ಹದಿನೈದು ದಿನದ ಅಂತರದಲ್ಲಿ ಬೆಳಗಾವಿಯ ಒಂದೇ ಕುಟುಂಬದ ಮೂವರು ಸಹೋದರರು ಕೊರೊನಾಗೆ ಬಲಿ

ಮೃತರು ಮೂಲತಃ ಧಾರವಾಡ ತಾಲೂಕಿನ ಹೆಬ್ಬಳ್ಳಿಯವರು. ಹಲವು ವರ್ಷಗಳಿಂದ ಇನಾಮ ಹೊಂಗಲಗೆ ಬಂದು ನೆಲೆಸಿದ್ದರು. ಹದಿನೈದು ದಿನಗಳ ಅಂತರದಲ್ಲಿ ಕುಟುಂಬಕ್ಕೆ ಆಸರೆಯಾಗಿದ್ದ ಮೂವರು ಕೊವಿಡ್​ಗೆ ಬಲಿಯಾಗಿದ್ದಾರೆ.

Follow us
sandhya thejappa
|

Updated on: May 27, 2021 | 8:35 AM

ಬೆಳಗಾವಿ: ಮಹಾಮಾರಿ ಕೊರೊನಾದಿಂದ 15 ದಿನದ ಅಂತರದಲ್ಲಿ ಮೂವರು ಸಹೋದರರು ಸಾವನ್ನಪ್ಪಿದ್ದಾರೆ. ಜಿಲ್ಲೆಯ ಸವದತ್ತಿ ತಾಲೂಕಿನ ಇನಾಮ ಹೊಂಗಲ ಗ್ರಾಮದ ಗಂಗಾರಾಮ ಬಗಲೆ(52), ದುರ್ಗಾಣಿ ಬಗಲೆ(48), ಶಿವಾಜಿ ಬಗಲೆ(45) ಮೃತಪಟ್ಟಿದ್ದಾರೆ. ಮೃತರು ಮೂಲತಃ ಧಾರವಾಡ ತಾಲೂಕಿನ ಹೆಬ್ಬಳ್ಳಿಯವರು. ಹಲವು ವರ್ಷಗಳಿಂದ ಇನಾಮ ಹೊಂಗಲಗೆ ಬಂದು ನೆಲೆಸಿದ್ದರು. ಹದಿನೈದು ದಿನಗಳ ಅಂತರದಲ್ಲಿ ಕುಟುಂಬಕ್ಕೆ ಆಸರೆಯಾಗಿದ್ದ ಮೂವರು ಕೊವಿಡ್​ಗೆ ಬಲಿಯಾಗಿದ್ದಾರೆ.

ಹನಿಮೂನ್​ನಿಂದ ವಾಪಸಾಗಿದ್ದ ರಾಯಚೂರು ದಂಪತಿಗೆ ಕೊರೊನಾ; ಪತಿ ಬಲಿ ರಾಯಚೂರು: ದಂಪತಿ ಮದುವೆಯಾಗಿ ಕೇವಲ ಏಳು ತಿಂಗಳಾಗಿತ್ತು. ಮುಂದಿನ ಜೀವನದ ಬಗ್ಗೆ ಸಾಕಷ್ಟು ಕನಸು ಕಂಡಿದ್ದರು. ಆದರೆ ಮಹಾಮಾರಿ ಕೊರೊನಾ ಅವರ ಬದುಕಿಗೆ ಕೊಳ್ಳಿ ಇಟ್ಟಿದೆ. ಹನಿಮೂನ್​ನಿಂದ ವಾಪಸಾಗಿದ್ದ ದಂಪತಿಗೆ ಕೊರೊನಾ ದೃಢಪಟ್ಟಿದ್ದು, ಪತಿ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ. ಜಿಲ್ಲೆಯ ಸಿಂಧನೂರು ತಾಲೂಕಿನ ಕೋಳಬಾಳ ಗ್ರಾಮದ ಮಂಜುನಾಥ್(29) ಕೊರೊನಾಗೆ ಬಲಿಯಾದ ವ್ಯಕ್ತಿ. ನವ ದಂಪತಿ ಹನಿಮೂನಗೆ ಊಟಿ ಮತ್ತೀತರೆಡೆ ತೆರಳಿದ್ದರು. ದಂಪತಿಗೆ ಕೊರೊನಾ ಕಾಣಿಸಿಕೊಂಡಿತ್ತು. ಪತ್ನಿ ಗುಣಮುಖಳಾಗಿದ್ದು, ಪತಿ ಮಂಜುನಾಥ ಚಿಕಿತ್ಸೆ ಫಲಿಸದೆ ರಿಮ್ಸ್ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ.

ಕೊರೊನಾ ಸಂಕಷ್ಟಕ್ಕೆ ನಲುಗಿದ ಮಂಗಳಮುಖಿಯರು ದಾವಣಗೆರೆ: ಕೊರೊನಾದಿಂದ ಮಂಗಳಮುಖಿಯರು ಸಂಕಷ್ಟಕ್ಕೆ ಸಿಲುಕಿದ್ದಾರೆ. ದಾವಣಗೆರೆ ತಹಶೀಲ್ದಾರ್ ಗಿರೀಶ್ ಮಂಗಳಮುಖಿಯರಿಗೆ ಆಹಾರದ ಕಿಟ್ ವಿತರಣೆ ಮಾಡಿದ್ದಾರೆ. ದಾವಣಗೆರೆ ನಗರದ ಕೆಆರ್ ಮಾರುಕಟ್ಟೆ ಬಳಿ ನೂರು ಜನ ಮಂಗಳಮುಖಿಯರಿಗೆ ಆಹಾರದ ಕಿಟ್ ವಿತರಣೆ ಮಾಡಿದ್ದಾರೆ. ದಾವಣಗೆರೆ ಜಿಲ್ಲೆಯಲ್ಲಿ 670 ಜನ ಮಂಗಳಮುಖಿಯರಿದ್ದು, 360 ಜನ ಒಂದು ಹೊತ್ತಿನ ಊಟಕ್ಕೂ ಪರದಾಡುತ್ತಿದ್ದಾರೆ ಎಂದು ಮಂಗಳಮುಖಿಯರ ಸಂಘದ ಕಾರ್ಯದರ್ಶಿ ಚೈತ್ರಾ ಎಸ್ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ

ಚಿಕ್ಕಬಳ್ಳಾಪುರ ಕಾರಾಗೃಹದಿಂದ ಪರಾರಿಯಾಗಿದ್ದ ವಿಚಾರಣಾಧೀನ ಕೈದಿ ನಾಯಿಯ ಸಹಾಯದಿಂದ ಪತ್ತೆ

ಅಪಘಾತದಲ್ಲಿ ಆರೋಗ್ಯಾಧಿಕಾರಿ ಸಾವು, ಕಣ್ಣ ಮುಂದೆ ಪ್ರಾಣ ಹೋಗುತ್ತಿದ್ದರೂ ಸಹಾಯಕ್ಕೆ ಮುಂದಾಗದ ಶಾಸಕ ಡಿ.ಎಸ್ ಸುರೇಶ್

Three brothers from same family have died from corona within a 15 day period belgaum