AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಜೆಪಿಯಲ್ಲಿ ಬಿಎಸ್​ವೈ ಬಿಟ್ಟರೆ ಸಿಎಂ ಆಗಲು ಸಮರ್ಥರಿಲ್ಲ ಎನ್ನುವ ಸಿದ್ದರಾಮಯ್ಯ ಹೇಳಿಕೆಗೆ ಪ್ರಹ್ಲಾದ್ ಜೋಶಿ ತಿರುಗೇಟು

ರಾಜ್ಯದಲ್ಲಿ ಮುಖ್ಯಮಂತ್ರಿ ಹುದ್ದೆ ಖಾಲಿ ಇಲ್ಲ. ಮುಖ್ಯಮಂತ್ರಿ ಯಡಿಯೂರಪ್ಪ ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ. ನಮ್ಮ ಆದ್ಯತೆ ಕೊವಿಡ್, ದೇಶದ ಆರ್ಥಿಕತೆ ಕಡೆ ಮಾತ್ರ. ಹುಬ್ಬಳ್ಳಿಯಲ್ಲಿದ್ದಾಗ ಸಚಿವರು ಬಂದರೆ ಭೇಟಿಯಾಗುತ್ತಾರೆ. ದೆಹಲಿಯಲ್ಲಿದ್ದರೆ ಅಲ್ಲಿಗೆ ಬಂದಾಗಲೂ ಭೇಟಿಯಾಗುತ್ತಾರೆ.

ಬಿಜೆಪಿಯಲ್ಲಿ ಬಿಎಸ್​ವೈ ಬಿಟ್ಟರೆ ಸಿಎಂ ಆಗಲು ಸಮರ್ಥರಿಲ್ಲ ಎನ್ನುವ ಸಿದ್ದರಾಮಯ್ಯ ಹೇಳಿಕೆಗೆ ಪ್ರಹ್ಲಾದ್ ಜೋಶಿ ತಿರುಗೇಟು
ಸಚಿವ ಪ್ರಹ್ಲಾದ್ ಜೋಶಿ
sandhya thejappa
|

Updated on: May 29, 2021 | 2:14 PM

Share

ಹುಬ್ಬಳ್ಳಿ: ಬಿಜೆಪಿಯಲ್ಲಿ ಬಿ.ಎಸ್.ಯಡಿಯೂರಪ್ಪ ಬಿಟ್ಟರೆ ಮುಖ್ಯಮಂತ್ರಿ ಆಗಲು ಸಮರ್ಥರಿಲ್ಲ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ನೀಡಿದ ಹೇಳಿಕೆಗೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ತಿರುಗೇಟು ನೀಡಿದ್ದಾರೆ. ಸಮರ್ಥರು ಅಂತಲೇ ಅವರು ಬಡಿದಾಡಿಕೊಳ್ಳುತ್ತಿದ್ದಾರೆ ಎಂದು ಪರೋಕ್ಷವಾಗಿ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ವಿಚಾರವನ್ನು ಪ್ರಹ್ಲಾದ್ ಜೋಶಿ ಪ್ರಸ್ತಾಪ ಮಾಡಿದ್ದಾರೆ.

ರಾಜ್ಯದಲ್ಲಿ ಮುಖ್ಯಮಂತ್ರಿ ಹುದ್ದೆ ಖಾಲಿ ಇಲ್ಲ. ಮುಖ್ಯಮಂತ್ರಿ ಯಡಿಯೂರಪ್ಪ ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ. ನಮ್ಮ ಆದ್ಯತೆ ಕೊವಿಡ್, ದೇಶದ ಆರ್ಥಿಕತೆ ಕಡೆ ಮಾತ್ರ. ಹುಬ್ಬಳ್ಳಿಯಲ್ಲಿದ್ದಾಗ ಸಚಿವರು ಬಂದರೆ ಭೇಟಿಯಾಗುತ್ತಾರೆ. ದೆಹಲಿಯಲ್ಲಿದ್ದರೆ ಅಲ್ಲಿಗೆ ಬಂದಾಗಲೂ ಭೇಟಿಯಾಗುತ್ತಾರೆ. ರಾಜ್ಯ ರಾಜಕೀಯದ ಬಗ್ಗೆ ನನ್ನ ಬಳಿ ಯಾರೂ ಚರ್ಚಿಸಿಲ್ಲ. ವಯಸ್ಸಿನ ಕಾರಣ ಯಡಿಯೂರಪ್ಪರವರನ್ನು ಇಳಿಸಬೇಕೆಂಬುದು ಸರಿಯಲ್ಲ ಎಂದು ಸಚಿವರು ಅಭಿಪ್ರಾಯಪಟ್ಟರು.

ದೆಹಲಿಗೆ ಮೊನ್ನೆ ಕೆಲವರು ಬಂದಿದ್ದರು. ಆದರೆ ದೆಹಲಿಯಲ್ಲಿ ನನ್ನನ್ನು ಯಾರೂ ಭೇಟಿಯಾಗಿಲ್ಲ. ಅವರು ಎಲ್ಲಿ ಹೋದ್ರು, ಯಾರನ್ನ ಭೇಟಿಯಾಗಿದ್ರೊ ಗೊತ್ತಿಲ್ಲ ಎಂದು ಹೇಳಿದರು.

ಕೊರೊನಾ ನಿಯಂತ್ರಣಕ್ಕೆ ಶಕ್ತಿ ಮೀರಿ ಕೆಲಸ ಮಾಡುತ್ತಿದ್ದೀರಿ: ಸಾ.ರಾ.ಮಹೇಶ್ ಹಾಸನ: ಕೊರೊನಾ ನಿಯಂತ್ರಣಕ್ಕೆ ಶಕ್ತಿ ಮೀರಿ ಕೆಲಸ ಮಾಡುತ್ತಿದ್ದೀರಿ. ಆರ್ಥಿಕ ಸಂಕಷ್ಟದ ನಡುವೆ ಪ್ಯಾಕೇಜ್ ಘೋಷಣೆ ಮಾಡಿದ್ದೀರಿ. ಆದರೆ ಮೈಸೂರಿನಲ್ಲಿ ಕೊರೊನಾ ಪ್ರಕರಣ ಕಡಿಮೆಯಾಗುತ್ತಿಲ್ಲ ಎಂದು ಸಿಎಂ ನೇತೃತ್ವದ ಸಭೆಯಲ್ಲಿ ಶಾಸಕ ಸಾ.ರಾ.ಮಹೇಶ್ ಹೇಳಿದರು. ಹಳ್ಳಿಗಳಲ್ಲಿ ಕೊರೊನಾ ನಿಯಂತ್ರಣಕ್ಕೆ ಪ್ರತ್ಯೇಕ ವ್ಯವಸ್ಥೆ ಇಲ್ಲ. ಹೀಗಾಗಿ ಅಧಿಕಾರಿಗಳು ಹಳ್ಳಿಗಳಿಗೆ ಭೇಟಿ ಕೊಡಬೇಕು. ಕೊರೊನಾ ನಿಯಂತ್ರಣಕ್ಕೆ ಕೆಲಸ ಮಾಡಬೇಕೆಂದು ಆಗ್ರಹಿಸಿದ ಸಾ.ರಾ.ಮಹೇಶ್ ಕೈ ಮುಗಿದು ಕೇಳುತ್ತೇನೆ ಮೈಸೂರು ಉಳಿಸಿ ಎಂದು ಮನವಿ ಮಾಡಿದರು.

ಇದನ್ನೂ ಓದಿ

ರಮೇಶ್​ ಜಾರಕಿಹೊಳಿ ಸಿಡಿ ಕೇಸ್​ನಲ್ಲಿ ಆರೋಪಿಗಳಾದ ನರೇಶ್, ಶ್ರವಣ್ ಗೆ ಬೇಲ್ ನೀಡದಂತೆ ಎಸ್​ಐಟಿಯಿಂದ ಮನವಿ

ದೇವನಹಳ್ಳಿ ಇಂದಿರಾ ಕ್ಯಾಂಟೀನ್​ಗೆ ಬಾರದ ಜನ; ಸಾರ್ವಜನಿಕರ ಬಳಿಯೇ ಊಟ ಕೊಂಡೊಯ್ದ ಅಧಿಕಾರಿಗಳು

(Prahlad Joshi responds to Siddaramaiah statement of chief minister)