ದೇವನಹಳ್ಳಿ ಇಂದಿರಾ ಕ್ಯಾಂಟೀನ್​ಗೆ ಬಾರದ ಜನ; ಸಾರ್ವಜನಿಕರ ಬಳಿಯೇ ಊಟ ಕೊಂಡೊಯ್ದ ಅಧಿಕಾರಿಗಳು

ಸಿದ್ದಪಡಿಸಿಕೊಂಡ ಊಟಕ್ಕೆ ಕೇವಲ 40 ರಿಂದ 50 ಜನ ಮಾತ್ರ ಬರ್ತಿದ್ದು, ಬೆಳಗಿನಿಂದ ಸಂಜೆವರೆಗೂ 100 ಊಟವು ಸಹ ಇಂದಿರಾ ಕ್ಯಾಂಟೀನ್​ನಿಂದ ಬಡ ಜನ ತೆಗೆದುಕೊಂಡು ಹೋಗುತ್ತಿರಲಿಲ್ಲ. ಇದರಿಂದ ಊಟ ವೇಸ್ಟ್ ಜೊತೆಗೆ ಸರ್ಕಾರದ ಯೋಜನೆ ಬಡ ಜನರಿಗೆ ಅನುಕೂಲವಾಗುತ್ತಿರಲಿಲ್ಲ. ಹೀಗಾಗಿ ಬಡ ಜನರಿರುವ ಕಡೆಗೆ ಮೂರು ಹೊತ್ತು ಊಟವನ್ನ ತೆಗೆದುಕೊಂಡು ಹೋಗಿ ನೀಡಲಾಗುತ್ತಿದೆ ಎಂದು ದೇವನಹಳ್ಳಿ ಮುಖ್ಯಾಧಿಕಾರಿ ನಾಗರಾಜ್ ತಿಳಿಸಿದ್ದಾರೆ.

ದೇವನಹಳ್ಳಿ ಇಂದಿರಾ ಕ್ಯಾಂಟೀನ್​ಗೆ ಬಾರದ ಜನ; ಸಾರ್ವಜನಿಕರ ಬಳಿಯೇ ಊಟ ಕೊಂಡೊಯ್ದ ಅಧಿಕಾರಿಗಳು
ದೇವನಹಳ್ಳಿ ಇಂದಿರಾ ಕ್ಯಾಂಟೀನ್
Follow us
preethi shettigar
|

Updated on: May 29, 2021 | 1:43 PM

ದೇವನಹಳ್ಳಿ: ಕೊರೊನಾ ಲಾಕ್​ಡೌನ್​ನಿಂದಾಗಿ ಬಡ ಜನರು ಒಂದೊಂತ್ತಿನ ಊಟಕ್ಕೂ ಪರದಾಡುವಂತಾಗಿದೆ. ಹೀಗಾಗಿ ಸರ್ಕಾರ ಹಸಿದವರ ಹೊಟ್ಟೆ ತಣ್ಣಗಿಡುವ ನಿಟ್ಟಿನಲ್ಲಿ ಜನರಿಗಾಗಿ ಇಂದಿರಾ ಕ್ಯಾಂಟೀನ್​​​ ತೆರೆದಿದ್ದು, ಇಲ್ಲಿ ಉಚಿತ ಊಟದ ವ್ಯವಸ್ಥೆ ಮಾಡಿದ್ದಾರೆ. ಆದರೆ ಇದೇ ಯೋಜನೆ ಇದೀಗ ಜನರಿಲ್ಲದೆ ದೇವನಹಳ್ಳಿ ಪಟ್ಟಣದಲ್ಲಿ ಹಳ್ಳ ಹಿಡಿಯುತ್ತಿದ್ದು, ಸರ್ಕಾರದ ಈ ಸೌಲಭ್ಯವನ್ನು ಜನರಿಗೆ ತಲುಪಿಸುವ ನಿಟ್ಟಿನಲ್ಲಿ ಅಧಿಕಾರಿಗಳು ಹೊಸ ಯೋಜನೆ ಮಾಡಿದ್ದಾರೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ಪಟ್ಟಣದಲ್ಲಿ ಕೊರೊನಾ ಲಾಕ್​ಡೌನ್​ನಿಂದ ಬೀದಿ ಬದಿ ವ್ಯಾಪಾರಿಗಳು ಬಡ ಜನರು ನಿರ್ಗತಿಕರು, ತುತ್ತು ಅನ್ನಕ್ಕೂ ಪರದಾಡುವಂತ ಪರಿಸ್ಥಿತಿ ನಿರ್ಮಾಣವಾಗಿದ್ದ ಹಿನ್ನೆಲೆಯಲ್ಲಿ ಸರ್ಕಾರ ಇಂದಿರಾ ಕ್ಯಾಂಟಿನ್​ಗಳಲ್ಲಿ ಉಚಿತ ಊಟದ ವ್ಯವಸ್ಥೆ ಮಾಡಿತ್ತು. ಆದರೆ ಉಚಿತ ಊಟಕ್ಕೆ ಮೊದಲಿಗೆ ಬಂದ ಜನರು ನಂತರ ದೇವನಹಳ್ಳೀಯ ಇಂದಿರಾ ಕ್ಯಾಂಟೀನ್​​ ನತ್ತ ಸುಳಿಯದ ಕಾರಣ ಪ್ರತಿನಿತ್ಯ ಸಾಕಷ್ಟು ಅನ್ನ ಬಿಸಾಕುವ ದುಸ್ಥಿತಿ ನಿರ್ಮಾಣವಾಗಿತ್ತು. ಹೀಗಾಗಿ ಜನ ಇಂದಿರಾ ಕ್ಯಾಂಟೀನ್​​ಗಳಿಗೆ ಬಾರದ ಹಿನ್ನೆಲೆಯಲ್ಲಿ ಅಧೀಕಾರಿಗಳೆ ಕ್ಯಾಂಟೀನ್​​ನಲ್ಲಿ ನಿಂತು ಉಳೀದ ಊಟವನ್ನ ಪ್ಯಾಕ್ ಮಾಡುತ್ತಿದ್ದಾರೆ ಮತ್ತು ಈ ಊಟವನ್ನು ದೇವನಹಳ್ಳಿ ಸುತ್ತಾಮುತ್ತಲಿನ ಬಡ ಜನರಿಗೆ ನೀಡುವ ಮೂಲಕ ಅವರ ಹಸಿವನ್ನ ನೀಗಿಸುತ್ತಿದ್ದಾರೆ.

ಬೆಳಗ್ಗೆ ಉಪಾಹರಕ್ಕೆ 500, ಮದ್ಯಾಹ್ನ ಊಟಕ್ಕೆ 250, ರಾತ್ರಿ ಊಟಕ್ಕೆ 150 ಕೊಡಲೆಬೇಕು ಎಂದು ಸರ್ಕಾರ ಅಧಿಕಾರಿಗಳಿಗೆ ಸೂಚಿಸಿದ್ದು, ಅಷ್ಟು ಅಡುಗೆಯನ್ನ ಸಮಯಕ್ಕೆ ಸರಿಯಾಗಿ ಸಿಬ್ಬಂದಿಗಳು ಸಿದ್ದಮಾಡಿಕೊಳ್ಳುತ್ತಿದ್ದರು. ಆದರೆ ಸಿದ್ದಪಡಿಸಿಕೊಂಡ ಊಟಕ್ಕೆ ಕೇವಲ 40 ರಿಂದ 50 ಜನ ಮಾತ್ರ ಬರ್ತಿದ್ದು, ಬೆಳಗಿನಿಂದ ಸಂಜೆವರೆಗೂ 100 ಊಟವು ಸಹ ಇಂದಿರಾ ಕ್ಯಾಂಟೀನ್​​ನಿಂದ ಬಡ ಜನ ತೆಗೆದುಕೊಂಡು ಹೋಗುತ್ತಿರಲಿಲ್ಲ. ಇದರಿಂದ ಊಟ ವೇಸ್ಟ್ ಜೊತೆಗೆ ಸರ್ಕಾರದ ಯೋಜನೆ ಬಡ ಜನರಿಗೆ ಅನುಕೂಲವಾಗುತ್ತಿರಲಿಲ್ಲ. ಹೀಗಾಗಿ ಬಡ ಜನರಿರುವ ಕಡೆಗೆ ಮೂರು ಹೊತ್ತು ಊಟವನ್ನ ತೆಗೆದುಕೊಂಡು ಹೋಗಿ ನೀಡಲಾಗುತ್ತಿದೆ ಎಂದು ದೇವನಹಳ್ಳಿ ಮುಖ್ಯಾಧಿಕಾರಿ ನಾಗರಾಜ್ ತಿಳಿಸಿದ್ದಾರೆ.

ಅಧಿಕಾರಿಗಳ ಈ ಕಾರ್ಯದಿಂದ ಹಸಿವಿನಿಂದ ಬಳಲುತ್ತಿರುವ ಜನರ ಹಸಿವು ನೀಗಿಸುವ ಜೊತೆಗೆ ಸರ್ಕಾರದ ಯೋಜನೆಯುನ್ನು ಯಶಸ್ವಿಗೊಳಿಸುವ ಕಾರ್ಯಕ್ಕೆ ಪುರಸಭೆ ಮುಖ್ಯಾಧೀಕಾರಿಗಳು ಮುಂದಾಗಿರುವುದು ಸಂತೋಷದ ವಿಷಯ.

ಒಟ್ಟಾರೆ ಕೊರೊನಾ ಲಾಕ್​ಡೌನ್ ಸಂದರ್ಭದಲ್ಲಿ ಸಾಕಷ್ಟು ಜನ ಬಡ ಮತ್ತು ನಿರ್ಗತಿಕರು ಸಂಕಷ್ಟಕ್ಕೀಡಾಗಿದ್ದು, ಸಂಕಷ್ಟಕ್ಕೀಡಾದವರ ನೆರವಿಗೆ ಅಧಿಕಾರಿಗಳು ದಾವಿಸಿರುವುದು ನಿಜಕ್ಕೂ ಶ್ಲಾಘನಿಯ. ಇನ್ನೂ ಇದೇ ರೀತಿ ರಾಜ್ಯದ ಇತರೆಡೆಯು ಅಧಿಕಾರಿಗಳು ಮಾಡಿದರೆ ಲಾಕ್​ಡೌನ್​ನಿಂದ ಊಟ ಸಿಗದೆ ಜನ ಹಸಿವಿನಿಂದ ಮಲಗದೆ ನೆಮ್ಮದಿಯಾಗಿ ಊಟ ಮಾಡಿ ಮಲಗಲು ಅನುಕೂಲವಾಗಲಿದೆ.

ಇದನ್ನೂ ಓದಿ:

ಮೇ 24ರವರೆಗೆ ಇಂದಿರಾ ಕ್ಯಾಂಟೀನ್‌ಗಳಲ್ಲಿ ಉಚಿತ ಊಟ; ರಾಜ್ಯ ಸರ್ಕಾರದಿಂದ ತಕ್ಷಣ 25 ಕೋಟಿ ರೂ. ಬಿಡುಗಡೆ

ಆಹಾರ ಭದ್ರತೆ ಒದಗಿಸಲು ಹೈಕೋರ್ಟ್ ಸೂಚನೆ; ಮೇ 24ರವರೆಗೆ ಇಂದಿರಾ ಕ್ಯಾಂಟೀನ್‌ಗಳಲ್ಲಿ ಉಚಿತ ಊಟ

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್