Belagavi: ಏಳನೇ ತರಗತಿ ಬಾಲಕಿ ಮೇಲೆ ಹೀನ ಕೃತ್ಯ, ಕಬ್ಬಿನ ಗದ್ದೆಗೆ ಎಳೆದೊಯ್ದು ಸಾಮೂಹಿಕ ಅತ್ಯಾಚಾರ
ಬೆಳಗಾವಿಯ ಮುರಗೋಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಮಾನವೀಯ ಕೃತ್ಯವೊಂದು ನಡೆದಿದೆ. 13 ವರ್ಷದ ಬಾಲಕಿ ಮೇಲೆ ದುಷ್ಟರು ಅಟ್ಟಹಾಸ ಮೆರೆದಿದ್ದು, ಆಕೆಯ ಕುಟುಂಬಸ್ಥರಿಗೆ ಜೀವ ಬೆದರಿಕೆಯನ್ನೂ ಹಾಕಿರುವ ಆರೋಪ ಕೇಳಿಬಂದಿದೆ. ಆರೋಪಿಗಳಿಗೆ ಖಾಕಿ ಬಲೆ ಬೀಸಿದ್ದು, ಪ್ರಕರಣ ದಾಖಲಿಸಿ ತನಿಖೆ ಮುಂದುವರಿಸಿದೆ.

ಬೆಳಗಾವಿ, ಡಿಸೆಂಬರ್ 02: ಕಬ್ಬಿನ ಗದ್ದೆಗೆ ಎಳೆದೊಯ್ದು ಏಳನೇ ತರಗತಿ ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿರುವ ಅಮಾನವೀಯ ಘಟನೆ ಬೆಳಗಾವಿಯ ಮುರಗೋಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ನವೆಂಬರ್ 23ರಂದೇ ಘಟನೆ ನಡೆದಿದ್ದು, ಬಾಲಕಿ ಕುಟುಂಬಸ್ಥರಿಗೆ ಜೀವ ಬೆದರಿಕೆ ಹಿನ್ನಲೆ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.
ಆರೋಪಿಗಳಾದ ಮಣಿಕಂಠ ದಿನ್ನಿಮನಿ ಮತ್ತು ಈರಣ್ಣ ಸಂಕಮ್ಮನವರ ಹಿಟ್ಟುಬೀಸಲು ತೆರಳಿದ್ದ ಬಾಲಕಿ ಮೇಲೆ ಹೇಹಕೃತ್ಯ ನಡೆಸಿದ್ದಾರೆ. ಮನೆಯಿಂದ ಮುನ್ನೂರು ಮೀಟರ್ ದೂರ ಇರುವ ಹಿಟ್ಟಿನ ಗಿರಣಿಗೆ ಹಿಟ್ಟು ರುಬ್ಬಿಸಿಕೊಂಡು ಬರಲು ಸಂತ್ರಸ್ತ ಬಾಲಕಿ ತೆರಳಿದ್ದ ವೇಳೆ ಆಕೆಯನ್ನು ಕಬ್ಬಿನ ಗದ್ದೆಗೆ ಎಳೆದೊಯ್ದು ಅತ್ಯಾಚಾರ ನಡೆಸಲಾಗಿದೆ. ಘಟನೆ ಸಂಬಂಧ ನಿನ್ನೆ (ಡಿ.1) ದೂರು ದಾಖಲಿಸಿಕೊಂಡಿರುವ ಮುರಗೋಡ ಠಾಣೆ ಪೊಲೀಸರು, ತಲೆಮರೆಸಿಕೊಂಡಿರುವ ಆರೋಪಿಗಳಿಗಾಗಿ ಶೋಧ ಮುಂದುವರಿಸಿದ್ದಾರೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.



