11 ತಿಂಗಳ ಬಳಿಕ ಭಕ್ತರಿಗೆ ದರ್ಶನ ಭಾಗ್ಯ ನೀಡಿದ ಸವದತ್ತಿ ರೇಣುಕಾ ಯಲ್ಲಮ್ಮದೇವಿ
ಮಹಾರಾಷ್ಟ್ರ, ಗೋವಾ, ಆಂಧ್ರದಿಂದ ಸಹಸ್ರಾರು ಭಕ್ತರು ಆಗಮಿಸುವ ಹಿನ್ನೆಲೆಯಲ್ಲಿ ಮುಂಜಾಗ್ರತಾ ದೃಷ್ಟಿಯಿಂದ ದೇವಸ್ಥಾನಕ್ಕೆ ಭಕ್ತರ ಪ್ರವೇಶ ನಿಷೇಧಿಸಲಾಗಿತ್ತು. ಇಂದಿನಿಂದ ರೇಣುಕಾ ಯಲ್ಲಮ್ಮದೇವಿ ದರ್ಶನಕ್ಕೆ ಷರತ್ತುಬದ್ಧ ಅನುಮತಿ ನೀಡಿ ಬೆಳಗಾವಿ ಡಿಸಿ ಆದೇಶ ಹೊರಡಿಸಿದ್ದಾರೆ.

ಬೆಳಗಾವಿ: ಕೊರೊನಾ ಸೋಂಕು ರಾಜ್ಯದಲ್ಲಿ ಕಾಲಿಟ್ಟು ಒಂದು ವರ್ಷ ಮೂರು ದಿನಗಳಾಗಿದೆ. ಅದಾದ ಬಳಿಕ ಸವದತ್ತಿ ರೇಣುಕಾ ಯಲ್ಲಮ್ಮದೇವಿ ದೇವಸ್ಥಾನವನ್ನು ಇದೀಗ ತೆರೆಯಲ್ಪಟ್ಟಿದೆ.
ಭಕ್ತರಿಗೆ ಇಂದಿನಿಂದ ರೇಣುಕಾ ಯಲ್ಲಮ್ಮದೇವಿ ದರ್ಶನ ಭಾಗ್ಯ ದೊರೆಯಲ್ಲಿದ್ದು, ಚಿಕ್ಕಮಗಳೂರಿನ ದತ್ತಾಶ್ರಮದ ಅಶೋಕ ಗಣಪತಿ ಶರ್ಮ ಗುರೂಜಿ, ಮಲ್ಲಾರಿ ಕುಲಕರ್ಣಿ ಗುರೂಜಿ, ಯಲ್ಲಮ್ಮ ದೇವಸ್ಥಾನ ಇಒ ರವಿ ಕೋಟಾರಗಸ್ತಿ ಉಪಸ್ಥಿತಿಯಲ್ಲಿ ದೇವಸ್ಥಾನ ತೆರೆಯಲಾಗಿದೆ. ಬೆಳಗಾವಿ ಜಿಲ್ಲೆ ಸವದತ್ತಿ ತಾಲೂಕಿನ ಯಲ್ಲಮ್ಮನ ಗುಡ್ಡದಲ್ಲಿರುವ ದೇಗುಲವನ್ನು ಕೊರೊನಾ ಹಿನ್ನೆಲೆ ಮಾರ್ಚ್ 23ರಿಂದ ಬಂದ್ ಮಾಡಲಾಗಿತ್ತು.
ಮಹಾರಾಷ್ಟ್ರ, ಗೋವಾ, ಆಂಧ್ರದಿಂದ ಸಹಸ್ರಾರು ಭಕ್ತರು ಆಗಮಿಸುವ ಹಿನ್ನೆಲೆಯಲ್ಲಿ ಮುಂಜಾಗ್ರತಾ ದೃಷ್ಟಿಯಿಂದ ದೇವಸ್ಥಾನಕ್ಕೆ ಭಕ್ತರ ಪ್ರವೇಶ ನಿಷೇಧಿಸಲಾಗಿತ್ತು. ಇಂದಿನಿಂದ ರೇಣುಕಾ ಯಲ್ಲಮ್ಮದೇವಿ ದರ್ಶನಕ್ಕೆ ಷರತ್ತುಬದ್ಧ ಅನುಮತಿ ನೀಡಿ ಬೆಳಗಾವಿ ಡಿಸಿ ಆದೇಶ ಹೊರಡಿಸಿದ್ದಾರೆ. 11 ತಿಂಗಳ ಬಳಿಕ ದೇವಸ್ಥಾನ ಬಾಗಿಲು ತೆರೆದ ಹಿನ್ನೆಲೆಯಿಂದಾಗಿ ದೇಗುಲಕ್ಕೆ ಭಕ್ತರು ತಂಡೋಪತಂಡವಾಗಿ ಆಗಮಿಸುತ್ತಿದ್ದಾರೆ.
ದೇವಾಲಯದಲ್ಲಿ ರಾತ್ರಿ ವೇಳೆ ನಿಗೂಢ ಶಬ್ದ: ದೇವಿ ಮುನಿಸಿಕೊಂಡಿದ್ದಾಳೆ ಎಂದು ಆತಂಕಗೊಂಡ ಗ್ರಾಮಸ್ಥರು
Published On - 10:58 am, Mon, 1 February 21