ಬೆಳಗಾವಿಯಲ್ಲಿ ಹೆಚ್ಚಿದ ಸೈಬರ್​ ಕ್ರೈಂ ಪ್ರಕರಣಗಳು: ಪ್ರತಿದಿನ 25 ರಿಂದ 30 ಕೇಸ್​ ದಾಖಲು

| Updated By: ವಿವೇಕ ಬಿರಾದಾರ

Updated on: Oct 15, 2023 | 1:36 PM

ಬೆಳಗಾವಿ ನಗರ ಮತ್ತು ಗ್ರಾಮೀಣದಲ್ಲಿ ಸೈಬರ್ ಎಕನಾಮಿಕ್ಸ್​​ ನಾರ್ಕೋಟಿಕ್ಸ್ (CEN) ಪೊಲೀಸ್ ಠಾಣೆಗಳಿವೆ. 800 ಪ್ರಕರಣಗಳಲ್ಲಿ ಜನರ ಖಾತೆಗಳಿಂದ 2.5 ಕೋಟಿ ರೂ. ದೋಚಲಾಗಿದೆ. ಮತ್ತು ಹಣ ಕಳೆದುಕೊಂಡವರೆಲ್ಲರೂ ಉನ್ನತ ಶಿಕ್ಷಣ ಪಡೆದವರು ಎಂದು ಬೆಳಗಾವಿ ನಗರ ಸಿಇಎನ್ ಪೊಲೀಸರು ತಿಳಿಸಿದರು.

ಬೆಳಗಾವಿಯಲ್ಲಿ ಹೆಚ್ಚಿದ ಸೈಬರ್​ ಕ್ರೈಂ ಪ್ರಕರಣಗಳು: ಪ್ರತಿದಿನ 25 ರಿಂದ 30 ಕೇಸ್​ ದಾಖಲು
ಸೈಬರ್​ ಕ್ರೈಂ
Follow us on

ಬೆಳಗಾವಿ ಅ.15: ನಗರದಲ್ಲಿ ಆನ್‌ಲೈನ್ ವಂಚನೆ (Cyber Crime) ಪ್ರಕರಣಗಳು ದಿನದಿಂದ ದಿನಕ್ಕೆ ಏರಿಕೆಯಾಗುತ್ತಿವೆ. ಜಿಲ್ಲೆಯ ಎರಡು ಸೈಬರ್ ಪೊಲೀಸ್ (Police) ಠಾಣೆಗಳಲ್ಲಿ ಪ್ರತಿದಿನ 25 ರಿಂದ 30 ಪ್ರಕರಣಗಳು ದಾಖಲಾಗುತ್ತಿವೆ. ಕಳೆದ 10 ತಿಂಗಳಲ್ಲಿ ಇಂತಹ 800ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ. ಬೆಳಗಾವಿ (Belagavi) ನಗರ ಮತ್ತು ಗ್ರಾಮೀಣದಲ್ಲಿ ಸೈಬರ್ ಎಕನಾಮಿಕ್ಸ್​​ ನಾರ್ಕೋಟಿಕ್ಸ್ (CEN) ಪೊಲೀಸ್ ಠಾಣೆಗಳಿವೆ. 800 ಪ್ರಕರಣಗಳಲ್ಲಿ ಜನರ ಖಾತೆಗಳಿಂದ 2.5 ಕೋಟಿ ರೂ. ದೋಚಲಾಗಿದೆ. ಮತ್ತು ಹಣ ಕಳೆದುಕೊಂಡವರೆಲ್ಲರೂ ಉನ್ನತ ಶಿಕ್ಷಣ ಪಡೆದವರು ಎಂದು ನಗರ ಸಿಇಎನ್ ಪೊಲೀಸರು ತಿಳಿಸಿದರು.

ವಂಚಕರು OTP, OLX ಮತ್ತು ಮ್ಯಾಜಿಕ್ ಬ್ರಿಕ್ಸ್, Facebook ಅಥವಾ WhatsApp ವೀಡಿಯೊ ಕರೆ, ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್ ಸ್ಕಿಮ್ಮಿಂಗ್, ಹೂಡಿಕೆ ಮತ್ತು ಟ್ರೇಡಿಂಗ್ ಅಪ್ಲಿಕೇಶನ್‌ಗಳು, ಮ್ಯಾಟ್ರಿಮೋನಿಯಲ್ ಸೈಟ್‌ಗಳು, ಉದ್ಯೋಗ ಕೊಡುಗೆಗಳು, ಕಸ್ಟಮರ್ ಕೇರ್ ಲಿಂಕ್‌ಗಳು ಮತ್ತು ಮುಂತಾದ ವಿವಿಧ ಪ್ಲಾಟ್‌ಫಾರ್ಮ್‌ಗಳನ್ನು ಬಳಸಿ ಹಣ ದೋಚುತ್ತಿದ್ದಾರೆ. ಒಂದು ವಾರದ ಹಿಂದೆ, ಬೆಳಗಾವಿಯ ಪ್ರತಿಷ್ಠಿತ ಬ್ಯಾಂಕ್‌ನ ವ್ಯವಸ್ಥಾಪಕರೊಬ್ಬರು 18 ಲಕ್ಷ ರೂ. ಹಣವನ್ನು ಕಳೆದುಕೊಂಡಿದ್ದಾರೆ.

ವಂಚಕರು ಬ್ಯಾಂಕ್​​ ಖಾತೆ ಮತ್ತು ಸಿಮ್​​ಗಳಿಗೆ ಆಧಾರ ಕಾರ್ಡ್​​ ಲಿಂಕ್​ ಮಾಡಿದ್ದು, ಈ ವಿಳಾಸ ಆಧರಿಸಿ ದೆಹಲಿ, ಹರಿಯಾಣ, ಗುರ್‌ಗಾಂವ್, ರಾಜಸ್ಥಾನ, ಮುಂಬೈ ಮತ್ತು ಪುಣೆಗೆ ಭೇಟಿ ನೀಡಿದ್ದೇವೆ ಆದರೆ ಆರೋಪಿಗಳ ಸುಳಿವು ಮಾತ್ರ ಪತ್ತೆಯಾಗಿಲ್ಲ ಎಂದು ಪೊಲೀಸ್ ಇನ್ಸ್‌ಪೆಕ್ಟರ್ ಸಂಜೀವ್ ಕಾಂಬ್ಳೆ ಹೇಳಿದರು.

ಇದನ್ನೂ ಓದಿ: ಸೈಬರ್​ ಕ್ರೈಂ ಪ್ರಕರಣ ತಡೆಗಟ್ಟಲು ಪ್ರತ್ಯೇಕ CEN ಘಟಕಗಳ ಆರಂಭ

ಕೆವೈಸಿ ಅಪ್‌ಡೇಟ್‌ಗಳಿಗಾಗಿ ಕರೆ, ಮೊಬೈಲ್ ಫೋನ್‌ಗಳ ಮೂಲಕ ಕಳುಹಿಸಲಾದ ಲಿಂಕ್‌ಗಳನ್ನು ಕ್ಲಿಕ್ ಮಾಡುವುದು, ಸಾಮಾಜಿ ಜಾಲತಾಣಗಳಲ್ಲಿ ಅಪರಿಚಿತರ ಫ್ರೆಂಡ್​​ ರಿಕ್ವೆಸ್ಟ್​​ ಸ್ವೀಕರಿಸುವುದು. ಉದ್ಯೋಗಕ್ಕಾಗಿ ಚಾಟಿಂಗ್​ ಅಪ್ಲಿಕೇಶನ್​ ಮೂಲಕ ಹಣ ಮತ್ತು ದಾಖಲೆಗಳನ್ನು ನೀಡುವುದು. ಗೂಗಲ್ ಸರ್ಚ್ ಇಂಜಿನ್‌ನಲ್ಲಿ ಕಸ್ಟಮರ್​ ಕೇರ್​ ಅನ್ನು ಹುಡುಕುವುದು ವಂಚಕರಿಗೆ ಸಹಾಯ ಮಾಡುವ ಮಾರ್ಗಗಳಾಗಿವೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಜನರು ಮೋಸ ಹೋಗಿರುವುದು ಗೊತ್ತಾದ ತಕ್ಷಣ ದೂರು ದಾಖಲಿಸಿದರೆ ಬ್ಯಾಂಕ್ ಖಾತೆಯಿಂದ ವಹಿವಾಟು ತಡೆಯಬಹುದು. ಜನರು 1930 ಸೈಬರ್ ಪೋರ್ಟಲ್ ಡಯಲ್ ಮಾಡಿ ದೂರು ಸಲ್ಲಿಸಬೇಕು ಎಂದು ಪೊಲೀಸರು ಹೇಳಿದ್ದಾರೆ.

ರಾಜ್ಯ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ