ಬೆಳಗಾವಿ ಗೋಲ್ಡ್ ಸ್ಮಂಗ್ಲಿಂಗ್ ಪ್ರಕರಣಕ್ಕೆ ಹೊಸ ತಿರುವು

ಸದ್ಯ ಎಪ್ರಿಲ್ 16 ಕ್ಕೆ ಕೋಟ್೯ನಿಂದ ಕಾರ್ ರಿಲೀಸ್ ಆಗಿತ್ತು. ಆದರೆ ಕಾರ್ನಲ್ಲಿದ್ದ ದೊಡ್ಡ ಪ್ರಮಾಣದ ಚಿನ್ನ ಕಾಣೆಯಾಗಿತ್ತು. ಹೀಗಾಗಿ ತಿಲಕ್ ಪೂಜಾರಿ ಐಜಿಪಿ ರಾಘವೇಂದ್ರ ಸಹಾಸ್​ಗೆ ದೂರು ನೀಡಿದ್ದರು. ಪೊಲೀಸ್ ವಶದಲ್ಲಿದ್ದ ಕಾರ್​ನಿಂದ ಬಂಗಾರ ಕದ್ದಿರುವವರು ಯಾರು ಎನ್ನುವುದು ದೊಡ್ಡ ಪ್ರಶ್ನೆಯಾಗಿತ್ತು.

ಬೆಳಗಾವಿ ಗೋಲ್ಡ್ ಸ್ಮಂಗ್ಲಿಂಗ್ ಪ್ರಕರಣಕ್ಕೆ ಹೊಸ ತಿರುವು
ಹುಬ್ಬಳ್ಳಿಯ ನಿವೃತ್ತ ಡಿವೈಎಸ್ಪಿ ಪುತ್ರ ಕಿರಣ್

Updated on: May 29, 2021 | 12:47 PM

ಹುಬ್ಬಳ್ಳಿ: ರಾಜ್ಯವನ್ನೆ ಬೆಚ್ಚಿ ಬಿಳಿಸಿರುವ ಬೆಳಗಾವಿ ಗೋಲ್ಡ್ ಸ್ಮಂಗ್ಲಿಂಗ್ ಪ್ರಕರಣ ಇದೀಗ ಮತ್ತೊಂದು ತಿರುವು ಪಡೆದುಕೊಂಡಿದೆ. ಕುಂದಾನಗರಿಯಿಂದ ಕದ್ದ 4.9 ಕೆಜಿ ಚಿನ್ನ ವಾಣಿಜ್ಯ ನಗರಿಯಲ್ಲಿ ಮಾರಾಟವಾಗಿದೆ ಎನ್ನುವ ಮಾಹಿತಿ ಸದ್ಯ ಸಿಐಡಿ ಅಧಿಕಾರಿಗಳಿಗೆ ಲಭಿಸಿದೆ. ಹೀಗಾಗಿ ಪ್ರಕರಣ ದಿನೇ ದಿನೇ ರೋಚಕ ತಿರುವು ಪಡೆದುಕೊಳ್ಳುತ್ತಿದೆ. ಮಂಗಳೂರು ಮೂಲದ ತಿಲಕ್ ಪೂಜಾರಿ ಎನ್ನುವವರು ತಮ್ಮ ಸ್ನೇಹಿತರ ಮೂಲಕ ಎರ್ಟಿಗಾ ಕಾರಿನಲ್ಲಿ ಮಹಾರಾಷ್ಟ್ರಕ್ಕೆ ಗೋಲ್ಡ್ ಸ್ಮಗ್ಲಿಂಗ್ ಮಾಡುತ್ತಿದ್ದರು. ಆದರೆ ಜನವರಿ ತಿಂಗಳಲ್ಲಿ ಬೆಳಗಾವಿಯ ಯಮಕನಮರಡಿ ಪೊಲೀಸರು ಕಾರನ್ನು ವಶಕ್ಕೆ ಪಡೆದಿದ್ದರು. ಅದು ಪಕ್ಕಾ ಮಾಹಿತಿಯ ಮೇರೆಗೆ ಹುಬ್ಬಳ್ಳಿಯ ಕಿರಣ್ ವೀರನಗೌಡ ಎಂಬಾತ ಪೊಲೀಸರಿಗೆ ಮಾಹಿತಿ ನೀಡಿ ಕಾರು ಹಿಡಿಸಿದ್ದ. ಬಳಿಕ ಕಾರಿನಲ್ಲಿದ್ದ 4.9 ಕೆಜಿ ಚಿನ್ನವನ್ನು ಎಸ್ಕೇಪ್ ಮಾಡಿದ್ದರು.

ಸದ್ಯ ಎಪ್ರಿಲ್ 16 ಕ್ಕೆ ಕೋಟ್೯ನಿಂದ ಕಾರ್ ರಿಲೀಸ್ ಆಗಿತ್ತು. ಆದರೆ ಕಾರ್​ನಲ್ಲಿದ್ದ ದೊಡ್ಡ ಪ್ರಮಾಣದ ಚಿನ್ನ ಕಾಣೆಯಾಗಿತ್ತು. ಹೀಗಾಗಿ ತಿಲಕ್ ಪೂಜಾರಿ ಐಜಿಪಿ ರಾಘವೇಂದ್ರ ಸಹಾಸ್​ಗೆ ದೂರು ನೀಡಿದ್ದರು. ಪೊಲೀಸ್ ವಶದಲ್ಲಿದ್ದ ಕಾರ್​ನಿಂದ ಬಂಗಾರ ಕದ್ದಿರುವವರು ಯಾರು ಎನ್ನುವುದು ದೊಡ್ಡ ಪ್ರಶ್ನೆಯಾಗಿತ್ತು. ಅಲ್ಲದೇ ಸ್ವತಃ ಪೊಲೀಸರೇ ಚಿನ್ನ ಕದ್ದಿದ್ದಾರೆ ಎನ್ನುವ ಸಂಶಯ ಮೂಡಿತ್ತು. ಹೀಗಾಗಿ ಪ್ರಕರಣ ಸಿಐಡಿಗೆ ವರ್ಗಾವಣೆಯಾಗಿತ್ತು.

ಮಹತ್ವದ ಸುಳಿವು.

ಪ್ರಕರಣದ ಬೆನ್ನು ಬಿದ್ದಿರುವ ಸಿಐಡಿ ಮೊನ್ನೆ ಮೇ 26 ರಂದು ದೂರು ದಾಖಲಿಸಿಕೊಂಡು ತನಿಖೆ ನಡೆಸುತ್ತಿದೆ. ಆ ಬೆನ್ನಲ್ಲೆ ಕದ್ದ ಚಿನ್ನ ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಮಾರಾಟವಾಗಿದೆ ಎನ್ನುವ ಮಾಹಿತಿ ಸಿಐಡಿ ಅಧಿಕಾರಿಗಳಿಗೆ ಸಿಕ್ಕಿದೆ. ಗುರುವಾರದಿಂದ ಹುಬ್ಬಳ್ಳಿಗೆ ಆಗಮಿಸಿರುವ ಸಿಐಡಿ ಅಧಿಕಾರಿ ಮಹತ್ವದ ಮಾಹಿತಿ ಕಲೆ ಹಾಕಿದ್ದಾರೆ.

ಪ್ರಕರಣದಲ್ಲಿ ಪ್ರಮುಖ ಆರೋಪ ಎದುರಿಸುತ್ತಿರುವ ಹುಬ್ಬಳ್ಳಿಯ ನಿವೃತ್ತ ಡಿವೈಎಸ್​ಪಿ ಪುತ್ರ ಕಿರಣ್ ವೀರನಗೌಡನೇ ಮಧ್ಯವರ್ತಿಯಾಗಿ ಬಂಗಾರ ಮಾರಾಟ ಮಾಡಿಸಿದ್ದಾನೆ ಎನ್ನುವ ಅನುಮಾನ ದಟ್ಟವಾಗಿದೆ. ಅದು ಹುಬ್ಬಳ್ಳಿಯ ಜೆಡಿ ಎನ್ನುವ ವ್ಯಕ್ತಿಗೆ ಬಂಗಾರ ಮಾರಾಟ ಮಾಡಲಾಗಿದ್ದು, ಆತ ಈಗಾಗಲೇ 1.10 ಕೋಟಿ ರೂಪಾಯಿ ನೀಡಿದ್ದಾನಂತೆ. ಹೀಗಾಗಿ ಮಧ್ಯವರ್ತಿ ಹಾಗೂ ಚಿನ್ನ ಖರೀದಿ ಮಾಡಿದ ವ್ಯಕ್ತಿಯ ಬೆನ್ನು ಬಿದ್ದಿದ್ದಾರೆ.

ಇದನ್ನೂ ಓದಿ

ತುಮಕೂರು ಕೊವಿಡ್ ಕೇರ್ ಸೆಂಟರ್​ನಲ್ಲಿ ಇಸ್ಪೀಟ್ ಆಟ; ದುಡ್ಡು ಕಟ್ಟಿ ಜೂಜು ಆಡುತ್ತಿರುವ ಸೋಂಕಿತರು

ಜೂಜುಕೋರರ ಬಗ್ಗೆ ಮಾಹಿತಿ ನೀಡಿದವನನ್ನೇ ಥಳಿಸಿದ ವಿಜಯಪುರ ಪೊಲೀಸರು

(Belgaum Gold Smuggling case has taken a new turn in hubli)

Published On - 12:07 pm, Sat, 29 May 21