ಶಾಸಕರಾಗಿ ಸೊಕ್ಕಿನಿಂದ ಇದ್ರೆ ಕ್ಷೇತ್ರದ ಜನ ತೀರ್ಮಾನ ಮಾಡುತ್ತಾರೆ: ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ರಮೇಶ್ ಜಾರಕಿಹೊಳಿ ವಾಗ್ದಾಳಿ

|

Updated on: Mar 06, 2023 | 9:01 AM

ಶಿವಾಜಿ ಪ್ರತಿಮೆ ಮತ್ತೊಮ್ಮೆ ಲೋಕಾರ್ಪಣೆ ಮಾಡುವ ವಿಚಾರಕ್ಕೆ ಸಂಬಂಧಿಸಿ ರಮೇಶ್ ಜಾರಕಿಹೊಳಿ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಶಾಸಕರಾಗಿ ಸೊಕ್ಕಿನಿಂದ ಇದ್ರೆ ಕ್ಷೇತ್ರದ ಜನ ತೀರ್ಮಾನ ಮಾಡುತ್ತಾರೆ: ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ರಮೇಶ್ ಜಾರಕಿಹೊಳಿ ವಾಗ್ದಾಳಿ
Follow us on

ಬೆಳಗಾವಿ: ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ರಾಜಹಂಸಗಡ ಕೋಟೆ ಕದನ ಮುಂದುವರೆದಿದೆ. ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್(Lakshmi Hebbalkar) ವಿರುದ್ಧ ರಮೇಶ್ ಜಾರಕಿಹೊಳಿ(Ramesh Jarkiholi) ತೀವ್ರ ವಾಗ್ದಾಳಿ ನಡೆಸಿದ್ದಾರೆ. ಸಿಎಂ ಹಸ್ತದಿಂದ ಉದ್ಘಾಟನೆ ಮಾಡಿದ ಶಿವಾಜಿ ಪ್ರತಿಮೆ ಮತ್ತೊಮ್ಮೆ ಲೋಕಾರ್ಪಣೆ ಮಾಡುವ ವಿಚಾರಕ್ಕೆ ಸಂಬಂಧಿಸಿ ರಮೇಶ್ ಜಾರಕಿಹೊಳಿ ಅಸಮಾಧಾನ ಹೊರ ಹಾಕಿದ್ದಾರೆ.

ಒಬ್ಬ ಶಾಸಕರಾಗಿ ಜವಾಬ್ದಾರಿ ಬೇಕು. ಶಾಸಕರಾಗಿ ಸೊಕ್ಕು ಮಾಡಿದ್ರೆ ಜನ ತೀರ್ಮಾನ ಮಾಡುತ್ತಾರೆ. ಅದು ಕಾಂಗ್ರೆಸ್ ಸಮಾವೇಶವಾ ಅಥವಾ ಸರ್ಕಾರಿ ಸಮಾವೇಶವಾ ನೀವು ವಿಚಾರ ಮಾಡಬೇಕು. ಮಾರ್ಚ್​ 2ರಂದು ನಾನು ಶಿವಾಜಿ ಪ್ರತಿಮೆ ಅನಾವರಣ ಮಾಡಿಸಿದ್ದಲ್ಲ. ಮುಖ್ಯಮಂತ್ರಿಗಳೇ ಮಾ.2ರಂದು ತಯಾರಿ ಮಾಡಲು DCಗೆ ಹೇಳಿದ್ರು. ಮಾ.7ರಂದು ನಿಗದಿ ಮಾಡಿದ್ದರೆ ನಾನು ಕಾರ್ಯಕ್ರಮ ಮಾಡುತ್ತಿದ್ದೆ. ತಪ್ಪು ಮಾಹಿತಿ ನೀಡಿ ಸಿಎಂ ಕರೆದುಕೊಂಡು ಬಂದಿದ್ದರು ಅಂತಾರೆ. ಇವರು ಎಂತಹ ಮೂರ್ಖರು ಇರಬಹುದು. ಒಬ್ಬ ರಾಜ್ಯದ ಸಿಎಂಗೆ ಇಂಟಲಿಜೆನ್ಸ್ ಮೂಲಕ ಮಾಹಿತಿ ಬರುತ್ತದೆ. ರಾಜ್ಯದ ಸಿಎಂಗೆ ತಪ್ಪು ಗ್ರಹಿಕೆ ಇದೆ ಅಂದ್ರೆ ಎಂತಹ ಮೂರ್ಖರಿದ್ದಾರೆ ಎಂದು ರಮೇಶ್ ಜಾರಕಿಹೊಳಿ ವಾಗ್ದಾಳಿ ನಡೆಸಿದ್ದಾರೆ. ಇನ್ನು ಇದೇ ವೇಳೆ ಅಪೂರ್ಣ ಶಿವಾಜಿ ಮೂರ್ತಿ ಲೋಕಾರ್ಪಣೆ ಮಾಡಿ ಅಪಮಾನ ಆರೋಪ ವಿಚಾರಕ್ಕೆ ಸಂಬಂಧಿಸಿ ಅದನ್ನ ಜನ ಉತ್ತರಿಸಬೇಕು, ಅವರು ಹೇಳಿದ್ರೆ ಆಗಲ್ಲ. ಅದನ್ನು ಮುಂದಿನ ದಿನಗಳಲ್ಲಿ ಗೊತ್ತಾಗುತ್ತೆ ಎಂದರು.

ಇದನ್ನೂ ಓದಿ: ಬೆಳಗಾವಿ ರಾಜಕೀಯದಲ್ಲಿ ಶಿವಾಜಿ ಮೂರ್ತಿ ಸಂಘರ್ಷ, ರಮೇಶ್ ಜಾರಕಿಹಜೊಳಿ ತಂತ್ರಕ್ಕೆ ಲಕ್ಷ್ಮೀ ಹೆಬ್ಬಾಳ್ಕರ್​ ಪ್ರತಿತಂತ್ರ

ಒಬ್ಬ ಹೆಣ್ಣು ಮಗಳಾಗಿದ್ರಿಂದ ಬಹಳ ಹುಷಾರಾಗಿ ಮಾತನಾಡಬೇಕಾಗುತ್ತೆ

ರಮೇಶ್ ಜಾರಕಿಹೊಳಿ​ ಸ್ವಯಂಘೋಷಿತ ನಾಯಕ ಎಂಬ ಹೇಳಿಕೆ ವಿಚಾರಕ್ಕೆ ಸಂಬಂಧಿಸಿ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿಕೆಗೆ ಶಾಸಕ ರಮೇಶ್ ಜಾರಕಿಹೊಳಿ ತಿರುಗೇಟು ನೀಡಿದ್ದಾರೆ. ಸ್ವಯಂಘೋಷಿತ ನಾಯಕ ನಾನೋ ಅವರೋ. ವೈಯಕ್ತಿಕವಾಗಿ ಟೀಕೆ ಮಾಡಿದ್ದಾರೆ, ಅದಕ್ಕೆ ನಾನು ಇಲ್ಲಿ ಉತ್ತರ ಕೊಡಲ್ಲ. ಅದೇ ಜಾಗದಲ್ಲಿ 20ರಿಂದ 25 ಸಾವಿರ ಜನ ಸೇರಿಸಿ ಉತ್ತರ ಕೊಡುತ್ತೇನೆ. ಒಬ್ಬ ಹೆಣ್ಣು ಮಗಳಾಗಿದ್ರಿಂದ ಬಹಳ ಹುಷಾರಾಗಿ ಮಾತನಾಡಬೇಕಾಗುತ್ತೆ. ಲಕ್ಷ್ಮೀ ಹೆಬ್ಬಾಳ್ಕರ್​ ನನ್ನನ್ನು ಪ್ರಚೋದನೆ ಮಾಡುತ್ತಿದ್ದಾರೆ. ಇದು ರಾಜಕೀಯ ತಂತ್ರಗಾರಿಕೆ, ಆದ್ರೆ ಈ ಬಾರಿ ಫೇಲ್ ಆಗುವುದಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.

ರಾಜಹಂಸಗಡ ಕೋಟೆಗೆ ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಭೇಟಿ ವಿಚಾರಕ್ಕೆ ಸಂಬಂಧಿಸಿ ಡಿಕೆಶಿಗೆ ಗ್ರಾಮೀಣ ಶಾಸಕರು ಏನೇ ಮಾಡಿದ್ರೂ ಚೆನ್ನಾಗಿ ಕಾಣುತ್ತದೆ. ಅಖಾಡಕ್ಕೆ ಬನ್ನಿ ಅಂತಾ ಸ್ಟೈಲ್‌ ಆಗಿ ಹಿರೋಯಿನ್‌ ರೀತಿ ಕೈಮಾಡಿದ್ರು. ನಾನು ಬಂದಿದ್ದೇನೆ, ಯಾಕೆ ನಾಯಿ ಹಾಗೆ ಒದ್ದಾಡುತ್ತಿಯಾ ತಾಯಿ? ಬಿಜೆಪಿಯನ್ನು ಅಧಿಕಾರಕ್ಕೆ ತರುವುದೇ ನನ್ನ ಕರ್ತವ್ಯ ಎಂದರು.

ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ