AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹೆಂಡತಿಗೆ ಸೋಂಕು ಬಂದು ಆಸ್ಪತ್ರೆಗೆ ಶಿಫ್ಟ್.. ಭಯದಿಂದ ಜಮೀನಿನಲ್ಲಿ ನೇಣು ಬಿಗಿದುಕೊಂಡು ಪತಿ ಆತ್ಮಹತ್ಯೆ

ಪತ್ನಿ ರಶ್ಮಿಗೆ ಮೇ 27 ರಂದು ಕೊವಿಡ್ ಸೋಂಕು ದೃಢಪಟ್ಟಿತ್ತು. ಮೃತ ರಾಜುಗೆ ಕೋವಿಡ್ ವರದಿ ನೆಗಟಿವ್ ಬಂದಿತ್ತು. ಸೋಂಕಿತ ಪತ್ನಿಯನ್ನು ದೇವರಕೊಟ್ಟ ಕೋವಿಡ್ ಕೇಂದ್ರಕ್ಕೆ ಶಿಫ್ಟ್​​ ಮಾಡಿದ್ದರು. ಇದರಿಂದ ಗಾಬರಿಗೊಂಡು ಪತಿ ರಾಜು ಜಮೀನಿನಲ್ಲಿ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಹೆಂಡತಿಗೆ ಸೋಂಕು ಬಂದು ಆಸ್ಪತ್ರೆಗೆ ಶಿಫ್ಟ್.. ಭಯದಿಂದ ಜಮೀನಿನಲ್ಲಿ ನೇಣು ಬಿಗಿದುಕೊಂಡು ಪತಿ ಆತ್ಮಹತ್ಯೆ
ಹೆಂಡತಿಗೆ ಸೋಂಕು ಬಂದು ಆಸ್ಪತ್ರೆಗೆ ಶಿಫ್ಟ್.. ಭಯದಿಂದ ಜಮೀನಿನಲ್ಲಿ ನೇಣು ಬಿಗಿದುಕೊಂಡು ಪತಿ ಆತ್ಮಹತ್ಯೆ
ಸಾಧು ಶ್ರೀನಾಥ್​
|

Updated on:May 29, 2021 | 12:28 PM

Share

ಚಿತ್ರದುರ್ಗ: ಈ ಸುದ್ದಿ ಇತರರಿಗೆ ಒಂದು ಪಾಠವಾಗಬೇಕು. ಕೇವಲ ಕೊರೊನಾ ಸೋಂಕು ಬಂದಿದೆ ಎಂದು ಯಾರೇ ಆಗಲಿ ಅನಾಹುತಕಾರಿ ಕೃತ್ಯಕ್ಕೆ ಕೈಹಾಕಬಾರದು. ಆತ್ಮಹತ್ಯೆಯಂತಹ ಆಲೋಚನೆ ಮಾಡಲೇಬಾರದು. ತಮ್ಮ ಪ್ರೀತಿ ಪಾತ್ರರಾದವರನ್ನು ಕಳೆದುಕೊಂಡಾಗ ಯಾರಿಗೇ ಆಗಲಿ ಸಹಿಸಲಸಾಧ್ಯವಾದ ನೋವು ಬರುತ್ತದೆ. ಆದರೆ ಭವಿಷ್ಯದಲ್ಲಿ ಆಶಾಭಾವ ಹೊಂದಿರಬೇಕು. ಇದಕ್ಕೆಲ್ಲಾ ಧೈರ್ಯವೊಂದೇ ಪರಿಹಾರ. ತನಗೇ ಆಗಲಿ, ತನ್ನ ಪ್ರೀತಿ ಪಾತ್ರರಿಗೇ ಆಗಲಿ ತೊಂದರೆ ಎದುರಾಗಿದೆ ಎಂದಾದಾಗ.. ಏನೇ ಆಗಲಿ ಧೈರ್ಯದಿಂದ ಎದುರಿಸುವೆ ಎಂಬ ದೃಢ ಮನಸ್ಸಿನೊಂದಿಗೆ, ಸ್ಥಿತಪ್ರಜ್ಞರಂತೆ ವರ್ತಿಸಬೇಕು. ದಯವಿಟ್ಟು ಯಾರೂ ಇಂತಹ ಅನಾಹುತಗಳಿಗೆ ಕೈಹಾಕಬೇಡಿ. ಇದು ಟಿವಿ9 ಕಳಕಳಿ.

ತನ್ನ ಪತ್ನಿಗೆ ಕೊರೊನಾ ಸೋಂಕು ತಗುಲಿದೆ ಎಂದು ಆ ಭಯದಿಂದಲೇ ವ್ಯಕ್ತಿಯೊಬ್ಬ ತನ್ನ ಜಮೀನಿನಲ್ಲಿ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ವರದಿಯಾಗಿದೆ. ಪತ್ನಿಗೆ ಕೊರೊನಾ ಹಿನ್ನೆಲೆ ಭಯದಿಂದ ಜಿಲ್ಲೆಯ ಹಿರಿಯೂರು ತಾಲೂಕಿನ ರಂಗನಾಥಪುರ ಗ್ರಾಮದಲ್ಲಿ ರಾಜು (32) ನೇಣಿಗೆ ಶರಣಾಗಿದ್ದಾರೆ. ಹಿರಿಯೂರು ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಪತಿರಾಯ ‘ನೆಗಟೀವ್’: ಪತ್ನಿ ರಶ್ಮಿಗೆ ಮೇ 27 ರಂದು ಕೊವಿಡ್ ಸೋಂಕು ದೃಢಪಟ್ಟಿತ್ತು. ಮೃತ ರಾಜುಗೆ ಕೋವಿಡ್ ವರದಿ ನೆಗಟಿವ್ ಬಂದಿತ್ತು. ಸೋಂಕಿತ ಪತ್ನಿಯನ್ನು ದೇವರಕೊಟ್ಟ ಕೋವಿಡ್ ಕೇಂದ್ರಕ್ಕೆ ಶಿಫ್ಟ್​​ ಮಾಡಿದ್ದರು. ಇದರಿಂದ ಗಾಬರಿಗೊಂಡು ಪತಿ ರಾಜು ಜಮೀನಿನಲ್ಲಿ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

(husband commits suicide as wife contract coronavirus in chitradurga district)

‘ಪತ್ನಿಗೂ ವೆಂಟಿಲೇಟರ್ ಕೊಡಿಸುವ ಯೋಗ್ಯತೆ ಇಲ್ಲ‘ ಅಸಹಾಯಕತೆ ತೋಡಿಕೊಂಡ ಮೈಸೂರು ಡಿಹೆಚ್‌ಒ ಅಮರನಾಥ್

Published On - 12:25 pm, Sat, 29 May 21