AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Akhila Pajimannu: ಎಂಗೇಜ್​ ಆದ ಕನ್ನಡ ಕೋಗಿಲೆ ಖ್ಯಾತಿಯ ಅಖಿಲಾ ಪಜಿಮಣ್ಣು: ಹುಡುಗ ಯಾರು ಗೊತ್ತಾ?

Akhila Pajimannu Engagement: ಕನ್ನಡ ಕೋಗಿಲೆ ಸೀಸನ್​ 1 ಹಾಗೂ ಸೀಸನ್​ 2 ರನ್ನರ್​ ಅಪ್​ ಆಗಿರುವ ಅಖಿಲಾ ತಮ್ಮ ಸುಮಧುರ ಕಂಠದ ಮೂಲಕ ಸಾಕಷ್ಟು ಅಭಿಮಾನಿಗಳನ್ನು ಹೊಂದಿದ್ದಾರೆ.

Akhila Pajimannu: ಎಂಗೇಜ್​ ಆದ ಕನ್ನಡ ಕೋಗಿಲೆ ಖ್ಯಾತಿಯ ಅಖಿಲಾ ಪಜಿಮಣ್ಣು: ಹುಡುಗ ಯಾರು ಗೊತ್ತಾ?
ಅಖಿಲಾ ಪಜಿಮಣ್ಣು
ರಾಜೇಶ್ ದುಗ್ಗುಮನೆ
|

Updated on: Feb 01, 2021 | 7:30 PM

Share

‘ಕನ್ನಡ ಕೋಗಿಲೆ’ ಕಾರ್ಯಕ್ರಮದ ಮೂಲಕ ಮನೆ ಮಾತಾಗಿರುವ ಗಾಯಕಿ ಅಖಿಲಾ ಪಜಿಮಣ್ಣು ಸೈಲೆಂಟ್​ ಆಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಈ ವಿಚಾರವನ್ನು ಅವರು ಇನ್​ಸ್ಟಾಗ್ರಾಂನಲ್ಲಿ ಅಧಿಕೃತಗೊಳಿಸಿದ್ದಾರೆ.

ಕನ್ನಡ ಕೋಗಿಲೆ ಸೀಸನ್​ 1 ಹಾಗೂ ಸೀಸನ್​ 2 ರನ್ನರ್​ ಅಪ್​ ಆಗಿರುವ ಅಖಿಲಾ ತಮ್ಮ ಸುಮಧುರ ಕಂಠದ ಮೂಲಕ ಸಾಕಷ್ಟು ಅಭಿಮಾನಿಗಳನ್ನು ಹೊಂದಿದ್ದಾರೆ. ಇತ್ತಿಚೆಗಷ್ಟೇ ಅವರು ಮುಂಜಾನೆ ರಾಗದ ಕಾರ್ಯಕ್ರಮದ ಮೂಲಕ ಮತ್ತೆ ಕಿರುತೆರೆಗೆ ಮರಳಿದ್ದರು. ಈ ಬೆನ್ನಲ್ಲೇ ಅವರು ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ್ದಾರೆ.

ಧನಂಜಯ್​ ಶರ್ಮಾ ಎಂಬುವವರ ಜೊತೆ ಅಖಿಲಾ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಧನಂಜಯ್​ ಜೊತೆ ಇರುವ ವಿಡಿಯೋ ಒಂದನ್ನು ಇನ್​​ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದು, ಎಂಗೇಜ್​ ಆಗಿದ್ದೇನೆ ಎಂದು ಬರೆದುಕೊಂಡಿದ್ದಾರೆ.

ಈ ಪೋಸ್ಟ್​ ನೋಡಿದ ಅನೇಕರು ಅವರಿಗೆ ಶುಭಾಶಯ ಕೋರಿದ್ದಾರೆ. ಅಷ್ಟೇ ಅಲ್ಲ, ಜೋಡಿ ಉತ್ತಮವಾಗಿದೆ ಎಂದು ಕಮೆಂಟ್​ ಮಾಡಿದ್ದಾರೆ. ಅಂದಹಾಗೆ, ಧನಂಜಯ್​ ವೃತ್ತಿಯಲ್ಲಿ ಏನು ಮಾಡಿಕೊಂಡಿದ್ದಾರೆ ಎಂಬುದು ಇನ್ನೂ ತಿಳಿದು ಬಂದಿಲ್ಲ.

ಖ್ಯಾತ ಹಿನ್ನೆಲೆ ಗಾಯಕಿ ಸುನಿತಾಗೆ ಸದ್ಯದಲ್ಲೇ ಮರುಮದುವೆ, ಇಂದು ನಿಶ್ಚಿತಾರ್ಥ