AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೊರೊನಾಗೆ ನವವಧು ಬಲಿ; ಮದುವೆಯಾದ ನಾಲ್ಕೇ ದಿನಕ್ಕೆ ಮಸಣ ಸೇರಿದ ಮಗಳನ್ನು ಕಂಡು ಕಣ್ಣೀರಿಟ್ಟ ಕುಟುಂಬಸ್ಥರು

ಕಳೆದ ಮೂರು ದಿನಗಳಿಂದ ಶಿವಮೊಗ್ಗ ಹೊರವಲಯದ ಮಲವಗೊಪ್ಪದ ಖಾಸಗಿ ಕ್ಲಿನಿಕ್​ನಲ್ಲಿ ಚಿಕಿತ್ಸೆಗೆಂದು ಪೂಜಾಳನ್ನು ಕೆರೆದುಕೊಂಡು ಹೋಗಿದ್ದೇವು. ಮದುವೆಯಾಗಿ ಕೇವಲ ಮೂರನೇ ದಿನಕ್ಕೆ ಅವಳು ಕ್ಲಿನಿಕ್​ಗೆ ಹೋಗಿದ್ದಳು. ಈ ನಡುವೆ ಖಾಸಗಿ ಕ್ಲಿನಿಕ್ ವೈದ್ಯರು ಪೂಜಾಳ ಆರೋಗ್ಯದಲ್ಲಿ ಏರುಪೇರು ಆಗುತ್ತಿದ್ದಂತೆ ಕೊವಿಡ್ ಪರೀಕ್ಷೆ ಮಾಡಬೇಕಿತ್ತು. ಆದರೆ ಅವರು ಮೂರು ದಿನಗಳ ಕಾಲ ಕೇವಲ ಇಂಜೇಕ್ಷನ್ ಮತ್ತು ಮಾತ್ರೆ ಕೊಟ್ಟು ಕಾಲಹರಣ ಮಾಡಿದ್ದಾರೆ ಎಂದು ಪೂಜಾಳ ತಾಯಿ ಆರೋಪ ಮಾಡಿದ್ದಾರೆ.

ಕೊರೊನಾಗೆ ನವವಧು ಬಲಿ; ಮದುವೆಯಾದ ನಾಲ್ಕೇ ದಿನಕ್ಕೆ ಮಸಣ ಸೇರಿದ ಮಗಳನ್ನು ಕಂಡು ಕಣ್ಣೀರಿಟ್ಟ ಕುಟುಂಬಸ್ಥರು
ಪೂಜಾ (24)
preethi shettigar
|

Updated on: May 29, 2021 | 11:58 AM

Share

ಶಿವಮೊಗ್ಗ: ಕೊರೊನಾ ಎರಡನೇ ಅಲೆ ತೀವ್ರವಾಗಿದ್ದು, ಸಾವು ನೋವಿನ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ. ಅದರಲ್ಲೂ ಮಲೆನಾಡಿನಲ್ಲಿ ಸೋಂಕಿಗೀಡಾಗುತ್ತಿರವವರ ಸಂಖ್ಯೆ ಇತ್ತೀಚೆಗೆ ಹೆಚ್ಚಾಗಿದೆ. ಹೀಗಿರುವಾಗಲೇ ನಿನ್ನೆ (ಮೇ 28) ನವ ವಧು ಒಬ್ಬರು ಸೋಂಕಿಗೆ ಬಲಿಯಾಗಿದ್ದು, ಶಿವಮೊಗ್ಗಾದಲ್ಲಿ ಆತಂಕದ ಛಾಯೆ ಆವರಿಸಿದೆ. ಮದುವೆಯಾಗಿ ನಾಲ್ಕು ದಿನವಾಗಿದ್ದಷ್ಟೇ, ಇನ್ನೇನು ನೂತನ ಸಂಸಾರ ಸಾಗಿಸಬೇಕು ಎನ್ನುವಷ್ಟರಲ್ಲಿಯೇ ಕೊರೊನಾಗೆ 24 ವರ್ಷದ ನವ ವಿವಾಹಿತೆಯನ್ನು ಪ್ರಾಣಬಿಟ್ಟಿದ್ದಾರೆ.

ತಂದೆ -ತಾಯಿಗೆ ಒಬ್ಬಳೆ ಮಗಳಾದ ಪೂಜಾಳನ್ನು ಇದೇ ಸೋಮವಾರದಂದು ಶಿವಮೊಗ್ಗ ತಾಲೂಕಿನ ನಿಧಿಗೆ ಗ್ರಾಮದ ಮಹೇಶ್ ಜೊತೆ ವಿವಾಹ ಮಾಡಲಾಗಿತ್ತು. ಕೊರೊನಾ ಹೆಚ್ಚಳದಿಂದಾಗಿ ಕೊವಿಡ್ ನಿಯಮದಂತೆ ಸರಳವಾಗಿ ವಿವಾಹ ಮಾಡಿದ್ದಾರೆ. ಮರುದಿನ ಮಂಗಳವಾರ ಗಂಡನ ಮನೆಗೆ ಹೋಗಿ ಸಂಪ್ರದಾಯದಂತೆ ದೀಪ ಹಚ್ಚಿ ಪೂಜಾ ವಾಪಸ್ ತನ್ನ ತವರು ಮನೆಗೆ ಪೂಜಾ ಬಂದಿದ್ದಳು.

ಬುಧವಾರ ಸ್ವಲ್ಪ ಪೂಜಾಳಿಗೆ ಸುಸ್ತಾಗಿದೆ. ನಗರದ ಹೊರವಲಯದ ಮಲವಗೊಪ್ಪ ಖಾಸಗಿ ಕ್ಲಿನಿಕ್​ನಲ್ಲಿ ಚಿಕಿತ್ಸೆ ಪಡೆದಿದ್ದಾಳೆ. ಬಳಿಕ ಮತ್ತೆ ಆರೋಗ್ಯದಲ್ಲಿ ಏರುಪೇರು ಆಗಿದೆ. ಪುನಃ ಅದೇ ಕ್ಲಿನಿಕ್​ಗೆ ಹೋಗಿ ಚಿಕಿತ್ಸೆ ಪಡೆದುಕೊಂಡು ವಾಪಸ್ ಆಗಿದ್ದಾಳೆ. ತುಂಬಾ ಅಶಕ್ತ ಆಗಿದ್ದರಿಂದ ನಿನ್ನೆ ಅದೇ ಕ್ಲಿನಿಕ್​ನಲ್ಲಿ ಗ್ಲುಕೋಸ್ ಹಾಕುವುದಕ್ಕೆ ವೈದ್ಯರು ತೀರ್ಮಾನ ಮಾಡಿದ್ದರು. ಅದರಂತೆ ಡ್ರೀಪ್ ಹಾಕಿ ಕೆಲವೇ ಕ್ಷಣದಲ್ಲಿ ಪೂಜಾಳ ಆರೋಗ್ಯದಲ್ಲಿ ಏರುಪೇರು ಆಗಿದ್ದು, ವೈದ್ಯರು ಪೂಜಾಳ ಸ್ಥಿತಿ ಗಂಭೀರವಾಗಿದೆ. ಹೀಗಾಗಿ ಕೂಡಲೇ ಮೆಗ್ಗಾನ್ ಜಿಲ್ಲಾಸ್ಪತ್ರೆಗೆ ಕರೆದುಕೊಂಡು ಹೋಗಲು ಸೂಚಿಸಿದ್ದಾರೆ. ಕೇವಲ ಆರು ಕಿ.ಮೀ ಇರುವ ಮೆಗ್ಗಾನ್ ಆಸ್ಪತ್ರೆಗೆ ಪೂಜಾಳನ್ನು ಅಂಬುಲೇನ್ಸ್​ನಲ್ಲಿ ಕರೆತರುವ ಸಮಯದಲ್ಲಿ ಮಾರ್ಗ ಮಧ್ಯದಲ್ಲೇ ಪೂಜಾ ಪ್ರಾಣಬಿಟ್ಟಿದ್ದಾಳೆ.

ಕಳೆದ ಮೂರು ದಿನಗಳಿಂದ ಶಿವಮೊಗ್ಗ ಹೊರವಲಯದ ಮಲವಗೊಪ್ಪದ ಖಾಸಗಿ ಕ್ಲಿನಿಕ್​ನಲ್ಲಿ ಚಿಕಿತ್ಸೆಗೆಂದು ಪೂಜಾಳನ್ನು ಕೆರೆದುಕೊಂಡು ಹೋಗಿದ್ದೇವು. ಮದುವೆಯಾಗಿ ಕೇವಲ ಮೂರನೇ ದಿನಕ್ಕೆ ಅವಳು ಕ್ಲಿನಿಕ್​ಗೆ ಹೋಗಿದ್ದಳು. ಈ ನಡುವೆ ಖಾಸಗಿ ಕ್ಲಿನಿಕ್ ವೈದ್ಯರು ಪೂಜಾಳ ಆರೋಗ್ಯದಲ್ಲಿ ಏರುಪೇರು ಆಗುತ್ತಿದ್ದಂತೆ ಕೊವಿಡ್ ಪರೀಕ್ಷೆ ಮಾಡಬೇಕಿತ್ತು. ಆದರೆ ಅವರು ಮೂರು ದಿನಗಳ ಕಾಲ ಕೇವಲ ಇಂಜೇಕ್ಷನ್ ಮತ್ತು ಮಾತ್ರೆ ಕೊಟ್ಟು ಕಾಲಹರಣ ಮಾಡಿದ್ದಾರೆ. ಕೊನೆ ಘಳಿಗೆಯಲ್ಲಿ ಸರಿಯಾಗಿ ಚಿಕಿತ್ಸೆ ನೀಡದೇ ಬೇರೆ ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ಸೂಚಿಸಿದ್ದಾರೆ ಎಂದು ಪೂಜಾಳ ತಾಯಿ ಆರೋಪ ಮಾಡಿದ್ದಾರೆ.

ಒಟ್ಟಾರೆ ಇರುವ ಒಬ್ಬಳೇ ಮಗಳ ಮದುವೆಯನ್ನು ತುಂಬಾ ಖುಷಿ ಖುಷಿಯಾಗಿ ಮಾಡಿದ್ದ ಹೆತ್ತವರಿಗೆ ಕೊರೊನಾ ಮರೆಯಲಾರದ ಪೆಟ್ಟು ಕೊಟ್ಟಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಮದುವೆಯಾಗಿ ನಾಲ್ಕೇ ದಿನಕ್ಕೆ ಪೂಜಾ ಕೊರೊನಾಗೆ ಬಲಿಯಾಗಿದ್ದು ಮಾತ್ರ ವಿಪರ್ಯಾಸ.

ಇದನ್ನೂ ಓದಿ:

ಹದಿನೈದು ದಿನದ ಅಂತರದಲ್ಲಿ ಬೆಳಗಾವಿಯ ಒಂದೇ ಕುಟುಂಬದ ಮೂವರು ಸಹೋದರರು ಕೊರೊನಾಗೆ ಬಲಿ

ಶಿವಮೊಗ್ಗದಲ್ಲಿ ಮನಕಲಕುವ ಘಟನೆ: ಹೆಂಡತಿಯನ್ನು ಕೆಎಎಸ್ ಓದಿಸಿ, ತಹಸೀಲ್ದಾರ್ ಮಾಡಿಸಿದ್ದ ಪತಿ ಕೊರೊನಾಗೆ ಬಲಿ