AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮದ್ವೆಯಾದ ಜೋಡಿಗೆ ಹೆತ್ತವರೇ ವಿಲನ್, ಯುವಕ ಬಡವನಾಗಿದ್ದೇ ತಪ್ಪಾ!

ಬೆಳಗಾವಿ: ಅವರಿಬ್ಬರೂ ಲವ್ ಬರ್ಡ್ಸ್. ನೆಮ್ಮದಿಯಿಂದ ಜೀವನ ನಡೆಸುವ ಕನಸು ಕಂಡಿದ್ದ ಅವರ ಬಾಳಿಗೆ ಒಂದಿಡೀ ಕುಟುಂಬ ವಿಲನ್ ಆಗಿದೆ. ತಮ್ಮ ಮಗಳ ಕೈಹಿಡಿದವನು ಬಡವ ಅನ್ನೋ ಒಂದೇ ಕಾರಣಕ್ಕೆ ಅಳಿಯನನ್ನೇ ಟಾರ್ಗೆಟ್ ಮಾಡಿದೆ. ಇನ್ನು ಹುಡುಗಿ ಮನೆಯವರಿಗೆ ಹೆದರಿರುವ ನವಜೋಡಿ ರಕ್ಷಣೆ ಕೊಡುವಂತೆ ಖಾಕಿ ಮೊರೆ ಹೋಗಿದೆ. ಯುವಕ ಬಡವನೆಂಬ ಕಾರಣಕ್ಕೆ ನವಜೋಡಿ ಟಾರ್ಗೆಟ್? ಅಂದಹಾಗೆ ಇದು ಫಿಲ್ಮ್ ಸ್ಟೋರಿಯಲ್ಲ. ಬೆಳಗಾವಿ ತಾಲೂಕು ಗೋಜಗಾ ಗ್ರಾಮದ ಯುವತಿಯನ್ನ ಹೊನಗಾ ಗ್ರಾಮದ ಅಕ್ಷಯ್ ಪ್ರೀತಿಸುತ್ತಿದ್ದ. ಇಬ್ಬರದ್ದೂ ಒಂದೇ […]

ಮದ್ವೆಯಾದ ಜೋಡಿಗೆ ಹೆತ್ತವರೇ ವಿಲನ್, ಯುವಕ ಬಡವನಾಗಿದ್ದೇ ತಪ್ಪಾ!
ಸಾಧು ಶ್ರೀನಾಥ್​
|

Updated on:Jan 26, 2020 | 11:33 AM

Share

ಬೆಳಗಾವಿ: ಅವರಿಬ್ಬರೂ ಲವ್ ಬರ್ಡ್ಸ್. ನೆಮ್ಮದಿಯಿಂದ ಜೀವನ ನಡೆಸುವ ಕನಸು ಕಂಡಿದ್ದ ಅವರ ಬಾಳಿಗೆ ಒಂದಿಡೀ ಕುಟುಂಬ ವಿಲನ್ ಆಗಿದೆ. ತಮ್ಮ ಮಗಳ ಕೈಹಿಡಿದವನು ಬಡವ ಅನ್ನೋ ಒಂದೇ ಕಾರಣಕ್ಕೆ ಅಳಿಯನನ್ನೇ ಟಾರ್ಗೆಟ್ ಮಾಡಿದೆ. ಇನ್ನು ಹುಡುಗಿ ಮನೆಯವರಿಗೆ ಹೆದರಿರುವ ನವಜೋಡಿ ರಕ್ಷಣೆ ಕೊಡುವಂತೆ ಖಾಕಿ ಮೊರೆ ಹೋಗಿದೆ.

ಯುವಕ ಬಡವನೆಂಬ ಕಾರಣಕ್ಕೆ ನವಜೋಡಿ ಟಾರ್ಗೆಟ್? ಅಂದಹಾಗೆ ಇದು ಫಿಲ್ಮ್ ಸ್ಟೋರಿಯಲ್ಲ. ಬೆಳಗಾವಿ ತಾಲೂಕು ಗೋಜಗಾ ಗ್ರಾಮದ ಯುವತಿಯನ್ನ ಹೊನಗಾ ಗ್ರಾಮದ ಅಕ್ಷಯ್ ಪ್ರೀತಿಸುತ್ತಿದ್ದ. ಇಬ್ಬರದ್ದೂ ಒಂದೇ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ ಇವರಿಬ್ಬರೂ ಪ್ರೀತಿಯ ಬಲೆಯಲ್ಲಿ ಬಿದ್ದು, 2 ವರ್ಷಗಳೇ ಕಳೆದಿವೆ. ಆದರೆ ವಿಚಾರ ಗೊತ್ತಾದ ನಂತರ ಯುವತಿ ಮನೆಯವರು ಕೋಪದಿಂದ, ಇಬ್ಬರನ್ನೂ ಬೇರೆ ಮಾಡಲು ಯತ್ನಿಸಿದ್ದಾರೆ. ಆದ್ರೆ ಅದು ಸಾಧ್ಯವಾಗದೇ ಇದ್ದಾಗ ಯುವಕ, ಯುವತಿ ಮನೆಯವ್ರನ್ನ ಬಿಟ್ಟು ಹೋಗಿ ಮಹಾರಾಷ್ಟ್ರದಲ್ಲಿ ಮದುವೆಯಾಗಿ ಬಂದಿದೆ. ಹೀಗೆ ತವರಿಗೆ ಮರಳಿದ ನಂತರ ನವಜೋಡಿಗೆ ಬೆದರಿಕೆ ಹಾಕಲಾಗುತ್ತಿದೆಯಂತೆ. ಹಾಗೇ ನಮ್ಮ ಮಗಳನ್ನ ಅಪಹರಣ ಮಾಡಿದ್ದಾರೆ ಅಂತಾ ಕಂಪ್ಲೆಂಟ್ ಬೇರೆ ಕೊಟ್ಟಿದ್ದಾರೆ.

ಅಪ್ಪ-ಅಮ್ಮನನ್ನು ಬಿಡಿಸಿಕೊಳ್ಳಲು ಅಕ್ಷಯ್ ಪರದಾಟ: ಇನ್ನು ಈ ಜೋಡಿ ಇಷ್ಟಪಟ್ಟು ಮದುವೆಯಾಗಿದ್ದರೂ ಭಾರಿ ಒತ್ತಡ ಹಾಕಲಾಗುತ್ತಿದೆ. ಯವತಿ ಮನೆಯವರು ತಮ್ಮ ಹಣಬಲ ಹಾಗೂ ತೋಳ್ಬಲದಿಂದ ಯುವಕನಿಗೆ ಒತ್ತಡ ಹಾಕುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಅಲ್ಲದೆ ತಮ್ಮ ಮಗಳನ್ನ ಕಿಡ್ನಾಪ್ ಮಾಡಿದ್ದಾರೆ ಅಂತಾ ಕಾಕತಿ ಪೊಲೀಸ್ ಠಾಣೆಯಲ್ಲಿ ಕಿಡ್ನಾಪ್ ಕೇಸ್ ದಾಖಲಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಯುವಕ ಅಕ್ಷಯ್ ಅವರ ಅಪ್ಪ-ಅಮ್ಮನನ್ನ ಬಂಧಿಸಲಾಗಿದೆಯಂತೆ. ಆದರೆ ಅವರನ್ನ ಬಿಡಿಸಿಕೊಂಡು ಬರಲು ಅಕ್ಷಯ್​ಗೆ ಸಾಧ್ಯವಾಗುತ್ತಿಲ್ಲ. ಠಾಣೆಗೆ ಹೋದರೆ ಯುವತಿ ಕುಟುಂಬ ದಾಳಿ ಮಾಡುತ್ತೆಂಬ ಭಯವೂ ಕಾಡುತ್ತಿದೆ. ಹೀಗಾಗಿ, ರಕ್ಷಣೆ ಕೊಡಿ ಅಂತಾ ನವದಂಪತಿ ಬೆಳಗಾವಿ ನಗರ ಪೊಲೀಸ್ ಆಯುಕ್ತರ ಮೊರೆ ಹೋಗಿದ್ದಾರೆ.

ಒಟ್ನಲ್ಲಿ ಹಣಬಲ ಇರುವವರನ್ನ ಎದುರಿಸಲು ಆಗದೆ ನವದಂಪತಿ ಬೆಚ್ಚಿಬಿದ್ದಿದ್ದಾರೆ. ತಮ್ಮ ಮಗಳನ್ನ ಮದುವೆ ಆದ ಅನ್ನೋ ಕಾರಣಕ್ಕೆ ಬಡ ಯುವಕನನ್ನ ಟಾರ್ಗೆಟ್ ಮಾಡಲಾಗಿದೆ. ’

Published On - 11:31 am, Sun, 26 January 20