ಶಂಕರಲಿಂಗ ಜಾತ್ರೆ ಪ್ರಯುಕ್ತ ಬುಲೆಟ್ ಸೌಂದರ್ಯ ಸ್ಪರ್ಧೆ: ಅದ್ಭುತ ಲುಕ್​ಗೆ ಮುಗಿಬಿದ್ದ ಜನತೆ

ಬೆಳಗಾವಿ: ಹುಕ್ಕೇರಿ ತಾಲೂಕಿನ ಸಂಕೇಶ್ವರ ಪಟ್ಟಣದ ಎಪಿಎಂಸಿ ಮಾರುಕಟ್ಟೆ ಆವರಣದಲ್ಲಿ ಬ್ಯೂಟಿಫುಲ್ ಬುಲೆಟ್ ಬೈಕ್​ಗಳು ಹವಾ ಎಬ್ಬಿಸಿದ್ವು. ಇಂದಿನಿಂದ ಸಂಕೇಶ್ವರ ಪಟ್ಟಣದಲ್ಲಿ 3 ದಿನಗಳ ಕಾಲ ಶಂಕರಲಿಂಗ ಜಾತ್ರೆ ಶುರುವಾಗುತ್ತೆ. ಇದ್ರ ಅಂಗವಾಗಿ ನಿನ್ನೆ ಬುಲೆಟ್ ಸೌಂದರ್ಯ ಸ್ಪರ್ಧೆ ಆಯೋಜಿಸಲಾಗಿತ್ತು. ಕರ್ನಾಟಕದಲ್ಲೇ ಮೊದಲ ಬಾರಿಗೆ ಬುಲೆಟ್ ಬೈಕ್​ಗಳ ಬ್ಯೂಟಿ ಕಾಂಪಿಟೇಷನ್ ನಡೀತು. 180ಕ್ಕೂ ಅಧಿಕ ಬುಲೆಟ್ ಬೈಕ್​ಗಳು ಭಾಗವಹಿಸಿದ್ವು. ಕೆಲವೊಂದರ ಮುಂಭಾಗದಲ್ಲಿ ಡಿಫ್ರೆಂಟ್ ಸ್ಟೀಕರ್ ಹಚ್ಚಿದ್ರೆ, ಇನ್ನೂ ಕೆಲವು ಬುಲೆಟ್​ಗಳ ಮೇಲೆ ತಲ್ವಾರ್ ಫಿಕ್ಸ್ ಮಾಡಲಾಗಿತ್ತು. ಹೀಗೆ […]

ಶಂಕರಲಿಂಗ ಜಾತ್ರೆ ಪ್ರಯುಕ್ತ ಬುಲೆಟ್ ಸೌಂದರ್ಯ ಸ್ಪರ್ಧೆ: ಅದ್ಭುತ ಲುಕ್​ಗೆ ಮುಗಿಬಿದ್ದ ಜನತೆ
ಸಾಧು ಶ್ರೀನಾಥ್​

Updated on: Feb 04, 2020 | 12:32 PM

ಬೆಳಗಾವಿ: ಹುಕ್ಕೇರಿ ತಾಲೂಕಿನ ಸಂಕೇಶ್ವರ ಪಟ್ಟಣದ ಎಪಿಎಂಸಿ ಮಾರುಕಟ್ಟೆ ಆವರಣದಲ್ಲಿ ಬ್ಯೂಟಿಫುಲ್ ಬುಲೆಟ್ ಬೈಕ್​ಗಳು ಹವಾ ಎಬ್ಬಿಸಿದ್ವು. ಇಂದಿನಿಂದ ಸಂಕೇಶ್ವರ ಪಟ್ಟಣದಲ್ಲಿ 3 ದಿನಗಳ ಕಾಲ ಶಂಕರಲಿಂಗ ಜಾತ್ರೆ ಶುರುವಾಗುತ್ತೆ. ಇದ್ರ ಅಂಗವಾಗಿ ನಿನ್ನೆ ಬುಲೆಟ್ ಸೌಂದರ್ಯ ಸ್ಪರ್ಧೆ ಆಯೋಜಿಸಲಾಗಿತ್ತು. ಕರ್ನಾಟಕದಲ್ಲೇ ಮೊದಲ ಬಾರಿಗೆ ಬುಲೆಟ್ ಬೈಕ್​ಗಳ ಬ್ಯೂಟಿ ಕಾಂಪಿಟೇಷನ್ ನಡೀತು. 180ಕ್ಕೂ ಅಧಿಕ ಬುಲೆಟ್ ಬೈಕ್​ಗಳು ಭಾಗವಹಿಸಿದ್ವು.

ಕೆಲವೊಂದರ ಮುಂಭಾಗದಲ್ಲಿ ಡಿಫ್ರೆಂಟ್ ಸ್ಟೀಕರ್ ಹಚ್ಚಿದ್ರೆ, ಇನ್ನೂ ಕೆಲವು ಬುಲೆಟ್​ಗಳ ಮೇಲೆ ತಲ್ವಾರ್ ಫಿಕ್ಸ್ ಮಾಡಲಾಗಿತ್ತು. ಹೀಗೆ ಬಗೆ ಬಗೆ ಬಣ್ಣ.. ಹಾರನ್.. ಸ್ವಚ್ಛವಾಗಿ ಬೈಕ್ ಇಟ್ಕೊಳ್ಳೋದ್ರಿಂದ ಹಿಡಿದು ಎಲ್ಲ ಅಂಶಗಳ ಆಧಾರದ ಮೇಲೆ ಬಹುಮಾನ ವಿತರಿಸಲಾಯ್ತು. ಸ್ಪರ್ಧೆಗೆ ಮಹಾರಾಷ್ಟ್ರ, ಗೋವಾ ಸೇರಿದಂತೆ ರಾಜ್ಯದ ವಿವಿಧ ಭಾಗಗಳಿಂದಲೂ ಬೈಕ್​ಗಳು ಬಂದಿದ್ವು. ಮಿರ ಮಿರ ಮಿಂಚುತ್ತಿದ್ದ ಬೈಕ್​ಗಳು ಎಲ್ಲರನ್ನು ಸೆಳೆದ್ವು.

ಬುಲೆಟ್ ರಾಣಿಯರ ಸೌಂದರ್ಯಕ್ಕೆ ಜನ ಮನಸೋತಿದ್ರು. ಅವುಗಳ ಮುಂದೆ ನಿಂತು ಸೆಲ್ಫಿ ಕ್ಲಿಕ್ಕಿಸಿಕೊಂಡು ಎಂಜಾಯ್ ಮಾಡಿದ್ರು. ಒಟ್ನಲ್ಲಿ, ಕುಂದಾನಗರಿಯಲ್ಲಿ ಬುಲೆಟ್ ರಾಣಿಯರ ಬ್ಯೂಟಿಫುಲ್ ಕಾಂಪಿಟೇಷನ್ ಮಸ್ತ್ ಆಗಿತ್ತು. ಅದ್ಭುತ ಲುಕ್ ನೋಡಿ ಕಿಕ್ಕಿರಿದು ಸೇರಿದ್ದ ಜನ ಮಜಾ ಮಾಡಿದ್ರು.












ಸಾಧು ಶ್ರೀನಾಥ್​

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Loading...
Unable to load recommendations.
Follow Us