೆ ಸರ್ಕಾರ ‌ಗಮನ ಹರಿಸಬೇಕು ಎಂದು ಸಲಹೆ ಕೊಟ್ಟರು.

ಬೆಳಗಾವಿಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 3:37 pm, Thu, 6 July 23

ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್