Saundatti Yellamma Temple: 18 ತಿಂಗಳ ಬಳಿಕ ಸವದತ್ತಿ ರೇಣುಕಾ ಯಲಮ್ಮ ದೇವಾಲಯ ಓಪನ್, ದರ್ಶನಕ್ಕೆ ಷರತ್ತು ಬದ್ಧ ಅನುಮತಿ

| Updated By: ಆಯೇಷಾ ಬಾನು

Updated on: Sep 28, 2021 | 9:26 AM

ರೇಣುಕಾ ಯಲ್ಲಮ್ಮ ದೇವಸ್ಥಾನ ಕಳೆದ 18 ತಿಂಗಳಿಂದ ಬಂದ್ ಆಗಿತ್ತು. ಈ ದೇವಸ್ಥಾನಕ್ಕೆ ಮಹಾರಾಷ್ಟ್ರದಿಂದ ಹೆಚ್ಚು ಭಕ್ತರು ಆಗಮಿಸುವ ಹಿನ್ನಲೆ ಮೊದಲ ಮತ್ತು ಎರಡನೇ ಅಲೆ ಮುಗಿದ್ರೂ ಬಂದ್ ಆಗಿತ್ತು.

Saundatti Yellamma Temple: 18 ತಿಂಗಳ ಬಳಿಕ ಸವದತ್ತಿ ರೇಣುಕಾ ಯಲಮ್ಮ ದೇವಾಲಯ ಓಪನ್, ದರ್ಶನಕ್ಕೆ ಷರತ್ತು ಬದ್ಧ ಅನುಮತಿ
ಸವದತ್ತಿ ಯಲ್ಲಮ್ಮ ದೇವಸ್ಥಾನ
Follow us on

ಬೆಳಗಾವಿ: ಜಿಲ್ಲೆಯ ಸವದತ್ತಿ ಪಟ್ಟಣದಲ್ಲಿರುವ ರೇಣುಕಾ ಯಲಮ್ಮ ದೇವಾಲಯ ಇಂದಿನಿಂದ ಓಪನ್ ಆಗಲಿದೆ. ಮಹಾಮಾರಿ ಕೊರೊನಾ ಹಿನ್ನೆಲೆಯಲ್ಲಿ ಬಂದ್ ಆಗಿದ್ದ ದೇವಾಲಯ ಇಂದಿನಿಂದ ಓಪನ್ ಆಗಲಿದ್ದು ಭಕ್ತರ ಭೇಟಿಗೆ ಅವಕಾಶ ನೀಡಿ ಡಿಸಿ ಎಂ.ಜಿ.ಹಿರೇಮಠ ಆದೇಶ ಹೊರಡಿಸಿದ್ದಾರೆ.

ಉತ್ತರ ಕರ್ನಾಟಕದ ಶಕ್ತಿಪೀಠವಾಗಿರುವ ಸವದತ್ತಿ ಯಲ್ಲಮ್ಮ ದೇವಸ್ಥಾನ ಭಕ್ತರಿಗಾಗಿ ತೆರೆಯಲಿದ್ದು ಭಕ್ತರು ದೇವಿಯ ದರ್ಶನಕ್ಕಾಗಿ ತುದಿಗಾಲಿನಲ್ಲಿ ನಿಂತಿದ್ದಾರೆ. ಡಿಸಿ ಎಂ.ಜಿ.ಹಿರೇಮಠ ದೇವಾಲಯ ಇಂದಿನಿಂದ ತೆರೆಯಲು ಅನುಮತಿ ನೀಡಿದ್ದು ಜನರು ಸೇರುವ ಉತ್ಸವ, ಜಾತ್ರೆ ನಡೆಸದಂತೆ ನಿರ್ಬಂಧ ಹೇರಿದ್ದಾರೆ. ಕಡ್ಡಾಯವಾಗಿ ಕೊವಿಡ್ ನಿಯಮ ಪಾಲಿಸಲು ಸೂಚನೆ ನೀಡಿದ್ದು ಯಲಮ್ಮ ದೇಗುಲದ ಆಡಳಿತ ಮಂಡಳಿಗೆ ಡಿಸಿ ಸೂಚಿಸಿದ್ದಾರೆ.

ರೇಣುಕಾ ಯಲ್ಲಮ್ಮ ದೇವಸ್ಥಾನ ಕಳೆದ 18 ತಿಂಗಳಿಂದ ಬಂದ್ ಆಗಿತ್ತು. ಈ ದೇವಸ್ಥಾನಕ್ಕೆ ಮಹಾರಾಷ್ಟ್ರದಿಂದ ಹೆಚ್ಚು ಭಕ್ತರು ಆಗಮಿಸುವ ಹಿನ್ನಲೆ ಮೊದಲ ಮತ್ತು ಎರಡನೇ ಅಲೆ ಮುಗಿದ್ರೂ ಬಂದ್ ಆಗಿತ್ತು. ಬೆಳಗಾವಿ ಮತ್ತು ಮಹಾರಾಷ್ಟ್ರದಲ್ಲಿ ಕೊರೊನಾ ಪಾಸಿಟಿವ್ ರೇಟ್ ಕಡಿಮೆಯಾದ ಹಿನ್ನಲೆ ದೇವಸ್ಥಾನ ಓಪನ್ ಮಾಡಲು ಆದೇಶ ನೀಡಲಾಗಿದೆ. ಇಂದಿನಿಂದ ದೇವಿ ದರ್ಶನಕ್ಕೆ ಷರುತ್ತು ಬದ್ಧ ಅನುಮತಿ ನೀಡಿ ಆದೇಶ‌ ಹೊರಡಿಸಲಾಗಿದೆ.

ಇದನ್ನೂ ಓದಿ: 11 ತಿಂಗಳ ಬಳಿಕ ಭಕ್ತರಿಗೆ ದರ್ಶನ ಭಾಗ್ಯ ನೀಡಿದ ಸವದತ್ತಿ ರೇಣುಕಾ ಯಲ್ಲಮ್ಮದೇವಿ

ನಂಜನಗೂಡು ಹುಚ್ಚಗಣಿ ಮಹದೇವಮ್ಮ ದೇವಸ್ಥಾನ ತೆರವುಗೊಳಿಸಿದ್ದ ತಹಶೀಲ್ದಾರ್​ ತಲೆದಂಡ

Published On - 7:17 am, Tue, 28 September 21