ಬಿಟ್ ಕಾಯಿನ್ಗಾಗಿ ಸರ್ಕಾರಿ ಸಂಸ್ಥೆ ಸಾಫ್ಟ್ವೇರ್ ಹ್ಯಾಕ್ ಮಾಡಿದ ಹ್ಯಾಕರ್ಸ್
ಬೆಂಗಳೂರಿನ ಶೇಷಾದ್ರಿಪುರಂನಲ್ಲಿರುವ ಉಡುಪಿ ಪವರ್ ಕಾರ್ಪೊರೇಷನ್ ಸಂಸ್ಥೆ ಸಾಫ್ಟ್ವೇರ್ ಹ್ಯಾಕ್ ಮಾಡಲಾಗಿದೆ. ಹ್ಯಾಕ್ ಮಾಡಿದ ಹ್ಯಾಕರ್ಸ್ ಬಿಟ್ ಕಾಯಿನ್, ಹಣ ನೀಡುವಂತೆ ಡಿಮ್ಯಾಂಡ್ ಮಾಡಿದ್ದಾರಂತೆ.

ಬೆಂಗಳೂರು: ಬಿಟ್ಕಾಯಿನ್ಗಾಗಿ ಹ್ಯಾಕರ್ಸ್ಗಳು ಸರ್ಕಾರಿ ಸಂಸ್ಥೆ ಸಾಫ್ಟ್ವೇರ್ಗೆ ಕನ್ನ ಹಾಕಿದ್ದಾರೆ. ಈ ಬಗ್ಗೆ ಸಿಐಡಿ ಸೈಬರ್ ಕ್ರೈಮ್ ಪೊಲೀಸ್ ಠಾಣೆಯಲ್ಲಿ FIR ದಾಖಲಾಗಿದೆ.
ಬೆಂಗಳೂರಿನ ಶೇಷಾದ್ರಿಪುರಂನಲ್ಲಿರುವ ಉಡುಪಿ ಪವರ್ ಕಾರ್ಪೊರೇಷನ್ ಸಂಸ್ಥೆ ಸಾಫ್ಟ್ವೇರ್ ಹ್ಯಾಕ್ ಮಾಡಲಾಗಿದೆ. ಹ್ಯಾಕ್ ಮಾಡಿದ ಹ್ಯಾಕರ್ಸ್ ಬಿಟ್ ಕಾಯಿನ್, ಹಣ ನೀಡುವಂತೆ ಡಿಮ್ಯಾಂಡ್ ಮಾಡಿದ್ದಾರೆ ಎನ್ನಲಾಗಿದೆ. ಸಾಫ್ಟ್ ವೇರ್ ಲಾಕ್ ಮಾಡಿ ಕಂಪ್ಯೂಟರ್ನಲ್ಲಿದ್ದ ಸಂಸ್ಥೆಯ ಮಹತ್ವದ ಮಾಹಿತಿಯನ್ನು ನಾಶಗೊಳಿಸಿದ್ದಾರೆ.
ಕಳೆದ ಮಾರ್ಚ್ ಮತ್ತು ಏಪ್ರಿಲ್‌ನಲ್ಲಿ ಈ ಘಟನೆ ನಡೆದಿದ್ದು ಕೊರೊನಾ ಹಾವಳಿ ಹಿನ್ನೆಲೆಯಲ್ಲಿ ಸಂಸ್ಥೆ ಈ ಬಗ್ಗೆ ದೂರು ದಾಖಲಿಸಿರಲಿಲ್ಲ. ಸದ್ಯ ಜನವರಿ 29 ರಂದು ಸಿಐಡಿ ಸೈಬರ್ ಕ್ರೈಮ್ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ FIR ದಾಖಲಾಗಿದೆ.
ದೀಪಿಕಾ ಪಡುಕೋಣೆ ಇನ್ಸ್ಟಾಗ್ರಾಮ್- ಟ್ವಿಟರ್ ಅಕೌಂಟ್ ಖಾಲಿ ಖಾಲಿ.. ಅಕೌಂಟ್ ಹ್ಯಾಕ್ ಆಗಿರಬಹುದೆಂದ ನೆಟ್ಟಿಗರು