109 ರ ಗಡಿ ದಾಟಿದೆ ಬ್ಲ್ಯಾಕ್ ಫಂಗಸ್ ಸೋಂಕಿತರ ಸಂಖ್ಯೆ; ಹುಬ್ಬಳ್ಳಿಯ ಕಿಮ್ಸ್​ನಲ್ಲಿ ರೋಗಿಗಳ ಪರದಾಟ

ಹುಬ್ಬಳ್ಳಿಯ ಕಿಮ್ಸ್​ನಲ್ಲಿ ರಾಜ್ಯದಲ್ಲೆ ಅತಿ ಹೆಚ್ಚು ಬ್ಲ್ಯಾಕ್ ಫಂಗಸ್ ಸೋಂಕಿತರು ಇದ್ದಾರೆ. ಅಂದರೆ, ಈ ಸೋಂಕಿಗೆ ಒಳಗಾದವರ ಸಂಖ್ಯೆ ಶತಕ ದಾಟಿದೆ. ಉತ್ತರ ಕರ್ನಾಟಕ ಮತ್ತು ಕಲ್ಯಾಣ ಕರ್ನಾಟಕದಿಂದಲೂ ಈ ಕಾಯಿಲೆಗೆ ಚಿಕಿತ್ಸೆ ಪಡೆಯಲು ದೂರದ ಹುಬ್ಬಳ್ಳಿಯ ವೈದ್ಯಕೀಯ ವಿಜ್ಞಾನ ಸಂಸ್ಥೆಗೆ ದಾಖಲಾಗುತ್ತಿದ್ದಾರೆ. ಸದ್ಯ ಹುಬ್ಬಳ್ಳಿಯಲ್ಲಿ 109 ಬ್ಲ್ಯಾಕ್ ಫಂಗಸ್ ಸೊಂಕಿತರ ಪೈಕಿ ಇಬ್ಬರು ಸಾವನ್ನಪ್ಪಿದ್ದಾರೆ.

109 ರ ಗಡಿ ದಾಟಿದೆ ಬ್ಲ್ಯಾಕ್ ಫಂಗಸ್ ಸೋಂಕಿತರ ಸಂಖ್ಯೆ; ಹುಬ್ಬಳ್ಳಿಯ ಕಿಮ್ಸ್​ನಲ್ಲಿ ರೋಗಿಗಳ ಪರದಾಟ
ಕಿಮ್ಸ್ ಆಸ್ಪತ್ರೆ
Follow us
preethi shettigar
|

Updated on: May 29, 2021 | 12:44 PM

ಹುಬ್ಬಳ್ಳಿ: ಕೊರೊನಾ ಎರಡನೇ ಅಲೆ ದೇಶದೆಲ್ಲೇಡೆ ಹಬ್ಬಿದ್ದು, ಸಾವು – ನೋವಿನ ಸಂಖ್ಯೆಯಲ್ಲಿ ಏರಿಕೆ ಕಾಣುತ್ತಿದೆ. ಹೀಗಾಗಿ ಸರ್ಕಾರ ಲಾಕ್​ಡೌನ್ ಘೋಷಿಸಿದ್ದು, ಪರಿಸ್ಥಿತಿಯನ್ನು ಹತೋಟಿಗೆ ತರಲು ಪ್ರಯತ್ನಿಸುತ್ತಿದೆ. ಹೀಗಿರುವಾಗಲೇ ಕೊರೊನಾದಿಂದ ಗುಣಮುಖರಾದವರಲ್ಲಿ ಬ್ಲ್ಯಾಕ್ ಫಂಗಸ್ ಎಂಬ ಮತ್ತೊಂದು ಕಾಯಿಲೆ ಶುರುವಾಗಿದ್ದು, ಒಂದಾದ ಮೇಲೆ ಒಂದರಂತೆ ಜನ ಸಂಕಷ್ಟಕ್ಕೆ ಸಿಲುಕುವ ಹಾಗೆ ಆಗಿದೆ. ಅದರಲ್ಲೂ ಬ್ಲ್ಯಾಕ್ ಫಂಗಸ್ ಕಾಟಕ್ಕೆ ಹುಬ್ಬಳ್ಳಿಯಲ್ಲಿ ಆತಂಕ ಶುರುವಾಗಿದ್ದು, ಈ ಸೊಂಕಿಗೆ ನೀಡಲಾಗುವ ಚುಚ್ಚುಮದ್ದೇ ಸಿಗದೇ ನೂರಾರು ಸೊಂಕಿತರು ಒದ್ದಾಡುವಂತಾಗಿದೆ.

ಹುಬ್ಬಳ್ಳಿಯ ಕಿಮ್ಸ್​ನಲ್ಲಿ ರಾಜ್ಯದಲ್ಲೆ ಅತಿ ಹೆಚ್ಚು ಬ್ಲ್ಯಾಕ್ ಫಂಗಸ್ ಸೋಂಕಿತರು ಇದ್ದಾರೆ. ಅಂದರೆ, ಈ ಸೋಂಕಿಗೆ ಒಳಗಾದವರ ಸಂಖ್ಯೆ ಶತಕ ದಾಟಿದೆ. ಉತ್ತರ ಕರ್ನಾಟಕ ಮತ್ತು ಕಲ್ಯಾಣ ಕರ್ನಾಟಕದಿಂದಲೂ ಈ ಕಾಯಿಲೆಗೆ ಚಿಕಿತ್ಸೆ ಪಡೆಯಲು ದೂರದ ಹುಬ್ಬಳ್ಳಿಯ ವೈದ್ಯಕೀಯ ವಿಜ್ಞಾನ ಸಂಸ್ಥೆಗೆ ದಾಖಲಾಗುತ್ತಿದ್ದಾರೆ. ಸದ್ಯ ಹುಬ್ಬಳ್ಳಿಯಲ್ಲಿ 109 ಬ್ಲ್ಯಾಕ್ ಫಂಗಸ್ ಸೊಂಕಿತರ ಪೈಕಿ ಇಬ್ಬರು ಸಾವನ್ನಪ್ಪಿದ್ದಾರೆ.

ಇನ್ನು ಉಳಿದ ನಾಲ್ಕೈದು ಮಂದಿ ಡಿಸ್ಚಾರ್ಜ್ ಅಗಿದ್ದು, ಬರೋಬ್ಬರಿ 100 ಜನ ಕಿಮ್ಸ್​ನಲ್ಲಿ ಚಿಕಿತ್ಸೆ ಪಡೆಯಲು ಜೀವ ಕೈಯಲ್ಲಿ ಹಿಡಿದಿಟ್ಟು ಕಾಯುತ್ತಿದ್ದಾರೆ. ಈ ಸೊಂಕಿಗಂತಾನೇ ಬಳಸಲಾಗುವ ಚುಚ್ಚುಮದ್ದು ಸದ್ಯ ಕಿಮ್ಸ್​ನಲ್ಲಿ ಲಭ್ಯವಿಲ್ಲ. ಸರಕಾರ ಇನ್ನೂ ನಾಳೆ, ನಾಡಿದ್ದು, ಎಂದುಕೊಂಡು ಕಾಲ ಹರಣ ಮಾಡುತ್ತಿದೆ. ಈ ಇಂಜೇಕ್ಷನ್ ಇಲ್ಲದೇ ಬ್ಲಾಕ್ ಫಂಗಸ್‌ಗೆ ಚಿಕಿತ್ಸೆಯೇ ಅಪೂರ್ಣ ಎನ್ನುತ್ತಿದ್ದಾರೆ ಎಂದು ರೋಗಿಯ ಸಂಬಂಧಿ ಜ್ಯೋತಿನಟರಾಜ ತಿಳಿಸಿದ್ದಾರೆ.

ಕಿಮ್ಸ್​ನಲ್ಲಿ ತೀರಾ ಕಣ್ಣಿನ ಸಮಸ್ಯೆ ಇದ್ದೋರಿಗೆ ಕಣ್ಣಿನ ವಿಭಾಗದ ತಜ್ಞರು ಮತ್ತು ಈ ಎನ್‌ಟಿ ವಿಭಾಗದ ವೈದ್ಯರು ಸೇರಿ ಶಸ್ತ್ರ ಚಿಕಿತ್ಸೆ ಮಾಡುತ್ತಿದ್ದಾರೆ. ನಿತ್ಯ 4-5 ಆಪರೇಷನ್‌ಗಳು ನಡೆಯುತ್ತಿವೆ. ಆದರೆ ಚುಚ್ಚುಮದ್ದು ನಿಡದೇ ಚಿಕಿತ್ಸೆನೇ ಅಪೂರ್ಣ. ಹೀಗಾಗಿ ದೂರದ ಜಿಲ್ಲೆಗಳಿಂದ ಬಂದು ಹುಬ್ಬಳ್ಳಿಯ ಕಿಮ್ಸ್​ನಲ್ಲಿ ದಾಖಲಾಗಿರುವ ರೋಗಿಗಳ ಆರ್ತನಾದ ಹೇಳತೀರದು. ಬಳ್ಳಾರಿ ಜಿಲ್ಲೆಯ ಹಡಗಲಿಯಿಂದಲೂ ಬ್ಲಾಕ್ ಫಂಗಸ್‌ಗೆ ಚಿಕಿತ್ಸೆ ಪಡೆಯಲು ಬರೋಬ್ಬರಿ 15 ಮಂದಿ ಸೊಂಕಿತರು ಕಿಮ್ಸ್​ನಲ್ಲಿ ದಾಖಲಾಗಿದ್ದಾರೆ. ಸರಕಾರ ಇಂಜೇಕ್ಷನ್ ಬೇಗನೇ ಕಳಿಸದೇ ಇದ್ದರೆ ಸಾಕಷ್ಟು ರೋಗಿಗಳ ಪ್ರಾಣ ಸಂಕಷ್ಟಕ್ಕೆ ಗುರಿಯಾಗುವ ಸಾಧ್ಯತೆ ಇದೆ ಎಂದು ಕಿಮ್ಸ್ ನಿರ್ದೇಶಕ ಡಾ..ರಾಮಲಿಂಗಪ್ಪ ತಿಳಿಸಿದ್ದಾರೆ.

ಮೊದಲಿಗೆ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯನ್ನು ಬ್ಲ್ಯಾಕ್ ಫಂಗಸ್ ಚಿಕಿತ್ಸೆಗಾಗಿ ಪ್ರಾದೇಶಿಕ ಎಂದು ಗುರುತಿಸಲಾಗಿತ್ತು. ಈದೀಗ ಸರಕಾರ ತನ್ನ ಮಾರ್ಗಸೂಚಿಯನ್ನು ಬದಲಾವಣೆ ಮಾಡಿದೆ. ಈಗ ಬ್ಲ್ಯಾಕ್ ಫಂಗಸ್ ರೋಗಿಗಳು ಅವರವರ ಜಿಲ್ಲೆಯ ಜಿಲ್ಲಾಸ್ಪತ್ರೆ ಅಥವಾ ಅಲ್ಲೆ ಸಮೀಪವಿರುವ ತಾಲೂಕಾಸ್ಪತ್ರೆಗೆ ದಾಖಲಾಗಬಹುದಾಗಿದೆ. ಸರಕಾರದಿಂದ ಅಲ್ಲೆ ಲಭ್ಯವಿರುವ ವೈದ್ಯರಿಂದಲೇ ಈ ಸೋಂಕಿಗೆ ಚಿಕಿತ್ಸೆ ಕೊಡಿಸಲಾಗುತ್ತದೆ ಎಂದು ತಿಳಿಸಲಾಗಿದೆ.

ವಿಚಿತ್ರ ಅಂದ್ರೇ ಹುಬ್ಬಳ್ಳಿಯ ಕಿಮ್ಸ್‌ನಂತಹ ದೊಡ್ಡ ಆಸ್ಪತ್ರೆಗೆ ದಾಖಲಾದ್ರೇನೇ ಪರಿಸ್ಥಿತಿ ಹೀಗಿದೆ. ಇನ್ನೂ ತಾಲೂಕಾಸ್ಪತ್ರೆಗೆ ದಾಖಲಾದರೆ, ಜೀವ ಉಳಿಸಿಕೊಂಡು ಮನೆ ಸೇರಬಹುದಾ ಎಂದು ಜನ ಪ್ರಶ್ನಸುತ್ತಿದ್ದಾರೆ. ಇಂಜೇಕ್ಷನ್‌ ಬರೋತನಕ ಕಿಮ್ಸ್​ನಲ್ಲಿ ದಾಖಲಾಗಿರುವ ಬ್ಲ್ಯಾಕ್ ಫಂಗಸ್ ರೋಗಿಗಳು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ ಎನ್ನುವುದು ವಿಷಾದಕರ ಸಂಗತಿಯಾಗಿದೆ.

ಇದನ್ನೂ ಓಡಿ:

ಶಿವಮೊಗ್ಗ ಜಿಲ್ಲಾ ಆಸ್ಪತ್ರೆಯಲ್ಲಿ ಬ್ಲ್ಯಾಕ್ ಫಂಗಸ್‌ಗೆ ಶಸ್ತ್ರಚಿಕಿತ್ಸೆ ಯಶಸ್ವಿ; ಸೋಂಕಿತ ಅಪಾಯದಿಂದ ಪಾರು

ಶಿವಮೊಗ್ಗದಲ್ಲಿ ಬ್ಲ್ಯಾಕ್​ ಫಂಗಸ್​ಗೆ ನಾಲ್ವರು ಬಲಿ; ಚಿಕಿತ್ಸೆಗಾಗಿ ಮೆಗ್ಗಾನ್​ ಆಸ್ಪತ್ರೆಯಲ್ಲಿ ಜನರ ಪರದಾಟ