ಶಾಲಾ ಬಸ್​ಗೆ ಟಿಪ್ಪರ್ ಡಿಕ್ಕಿ; 40ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಗಾಯ

| Updated By: ಕಿರಣ್ ಹನುಮಂತ್​ ಮಾದಾರ್

Updated on: Jun 14, 2024 | 8:37 PM

ಬೆಳಗಾವಿ (Belagavi) ತಾಲೂಕಿನ ಭೂತರಾಮನಹಟ್ಟಿ ಬಳಿಯ ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಶಾಲಾ ಬಸ್​ಗೆ ಟಿಪ್ಪರ್ ಡಿಕ್ಕಿಯಾಗಿ(Accident) 40ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಗಾಯವಾದ ಘಟನೆ ನಡೆದಿದೆ. ಗಾಯಾಳು ವಿದ್ಯಾರ್ಥಿಗಳನ್ನು ಬೆಳಗಾವಿ ‌ಬಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಕಾಕತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಶಾಲಾ ಬಸ್​ಗೆ ಟಿಪ್ಪರ್ ಡಿಕ್ಕಿ; 40ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಗಾಯ
ಬೆಳಗಾವಿಯಲ್ಲಿ ಶಾಲಾ ಬಸ್​ಗೆ ಟಿಪ್ಪರ್ ಡಿಕ್ಕಿ
Follow us on

ಬೆಳಗಾವಿ, ಜೂ.14:  ಶಾಲಾ ಬಸ್​ಗೆ ಟಿಪ್ಪರ್ ಡಿಕ್ಕಿಯಾಗಿ(Accident) 40ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಗಾಯವಾದ ಘಟನೆ ಬೆಳಗಾವಿ (Belagavi) ತಾಲೂಕಿನ ಭೂತರಾಮನಹಟ್ಟಿ ಬಳಿಯ ರಾಷ್ಟ್ರೀಯ ಹೆದ್ದಾರಿ 4ರಲ್ಲಿ ನಡೆದಿದೆ. ಕೊಲ್ಹಾಪುರದಿಂದ ಪ್ರವಾಸಕ್ಕೆಂದು ಬಂದಿದ್ದ ಈ ವಿದ್ಯಾರ್ಥಿಗಳು, ರಾಣಿ ಚೆನ್ನಮ್ಮ ಪ್ರಾಣಿ ಸಂಗ್ರಹಾಲಯಕ್ಕೆ ಭೇಟಿ ನೀಡಿದ್ದರು. ಬಳಿಕ ಪ್ರಾಣಿ ಸಂಗ್ರಹಾಲಯದಿಂದ ವಾಪಾಸಾಗುವಾಗ ಈ ದುರ್ಘಟನೆ ನಡೆದಿದೆ. ಗಾಯಾಳು ವಿದ್ಯಾರ್ಥಿಗಳನ್ನು ಬೆಳಗಾವಿ ‌ಬಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಕಾಕತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ವಾಹನ ಡಿಕ್ಕಿಯಾಗಿ ಜಿಂಕೆ ಸಾವು

ಕೊಡಗು: ಮಡಿಕೇರಿ-ಕುಶಾಲನಗರ ನಡುವೆ ಆನೆಕಾಡು ಬಳಿ ರಾಷ್ಟ್ರೀಯ ಹೆದ್ದಾರಿ 257ರಲ್ಲಿ ಎಸ್​ಯುವಿ ಕಾರು ಡಿಕ್ಕಿಯಾಗಿ 11 ವರ್ಷದ ಜಿಂಕೆ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ನಡೆದಿದೆ. ಕಾರು ಚಲಿಸುತ್ತಿದ್ದ ವೇಳೆ ಸಡನ್​ ಆಗಿ ಎದುರಿಗೆ ಜಿಂಕೆ  ಬಂದು ಈ ದುರ್ಘಟನೆ ನಡೆದಿದೆ. ಸ್ಥಳಕ್ಕೆ ಅರಣ್ಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಇದನ್ನೂ ಓದಿ:ಮದ್ಯ ತುಂಬಿದ ಲಾರಿ ಪಲ್ಟಿ ಕೇಸ್​ಗೆ ಬಿಗ್ ಟ್ವಿಸ್ಟ್; ಅಪಘಾತ ಎಂದು ನಾಟಕ ಮಾಡಿದ್ನಾ ಚಾಲಕ?

ಬಳ್ಳಾರಿಯಲ್ಲಿ ಮೋಸ್ಟ್ ವಾಂಟೆಂಡ್ ಸರಗಳ್ಳರ ಬಂಧನ

ಬಳ್ಳಾರಿ: ಇಬ್ಬರು ಮೋಸ್ಟ್ ವಾಂಟೆಂಡ್ ಸರಗಳ್ಳರನ್ನ ಬಳ್ಳಾರಿ ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಮಂಜು ಹಾಗೂ ರಾಮದಾಸ ಎಂಬುವವರನ್ನ ಬಂಧಿಸಿ, 17 ಲಕ್ಷ ಮೌಲ್ಯದ 295 ಗ್ರಾಂ ಚಿನ್ನದ ಸರ ಹಾಗೂ ಒಂದು ಬೈಕ್​ ವಶಕ್ಕೆ ಪಡೆದಿದ್ದಾರೆ. ಮಿಕ್ಸರ್ ರಿಪೇರಿ ಸೋಗಿನಲ್ಲಿ ಬಂದು ಮಹಿಳೆಯರನ್ನ ಟಾರ್ಗೆಟ್ ಮಾಡಿ ಚಿನ್ನದ ಸರ ಎಗರಿಸುತ್ತಿದ್ದರು. ಸಿಸಿ ಟಿವಿಯಲ್ಲಿ ಸರಗಳ್ಳತನದ ದೃಶ್ಯ ಸೆರೆಯಾದರೂ ಪದೇ ಪದೇ ತಪ್ಪಿಸಿಕೊಳ್ಳುತ್ತಿದ್ದರು. ಕೊನೆಗೂ ಬಳ್ಳಾರಿ ಗ್ರಾಮೀಣ ಠಾಣೆಯ ಪೊಲೀಸರ ಕೈಗೆ  ಚಾಲಾಕಿಗಳು ಸಿಕ್ಕಿಬಿದ್ದಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:06 pm, Fri, 14 June 24