AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅರ್ಧ ಬಣ್ಣ ಬಳಿದ ಮೂರ್ತಿಯನ್ನು 12 ನಿಮಿಷದಲ್ಲಿ ಉದ್ಘಾಟನೆ ಮಾಡಿದ್ರು, ಶಿವಾಜಿ ಪ್ರತಿಮೆಯನ್ನು ಮತ್ತೊಮ್ಮೆ ಉದ್ಘಾಟಿಸಿ ಗುಡುಗಿದ ಹೆಬ್ಬಾಳ್ಕರ್​

ರಾಜಕೀಯ ನಾಯಕರ ಕ್ರೆಡಿಟ್ ವಾರ್​ಗೆ ಶಿವಾಜಿಯ ಒಂದು ಪ್ರತಿಮೆಗೆ ಎರಡೆರಡು ಬಾರಿ ಉದ್ಘಾಟನೆಯ ಭಾಗ್ಯ ಸಿಕ್ಕಿದೆ. ಮರು ಉದ್ಘಾಟನೆ ಮಾಡಿದ ಲಕ್ಷ್ಮೀ ಹೆಬ್ಬಾಳ್ಕರ್ ರಾಜಹಂಸಗಡ ಕೋಟೆಯಲ್ಲಿ ನಿಂತು​ ರಮೇಶ್ ಜಾರಕಿಹೊಳಿ ವಿರುದ್ಧ ಗುಡುಗಿದರು.

ಅರ್ಧ ಬಣ್ಣ ಬಳಿದ ಮೂರ್ತಿಯನ್ನು 12 ನಿಮಿಷದಲ್ಲಿ ಉದ್ಘಾಟನೆ ಮಾಡಿದ್ರು, ಶಿವಾಜಿ ಪ್ರತಿಮೆಯನ್ನು ಮತ್ತೊಮ್ಮೆ ಉದ್ಘಾಟಿಸಿ ಗುಡುಗಿದ ಹೆಬ್ಬಾಳ್ಕರ್​
TV9 Web
| Updated By: ರಮೇಶ್ ಬಿ. ಜವಳಗೇರಾ|

Updated on: Mar 05, 2023 | 2:57 PM

Share

ಬೆಳಗಾವಿ: ಶಿವಾಜಿ ಪ್ರತಿಮೆ9Shivaji statue) ಪಾಲಿಟಿಕ್ಸ್ ಬೆಳಗಾವಿಯಲ್ಲಿ ಜೋರಾಗಿದೆ. ರಾಜಕೀಯ ನಾಯಕರ ಕ್ರೆಡಿಟ್ ವಾರ್​ಗೆ ಒಂದು ಪ್ರತಿಮೆಗೆ ಎರಡೆರಡು ಬಾರಿ ಉದ್ಘಾಟನೆಯ ಭಾಗ್ಯ ಸಿಕ್ಕಿದೆ. ‘ಕೈ’​-ಕೇಸರಿ ಪಡೆಗಳ ಜಿದ್ದಿಗೆ ರಾಜಹಂಸಗಡ ಸಾಕ್ಷಿಯಾಗಿದೆ. ಹೌದು…ರಾಜಹಂಸಗಡ ಕೋಟೆಯಲ್ಲಿ ಇಂದು(ಮಾ.05) ಕಾಂಗ್ರೆಸ್ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್​​ ಮತ್ತೊಮ್ಮೆ ಶಿವಾಜಿ ಪ್ರತಿಮೆ ಅನಾವರಣಗೊಳಿಸಿ ಬಿಜೆಪಿ ಶಾಸಕ ರಮೇಶ್ ಜಾರಕೊಹೊಳಿಗೆ (Ramesh Jarkiholi) ಸೆಡ್ಡು ಹೊಡೆದಿದ್ದಾರೆ. ಇನ್ನು ಪತಿಮೆ ಉದ್ಘಾಟನೆ ಬಳಿಕ ಲಕ್ಷ್ಮೀ ಹೆಬ್ಬಾಳ್ಕರ್​ (Lakshmi Hebbalkar) ಸಾಹುಕಾರ್​ ವಿರುದ್ಧ ಪರೋಕ್ಷವಾಗಿ ಹಿಗ್ಗಾಮುಗ್ಗಾ ವಾಗ್ದಾಳಿ ನಡೆಸಿದರು.

ಇದನ್ನೂ ಓದಿ: ಲಕ್ಷ್ಮಿ ಹೆಬ್ಬಾಳ್ಕರ್‌ರಿಂದ 2ನೇ ಬಾರಿ ಶಿವಾಜಿ ಪ್ರತಿಮೆ ಉದ್ಘಾಟನೆ; ಹಾಸ್ಯಾಸ್ಪದ ಎಂದ ಸಿಎಂ ಬಸವರಾಜ ಬೊಮ್ಮಾಯಿ

ಬೆಳಗಾವಿ ಗ್ರಾಮೀಣ ಕ್ಷೇತ್ರದ ರಾಜಹಂಸಗಡ ಕೋಟೆ ಆವರಣದಲ್ಲಿರುವ ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆಯನ್ನು ಉದ್ಘಾಟಿಸಿ ಬಳಿಕ ಮಾತನಾಡಿದ ಲಕ್ಷ್ಮೀ ಹೆಬ್ಬಾಳ್ಕರ್​ , ನಿಮ್ಮೆಲ್ಲರ ಮಗಳಾಗಿ 2018ರಲ್ಲಿ ಪ್ರಮಾಣ ಮಾಡಿದ್ದೆ. ಧೈರ್ಯಕ್ಕೆ ಏನೂ ಲಕ್ಷ್ಮೀ ಹೆಬ್ಬಾಳ್ಕರ್ ಕಡಿಮೆ ಇಲ್ಲ. ಆದ್ರೇ ಇವತ್ತು ಭಾವುಕ ಆಗಿದ್ದೇನೆ. ಕೊಡಬಾರದಷ್ಟು ಕಷ್ಟ ಕೊಡುತ್ತಿದ್ದಾರೆ. ಹೀಗಾಗಿ ಭಾವುಕ ಆಗಿದ್ದೇನೆ. ಈ ಮಹಾರಾಜರ ಮೂರ್ತಿಯನ್ನ ಸ್ಥಾಪನೆ ಮಾಡಲು ಎರಡು ಕೇಸ್ ನನ್ನ ಮೇಲೆ ಹಾಕಿದ್ದಾರೆ. ಸತ್ಯಮೇವ ಜಯತೆ ಎಂದು ಬರಿ ಕೆಲಸ ಮಾಡಿದ್ದೇನೆ ಎಂದು ಗುಡುಗಿದರು.

ಯಾರಾರೋ ಬಂದು ಶಿಷ್ಟಾಚಾರ ಬಂದು ಮಾತನಾಡುತ್ತಾರೆ. ಸಿಎಂ ಬಸವರಾಜ ಬೊಮ್ಮಾಯಿ ಬಗ್ಗೆ ಗೌರವ ಇದೆ. ಅವರ ದಿಕ್ಕು ತಪ್ಪಿಸಿ, ಕರೆದುಕೊಂಡು ಬಂದು ಉದ್ಘಾಟನೆ ಮಾಡಿಸಿದ್ರು. ಅರ್ಧ ಬಣ್ಣ ಬಳಿದ ಮೂರ್ತಿಯನ್ನು 12 ನಿಮಿಷದಲ್ಲಿ ಉದ್ಘಾಟನೆ ಮಾಡಿದ್ರು. ಶಿವಾಜಿ ಮಹಾರಾಜರಿಗೆ ಮಾಡಿದ ದೊಡ್ಡ ಅಪಮಾನ ಎಂದು ಹೆಸರು ಹೇಳದೇ ರಮೇಶ್ ಜಾರಕಿಹೊಳಿ ವಿರುದ್ಧ ಕಿಡಿಕಾರಿದರು.

ತಪ್ಪು ಮಾಡಿದ್ರು, ಪ್ರತಿಷ್ಠಾಪನೆ ವಿಚಾರದಲ್ಲಿ ಅವರು ರಾಜಕೀಯ ಮಾಡಿದ್ರು. ಸಿದ್ದೇಶ್ವರನ ಮೇಲೆ ಪ್ರಮಾಣ ಮಾಡುತ್ತೇನೆ. ಈ ವಿಚಾರದಲ್ಲಿ ನಾನು ರಾಜಕೀಯ ಮಾಡಿಲ್ಲ. ಡಿಕೆ ಶಿವಕುಮಾರ್​ ಮಂತ್ರಿಯಾಗಿದ್ದ ವೇಳೆಯಲ್ಲಿ ಮೂರು ತಿಂಗಳಲ್ಲಿ ಅನುದಾನ ಬಿಡುಗಡೆ ಮಾಡಿಸಿದ್ದೆ. ನಂತರ ಕೊವಿಡ್, ಪ್ರವಾಹದಿಂದ ವಿಳಂಬವಾಯಿತು. ಈಗ ಚುನಾವಣೆ ಬಂದಿದೆ. ಪ್ರತಿಮೆ ಉದ್ಘಾಟನೆಯನ್ನ ಚುನಾವಣೆ ಬಳಸುವ ಅವಶ್ಯಕತೆ ನನಗೆ ಇಲ್ಲ. ಪುಣ್ಯದ ಕೆಲಸ ಮಾಡಲು ನನಗೆ ಅವಕಾಶ ಕೊಟ್ಟರಿ ಇದು ನಮ್ಮ ಭಾಗ್ಯ ಎಂದರು.

ಮುಂದಿನ ಎರಡು ತಿಂಗಳಲ್ಲಿ ಚುನಾವಣೆ ಇದೆ. ಭಾಷೆ, ಧರ್ಮ, ಪಕ್ಷದ ಆಮಿಷ ನಿಮ್ಮೆ ಮುಂದೆ ಇಡುತ್ತಾರೆ. ನಿಸ್ವಾರ್ಥದಿಂದ ಐದು ವರ್ಷ ಕೆಲಸ ಮಾಡಿದ್ದೇನೆ. ನಿಮ್ಮ ಪ್ರೀತಿ, ವಿಶ್ವಾಸ ನಮ್ಮ ಮೇಲೆ ಇರಲಿ. ಬೆಳಗಾವಿ ಗ್ರಾಮೀಣ ಕ್ಷೇತ್ರವನ್ನು ಮಾದರಿ ಕ್ಷೇತ್ರ ಮಾಡುವುದು ನಮ್ಮ ಉದ್ದೇಶ. ದೇವರಲ್ಲಿ ರಾಜಕಾರಣ ಮಾಡುವುದು ಬೇಕಾಗಿಲ್ಲ ನೀವೇ ನನ್ನ ದೇವರು. ನೀವು ಹೇಳಿದ ಎಲ್ಲ ಕೆಲಸ ಹೇಗಲ ಮೇಲೆ ಅಲ್ಲಾ ತಲೆ ಮೇಲೆ ಇಟ್ಟುಕೊಂಡು ಮಾಡುತ್ತೇನೆ ಎಂದು ಹೇಳಿದರು.

ಶಿವಾಜಿ ಮಹಾರಾಜರು ಮಹಿಳೆಯರಿಗೂ ಬಹಳಷ್ಟು ಗೌರವ ಕೊಡ್ತಿದ್ದರಂತೆ. ಆದ್ರೇ ನಮ್ಮಲ್ಲಿ ಇದಾರೆ ಮಹಿಳೆಯರಿಗೆ ಎನೇನೂ ಮಾತಾಡ್ತಾರೆ ಅಂತಾ ನೀವೆಲ್ಲರೂ ಕೇಳಿದೀರಿ. ಅವರು ಶಿವ ಭಕ್ತರು ಅಂತೆ, ಮಹಾರಾಜರ ಹೇಳಿಕೊಟ್ಟ ದಾರಿಯಲ್ಲಿ ಹೋಗದವರು ಡೋಂಗಿ ಶಿವ ಭಕ್ತರು ಎಂದು ಪರೋಕ್ಷವಾಗಿ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಹಾಗೂ ಮಾಜಿ ಶಾಸಕ ಸಂಜಯ್ ಪಾಟೀಲ್‌ ವಿರುದ್ಧ ಹೆಬ್ಬಾಳ್ಕರ್ ಆಕ್ರೋಶ ವ್ಯಕ್ತಪಡಿಸಿದರು.

ಹೈವೇಯಲ್ಲೇ ಅಡುಗೆ ಮಾಡಿ ಧಿಮಾಕು ತೋರಿದ ಮಹಿಳೆ!
ಹೈವೇಯಲ್ಲೇ ಅಡುಗೆ ಮಾಡಿ ಧಿಮಾಕು ತೋರಿದ ಮಹಿಳೆ!
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ