ಈ ಉಪಚುನಾವಣೆಯೇ ಕಾಂಗ್ರೆಸ್​ಗೆ ಕೊನೆಯಾಗಲಿದೆ: ಈಶ್ವರಪ್ಪ ಗುಟುರು

|

Updated on: Nov 23, 2019 | 3:13 PM

ಬೆಳಗಾವಿ: ಉಪಚುನಾವಣೆ ಸಮಯದಲ್ಲಿ ಇಬ್ಬರು ಮಹಾಪುರುಷರು ಹೇಳಿಕೆ‌ ಕೊಟ್ಟಿದ್ದಾರೆ. ಒಬ್ಬರು ಚುನಾವಣೆ ಮುಗಿದ ಮೇಲೆ ಸರ್ಕಾರ ಬೀಳುತ್ತೆ ಅಂದಿದ್ದಾರೆ. ಮತ್ತೊಬ್ಬರು ಅನರ್ಹರನ್ನ ಸೋಲಿಸುವುದೇ ನನ್ನ ಗುರಿ ಅಂದಿದ್ದಾರೆ. ಅನರ್ಹರನ್ನ ಸೋಲಿಸುತ್ತೇನೆ ಅಂದವರಿಗೆ ಅಪ್ಪ ಮತ್ತು‌ ಮಗನನ್ನೇ ಗೆಲ್ಲಿಸಲು ಆಗಲಿಲ್ಲ. ಇವರಿಗೆ ನೊಬೆಲ್ ಪ್ರಶಸ್ತಿ ಕೊಡಬೇಕು ಎಂದು ಕುಮಾರಸ್ವಾಮಿಗೆ ಕೆ.ಎಸ್.ಈಶ್ವರಪ್ಪ ಟಾಂಗ್ ಕೊಟ್ಟಿದ್ದಾರೆ. ಸಿದ್ದರಾಮಯ್ಯ ಆಗುತ್ತೆ ಅಂದಿದ್ದು ಆಗಲ್ಲ: ಸಿದ್ದರಾಮಯ್ಯ ಹೆಸರು ಹೇಳಲು ನನಗೆ ಮನಸ್ಸು ಬರುವುದಿಲ್ಲ. ಅವರು ಬರೀ ಸುಳ್ಳು ಹೇಳುತ್ತಾರೆ. ಕಾಂಗ್ರೆಸ್ ಸರ್ಕಾರ ಕೆಡವಿ 78ಕ್ಕೆ […]

ಈ ಉಪಚುನಾವಣೆಯೇ ಕಾಂಗ್ರೆಸ್​ಗೆ ಕೊನೆಯಾಗಲಿದೆ: ಈಶ್ವರಪ್ಪ ಗುಟುರು
Follow us on

ಬೆಳಗಾವಿ: ಉಪಚುನಾವಣೆ ಸಮಯದಲ್ಲಿ ಇಬ್ಬರು ಮಹಾಪುರುಷರು ಹೇಳಿಕೆ‌ ಕೊಟ್ಟಿದ್ದಾರೆ. ಒಬ್ಬರು ಚುನಾವಣೆ ಮುಗಿದ ಮೇಲೆ ಸರ್ಕಾರ ಬೀಳುತ್ತೆ ಅಂದಿದ್ದಾರೆ. ಮತ್ತೊಬ್ಬರು ಅನರ್ಹರನ್ನ ಸೋಲಿಸುವುದೇ ನನ್ನ ಗುರಿ ಅಂದಿದ್ದಾರೆ. ಅನರ್ಹರನ್ನ ಸೋಲಿಸುತ್ತೇನೆ ಅಂದವರಿಗೆ ಅಪ್ಪ ಮತ್ತು‌ ಮಗನನ್ನೇ ಗೆಲ್ಲಿಸಲು ಆಗಲಿಲ್ಲ. ಇವರಿಗೆ ನೊಬೆಲ್ ಪ್ರಶಸ್ತಿ ಕೊಡಬೇಕು ಎಂದು ಕುಮಾರಸ್ವಾಮಿಗೆ ಕೆ.ಎಸ್.ಈಶ್ವರಪ್ಪ ಟಾಂಗ್ ಕೊಟ್ಟಿದ್ದಾರೆ.

ಸಿದ್ದರಾಮಯ್ಯ ಆಗುತ್ತೆ ಅಂದಿದ್ದು ಆಗಲ್ಲ:
ಸಿದ್ದರಾಮಯ್ಯ ಹೆಸರು ಹೇಳಲು ನನಗೆ ಮನಸ್ಸು ಬರುವುದಿಲ್ಲ. ಅವರು ಬರೀ ಸುಳ್ಳು ಹೇಳುತ್ತಾರೆ. ಕಾಂಗ್ರೆಸ್ ಸರ್ಕಾರ ಕೆಡವಿ 78ಕ್ಕೆ ತಂದು ನಿಲ್ಲಿಸುವ ಮಹಾನುಭಾವ ಅವರು. ಕುಮಾರಸ್ವಾಮಿ ಅವರಪ್ಪನ ಆಣೆಗೂ ಸಿಎಂ ಆಗಲ್ಲ ಅಂದರು. ಬಳಿಕ ಕುಮಾರಸ್ವಾಮಿ ಕಾಲು ಹಿಡಿದು ಸಿಎಂ ಮಾಡಿದರು. ಯಡಿಯೂರಪ್ಪ ಸಿಎಂ ಆಗಲ್ಲ ಅಂದ್ರು, ಈಗ ಪೂರ್ಣ ಪ್ರಮಾಣದ ಸಿಎಂ ಆಗಿದ್ದಾರೆ. ಸಿದ್ದರಾಮಯ್ಯ ಆಗುತ್ತೆ ಅಂದಿದ್ದು ಆಗಲ್ಲ, ಆಗಲ್ಲ ಅಂದಿದ್ದು ಆಗುತ್ತೆ ಎಂದು ವ್ಯಂಗ್ಯವಾಡಿದರು.

ಉಪಚುನಾವಣೆಯೇ ಕಾಂಗ್ರೆಸ್​ಗೆ ಕೊನೆ: 
ಚುನಾವಣೆ ಸಮಯದಲ್ಲಿ ಕಾಂಗ್ರೆಸ್ ನಾಯಕರು ಮನೆ ಬಿಟ್ಟು ಬರುತ್ತಿಲ್ಲ. ಮಲ್ಲಿಕಾರ್ಜುನ ಖರ್ಗೆ, ಪರಮೇಶ್ವರ್​ ಮನೆ ಬಿಟ್ಟು ಬಂದಿಲ್ಲ. ಜಮೀರ್ ಅಹಮದ್ ಎಲ್ಲಿದ್ದಾರೋ ಗೊತ್ತಿಲ್ಲ. ಈ ಉಪಚುನಾವಣೆಯೇ ಕಾಂಗ್ರೆಸ್​ಗೆ ಕೊನೆಯಾಗಲಿದೆ. ವಿರೋಧ ಪಕ್ಷದಲ್ಲಿ ಸಿದ್ದರಾಮಯ್ಯ ಕೂರಲು‌ ಲಾಯಕ್ ಇಲ್ಲ ಎಂದು ವಾಗ್ದಾಳಿ ನಡೆಸಿದರು.

ಸವದಿ, ಯಡಿಯೂರಪ್ಪ ರಾಮ ಲಕ್ಷ್ಮಣರಂತೆ:
ರಾಮ, ಲಕ್ಷ್ಮಣರಂತೆ ಲಕ್ಷ್ಮಣ ಸವದಿ ಮತ್ತು ಯಡಿಯೂರಪ್ಪ. ಈ  ರಾಮ, ಲಕ್ಷ್ಮಣರು ಯುದ್ಧಕ್ಕೆ ಹೊರಟಿದ್ದಾರೆ. ಕಾರ್ಯಕರ್ತರೆನೂ ಕಮ್ಮಿಯಿಲ್ಲ, ಸೈನಿಕರಂತೆ ಹೋರಾಡಿ 25 ಸಾವಿರ ಮತಗಳ ಅಂತರದಿಂದ ಮಹೇಶ್ ಕುಮಟ್ಟಳ್ಳಿ ಅವರನ್ನು ಗೆಲ್ಲಿಸೋಣ. ಚುನಾವಣೆ ಮುಗಿದ ಮೇಲೆ ಅಥಣಿಗೆ ಇಬ್ಬಿಬ್ಬರು ಮಂತ್ರಿ ಆಗುತ್ತಾರೆ. ನೀವು ಗೆಲ್ಲಿಸುತ್ತಿರುವುದು ಶಾಸಕರನ್ನಲ್ಲ ಮಂತ್ರಿಯನ್ನ. ನನಗೆ ಹೊಟ್ಟೆ ಉರಿ.. ಶಿವಮೊಗ್ಗಕ್ಕೆ ನಾನು ಒಬ್ಬನೇ ಮಂತ್ರಿ ಅಂತಾ ಎಂದು ಇದೇ ವೇಳೆ ಅಥಣಿಯಲ್ಲಿ ಮಾತನಾಡಿದರು.