Special Train: ದಸರಾ ಹಬ್ಬದ ನಿಮಿತ್ತ ಯಶವಂತಪುರ-ಬೆಳಗಾವಿ ನಡುವೆ ವಿಶೇಷ ರೈಲು

|

Updated on: Sep 10, 2024 | 8:35 AM

ದಸರಾದ ನಿಮಿತ್ತ ಪ್ರಯಾಣಿಕರ ಅನುಕೂಲಕ್ಕಾಗಿ ನೈಋತ್ಯ ರೈಲ್ವೆ ವಲಯ ಬೆಂಗಳೂರಿನ ಯಶವಂತಪುರ-ಬೆಳಗಾವಿ ನಡುವೆ ವಿಶೇಷ ರೈಲು ಓಡಿಸಲಿದೆ. ಯಾವ್ಯಾವ ದಿನಾಂಕದಂದು ವಿಶೇಷ ರೈಲು ಸಂಚರಲಿಸಲಿದೆ? ರೈಲು ಸಮಯ ಕುರಿತಾದ ಮಾಹಿತಿ ಇಲ್ಲಿದೆ.

Special Train: ದಸರಾ ಹಬ್ಬದ ನಿಮಿತ್ತ ಯಶವಂತಪುರ-ಬೆಳಗಾವಿ ನಡುವೆ ವಿಶೇಷ ರೈಲು
ಬೆಳಗಾವಿ ರೈಲು ನಿಲ್ದಾಣ
Follow us on

ಬೆಳಗಾವಿ, ಸೆಪ್ಟೆಂಬರ್​ 10: ದಸರಾ (Dasra) ಹಬ್ಬದಲ್ಲಿ ಸಾಲು ಸಾಲು ರಜೆ ಹಿನ್ನೆಲೆಯಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಳವಾಗಲಿದೆ. ಪ್ರಯಾಣಿಕರ ಅನುಕೂಲಕ್ಕಾಗಿ ನೈಋತ್ಯ ರೈಲ್ವೆ ವಲಯ (South Western Railway) ಬೆಂಗಳೂರಿನ ಯಶವಂತಪುರ-ಬೆಳಗಾವಿ (Yeshwanthpur-Belagavi) ನಡುವೆ ವಿಶೇಷ ರೈಲು ಓಡಿಸಲಿದೆ. ಯಾವ್ಯಾವ ದಿನಾಂಕದಂದು ವಿಶೇಷ ರೈಲು ಸಂಚರಲಿಸಲಿದೆ? ರೈಲು ಸಮಯ ಇಲ್ಲಿದೆ.

  • ರೈಲು ಸಂಖ್ಯೆ 06507 ಯಶವಂತಪುರ – ಬೆಳಗಾವಿ ವಿಶೇಷ ರೈಲು ಅಕ್ಟೋಬರ್​ 12 ರಂದು ಸಂಜೆ 6:15ಕ್ಕೆ ಯಶವಂತಪುರ ನಿಲ್ದಾಣದಿಂದ ಹೊರಟು ಮರುದಿನ ನಸುಕಿನ ಜಾವ 5 ಗಂಟೆಗೆ ಬೆಳಗಾವಿ ತಲುಪಲಿದೆ.
  • ರೈಲು ಸಂಖ್ಯೆ 06508 ಬೆಳಗಾವಿ – ಯಶವಂತಪುರ ವಿಶೇಷ ರೈಲು ಅಕ್ಟೋಬರ್​ 13 ರಂದು ಸಂಜೆ 5:30ಕ್ಕೆ ಬೆಳಗಾವಿಯಿಂದ ಹೊರಟು ಮರುದಿನ ನಸುಕಿನ ಜಾವ 4:30ಕ್ಕೆ ಯಶವಂತಪುರ ತಲುಪಲಿದೆ.

ಇದನ್ನೂ ಓದಿ: ಪ್ರಯಾಣಿಕರಿಗೆ ಗುಡ್ ನ್ಯೂಸ್: ಆಂಧ್ರದಿಂದ ತೆರಳುತ್ತಿದ್ದ ಈ ರೈಲು ಇನ್ನು ಬೆಂಗಳೂರಿಗೂ ಬರಲಿದೆ!

ಈ ರೈಲು ತುಮಕೂರು, ಅರಸಿಕೇರೆ, ಬೀರುರು, ದಾವಣಗೆರೆ, ಹರಿಹರ, ಹಾವೇರಿ, ಹುಬ್ಬಳ್ಳಿ, ಧಾರವಾಡ, ಅಳ್ನಾವರ, ಲೋಂಡಾ, ಖಾನಾಪುರ ನಿಲ್ದಾಣಗಳಲ್ಲಿ ನಿಲ್ಲುತ್ತದೆ. ಈ ರೈಲು ಒಂದು ಎಸಿ 2, ನಾಲ್ಕು ಎಸಿ 3, 13 ಸೆಕೆಂಡ್​ ಕ್ಲಾಸ್​ ಸ್ಲೀಪರ್​ ಕೋಚ್​, ಎರಡು ಸೆಕೆಂಡ್​ ಕ್ಲಾಸ್​ ಮತ್ತು ಎರಡು ಅಂಗವಿಕಲರಿಗಾಗಿ ಮೀಸಲಾದ ಕಂಪಾರ್ಟ್​​ಮೆಂಟ್​ ಹೊಂದಿದೆ. ​​

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 8:31 am, Tue, 10 September 24