ನೆಗ್ಲೆಕ್ಟ್ ಮಾಡಿದ್ದಕ್ಕೆ ಸಾವು: ಕೊರೊನಾ ಬಂದು 5 ದಿನವಾದ್ರೂ ಏನಾಗೋಲ್ಲ ಅಂತ ಮನೆಯಲ್ಲೇ ಇದ್ದ ಬಾಡಿಬಿಲ್ಡರ್ ಸಾವು
negligence: ಹೆಬ್ಬಾಳದ ಚಿತಾಗಾರದ ಬಳಿ ಕುಟುಂಬಸ್ಥರ ರೋದನೆ ಮುಗಿಲುಮುಟ್ಟಿದೆ. ದಯವಿಟ್ಟು ಯಾರು ಕೊರೊನಾ ಸೋಂಕನ್ನು ನೆಗ್ಲೆಕ್ಟ್ ಮಾಡ್ಬೇಡಿ. ನಮ್ಮ ತಮ್ಮನ ರೀತಿ ಕೇರ್ ಲೆಸ್ ಮಾಡ್ಬೇಡಿ ಅಂತಾ ಮೃತನ ಸಹೋದರ ಪರಿಪರಿಯಾಗಿ ಮನವಿ ಮಾಡುತ್ತಿದ್ದರೆ.. ಅದನ್ನು ನೋಡಿದ ಯಾರಿಗೇ ಆಗಲಿ ಕರುಳು ಚುರಕ್ ಅನ್ನದಿರದು, ಜೊತೆಗೆ ಇಲ್ಲ ನಾವು ಕೊರೊನಾ ಸೋಂಕನ್ನು ನಿರ್ಲಕ್ಷಿಸುವುದಿಲ್ಲ ಎಂದು ಶಪಥ ಮಾಡುವುದಕ್ಕೆ ಪ್ರೇರೇಪಿಸುತ್ತದೆ.
ಬೆಂಗಳೂರು: ಕೊರೊನಾ ತನ್ನ ಅಟ್ಟಹಾಸ ಕಡಿಮೆ ಮಾಡಿದೆ. ನಮಗಿನ್ನು ಹೆಚ್ಚೇನೂ ಆಗೋಲ್ಲ ಅಂತಾ ಕೇರ್ಲೆಸ್ ಆದ್ರೆ ಮುಗಿಯಿತು ಕತೆ ಅಂತಾನೇ ಭಾವಿಸಬೇಕಿದೆ. ತಾಜಾ ಪ್ರಕರಣದಲ್ಲಿ ಕೊರೊನಾ ಬಂದಿದ್ದರೂ ವ್ಯಕ್ತಿಯೊಬ್ಬ ಅದೇ ಉದಾಸೀನತೆ ತೋರಿದ್ದಕ್ಕೆ ಭಾರೀ ಬೆಲೆ ತೆರೆಬೇಕಾಗಿ ಬಂದಿದೆ. ಸೋಂಕಿತ ವ್ಯಕ್ತಿ ಇಹಲೋಕ ತ್ಯಜಿಸಿದ್ದು, ಆತನ ಕುಟುಂಬ ಇದೀಗ ದಾರುಣ ಸ್ಥಿತಿಗೆ ತಳ್ಳಲ್ಪಟ್ಟಿದೆ. ತಾನೊಬ್ಬ ಬಾಡಿ ಬಿಲ್ಡರ್. ತನ್ನ ದೇಹ ವಜ್ರಕಾಯ ಎಂದು ಯಾಮಾರಿದ್ದಕ್ಕೆ ಯಮನ ಪಾದ ಸೇರಿದ್ದಾರೆ ಆ ವ್ಯಕ್ತಿ.
ಕೊರೊನಾ ಬಂದು 5 ದಿನವಾದ್ರೂ ಏನಾಗೊಲ್ಲ ಅಂತಾ ವ್ಯಕ್ತಿಯೊಬ್ಬರು ಮನೆಯಲ್ಲೇ ಇದ್ದರು… ಆದರೆ ಪರಿಸ್ಥಿತಿ ಬಿಗಡಾಯಿಸಿದಾಗ ಕುಟುಂಬಸ್ಥರು ಆಸ್ಪತ್ರೆಯ ಕದ ತಟ್ಟಿದ್ದಾರೆ. 20 ದಿನ ಆಸ್ಪತ್ರೆಯಲ್ಲೇ ಚಿಕಿತ್ಸೆ ಪಡೆದ್ರೂ ಆ ಬಡಜೀವ ಬದುಕಲಿಲ್ಲ. ಹೀಗೆ ಇಬ್ಬರು ಎಳೆ ಕಂದಮ್ಮಗಳನ್ನ ಬಿಟ್ಟು ಹೋಗಿದ್ದಾರೆ ಆ ತಂದೆ. 40 ವರ್ಷದ ಹೇಮಂತ್ ಕೊರೊನಾಗೆ ಬಲಿಯಾದ ವ್ಯಕ್ತಿ. ಈತನಿಗೆ 5 ವರ್ಷ ಮತ್ತು 8 ವರ್ಷದ ಇಬ್ಬರು ಗಂಡು ಮಕ್ಕಳಿದ್ದಾರೆ. ಚಿತಾಗಾರದ ಬಳಿ ಮಕ್ಕಳ ಪರದಾಟ ಹೇಳತೀರದಾಗಿದೆ. ಇತ್ತ, ಕಲ್ಲು ಬೇಂಚಿನ ಮೇಲೆ ತಾತನ ತೋಳಿನ ಮೇಲೆ ಮೃತ ವ್ಯಕ್ತಿಯ ಮಕ್ಕಳಿಬ್ಬರೂ ಮಲಗಿದ್ದರೆ ಅತ್ತ, ಆ್ಯಂಬುಲೆನ್ಸ್ ಬಳಿ ಮೃತ ವ್ಯಕ್ತಿಯ ಪತ್ನಿ ರೋದನೆ ಹೇಳತೀರದಾಗಿದೆ.
ಜಸ್ಟ್ 20 ದಿನಗಳ ಮುಂದೆ ತನ್ನದು ವಜ್ರಕಾಯ ಅಂತಿದ್ದವ ಕೊರೊನಾ ಮಾರಿಯಿಂದ ಉಸಿರು ಚೆಲ್ಲಿದ:
ಹೇಮಂತ್ ಕಳೆದ 5 ವರ್ಷದ ಹಿಂದೆ ಬಾಡಿ ಬಿಲ್ಡಿಂಗ್ ಮಾಡ್ತಿದ್ದ ವ್ಯಕ್ತಿ (Bodybuilder). ತನಗೆ ರೋಗ ನಿರೋಧಕ ಶಕ್ತಿ ಜಾಸ್ತಿ ಇದೆ, ನಂಗೇನೂ ಆಗೊಲ್ಲ ಅಂತ ಕೇರ್ಲೆಸ್ ಆಗಿದ್ದ ಆ ವ್ಯಕ್ತಿ. ಕೊರೊನಾ ಸೋಂಕು ತಗುಲಿದ್ದರೂ ಐದಾರು ದಿನ ಕಾಲ ಮನೆಯಲ್ಲೇ ಉಳಿದಿದ್ದು ಮೊಂಡಾಟ ಮಾಡಿದ್ದಾನೆ. ಆದರೆ ಪರಿಸ್ಥಿತಿ ಬಿಗಡಾಯಿಸಿದಾಗ 20 ದಿನಗಳ ಹಿಂದೆ ಕೊಡಿಗೆಹಳ್ಳಿಯ ಮೆಡ್ ಸ್ಟಾರ್ ಆಸ್ಪತ್ರೆಗೆ ಬಲವಂತವಾಗಿ ಆತನನ್ನು ದಾಖಲು ಮಾಡಿಸಿದ್ದಾರೆ. ಚಿಕಿತ್ಸೆ ಫಲಕಾರಿಯಾಗಿದೆ ಬಾಡಿ ಬಿಲ್ಡರ್ ಹೇಮಂತ್ ಇಂದು ಇಹಲೋಕ ತ್ಯಜಿಸಿದ್ದಾರೆ.
ಹೆಬ್ಬಾಳದ ಚಿತಾಗಾರದ ಬಳಿ ಕುಟುಂಬಸ್ಥರ ರೋದನೆ ಮುಗಿಲುಮುಟ್ಟಿದೆ. ದಯವಿಟ್ಟು ಯಾರು ಕೊರೊನಾ ಸೋಂಕನ್ನು ನೆಗ್ಲೆಕ್ಟ್ ಮಾಡ್ಬೇಡಿ. ನಮ್ಮ ತಮ್ಮನ ರೀತಿ ಕೇರ್ ಲೆಸ್ ಮಾಡ್ಬೇಡಿ ಅಂತಾ ಮೃತನ ಸಹೋದರ ಪರಿಪರಿಯಾಗಿ ಮನವಿ ಮಾಡುತ್ತಿದ್ದರೆ.. ಅದನ್ನು ನೋಡಿದ ಯಾರಿಗೇ ಆಗಲಿ ಕರುಳು ಚುರಕ್ ಅನ್ನದಿರದು. ಜೊತೆಗೆ ಇಲ್ಲ ನಾವು ಕೊರೊನಾ ಸೋಂಕನ್ನು ನಿರ್ಲಕ್ಷಿಸುವುದಿಲ್ಲ ಎಂದು ಶಪಥ ಮಾಡುವುದಕ್ಕೆ ಪ್ರೇರೇಪಿಸುತ್ತದೆ.
(negligent father died due to coronavirus after 20 days struggle in bengaluru)
ಹೆಂಡತಿಗೆ ಸೋಂಕು ಬಂದು ಆಸ್ಪತ್ರೆಗೆ ಶಿಫ್ಟ್.. ಭಯದಿಂದ ಜಮೀನಿನಲ್ಲಿ ನೇಣು ಬಿಗಿದುಕೊಂಡು ಪತಿ ಆತ್ಮಹತ್ಯೆ
Published On - 12:56 pm, Sat, 29 May 21