ಬೆಳಗಾವಿ: ಅನೈತಿಕ ಸಂಬಂಧ ಪ್ರಶ್ನಿಸಿದ್ದಕ್ಕೆ ಮಗನ ಮೇಲೆ ಪೊಲೀಸ್ ಸಬ್ ಇನ್ಸ್ಪೆಕ್ಟರ್ (PSI) ಹಲ್ಲೆ ಮಾಡಿಸಿರುವ ಪ್ರಕರಣ ವರದಿಯಾಗಿದ್ದು, PSI ಮಗನ ಮೇಲೆ ಪೊಲೀಸರಿಂದ ಹಲ್ಲೆ ಮಾಡಿಸಿದ್ದರು ಎನ್ನಲಾಗಿತ್ತು. ಇದೀಗ PSI ಆಣತಿಯಂತೆ ಹಲ್ಲೆ ಮಾಡಿದ್ದ ಕಾನ್ಸ್ಟೇಬಲ್ ನನ್ನು ಸಸ್ಪೆಂಡ್ ಮಾಡಿ ಆದೇಶ ಹೊರಡಿಸಲಾಗಿದೆ. ಬೆಳಗಾವಿ ಜಿಲ್ಲೆ ಘಟಪ್ರಭಾ ಪೊಲೀಸ್ ಠಾಣೆಯ ಕಾನ್ಸ್ಟೇಬಲ್ ಶಿವಾನಂದ ಪತ್ತಾರನನ್ನು ಅಮಾನತು ಮಾಡಿ ಎಸ್‌ಪಿ ಲಕ್ಷ್ಮಣ ನಿಂಬರಗಿ ಆದೇಶಿಸಿದ್ದಾರೆ. ಕುಲಗೋಡ ಠಾಣೆ ಪಿಎಸ್‌ಐ ಸಿದ್ದಪ್ಪ ಕರನಿಂಗ್ ಮಗ ರಾಹುಲ್ ಮೇಲೆ ಹಲ್ಲೆ ನಡೆಸಿರುವ ಪೊಲೀಸ್ ಅಧಿಕಾರಿ. ಮೇ 23ರಂದು ಕೊಣ್ಣೂರ ಗ್ರಾಮದಲ್ಲಿ ರಾಹುಲ್ ಮೇಲೆ ಹಲ್ಲೆ ನಡೆದಿತ್ತು ಎನ್ನಲಾಗಿದೆ.
ಆರೋಪವನ್ನು ಸಾರಾಸಗಟಾಗಿ ನಿರಾಕರಿಸಿರುವ ಮಹಿಳೆ:
ಸಹೋದರ ಸಂಬಂಧಿ ಮಹಿಳೆ ಜತೆ ಪಿಎಸ್‌ಐ ಅಕ್ರಮ ಸಂಬಂಧ ಹೊಂದಿದ್ದಾರೆ ಎಂದು PSI ಮಗ ರಾಹುಲ್ ಮಹಿಳೆಯ ಮನೆಗೆ ಹೋಗಿ ಆವಾಜ್ ಹಾಕಿದ್ದನಂತೆ. ಈ ವೇಳೆ ಘಟಪ್ರಭಾ ಪೊಲೀಸರನ್ನು ಕರೆಸಿ ಮಗನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಆದರೆ ಸದರಿ ಮಹಿಳೆ ಈ ಆರೋಪವನ್ನು ಸಾರಾಸಗಟಾಗಿ ನಿರಾಕರಿಸಿದ್ದಾರೆ.
ಇದನ್ನು ಓದಿ: ಆರ್ಯ ಸಮಾಜ ನೀಡಿದ ವಿವಾಹ ಸರ್ಟಿಫಿಕೇಟ್ಗೆ ಮಾನ್ಯತೆ ಇಲ್ಲ: ಸುಪ್ರೀಂಕೋರ್ಟ್
ಪೊಲೀಸರನ್ನ ಕರೆಸಿ ನನ್ನ ಮೇಲೆ ಹಲ್ಲೆ ಮಾಡಿಸಿದ್ದಾರೆಂದು PSI ಮಗ ರಾಹುಲ್ ಸ್ವತಃ ಆರೋಪ ಮಾಡಿದ್ದಾನೆ. ಹಲ್ಲೆಯಿಂದ 1 ವಾರ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದೆ ಎಂದಿರುವ ರಾಹುಲ್, ಮೂವರು ಪೊಲೀಸರು, ತಂದೆ ಮತ್ತು ಮಹಿಳೆಯ ವಿರುದ್ಧ ಎಸ್‌ಪಿ ಲಕ್ಷ್ಮಣ ನಿಂಬರಗಿಗೆ ದೂರು ನೀಡಿದ್ದ.
ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
ಇದನ್ನು ಓದಿ: ಯುವಕರನ್ನು ಕಾಡುತ್ತಿರುವ ಪರಿಧಮನಿ ಕಾಯಿಲೆ ಬಗ್ಗೆ ಉಪಯುಕ್ತ ಮಾಹಿತಿ
Published On - 6:06 pm, Fri, 3 June 22