ಶಿವಮೊಗ್ಗದಲ್ಲಿ ಬ್ಲ್ಯಾಕ್ ಫಂಗಸ್ಗೆ ನಾಲ್ವರು ಬಲಿ; ಚಿಕಿತ್ಸೆಗಾಗಿ ಮೆಗ್ಗಾನ್ ಆಸ್ಪತ್ರೆಯಲ್ಲಿ ಜನರ ಪರದಾಟ
ಕೊರೊನಾದಿಂದ ಗುಣಮುಖರಾಗಿ ಇನ್ನೇನು ಯುದ್ಧ ಗೆದ್ದ ಸಂತಸದಲ್ಲಿದ್ದವರಿಗೆ ಬ್ಲ್ಯಾಕ್ ಫಂಗಸ್ ಬಂದು ವಕ್ಕರಿಸುತ್ತಿದೆ. ಈಗಾಗಲೇ ರಾಜ್ಯ ಸರಕಾರವು ಫಂಗಸ್ ಚಿಕಿತ್ಸೆಗೆಂದು ಶಿವಮೊಗ್ಗದ ಮೆಡಿಕಲ್ ಕಾಲೇಜ್ಗೆ 106 ಡೋಸ್ ಔಷಧವನ್ನು ನೀಡಿದ್ದು, ಸದ್ಯ ಪರಿಸ್ಥಿತಿ ಸುಧಾರಣೆ ಮಾಡಬೇಕಿದೆ.
ಶಿವಮೊಗ್ಗ: ಕೊರೊನಾದ ಎರಡನೇ ಅಲೆಯಿಂದಾಗಿ ಇಡೀ ದೇಶವೇ ತತ್ತರಿಸಿಹೋಗಿದೆ. ಅದರಲ್ಲೂ ಮಲೆನಾಡಿನ ಭಾಗದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದ್ದು, ಸಾವಿನ ಸಂಖ್ಯೆಯಲ್ಲಿ ಕೂಡ ಏರಿಕೆ ಕಂಡು ಬಂದಿದೆ. ಹೀಗಿರಯವಾಲೇ ಶಿವಮೊಗ್ಗಾದಲ್ಲಿ ಬ್ಲ್ಯಾಕ್ ಫಂಗಸ್ ಕಾಣಿಸಿಕೊಂಡಿದ್ದು, ಈಗಾಗಲೇ ಬ್ಲ್ಯಾಕ್ ಫಂಗಸ್ ನಾಲ್ವರು ಸಾವನ್ನಪ್ಪಿದ್ದಾರೆ. ಇನ್ನು 8 ಜನರಲ್ಲಿ ಬ್ಲ್ಯಾಕ್ ಫಂಗಸ್ ಕಾಣಿಸಿಕೊಂಡಿದೆ.
ಕೊರೊನಾ ಸೋಂಕಿಗೆ ಮಲೆನಾಡಿನ ನಿತ್ಯ 1000 ಜನರು ಒಳಪಡುತ್ತಿದ್ದಾರೆ. ಈ ನಡುವೆ 10 ರಿಂದ 20 ಜನರು ನಿತ್ಯ ಕೊರೊನಾಗೆ ಬಲಿಯಾಗುತ್ತಿದ್ದಾರೆ. ಕೊರೊನಾ ನಿಯಂತ್ರಣಕ್ಕೆ ಜಿಲ್ಲಾಡಳಿತ ಮತ್ತು ಆರೋಗ್ಯ ಇಲಾಖೆಯ ಹರಸಾಹಸ ಪಡುತ್ತಿದೆ. ಇನ್ನೂ ಶಿವಮೊಗ್ಗ ಮೆಗ್ಗಾನ್ ಜಿಲ್ಲಾಸ್ಪತ್ರೆಯಲ್ಲಿ ಕೊರೊನಾದಿಂದ ಜನರನ್ನು ಬದುಕಿಸುವುದೇ ವೈದ್ಯರಿಗೆ ದೊಡ್ಡ ಸವಾಲು ಆಗಿದೆ.
ಮೆಗ್ಗಾನ್ ಜಿಲ್ಲಾಸ್ಪತ್ರೆಯಲ್ಲಿ ನಿತ್ಯ ನೂರಾರು ಕೊರೊನಾ ಸೋಂಕಿತರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಚಿಕಿತ್ಸೆ ನಡುವೆ ಅನೇಕರು ಕೊರೊನಾಗೆ ಬಲಿಯಾಗುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಶಿವಮೊಗ್ಗ ಜಿಲ್ಲಾಸ್ಪತ್ರೆಗೆ ಚಿಕ್ಕಮಗಳೂರು, ದಾವಣಗೆರೆ, ಚಿತ್ರದುರ್ಗ, ಹಾವೇರಿ, ಉತ್ತರ ಕನ್ನಡ ಜಿಲ್ಲೆಯ ಜನರು ಚಿಕಿತ್ಸೆಗೆಂದು ಬರುತ್ತಾರೆ. ಹೀಗೆ ಹೊರ ಜಿಲ್ಲೆ ಮತ್ತು ಶಿವಮೊಗ್ಗ ಜಿಲ್ಲೆ ಕೊರೊನಾ ಸೋಂಕಿತರಿಗೆ ಚಿಕಿತ್ಸೆ ನೀಡುವುದು ಮೆಗ್ಗಾನ್ ಜಿಲ್ಲಾಸ್ಪತ್ರೆಯಲ್ಲಿ ಬಹು ದೊಡ್ಡ ಸವಾಲು ಆಗಿದೆ. ಇನ್ನು ಕೆಲ ದಿನಗಳಿಂದ ಅನೇಕರು ಬ್ಲ್ಯಾಕ್ ಫಂಗಸ್ ಚಿಕಿತ್ಸೆಗೆಂದು ಮೆಗ್ಗಾನ್ ಜಿಲ್ಲಾಸ್ಪತ್ರೆಗೆ ಬರುತ್ತಿದ್ದಾರೆ.
ಈ ನಡುವೆ ಚಿತ್ರದುರ್ಗದಿಂದ ಬ್ಲ್ಯಾಕ್ ಫಂಗಸ್ ಚಿಕಿತ್ಸೆಗೆಂದು ಬಂದಿದ್ದ ವ್ಯಕ್ತಿಯ ಕುಟುಂಬಸ್ಥರು ಚಿಕಿತ್ಸೆಗೆಂದು ಆಸ್ಪತ್ರೆಯಲ್ಲಿ ಎಲ್ಲಾ ವೈದ್ಯರನ್ನು ಭೇಟಿಯಾಗಿದ್ದಾರೆ. ಆದರೆ ಯಾರು ಇವರಿಗೆ ಸೂಕ್ತವಾಗಿ ಸ್ಪಂಧಿಸಿಲ್ಲ. ತಮ್ಮ ಬೇಸರನ್ನು ಬ್ಲ್ಯಾಕ್ ಫಂಗಸ್ ರೋಗಿಯು ಟವಿ9 ಮುಂದೆ ಹೇಳಿಕೊಂಡಿದ್ದಾರೆ. ಕಳೆದ ಎರಡು ಮೂರು ದಿನಗಳಿಂದ ಬ್ಲ್ಯಾಕ್ ಫಂಗಸ್ ಚಿಕಿತ್ಸೆಗೆಂದು ಆಸ್ಪತ್ರೆಯಲ್ಲಿ ಓಡಾಡುತ್ತಿದ್ದೇವೆ. ಆದರೆ ಇನ್ನೂ ಔಷಧಿ ಬಂದಿಲ್ಲ. ಹಾಗೇ ಹೀಗೆ ಅಂತಾ ಇಲ್ಲಿಯ ವೈದ್ಯರು ಸರಿಯಾಗಿ ಸ್ಪಂಧಿಸುತ್ತಿಲ್ಲವೆಂದು ಫಂಗಸ್ ರೋಗಿಯ ಸಂಬಂಧಿಕರು ಆರೋಪಿಸಿದ್ದಾರೆ.
ಕಳೆದ ಒಂದು ವಾರಿದಂದ ಶಿವಮೊಗ್ಗ ಜಿಲ್ಲೆಯಲ್ಲಿ ಬ್ಲ್ಯಾಕ್ ಫಂಗಸ್ ಕೇಸ್ಗಳು ಹೆಚ್ಚಾಗುತ್ತಿವೆ. ಜಿಲ್ಲೆಯಲ್ಲಿ ಈಗಾಗಲೇ ಇಬ್ಬರು ಬ್ಲ್ಯಾಕ್ ಫಂಗಸ್ಗೆ ಬಲಿಯಾಗಿದ್ದಾರೆ. ಮತ್ತಿತ್ತರು ಶಂಕಿತ ಬ್ಲ್ಯಾಕ್ ಫಂಗಸ್ ರೋಗಿಗಳು ಮೃತಪಟ್ಟಿದ್ದಾರೆ. ಒಟ್ಟು ನಾಲ್ವರು ಬ್ಲ್ಯಾಕ್ ಫಂಗಸ್ ಕಾಟಕ್ಕೆ ಜೀವ ಕಳೆದುಕೊಂಡಿದ್ದಾರೆ. ಮೆಗ್ಗಾನ್ ಜಿಲ್ಲಾಸ್ಪತ್ರೆಯಲ್ಲಿ 8 ಜನರಿಗೆ ಬ್ಲ್ಯಾಕ್ ಫಂಗಸ್ ಧೃಡಪಟ್ಟಿದೆ. ಇನ್ನೂ 14 ಜನರಿಗೆ ಬ್ಲ್ಯಾಕ್ ಫಂಗಸ್ ಇರುವ ಶಂಕೆ ವ್ಯಕ್ತವಾಗಿದೆ. ಸದ್ಯ ಈ ಎಲ್ಲರಿಗೂ ಶಿವಮೊಗ್ಗ ಮೆಗ್ಗಾನ್ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಸಿಮ್ಸ್ನ ನಿರ್ದೇಶಕರಾದ ಡಾ. ಓ.ಎಸ್. ಸಿದ್ದಪ್ಪ ತಿಳಿಸಿದ್ದಾರೆ.
ಕೊರೊನಾದಿಂದ ಗುಣಮುಖರಾಗಿ ಇನ್ನೇನು ಯುದ್ಧ ಗೆದ್ದ ಸಂತಸದಲ್ಲಿದ್ದವರಿಗೆ ಬ್ಲ್ಯಾಕ್ ಫಂಗಸ್ ಬಂದು ವಕ್ಕರಿಸುತ್ತಿದೆ. ಈಗಾಗಲೇ ರಾಜ್ಯ ಸರಕಾರವು ಫಂಗಸ್ ಚಿಕಿತ್ಸೆಗೆಂದು ಶಿವಮೊಗ್ಗದ ಮೆಡಿಕಲ್ ಕಾಲೇಜ್ಗೆ 106 ಡೋಸ್ ಔಷಧವನ್ನು ನೀಡಿದೆ. ಈ ನಡುವೆ ತಜ್ಞ ವೈದ್ಯರ ತಂಡವು ಬ್ಲ್ಯಾಕ್ ಫಂಗಸ್ಗೆ ಚಿಕಿತ್ಸೆ ಆರಂಭಿಸಿದೆ. ಆದರೆ ಇನ್ನೂ ಬ್ಲ್ಯಾಕ್ ಫಂಗಸ್ ಚಿಕಿತ್ಸಾ ವಿಧಾನ ಹೇಗೆ ಎನ್ನುವ ಸ್ಪಷ್ಟತೆ ವೈದ್ಯರು ಗೌಪ್ಯವಾಗಿ ಇಟ್ಟುಕೊಂಡಿದ್ದಾರೆ.
ಸದ್ಯ ಬ್ಲ್ಯಾಕ್ ಫಂಗಸ್ ಕರಿ ಮಾರಿಯನ್ನು ಓಡಿಸುವುದಕ್ಕೆ ವೈದ್ಯರು ಈಗ ಹೊಸ ಟಾಸ್ಕ್ಗೆ ಮುಂದಾಗಿದ್ದಾರೆ. ಕೊರೊನಾ ನಿಯಂತ್ರಣವೇ ಸದ್ಯ ಜಿಲ್ಲಾಡಳಿತಕ್ಕೆ ದೊಡ್ಡ ಸವಾಲಾಗಿತ್ತು. ಈ ನಡುವೆ ಬ್ಲ್ಯಾಕ್ ಫಂಗಸ್ ಕೂಡ ಕಾಡುತ್ತಿದೆ. ಈ ಬ್ಲ್ಯಾಕ್ ಫಂಗಸ್ಗೆ ಉತ್ತಮ ಚಿಕಿತ್ಸೆ ನೀಡಿ, ಅವರನ್ನು ಈ ದೊಡ್ಡ ಕಾಯಿಲೆಯಿಂದ ಉಳಿಸುವ ಹೊಸ ಜವಾಬ್ದಾರಿಯು ಮೆಗ್ಗಾನ್ ಜಿಲ್ಲಾಸ್ಪತ್ರೆಯ ವೈದ್ಯರ ತಂಡದ ಮೇಲಿದೆ…
ಇದನ್ನೂ ಓದಿ:
ಶಿವಮೊಗ್ಗ ಜಿಲ್ಲೆಯ ಎರಡು ವಾರ್ಡ್ ಸೀಲ್ಡೌನ್ ; ಮಲೆನಾಡು ಭಾಗದ ಜನರಲ್ಲಿ ಹೆಚ್ಚಿದ ಆತಂಕ