AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶೋಭಕ್ಕ, ಅಶ್ವತ್ಥ್, ಸಿ.ಟಿ.ರವಿ ಹೊಸ ಇತಿಹಾಸ ಸೃಷ್ಟಿ ಮಾಡಿ ಒಕ್ಕಲಿಗ ಸಮುದಾಯಕ್ಕೆ ಅಪಮಾನ: ಡಿಕೆ ಶಿವಕುಮಾರ್ ಕಿಡಿ

ಬೆಳಗಾವಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಬಿಜೆಪಿ ವಿರುದ್ಧ ಡಿಕೆ ಶಿವಕುಮಾರ್ ವಾಗ್ದಾಳಿ ನಡೆಸಿದ್ದಾರೆ. ಶೋಭಕ್ಕ, ಅಶ್ವತ್ಥ್, ಸಿ.ಟಿ.ರವಿ ಹೊಸ ಇತಿಹಾಸ ಸೃಷ್ಟಿ ಮಾಡ್ತಿದ್ದಾರೆ ಎಂದಿದ್ದಾರೆ.

ಶೋಭಕ್ಕ, ಅಶ್ವತ್ಥ್, ಸಿ.ಟಿ.ರವಿ ಹೊಸ ಇತಿಹಾಸ ಸೃಷ್ಟಿ ಮಾಡಿ ಒಕ್ಕಲಿಗ ಸಮುದಾಯಕ್ಕೆ ಅಪಮಾನ: ಡಿಕೆ ಶಿವಕುಮಾರ್ ಕಿಡಿ
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್Image Credit source: hindustantimes.com
ಆಯೇಷಾ ಬಾನು
|

Updated on:Mar 20, 2023 | 12:03 PM

Share

ಬೆಳಗಾವಿ: ಜಿಲ್ಲೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸುದ್ದಿಗೋಷ್ಠಿ ನಡೆಸಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಸಿಎಂ ಬೊಮ್ಮಾಯಿ ನಮ್ಮ ಗ್ಯಾರಂಟಿ ಬಗ್ಗೆ ಟೀಕೆ ಮಾಡುತ್ತಿದ್ದಾರೆ. ನಮ್ಮ ಗ್ಯಾರಂಟಿ ಬಗ್ಗೆ ಸಿಎಂ ಬೊಮ್ಮಾಯಿ ಟೀಕೆ ಮಾಡಲಿ ಪರವಾಗಿಲ್ಲ. ಬಿಜೆಪಿಯವರು ನಮ್ಮನ್ನು ಫಾಲೋ ಮಾಡುತ್ತಿದ್ದಾರೆ. ನಾವು ಮಹಿಳೆಯರಿಗೆ ಹೊಸ ಯೋಜನೆ ಘೋಷಣೆ ಮಾಡಿದ್ದೆವು. ನಮ್ಮನ್ನು ನೋಡಿ ಅವರು ಮಹಿಳೆಯರಿಗೆ ಯೋಜನೆ ಘೋಷಿಸಿದ್ರು ಎಂದಿದ್ದಾರೆ.

ಯಾರೋ ಒಬ್ಬರು ಪುಸ್ತಕ ಬರೆದ್ರೆ ಅದು ಇತಿಹಾಸ ಆಗಲು ಸಾಧ್ಯವಿಲ್ಲ

ಇನ್ನು ಸುದ್ದಿಗೋಷ್ಠಿಯಲ್ಲಿ ಉರಿಗೌಡ ಹಾಗೂ ದೊಡ್ಡ ನಂಜೇಗೌಡ ಬಗ್ಗೆ ಆಗುತ್ತಿರುವ ಚರ್ಚೆ ವಿಚಾರಕ್ಕೆ ಸಂಬಂಧಿಸಿ ಡಿಕೆ ಶಿವಕುಮಾರ್ ಮಾತನಾಡಿದ್ದಾರೆ. ಟಿಪ್ಪು ಚರಿತ್ರೆ ತಿರುಚಲು ಹೊರಟಿದ್ದಾರೆ. ಎರಡು ಶತಮಾನದ ಬಳಿಕ ಚಿತ್ರ ಮಾಡಲು ಮುಂದಾಗಿದ್ದಾರೆ. ಶೋಭಕ್ಕ, ಅಶ್ವತ್ಥ್, ಸಿ.ಟಿ.ರವಿ ಹೊಸ ಇತಿಹಾಸ ಸೃಷ್ಟಿ ಮಾಡ್ತಿದ್ದಾರೆ. ಹೊಸದಾಗಿ 50 ಗ್ರಂಥಗಳಿವೆ. ಹೊಸದಾಗಿ ಉರಿಗೌಡ ನಂಜೇಗೌಡ ಸೃಷ್ಟಿಸಿ, ಜಾತಿ ಬಣ್ಣ ಕಟ್ಟುತ್ತಿದ್ದಾರೆ. ಇತಿಹಾಸ ಬದಲಾವಣೆ ಮಾಡಿ ಧಕ್ಕೆ ತರಲು ಹೊರಟಿರುವುದು ಸರಿಯಲ್ಲ ನಾನು ಇದನ್ನ ಖಂಡಿಸುತ್ತೇನೆ. ನಿರ್ಮಲಾನಂದ ಶ್ರೀಗಳು ಹೋರಾಟದ ಮುಂದಾಳತ್ವ ವಹಿಸಬೇಕು. ಸಭೆ ಕರೆಯಬೇಕು ಎಂದು ನಾನು ಒತ್ತಾಯ ಮಾಡುತ್ತೇನೆ. ಎಲ್ಲಾ ಧರ್ಮದ ಶ್ರೀಗಳು ಇದರ ಮುಂದಾಳತ್ವ ವಹಿಸಬೇಕು. ಸಮಾಜದಲ್ಲಿ ವಿಷ ಬೀಜ ಬಿತ್ತುವ ಕೆಲಸಕ್ಕೆ ಬಿಡಬಾರದು.

ಇದನ್ನೂ ಓದಿ: Urigowda Nanjegowda Movie: ಮುನಿರತ್ನ ಯೂಟರ್ನ್, ಉರಿಗೌಡ ನಂಜೇಗೌಡ ಸಿನಿಮಾಕ್ಕೆ ಬ್ರೇಕ್​ ಹಾಕಿದ ನಿರ್ಮಲಾನಂದನಾಥ ಸ್ವಾಮೀಜಿ

ಬಿಜೆಪಿಯ ವಾಟ್ಸ್ ಆಪ್ ಯುನಿವರ್ಸಿಟಿ ಮೂಲಕ ಹೊಸ ಇತಿಹಾಸ ಬರೆಯುವುದನ್ನ ಖಂಡಿಸಬೇಕು. ಬಿಜೆಪಿಯ ಕೋಮು ಸೌಹಾರ್ದತೆಗೆ ಧಕ್ಕೆ ತರುವ ಕೆಲಸಕ್ಕೆ ಕಡಿವಾಣ ಹಾಕಬೇಕು. ಈ ನಿಟ್ಟಿನಲ್ಲಿ ನಿರ್ಮಲಾನಂದ ಶ್ರೀ ಸಭೆಯನ್ನು ಕರೆಯಬೇಕು. ಕರೆದು ಸಂಧಾನದ ಮಾತುಕತೆ ಮಾಡಬಾರದು ಎಂದು ನಮ್ಮ ಒತ್ತಾಯ. ಹೋರಾಟ ಮಾಡಬೇಕು, ಸಿಡಿದೇಳಬೇಕು ಎಂದು ಡಿಕೆ ಶಿವಕುಮಾರ್ ಮನವಿ ಮಾಡಿದರು. ಮಂಡ್ಯದಲ್ಲಿ ಯಾರೊಬ್ಬರು ಪುಸ್ತಕ ಬರೆದ್ರೆ ಅದು ಇತಿಹಾಸ ಆಗಲು ಸಾಧ್ಯವಿಲ್ಲ. 200 ವರ್ಷಗಳ ಹಿಂದೆ ನಡೆದ ಘಟನೆಗಳಿವು. ಉರಿಗೌಡ, ನಂಜೇಗೌಡ ಸೃಷ್ಟಿಯಿಂದ ಒಕ್ಕಲಿಗ ಸಮುದಾಯಕ್ಕೆ ಅಪಮಾನ ಆಗಿದೆ. ಸಮಾಜದಲ್ಲಿ ಶಾಂತಿ ಕದಡುವ ಕೆಲಸ ಮಾಡ್ತಿರುವವರ ಮೇಲೆ ಕೇಸ್ ಹಾಕಬೇಕು ಎಂದರು.

ಇನ್ನು ಮತ್ತೊಂದೆಡೆ ಊರಿಗೌಡ, ನಂಜೇಗೌಡ ಸಿನಿಮಾ ಮಾಡುವ ನಿರ್ಧಾರದಿಂದ ಹಿಂದೆ ಸರಿದ ವಿಚಾರಕ್ಕೆ ಸಂಬಂಧಿಸಿ ಸಂಸದ ಡಿಕೆ‌ ಸುರೇಶ್ ಪ್ರತಿಕ್ರಿಯೆ ನೀಡಿದ್ದಾರೆ.  ವ್ಯಾಪಾರಸ್ಥರು, ಯಾರನ್ನು ಬೇಕಾದರೂ ಇಟ್ಟುಕೊಂಡು ವ್ಯಾಪಾರ ಮಾಡ್ತಾರೆ. ಅಂತವರನ್ನು ಶ್ರೀಗಳು ಯಾಕೆ ಕರೆಸಿದ್ರು ಅಂತ ಗೊತ್ತಿಲ್ಲ. ಹಣ ಮಾಡೋದೆ ಅವರ ಗುರಿ. ಒಕ್ಕಲಿಗರನ್ನು ಮುಂದಿಟ್ಟುಕೊಂಡು ವ್ಯಾಪಾರ ಮಾಡಲು ಮುಂದಾಗಿದ್ದರು‌. ಅಶ್ವಥ್ ನಾರಾಯಣ್ ಅವರು ಅಸ್ವಸ್ಥರಾದಾಗ ಉರಿಗೌಡ, ನಂಜೇಗೌಡ ಭೇಟಿ ಮಾಡಿದ್ರು ಅನಿಸುತ್ತೆ. ಬೇಸಾಯ, ಒಕ್ಕಲುತನ ಮಾಡಿ ಬದುಕು ಜನಾಂಗ ಒಕ್ಕಲಿಗರು. ಯಾರೋ ಹೇಳಿದ್ರು ಅಂತ ಕೈಬಿಟ್ಟಿದ್ದೇನೆ ಎನ್ನುವುದು ಗಿಮಿಕ್. ಅವರು ಗಿಮಿಕ್ ಮಾಡಿಕೊಂಡೆ ರಾಜಕಾರಣಕ್ಕೆ ಬಂದಿದದ್ದು ಎಂದು ಸಚಿವ ಮುನಿರತ್ನ ಹಾಗೂ ಅಶ್ವಥನಾರಾಯಣ್ ವಿರುದ್ಧ ಡಿಕೆ ಸುರೇಶ್ ವಾಗ್ದಾಳಿ ನಡೆಸಿದರು.

ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್  ಮಾಡಿ

Published On - 12:03 pm, Mon, 20 March 23