ಏ.17ರಂದು ನಡೆಯಲಿರುವ ಬೆಳಗಾವಿ ಲೋಕಸಭಾ ಕ್ಷೇತ್ರದ ಉಪಚುನಾವಣೆಗೆ ಸೋಮವಾರ ನಾಮಪತ್ರ ಸಲ್ಲಿಸುತ್ತೇನೆ ಎಂದು ‘ಕೈ’ ಅಭ್ಯರ್ಥಿ ಸತೀಶ್ ಜಾರಕಿಹೊಳಿ ಹೇಳಿದ್ದಾರೆ. ಚುನಾವಣೆ ಸ್ಪರ್ಧೆಗೆ ಆಸಕ್ತಿ ಇಲ್ಲ ಎಂದು ಎಲ್ಲಿಯೂ ಹೇಳಿಲ್ಲ. ಮಾನಸಿಕವಾಗಿ ನಾನು ಉಪಚುನಾವಣೆಗೆ ತಯಾರಾಗಿದ್ದೇನೆ. ಅನುಕಂಪ ಎಷ್ಟರ ಮಟ್ಟಿಗೆ ಕೆಲಸ ಮಾಡಲಿದೆ ನೋಡಬೇಕು. ನರೇಂದ್ರ ಮೋದಿ ಸರ್ಕಾರ ಎಲ್ಲಾ ರಂಗದಲ್ಲಿ ವಿಫಲವಾಗಿದೆ. ಇದನ್ನ ಮುಂದಿಟ್ಟುಕೊಂಡು ಚುನಾವಣೆ ಎದುರಿಸುತ್ತೇವೆ ಎಂದು ಹೇಳಿದ್ದಾರೆ. ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ಹೆಚ್ಚು ಬಿಜೆಪಿ ಶಾಸಕರಿದ್ದಾರೆ. ಈಗಿನ ವಿಷಯ ಬೇರೆ ಇದೆ, ಆಗಿನ ವಿಚಾರ ಬೇರೆ ಇದೆ ಎಂದು ಸತೀಶ್ ಜಾರಕಿಹೊಳಿ ಹೇಳಿದರು.
‘ಸಿಡಿ ಪ್ರಕರಣ ನಮ್ಮ ಮೇಲೆ ಯಾವುದೇ ಪರಿಣಾಮ ಬೀರಲ್ಲ’
ಸಿಡಿ ಪ್ರಕರಣ ನಮ್ಮ ಮೇಲೆ ಯಾವುದೇ ಪರಿಣಾಮ ಬೀರಲ್ಲ. ಇದೊಂದು ಅವಕಾಶ ನನಗೆ ಸಿಕ್ಕಿದೆ, ನನಗೆ ಖುಷಿ ಇದೆ. ಯಮಕನಮರಡಿ ಕ್ಷೇತ್ರದ ಜನ ಈಗ ಬೆಂಬಲ ಕೊಟ್ಟಿದ್ದಾರೆ ಎಂದು ‘ಕೈ’ ಅಭ್ಯರ್ಥಿ ಸತೀಶ್ ಜಾರಕಿಹೊಳಿ ಹೇಳಿದರು. ಕಾಂಗ್ರೆಸ್, ಬಿಜೆಪಿ ನಡುವೆ ನೇರಾ ಹಣಾಹಣಿ ಏರ್ಪಡಲಿದೆ. ಸಿಡಿ ಪ್ರಕರಣ ಪ್ರಸ್ತಾಪದಿಂದ ಲಾಭ ಆಗಲಿದೆ ಎಂದು ಅನಿಸಲ್ಲ. ಕೇಂದ್ರ, ರಾಜ್ಯ ಸರ್ಕಾರದ ವೈಫಲ್ಯ ಮುಂದಿಟ್ಟು ಚುನಾವಣೆ ನಡೆಸುತ್ತೇವೆ ಎಂದು ಹೇಳಿದರು.
ರಮೇಶ್ ಜಾರಕಿಹೊಳಿ ವಿರುದ್ಧ ಸಿಡಿ ಲೇಡಿ ದೂರು ನೀಡುರುವುದು ಬೆಳಗಾವಿ ಲೋಕಸಭಾ ಬೈಎಲೆಕ್ಷನ್ ಮೇಲೆ ಪ್ರಭಾವ ಬೀರಲ್ಲ. ನಮ್ಮ ಪಕ್ಷದ ಮೇಲೆ ಪ್ರಭಾವ ಬೀರುವ ಸಂಬಂಧ ಬರಲ್ಲ ಎಂದು ಕಾಂಗ್ರೆಸ್ ಅಭ್ಯರ್ಥಿ ಸತೀಶ್ ಅಭಿಪ್ರಾಯಪಟ್ಟಿದ್ದಾರೆ. ಕುಟುಂಬ ಚುನಾವಣೆ ಸ್ಪರ್ಧೆ ಮಾಡ್ತಿಲ್ಲ, ಪಕ್ಷ ಮಾಡುತ್ತಿದೆ. ಪ್ರಚಾರ ವೇಳೆ ಸಿಡಿ ವಿಚಾರ ಪ್ರಸ್ತಾಪ ಪ್ರಯೋಜನ ಆಗಲ್ಲ. ಸದನದಲ್ಲಿ ಸರ್ಕಾರಕ್ಕೆ ಏನು ಹೇಳಬೇಕಿತ್ತೋ ಪಕ್ಷ ಹೇಳಿದೆ. ಈಗ ಹೇಳುವುದರಿಂದ ನಮಗೆ ಲಾಭ ಆಗುತ್ತೆ ಅನಿಸಲ್ಲ. ನೋಡೋಣ ವರಿಷ್ಠರ ಜೊತೆ ನಾನು ಚರ್ಚೆ ಮಾಡುತ್ತೇನೆ ಎಂದು ‘ಕೈ’ ಅಭ್ಯರ್ಥಿ ಸತೀಶ್ ಜಾರಕಿಹೊಳಿ ಹೇಳಿದರು.
ಉಪಚುನಾವಣೆಗೆ ಆರೋಗ್ಯ ಇಲಾಖೆಯಿಂದ ಮಾರ್ಗಸೂಚಿ ಬಿಡುಗಡೆ
ಉಪಚುನಾವಣೆಗೆ ಆರೋಗ್ಯ ಇಲಾಖೆಯಿಂದ ಮಾರ್ಗಸೂಚಿ ಬಿಡುಗಡೆಯಾಗಿದೆ. ಆರೋಗ್ಯ ಇಲಾಖೆ ಮಾರ್ಗಸೂಚಿ ಬಿಡುಗಡೆ ಮಾಡಿದೆ. ನಾಮಪತ್ರ ಸಲ್ಲಿಕೆ, ಮನೆಮನೆ ಪ್ರಚಾರಕ್ಕೆ ಮಾರ್ಗಸೂಚಿ ಬಿಡುಗಡೆಯಾಗಿದೆ. ಪ್ರಚಾರದ ವೇಳೆ ಕಡ್ಡಾಯವಾಗಿ ಮಾಸ್ಕ್ ಧರಿಸಿರಬೇಕು. ವ್ಯಕ್ತಿಯಿಂದ ವ್ಯಕ್ತಿಗೆ 2 ಮೀಟರ್ ಅಂತರ ಪಾಲಿಸಬೇಕು. ನಾಮಪತ್ರ ಸಲ್ಲಿಕೆ ವೇಳೆ ಕೇವಲ ಇಬ್ಬರಿಗೆ ಮಾತ್ರ ಅವಕಾಶ ನೀಡಲಾಗುವುದು. ಚುನಾವಣೆಯ ಸಂದರ್ಭದಲ್ಲಿ ಪ್ರತಿಯೊಂದು ಹಾಲ್, ಕೊಠಡಿಗಳಲ್ಲಿ 6 ಅಡಿ ದೈಹಿಕ ಅಂತರ ಕಾಯ್ದುಕೊಳ್ಳಬೇಕು. ಸ್ಕ್ರೀನಿಂಗ್, ಸ್ಯಾನಿಟೇಷನ್ ಕಡ್ಡಾಯವಾಗಿ ಮಾಡಬೇಕು ಎಂದು ಮಾರ್ಗಸೂಚಿಯಲ್ಲಿ ಉಲ್ಲೇಖಿಸಲಾಗಿದೆ.
ಇದನ್ನೂ ಓದಿ: ಶಹಪುರ್ ಟೋಲ್ಗೇಟ್ನಲ್ಲಿ AEE ಮೇಲೆ ಹಲ್ಲೆ ಪ್ರಕರಣ: 14 ಜನರ ಬಂಧನ
Published On - 7:07 pm, Fri, 26 March 21