‘ಒಂದೇ ವಾರದಲ್ಲಿ ರಮೇಶ್ ಬಿಜೆಪಿ ಬಿಟ್ಟು ಹೊರ ಬರ್ತಾರೆ.. ಆಮೇಲೆ ತ್ರಿಶಂಕು!’

ಹುಬ್ಬಳ್ಳಿ: ಒಂದೇ ವಾರದಲ್ಲಿ ರಮೇಶ್ ಜಾರಕಿಹೊಳಿ ಬಿಜೆಪಿ ಬಿಟ್ಟು ಹೊರ ಬರುತ್ತಾರೆ. ರಿಸಲ್ಟ್ ಬಳಿಕ ರಮೇಶ್ ಬಿಜೆಪಿಯಲ್ಲಿ ಇರ್ತಾರಾ ನೋಡೋಣ ಎಂದು ಗೋಕಾಕ್‌ನಲ್ಲಿ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಉಪಚುನಾವಣೆ ಹಿನ್ನೆಲೆ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ. ರಮೇಶ್ ಜಾರಕಿಹೊಳಿಗೆ ಕಾಂಗ್ರೆಸ್ ಬಾಗಿಲು ಬಂದ್ ಆಗಿದೆ. ರಮೇಶ್ ಇರೋದು ಬಿಜೆಪಿಯವರಿಗೆ ಇರುಸುಮುರುಸು ಇದೆ. ಬಿಜೆಪಿಯಲ್ಲಿ ಇರಲು ಆಗಲ್ಲ, ಜೆಡಿಎಸ್​ಗೆ ಹೋಗಲೂ ಆಗಲ್ಲ. ಆ ನಂತ್ರ ಅವರು ತಮ್ಮದೇ ಒಂದು ಪಕ್ಷವನ್ನು ಕಟ್ಟಿಕೊಳ್ಳಬೇಕಾಗುತ್ತದೆ ಎಂದು ವಾಗ್ದಾಳಿ ನಡೆಸಿದ್ದಾರೆ. ಚಮಚಾಗಿರಿ ಮಾಡಿದವ್ರಿಗೆ […]

ಒಂದೇ ವಾರದಲ್ಲಿ ರಮೇಶ್ ಬಿಜೆಪಿ ಬಿಟ್ಟು ಹೊರ ಬರ್ತಾರೆ.. ಆಮೇಲೆ ತ್ರಿಶಂಕು!

Updated on: Nov 27, 2019 | 1:07 PM

ಹುಬ್ಬಳ್ಳಿ: ಒಂದೇ ವಾರದಲ್ಲಿ ರಮೇಶ್ ಜಾರಕಿಹೊಳಿ ಬಿಜೆಪಿ ಬಿಟ್ಟು ಹೊರ ಬರುತ್ತಾರೆ. ರಿಸಲ್ಟ್ ಬಳಿಕ ರಮೇಶ್ ಬಿಜೆಪಿಯಲ್ಲಿ ಇರ್ತಾರಾ ನೋಡೋಣ ಎಂದು ಗೋಕಾಕ್‌ನಲ್ಲಿ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಉಪಚುನಾವಣೆ ಹಿನ್ನೆಲೆ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.

ರಮೇಶ್ ಜಾರಕಿಹೊಳಿಗೆ ಕಾಂಗ್ರೆಸ್ ಬಾಗಿಲು ಬಂದ್ ಆಗಿದೆ. ರಮೇಶ್ ಇರೋದು ಬಿಜೆಪಿಯವರಿಗೆ ಇರುಸುಮುರುಸು ಇದೆ. ಬಿಜೆಪಿಯಲ್ಲಿ ಇರಲು ಆಗಲ್ಲ, ಜೆಡಿಎಸ್​ಗೆ ಹೋಗಲೂ ಆಗಲ್ಲ. ಆ ನಂತ್ರ ಅವರು ತಮ್ಮದೇ ಒಂದು ಪಕ್ಷವನ್ನು ಕಟ್ಟಿಕೊಳ್ಳಬೇಕಾಗುತ್ತದೆ ಎಂದು ವಾಗ್ದಾಳಿ ನಡೆಸಿದ್ದಾರೆ.

ಚಮಚಾಗಿರಿ ಮಾಡಿದವ್ರಿಗೆ ಮಾತ್ರ ಕಾಂಗ್ರೆಸ್ ನಲ್ಲಿ ಸ್ಥಾನಮಾನ ಎಂಬ ರಮೇಶ್ ಜಾರಕಿಹೊಳಿ ಹೇಳಿಕೆ ವಿಚಾರಕ್ಕೆ ಸಂಬಂಧಿಸಿ ದಿನೇಶ್ ಗುಂಡೂರಾವ್ ಆಕ್ರೋಶವನ್ನು ಹೊರಹಾಕಿದ್ದಾರೆ. ಹಾಗಿದ್ದರೆ ರಮೇಶ್ ಇಷ್ಟು ವರ್ಷ ಕಾಂಗ್ರೆಸ್​ನಲ್ಲಿ ಯಾಕೆ ಇದ್ರು? ಅವರು ಐದು ವರ್ಷ ಎಂಎಲ್‌ಎ ಆಗಿದ್ದಾಗ ಚಮಚಾಗಿರಿ ಮಾಡಿದ್ರಾ? 20 ವರ್ಷ ಬಿಜೆಪಿ ವಿರುದ್ಧ, ಸಮುದಾಯದ ವಿರುದ್ಧ ಮಾತನಾಡುತ್ತಾ ಬಂದವರು‌ ಇವರು. ಈಗ ಈ ರೀತಿ ಹೇಳುತ್ತಾರ ಎಂದು ಲೇವಡಿ ಮಾಡಿದರು.

Published On - 1:07 pm, Wed, 27 November 19