Belagavi Murder: ಮಗ-ಸೊಸೆ ಜಗಳ ಬಿಡಿಸಲು ಮುಂದಾದ ಅಪ್ಪನನ್ನೇ ಕುಡುಗೋಲಿನಿಂದ ಕೊಂದ ಮಗ

ಯಲ್ಲಪ್ಪ ಕೋಡೆನ್ನವರ್ ಕುಡಿದು ಬಂದು ಹೆಂಡತಿ ಜೊತೆ ಜಗಳವಾಡುತ್ತಿದ್ದ. ಇದನ್ನು ನೋಡಲಾಗದೆ ಜಗಳ ಬಿಡಿಸಲು ಕಲ್ಲಪ್ಪ ಪೂಜಾರಿ ಮುಂದಾಗಿದ್ದಾರೆ. ಮಗ-ಸೊಸೆ ನಡುವಿನ ಜಗಳ ಬಿಡಿಸಲು ಹೋಗಿ ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ.

Belagavi Murder: ಮಗ-ಸೊಸೆ ಜಗಳ ಬಿಡಿಸಲು ಮುಂದಾದ ಅಪ್ಪನನ್ನೇ ಕುಡುಗೋಲಿನಿಂದ ಕೊಂದ ಮಗ
ಮಗ-ಸೊಸೆ ಜಗಳ ಬಿಡಿಸಲು ಮುಂದಾದ ಅಪ್ಪನನ್ನೇ ಕೊಂದ ಮಗ
Edited By:

Updated on: Nov 04, 2021 | 1:22 PM

ಬೆಳಗಾವಿ: ಜಿಲ್ಲೆಯ ಖಾನಾಪುರ ತಾಲೂಕಿನ ಬೇಡರಹಟ್ಟಿಯಲ್ಲಿ ಅಪ್ಪನನ್ನೇ ಬರ್ಬರವಾಗಿ ಮಗ ಕೊಲೆ ಮಾಡಿದ ಘಟನೆ ನಡೆದಿದೆ. ಕುಡುಗೋಲಿನಿಂದ ಕೊಚ್ಚಿ ಕಲ್ಲಪ್ಪ ಪೂಜಾರಿ(51)ಯನ್ನು ಮಗ ಯಲ್ಲಪ್ಪ ಕೋಡೆನ್ನವರ್(35) ಕೊಲೆ ಮಾಡಿದ್ದಾನೆ.

ಯಲ್ಲಪ್ಪ ಕೋಡೆನ್ನವರ್ ಕುಡಿದು ಬಂದು ಹೆಂಡತಿ ಜೊತೆ ಜಗಳವಾಡುತ್ತಿದ್ದ. ಇದನ್ನು ನೋಡಲಾಗದೆ ಜಗಳ ಬಿಡಿಸಲು ಕಲ್ಲಪ್ಪ ಪೂಜಾರಿ ಮುಂದಾಗಿದ್ದಾರೆ. ಮಗ-ಸೊಸೆ ನಡುವಿನ ಜಗಳ ಬಿಡಿಸಲು ಹೋಗಿ ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ. ಜಗಳ ಬಿಡಿಸಲು ಬಂದ ತಂದೆಯನ್ನ ಕುಡುಗೋಲಿನಿಂದ ಹೊಡೆದು ಕೊಲೆ ಮಾಡಿದ್ದಾನೆ. ಸ್ಥಳಕ್ಕೆ ನಂದಗಡ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಮೃತ ಕಲ್ಲಪ್ಪ ಪೂಜಾರಿ ಎರಡು ಮದುವೆಯಾಗಿದ್ದು 2ನೇ ಹೆಂಡತಿಯ ಪುತ್ರ ಯಲ್ಲಪ್ಪನಿಂದ ತಂದೆ ಕಲ್ಲಪ್ಪ ಕೊಲೆ ನಡೆದಿದೆ.

ಇದನ್ನೂ ಓದಿ: ಪ್ರತಿಭಟನಾಕಾರರು ಉಂಟು ಮಾಡಿದ ನಾಶನಷ್ಟವನ್ನು ಅವರೇ ಭರಿಸುವಂತೆ ಮಾಡಲು ಮಧ್ಯಪ್ರದೇಶ ಸರ್ಕಾರ ಸಿದ್ಧತೆ

Crime News: ಮಂಗಳೂರಿನಲ್ಲಿ ಕ್ಷುಲ್ಲಕ ಕಾರಣಕ್ಕೆ ಚೂರಿಯಿಂದ ಇರಿದು ವ್ಯಕ್ತಿ ಕೊಲೆ, ಅಪ್ಪ-ಮಗ ಇಬ್ಬರೂ ಅರೆಸ್ಟ್