ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ: MES ಮಹಾಮೇಳಕ್ಕೆ ಪೊಲೀಸ್ ಆಯುಕ್ತರಿಂದ ಅನುಮತಿ ನಿರಾಕರಣೆ

ಕಳೆದ ವರ್ಷವೂ ಮಹಾಮೇಳಕ್ಕೆ ನಡೆಯಂದತೆ ಸರ್ಕಾರ ತಡೆದಿತ್ತು. ಹಾಗಿದ್ದರೂ ಈ ಬಾರಿ ಪುನಃ ಮಹಾಮೇಳ ನಡೆಸಲು ಪ್ಲ್ಯಾನ್​ ಮಾಡಿತ್ತು. ಇದಕ್ಕೆ ಬೆಳಗಾವಿ ಪೊಲೀಸ್ ಆಯುಕ್ತ ಸಿದ್ದರಾಮಪ್ಪ ಅವರು ಬ್ರೇಕ್​ ಹಾಕಿದ್ದಾರೆ. ಇದರ ಜೊತೆಗೆ ನಾಳೆ ಬೆಳಗ್ಗೆ 6 ಗಂಟೆಯಿಂದ ಡಿಸೆಂಬರ್ 5 ರ ಸಂಜೆ 6 ಗಂಟೆ ವರೆಗೂ ಬೆಳಗಾವಿ ನಗರದಲ್ಲಿ ನಿಷೇಧಾಜ್ಞೆ ಜಾರಿಗೆ ಆದೇಶಿಸಿದ್ದಾರೆ.

ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ: MES ಮಹಾಮೇಳಕ್ಕೆ ಪೊಲೀಸ್ ಆಯುಕ್ತರಿಂದ ಅನುಮತಿ ನಿರಾಕರಣೆ
ಎಂಇಎಸ್​ ಮಹಾಮೇಳಕ್ಕೆ ಬ್ರೇಕ್​ ಹಾಕಿದ ಬೆಳಗಾವಿ ಪೊಲೀಸ್​ ಆಯುಕ್ತ
Edited By:

Updated on: Dec 03, 2023 | 2:53 PM

ಬೆಳಗಾವಿ, ಡಿ.03: ಬೆಳಗಾವಿಯಲ್ಲಿ ನಾಳೆ(ಡಿ.04)ಯಿಂದ ಚಳಿಗಾಲದ ಅಧಿವೇಶನ(Winter Session) ಆರಂಭ ಹಿನ್ನೆಲೆ ಆ ದಿನವೇ ಮಹಾಮೇಳ ನಡೆಸಲು ಎಂಇಎಸ್(MES) ಮುಂದಾಗಿದ್ದು, ಇದಕ್ಕೆ ಬೆಳಗಾವಿ(Belagavi) ಪೊಲೀಸ್ ಆಯುಕ್ತ ಸಿದ್ದರಾಮಪ್ಪ  ಅವರು ಅನುಮತಿ ನಿರಾಕರಣೆ ಮಾಡಿದ್ದಾರೆ. ಜೊತೆಗೆ ಎಂಇಎಸ್ ಪುಂಡರ ಪುಂಡಾಟಕ್ಕೆ ಬ್ರೇಕ್ ಹಾಕಲು ನಗರದ ನಾಲ್ಕು ಠಾಣಾ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿ ಮಾಡಿ ಆದೇಶಿಸಿದ್ದಾರೆ.

ಕಳೆದ ವರ್ಷವೂ ಮಹಾಮೇಳಕ್ಕೆ ಬ್ರೇಕ್​; ನಿಷೇಧಾಜ್ಞೆ ಜಾರಿ

ಇನ್ನು ಕಳೆದ ವರ್ಷವೂ ಮಹಾಮೇಳಕ್ಕೆ ನಡೆಯಂದತೆ ಸರ್ಕಾರ ತಡೆದಿತ್ತು. ಹಾಗಿದ್ದರೂ ಈ ಬಾರಿ ಪುನಃ ಮಹಾಮೇಳ ನಡೆಸಲು ಪ್ಲ್ಯಾನ್​ ಮಾಡಿತ್ತು. ಇದಕ್ಕೆ ಬೆಳಗಾವಿ ಪೊಲೀಸ್ ಆಯುಕ್ತ ಸಿದ್ದರಾಮಪ್ಪ ಅವರು ಬ್ರೇಕ್​ ಹಾಕಿದ್ದಾರೆ. ಇದರ ಜೊತೆಗೆ ನಾಳೆ(ಡಿ.04) ಬೆಳಗ್ಗೆ 6 ಗಂಟೆಯಿಂದ ಡಿಸೆಂಬರ್ 5 ರ ಸಂಜೆ 6 ಗಂಟೆ ವರೆಗೂ ಬೆಳಗಾವಿ ನಗರದಲ್ಲಿ ನಿಷೇಧಾಜ್ಞೆ ಜಾರಿಗೆ ಆದೇಶ ಹೊರಡಿಸಿದ್ದಾರೆ.

ಇದನ್ನೂ ಓದಿ:ಬೆಳಗಾವಿ ಅಧಿವೇಶನ: ಇಂಗ್ಲಿಷ್ ಬ್ಯಾನರ್​ಗಳಿಗೆ ಮಸಿ ಬಳಿದ ಕರವೇ, ಎಂಇಎಸ್ ಮಹಾಮೇಳ ವಿರೋಧಿಸಿ ಪ್ರತಿಭಟನೆ

ಈ ಸ್ಥಳಗಳನ್ನು ಹೊರತುಪಡಿಸಿ ಅನುಮತಿ ಪಡೆದ ಸಂಸ್ಥೆಗಳಿಗೆ ಶಾಂತಿಯುತ ಪ್ರತಿಭಟನೆಗೆ ಅವಕಾಶ

*ಬೆಳಗಾವಿ ಟಿಳಕವಾಡಿ ಪೊಲೀಸ್ ಠಾಣೆ ವ್ಯಾಪ್ತಿಯ ವ್ಯಾಕ್ಸಿನ್ ಡಿಪೋ.
*ಕ್ಯಾಂಪ್ ಪೊಲೀಸ್ ಠಾಣಾ ವ್ಯಾಪ್ತಿಯ ಧರ್ಮವೀರ ಸಂಭಾಜಿ ವೃತ್ತ.
*ಶಹಾಪುರ ಪೊಲೀಸ್ ಠಾಣಾ ವ್ಯಾಪ್ತಿಯ ಶಿವಾಜಿ ಉದ್ಯಾನವನ.
*ಮಾರ್ಕೆಟ್ ಪೊಲೀಸ್ ಠಾಣಾ ವ್ಯಾಪ್ತಿ ಸಂಭಾಜಿ ಉದ್ಯಾನದಲ್ಲಿ ನಿಷೇಧಾಜ್ಞೆ.

ಇದನ್ನು ಹೊರತಾಗಿ ಜಿಲ್ಲಾಡಳಿತ, ಪೊಲೀಸ್ ಇಲಾಖೆಯಿಂದ ಅನುಮತಿ ಪಡೆದಿರುವ ಸಂಘ, ಸಂಸ್ಥೆಗಳಿಗೆ ಶಾಂತಿಯುತ ಪ್ರತಿಭಟನೆ ನಡೆಸಲು ಅವಕಾಶ ನೀಡಲಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ