ಬೆಳಗಾವಿ: ಶ್ರೀರಾಮಸೇನೆ(Sri Rama Sena) ಸಂಸ್ಥಾಪಕ ಪ್ರಮೋದ್ ಮುತಾಲಿಕ್(Pramod Muthalik) ಬೆಳಗಾವಿಯಲ್ಲಿಂದ ಸುದ್ದಿಗೋಷ್ಠಿ ನಡೆಸಿದ್ದು ನುಪೂರ ಶರ್ಮಾ(Nupur Sharma), ರೋಹಿತ್ ಚಕ್ರತೀರ್ಥಗೆ(Rohit Chakrathirtha) ಶ್ರೀರಾಮಸೇನೆ ಸಂಘಟನೆ ಸಂಪೂರ್ಣ ಬೆಂಬಲ ನೀಡುತ್ತೆ ಎಂದು ತಿಳಿಸಿದ್ದಾರೆ. ಅಲ್ಲದೆ ಇಬ್ಬರ ಭಾವಚಿತ್ರ ಹಿಡಿದು ಪ್ರಮೋದ್ ಮುತಾಲಿಕ್ ಬೆಂಬಲ ಸೂಚಿಸಿದ್ದಾರೆ. ಹಾಗೂ ನುಪೂರ್ ಶರ್ಮಾ ಸತ್ಯವನ್ನೇ ಹೇಳಿದ್ದಾರೆ, ಇರುವುದನ್ನೇ ಹೇಳಿದ್ದಾರೆ. ಬಿಜೆಪಿಯಿಂದ ನುಪೂರ್ ಶರ್ಮಾ ಉಚ್ಚಾಟಿಸಿರುವುದು ಖಂಡಿಸುತ್ತೇನೆ ಎಂದರು.
ಯಾರದೋ ಒತ್ತಡಕ್ಕೆ ಮಣಿದು ಉಚ್ಚಾಟಿಸಿರುವುದು ಅಕ್ಷಮ್ಯ ಅಪರಾಧ. ರಾಷ್ಟ್ರೀಯ ವಕ್ತಾರರಿಗೆ ಯವುದೋ ಒಂದು ಹೇಳಿಕೆ ಹಿನ್ನೆಲೆ ಉಚ್ಚಾಟನೆ ಮಾಡಿದ್ದು ಸರಿಯಲ್ಲ. ನೀವು ಅಧರ್ಮಿಯರು, ಅಸತ್ಯದವರು ಅಂತಾ ಬಿಜೆಪಿಗೆ ಹೇಳುತ್ತೇನೆ. ಮುಸ್ಲಿಂ ರಾಷ್ಟ್ರಗಳು ಭಾರತದ ವಿಚಾರದಲ್ಲಿ ಮೂಗು ತೂರಿಸುವ ಅಗತ್ಯವಿಲ್ಲ. ಪಾಕಿಸ್ತಾನದಲ್ಲಿ ಐದು ವರ್ಷದ ಅವಧಿಯಲ್ಲಿ 12 ಕೋಟಿಯಲ್ಲಿ 12 ಲಕ್ಷ ಹಿಂದೂಗಳು ಉಳಿದಿದ್ದಾರೆ. ಮುಸ್ಲಿಂ ರಾಷ್ಟ್ರಗಳಿಗೆ ಕೇಂದ್ರ ಸರ್ಕಾರ ಸರಿಯಾದ ಉತ್ತರ ಕೊಡಬೇಕು. ನುಪೂರ ಶರ್ಮಾಗೆ ಎನಾದ್ರೂ ಆದ್ರೆ ನಾವು ಸುಮ್ಮನೆ ಕೂಡುವುದಿಲ್ಲ. ಬೆಳಗಾವಿಯಲ್ಲಿ ನುಪೂರ ಶರ್ಮಾ ಪ್ರತಿಕೃತಿಯನ್ನ ಗಲ್ಲಿಗೇರಿಸಿದ್ದಾರೆ. ಬೆಳಗಾವಿ ಪೊಲೀಸರು ಏನು ಮಾಡುತ್ತಿದ್ದಾರೆ. ಸಿಸಿಕ್ಯಾಮರಾ ದೃಶ್ಯ ಆಧರಿಸಿ ಆರೋಪಿಗಳನ್ನು ಯಾಕೆ ಬಂಧಿಸಿಲ್ಲ. ಇದು ಸರ್ಕಾರದ ಬೇಜವಾಬ್ದಾರಿ ತೋರಿಸುತ್ತಿದೆ ಎಂದು ಪ್ರಮೋದ್ ಮುತಾಲಿಕ್ ಬಿಜೆಪಿ ಸರ್ಕಾರದ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ. ಇದನ್ನೂ ಓದಿ: Anushree: ರಮ್ಯಾ ಭೇಟಿ ಮಾಡಿ ‘ನೀವು ಯಾಕಿಷ್ಟು ಚಂದ’ ಎಂದು ಕೇಳಿದ ಆ್ಯಂಕರ್ ಅನುಶ್ರೀ
ರೋಹಿತ್ ಚಕ್ರತೀರ್ಥ ಅವರನ್ನ ಸಮಿತಿಯಿಂದ ಕೈಬಿಟ್ಟಿದ್ದು ಸರಿಯಲ್ಲ
ಇನ್ನು ರೋಹಿತ್ ಚಕ್ರತೀರ್ಥ ಅವರನ್ನ ಪಠ್ಯ ಪರಿಷ್ಕರಣಾ ಸಮಿತಿಯಿಂದ ತೆಗೆದ ವಿಚಾರಕ್ಕೆ ಸಂಬಂಧಿಸಿ ಪ್ರತಿಕ್ರಿಯೆ ನೀಡಿದ ಅವರು, ರೋಹಿತ್ ಚಕ್ರತೀರ್ಥ ಅವರನ್ನ ಸಮಿತಿಯಿಂದ ಕೈಬಿಟ್ಟಿದ್ದು ಸರಿಯಲ್ಲ. ನಿಜವಾದ ರಾಷ್ಟ್ರೀಯತೆ, ದೇಶ ಭಕ್ತಿಯ ಕ್ರಾಂತಿಕಾರಕ ಹಾಕಿದ್ರೇ ಇವರಿಗೆ ಯಾಕೆ ಉರಿಯುತ್ತಿದೆ. ಕೆಲವು ಲೇಖಕರು ನಮ್ಮ ಕವನ ಬೇಡಾ ಅಂದವರಿಗೆ ನಾಚಿಕೆಯಾಗಬೇಕು. ಹೆಡ್ಗೆವಾರ್ ಅವರ ಭಾಷಣ ಪಠ್ಯದಲ್ಲಿ ಹಾಕಿದ್ದೆ ಇವರಿಗೆ ಉರಿ. ಆರ್‌ಎಸ್‌ಎಸ್ ಸಂಸ್ಥಾಪಕನ ಹೆಸರು ಹಾಕಿದ್ರೇ ಕೋಮುವಾದ ಜಾತಿವಾದ ಅಂತಾರೆ. ಕೇಸರಿ ಅಂದ್ರೆ ತ್ಯಾಗ, ಭಕ್ತಿಯ ಪ್ರತೀಕ. ಇದನ್ನ ಕೆಟ್ಟು ಅಂತಾ ಬೆಂಬಲಿಸುವ ಬುದ್ದಿ ಜೀವಿಗಳನ್ನ, ಕಾಂಗ್ರೆಸ್ ನವರನ್ನ ಧಿಕ್ಕರಿಸಬೇಕು. ಬರಗೂರ ಅವರ ಅಧ್ಯಕ್ಷತೆಯಲ್ಲಿ ಸಾಕಷ್ಟು ಲೋಪಗಳಿದ್ರೂ ಎಲ್ಲರೂ ಬಾಯಿ ಮುಚ್ಚಿಕೊಂಡಿದ್ದರು.
ನೂರು ಸಲ ಸುಳ್ಳನ್ನ ಹೇಳಿ ಸತ್ಯ ಮಾಡುವ ಪ್ರಯತ್ನ ಮಾಡ್ತಿದ್ದಾರೆ. ಕೆಲವು ಸ್ವಾಮೀಜಿಗಳು ಇವರಿಗೆ ಸಾಥ್ ಕೊಡುವ ಕೆಲಸ ಮಾಡ್ತಿದ್ದಾರೆ. ಸಿಎಂ, ಶಿಕ್ಷಣ ಸಚಿವರು ಚರ್ಚೆ ಮಾಡೋಣ ಬನ್ನಿ ಅಂದ್ರೆ ಯಾರು ಬರಲಿಲ್ಲ. ಪಠ್ಯದಲ್ಲಿ ಕೆಲವು ಸಣ್ಣಪುಟ್ಟ ತಪ್ಪುಗಳು ಆಗಿರುತ್ತವೆ. ಇದರಲ್ಲಿ ಕೋಮುವಾದ ಇಲ್ಲ ರಾಷ್ಟ್ರೀಯ ವಾದ ದೇಶಭಕ್ತಿ ಇದೆ. ಮುಸ್ಲಿಂ ದಾಳಿಕೋರರನ್ನ ಪಠ್ಯದಲ್ಲಿ ಕಾಂಗ್ರೆಸ್ ನವರು ವೈಭವೀಕರಣ ಮಾಡಿದ್ದಾರೆ. ಕಾಂಗ್ರೆಸ್ ನವರಿಗೆ ಪಠ್ಯಪುಸ್ತಕದ ಬಗ್ಗೆ ಮಾತನಾಡಲು ನೈತಿಕತೆ ಇಲ್ಲ. ದೇಶಭಕ್ತಿ, ಹಿಂದುತ್ವವನ್ನ, ಆರ್‌ಎಸ್‌ಎಸ್ ನ ಕಾಂಗ್ರೆಸ್ ವಿರೋಧ ಮಾಡ್ತಿದೆ. ಹೋರಾಟ ಮಾಡುವ ಸ್ವಾಮೀಜಿಗಳಿಗೆ ಕೈ ಮುಗಿದು ಮನವಿ ಮಾಡ್ತೀನಿ ಎಂದರು. ಇದನ್ನೂ ಓದಿ: ಪ್ರವಾದಿ ಬಗ್ಗೆ ನೂಪುರ್ ಶರ್ಮಾರ ಆಕ್ಷೇಪಾರ್ಹ ಹೇಳಿಕೆ ಖಂಡಿಸಿ ದೆಹಲಿ ಜಾಮಾ ಮಸೀದಿ ಬಳಿ ಬೃಹತ್ ಪ್ರತಿಭಟನೆ
ಕಾಶ್ಮೀರಿ ಮುಸ್ಲಿಂರನ್ನ ಟಾರ್ಗೆಟ್ ಮಾಡಿ ಎನ್‌ಕೌಂಟರ್ ಮಾಡಬೇಕು
ಕಾಶ್ಮೀರದಲ್ಲಿ ಒಂದೇ ವಾರದಲ್ಲಿ 9 ಹಿಂದೂಗಳ ಕೊಲೆಯಾಗಿದೆ. ಟಾರ್ಗೆಟ್ ಮಾಡಿ ಶಿಕ್ಷಕಿ, ಬ್ಯಾಂಕ್ ಮ್ಯಾನೇಜರ್ ಕೊಂದಿದ್ದಾರೆ. ಕಾಶ್ಮೀರಿ ಮುಸ್ಲಿಂರನ್ನ ಟಾರ್ಗೆಟ್ ಮಾಡಿ ಎನ್‌ಕೌಂಟರ್ ಮಾಡಬೇಕು. ಕೇಂದ್ರ ಸರ್ಕಾರ ಈ ವಿಚಾರದಲ್ಲಿ ಫೇಲ್ ಆಗಿದೆ. 9ನೇ ಬಾರಿ ಕಾಶ್ಮೀರಿ ಹಿಂದುಗಳು ಅಲ್ಲಿಂದ ವಲಸೆ ಹೋಗ್ತಿದ್ದಾರೆ. ಕಾಶ್ಮೀರಿ ಹಿಂದುಗಳಿಗೆ ಸರ್ಕಾರ ಸಂಪೂರ್ಣ ರಕ್ಷಣೆ ಕೊಡಬೇಕು. 100 ಕೋಟಿ ಹಿಂದುಗಳು ಕಾಶ್ಮೀರಿ ಹಿಂದುಗಳ ಜತೆಗೆ ಇದ್ದೇವೆ. ಕಾಶ್ಮೀರಿ ಹಿಂದುಗಳಿಗೆ ಗನ್ ಲೈಸೆನ್ಸ್ ನೀಡುವಂತೆ ಮುತಾಲಿಕ್ ಒತ್ತಾಯಿಸಿದ್ದಾರೆ.
ಶಾಹಿ ಮಸೀದಿ ಅಷ್ಟೇ ಅಲ್ಲಾ, ಮೂವತ್ತು ಸಾವಿರ ದೇವಸ್ಥಾನ ಒಡೆದು ಮಸೀದಿ ಕಟ್ಟಿದ್ದಾರೆ ಅನ್ನೋ ದಾಖಲೆ ಇದೆ. ಮೂವತ್ತು ಸಾವಿರ ದೇವಸ್ಥಾನ ಕಾನೂನು ಅಡಿ ವಶಕ್ಕೆ ತೆಗೆದುಕೊಳ್ಳುತ್ತೇವೆ ಎಂದರು ಇದೇ ವೇಳೆ 90ಚದರ ಅಡಿ ಜಾಗಕ್ಕೆ ಯಾಕೆ ಜಗಳ ಬಿಟ್ಟು ಬಿಡಿ ಅಂತಾ ಮಾಜಿ ಶಾಸಕ ಫಿರೋಜ್ ಸೇಠ್ ಹೇಳಿಕೆ ವಿಚಾರಕ್ಕೆ ಸಂಬಂಧಿಸಿ ಮಾತನಾಡಿದ ಮುತಾಲಿಕ್, 90ಚದರ ಅಡಿಯಲ್ಲಿ ಒಂದು ಇಂಚು ನಾವು ಜಾಗ ಬಿಟ್ಟು ಕೊಡುವುದಿಲ್ಲ. ದೇವಸ್ಥಾನದ ಜಾಗ ಜಾಗವೇ. ಫಿರೋಜ್ ಸೇಠ್ ಅವರೇ ನೀವು ಎಷ್ಟು ಜಾಗ ಲಪಟಾಯಿಸಿರಿ ಬೆಳಗಾವಿ ಜನರಿಗೆ ಬಿಟ್ಟು ಕೊಡಿ. ಶಾಹಿ ಮಸೀದಿ ಕುರಿತು ಶಾಸಕ ಅಭಯ್ ಪಾಟೀಲ್ ಧ್ವನಿ ಎತ್ತಿರುವುದಕ್ಕೆ ನಮ್ಮ ಬೆಂಬಲ ಇದೆ ಎಂದರು
ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
ಬೆಳಗಾವಿಯ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 3:13 pm, Fri, 10 June 22