‘ಕೇಸರಿ’ ಕೋಟೆಯಲ್ಲಿ ಇಂದು ರಾಹುಲ್ ಗಾಂಧಿ​ ಯುವ ಮಂತ್ರ..ಯುವಕರಿಗೆ ಒಂದು ಗ್ಯಾರಂಟಿ ಘೋಷಣೆ ಸಾಧ್ಯತೆ

|

Updated on: Mar 20, 2023 | 7:57 AM

ಭಾರತ್​​​​ ಜೋಡೋ ಬಳಿ ರಾಹುಲ್​ ಗಾಂಧಿ ಕರುನಾಡಿಗೆ ಇಂದು(ಮಾರ್ಚ್​ 20) ಭೇಟಿ ನೀಡುತ್ತಿದ್ದಾರೆ . ಕೇಸರಿ ಕೋಟೆಯಲ್ಲಿ ನಿಂತು ಚುನಾವಣಾ ರಣರಂಗದಲ್ಲಿ ಪಾಂಚಜನ್ಯ ಮೊಳಗಿಸಲು ಸಜ್ಜಾಗಿದ್ದಾರೆ. ರಾಹುಲ್​​​ ಗಾಂಧಿ ಇಂದಿನ ಕಾರ್ಯಕ್ರಮದ ಹೈಲೈಟ್ಸ್​​​​​​​​​​​​​​​​​​​​ ಕುರಿತ ಕಂಪ್ಲೇಟ್​​​​ ಸ್ಟೋರಿ ಇಲ್ಲಿದೆ,

‘ಕೇಸರಿ’ ಕೋಟೆಯಲ್ಲಿ ಇಂದು ರಾಹುಲ್ ಗಾಂಧಿ​ ಯುವ ಮಂತ್ರ..ಯುವಕರಿಗೆ ಒಂದು ಗ್ಯಾರಂಟಿ ಘೋಷಣೆ ಸಾಧ್ಯತೆ
ರಾಹುಲ್ ಗಾಂಧಿ
Follow us on

ಬೆಳಗಾವಿ: ಭಾರತ್ ಜೋಡೊ ಯಾತ್ರೆ(bharat jodo yatra) ಬಳಿಕ ರಾಹುಲ್ ಗಾಂಧಿ (Rahul Gandhi) ಮತ್ತೆ ಅಖಾಡಕ್ಕಿಳಿಯುತ್ತಿದ್ದಾರೆ. ಅದರಲ್ಲೂ ಕುಂದಾನಗರಿ ಬೆಳಗಾವಿಯಿಂದಲೇ (Belagavi) ಇಂದು(ಮಾರ್ಚ್ 20)  ಚುನಾವಣಾ ರಣಕಹಳೆ ಮೊಳಗಿಸಲಿದ್ದಾರೆ. ಪ್ರಧಾನಿ ಮೋದಿ ಭೇಟಿ ಬೆನ್ನಲ್ಲೇ ಬಿಜೆಪಿ ಲೆಕ್ಕಾಚಾರ ಉಲ್ಟಾ ಮಾಡಲು ಮುಂದಾಗಿರುವ ಕಾಂಗ್ರೆಸ್ ಮೆಗಾ ಪ್ಲ್ಯಾನ್​​ ಮಾಡಿದೆ. ಉತ್ತರ ಕರ್ನಾಟಕದ ಜಿಲ್ಲೆಗಳ ಮೇಲೆ ಕಣ್ಣಿಟ್ಟಿರುವ ಕಾಂಗ್ರೆಸ್, ಯುವಕರನ್ನೇ ಟಾರ್ಗೆಟ್ ಮಾಡುವ ಮೂಲಕ ಯುವ ಸಮುದಾಯದ ಮತ ಬುಟ್ಟಿಗೆ ಕೈ ಹಾಕಿದೆ. ಅದ್ರಲ್ಲೂ ಬೆಳಗಾವಿಯಿಂದಲೇ ಕಾಂಗ್ರೆಸ್ ಚುನಾವಣಾ ಅಖಾಡಕ್ಕಿಳಿದಿರುವುದು ವಿಶೇಷವಾಗಿದೆ. ಹೌದು.. ಬೆಳಗಾವಿ ಜಿಲ್ಲೆ 18ವಿಧಾನಸಭಾ ಕ್ಷೇತ್ರಗಳ ಪೈಕಿ 13ರಲ್ಲಿ ಬಿಜೆಪಿ ಪ್ರಾಬಲ್ಯ ಸಾಧಿಸಿದೆ. ಈ ಬಾರಿ ಲೆಕ್ಕಾಚಾರ ಬುಡಮೇಲು ಮಾಡಲು ರಾಹುಲ್ ಬೆಳಗಾವಿಗೆ ಎಂಟ್ರಿಕೊಡ್ತಿದ್ದಾರೆ. ಬೆಳಗಾವಿ ಜೊತೆ ಧಾರವಾಡ, ಗದಗ, ಬಾಗಲಕೋಟೆ, ವಿಜಯಪುರ, ಹಾವೇರಿ ಜಿಲ್ಲೆಗಳಲ್ಲಿ ಕಾಂಗ್ರೆಸ್ ಚುನಾವಣಾ ರಣಕಹಳೆ ಮೊಳಗಿಸಲಿದೆ. ಬೆಳಗಾವಿ, ಸೇರಿದಂತೆ ಸುತ್ತಮುತ್ತಲಿನ ಜಿಲ್ಲೆಗಳ ಮೇಲೆ ಕಣ್ಣಿಟ್ಟಿದೆ. ಬೆಳಗಾವಿ ನಗರದ ಸಿಪಿಎಡ್ ಮೈದಾನದಲ್ಲಿ ಯುವ ಕ್ರಾಂತಿ ಸಮಾವೇಶ ನಡೆಸುತ್ತಿದ್ದು, ಯುವಕರನ್ನೇ ಟಾರ್ಗೆಟ್ ಮಾಡಿಕೊಂಡು ಮತಬೇಟೆಗೆ ಮುಂದಾಗಿದ್ದಾರೆ. ಪ್ರಜಾಧ್ವನಿ ಯಾತ್ರೆಯನ್ನೂ ಬೆಳಗಾವಿಯಿಂದ್ಲೇ ಆರಂಭ ಮಾಡಿದ್ದ ಕಾಂಗ್ರೆಸ್, ಇದೀಗ ರಾಹುಲ್ ಕಾರ್ಯಕ್ರಮವನ್ನೂ ಕುಂದಾನಗರಿಯಿಂದಲೇ ಮಾಡುವುದರ ಮೂಲಕ ಉತ್ತರ ಕರ್ನಾಟಕದಲ್ಲಿ ಹೆಚ್ಚು ಸ್ಥಾನ ಗೆಲ್ಲುವ ತಂತ್ರ ಹೆಣೆದಿದೆ.

ಇದನ್ನೂ ಓದಿ: Narendra Modi: ಮಾ. 25ರಂದು ರಾಜ್ಯಕ್ಕೆ ಮತ್ತೊಮ್ಮೆ ಮೋದಿ: ಇಲ್ಲಿದೆ ಪ್ರಧಾನಿ ಪ್ರವಾಸದ ಸಂಪೂರ್ಣ ವೇಳಾಪಟ್ಟಿ

ಇಂದು(ಮಾರ್ಚ್ 20) 12ಗಂಟೆಗೆ ವಿಶೇಷ ವಿಮಾನದಲ್ಲಿ ದೆಹಲಿಯಿಂದ ಬೆಳಗಾವಿಗೆ ಆಗಮಿಸಲಿರುವ ರಾಹುಲ್ ಗಾಂಧಿಯನ್ನ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಅದ್ಧೂರಿಯಾಗಿ ಸ್ವಾಗತಿಸಲು ಸಿದ್ಧತೆ ನಡೆದಿದೆ. ಇದಾದ ಬಳಿಕ ರಸ್ತೆ ಮಾರ್ಗವಾಗಿ ವಿಮಾನ ನಿಲ್ದಾಣದಿಂದ ಸಿಪಿಎಡ್ ಮೈದಾನಕ್ಕೆ ಆಗಮಿಸಲಿರುವ ರಾಹುಲ್, ಯುವ ಕ್ರಾಂತಿ ಸಮಾವೇಶದಲ್ಲಿ ಭಾಗಿಯಾಗಲಿದ್ದಾರೆ. ಯುವಕರನ್ನೇ ಟಾರ್ಗೆಟ್ ಮಾಡಿಕೊಂಡು ಕಾಂಗ್ರೆಸ್ ಮಾಡುತ್ತಿರುವ ಈ ಕಾರ್ಯಕ್ರಮದಲ್ಲಿ ಯುವಕರಿಗೆ ಉದ್ಯೋಗ ನೀಡುವ ಕುರಿತು ಹಾಗೂ ಯುವಕರ ಪರವಾಗಿ ಕಾಂಗ್ರೆಸ್ ಇದೆ ಎನ್ನುವುದನ್ನು ಸಾರುವ ನಿಟ್ಟಿನಲ್ಲಿ ರಾಹುಲ್ ಭಾಷಣ ಮಾಡಲಿದ್ದಾರೆ. ಈಗಾಗಲೇ ಮಹಿಳೆಯರಿಗೆ ಎರಡು ಸಾವಿರ ರೂ, ಉಚಿತ ಅಕ್ಕಿ ಮತ್ತು ವಿದ್ಯುತ್ ಗ್ಯಾರಂಟಿ ನೀಡಿರುವ ಕಾಂಗ್ರೆಸ್, ಇಂದು ರಾಹುಲ್ ಗಾಂಧಿ ಮೂಲಕ ಯುವಕರಿಗೆ ಒಂದು ಗ್ಯಾರಂಟಿಯನ್ನ ಘೋಷಣೆ ಮಾಡಿಸುವ ಸಾಧ್ಯತೆ ಇದೆ . ಇನ್ನೂ ರಾಹುಲ್​​ ಸ್ವಾಗತಕ್ಕೆ ಕುಂದಾನಗರದ ಪ್ರಮುಖ ರಸ್ತೆಗಳಲ್ಲಿ ಬ್ಯಾನರ್​​ಗಳು ರಾರಾಜಿಸುತ್ತಿದ್ದು, ವೇದಿಕೆ ಮುಂಭಾಗದಲ್ಲಿ ಬೃಹತ್ ಕಟೌಟ್​​​ಗಳನ್ನ ಕಟ್ಟಲಾಗಿದೆ. ಇಂದು ಸುಮಾರು 3ಗಂಟೆಗಳ ಕಾಲ ರಾಹುಲ್ ಗಾಂಧಿ ಬೆಳಗಾವಿಯಲ್ಲಿದ್ದು, ಸಮಾವೇಶ ಬಳಿಕ ವಿಶೇಷ ವಿಮಾನದಲ್ಲಿ ಕೇರಳಕ್ಕೆ ಪ್ರಯಾಣ ಬೆಳೆಸಲಿದ್ದಾರೆ.

ಉತ್ತರ ಕರ್ನಾಟಕದಲ್ಲಿ ಅತೀ ಹೆಚ್ಚು ಸ್ಥಾನ ಗೆದ್ದರೆ ಸುಲಭವಾಗಿ ಸರ್ಕಾರ ಮಾಡಬಹುದು ಅಂದುಕೊಂಡಿರುವ ಕಾಂಗ್ರೆಸ್ ಮತ್ತು ಬಿಜೆಪಿ ಈಗಾಗಲೇ ತಂತ್ರ ರಣತಂತ್ರ ಹೆಣೆಯುತ್ತಿವೆ. ಒಂದು ತಿಂಗಳ ಮುಚ್ಚೆಯೇ ಚುನಾವಣಾ ರಣಕಹಳೆ ಮೊಳಗಿಸಿರುವ ಬಿಜೆಪಿ, ಹುಬ್ಬಳ್ಳಿ, ಧಾರವಾಡ, ಬೆಳಗಾವಿಯಲ್ಲಿ 3ಸಾರಿ ಮೋದಿಯಿಂದ ಭರ್ಜರಿ ರೋಡ್ ಶೋ ಮಾಡ್ಸಿ ರಣಕಹಳೆ ಮೊಳಗಿಸಿದ್ದಾರೆ. ಅಲ್ಲದೇ, ಚುನಾವಣಾ ಚಾಣಕ್ಯ ಅಮಿತ್, ರಾಜನಾಥ್ ಸಿಂಗ್, ಸ್ಕೃತಿ ಇರಾನಿ ಕೂಡ ಮತ ಶಿಕಾರಿ ನಡೆಸಿದ್ದಾರೆ. ಇದ್ರಿಂದ ಎಚ್ಚೆತ್ತಿರುವ ಕಾಂಗ್ರೆಸ್ ನಾಯಕರು ತಮ್ಮ ರಾಷ್ಟ್ರೀಯ ನಾಯಕ ರಾಹುಲ್ ಗಾಂಧಿಯನ್ನ ರಾಜ್ಯಕ್ಕೆ ಕರೆತಂದು ಭರ್ಜರಿ ಪ್ರಚಾರದ ಮೂಲಕ ಕೇಸರಿ ಪಡೆಗೆ ಕೌಂಟರ್ ಕೊಡಲು ಮುಂದಾಗಿದ್ದಾರೆ.

ಒಟ್ಟಾರೆ ಉತ್ತರ ಕರ್ನಾಟಕದಲ್ಲಿ ಕಾಂಗ್ರೆಸ್​​​ಗೆ ಶಕ್ತಿ ತುಂಬಿ ಹೆಚ್ಚು ಸ್ಥಾನ ಗೆಲ್ಲಬೇಕು, ಬಿಜೆಪಿಗೆ ಠಕ್ಕರ್ ಕೊಡುವ ನಿಟ್ಟಿನಲ್ಲಿ ಇಂದು ರಾಹುಲ್ ಗಾಂಧಿ ಬೆಳಗಾವಿಗೆ ಆಗಮಿಸುತ್ತಿದ್ದು, ಇದು ಎಷ್ಟರ ಮಟ್ಟಿಗೆ ವರ್ಕೌಟ್ ಆಗುತ್ತೆ ಎನ್ನುವುದನ್ನು ಕಾದುನೋಡಬೇಕಿದೆ.

ಇನ್ನಷ್ಟು ಚುನಾವಣೆ ಹಾಗೂ ರಾಜಕೀಯ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

Published On - 7:56 am, Mon, 20 March 23