ತುಮಕೂರು ಕೊವಿಡ್ ಕೇರ್ ಸೆಂಟರ್​ನಲ್ಲಿ ಇಸ್ಪೀಟ್ ಆಟ; ದುಡ್ಡು ಕಟ್ಟಿ ಜೂಜು ಆಡುತ್ತಿರುವ ಸೋಂಕಿತರು

ತುಮಕೂರು ಕೊವಿಡ್ ಕೇರ್ ಸೆಂಟರ್​ನಲ್ಲಿ ಇಸ್ಪೀಟ್ ಆಟ; ದುಡ್ಡು ಕಟ್ಟಿ ಜೂಜು ಆಡುತ್ತಿರುವ ಸೋಂಕಿತರು
ಕೊವಿಡ್ ಕೇರ್ ಸೆಂಟರ್​ನಲ್ಲಿ ಜೂಜು ಆಡುತ್ತಿರುವ ಸೋಂಕಿತರು

ಸೋಂಕು ಬಂದಿರುವುದನ್ನು ಮರೆತು ಕೊವಿಡ್ ಕೇರ್ ಸೆಂಟರ್​ನಲ್ಲಿ ಜೂಜಾಟ ಆಡಿದ್ದಾರೆ. ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ಪಟ್ಟಣದಲ್ಲಿ ಇರುವ ಕೊವಿಡ್ ಕೇರ್ ಸೆಂಟರ್​ನಲ್ಲಿ ಜೂಜಾಟ ಆಡಿದ್ದು, ಪ್ರತ್ಯೇಕವಾಗಿ ಎರಡು ಗುಂಪುಗಳನ್ನು ಮಾಡಿಕೊಂಡು ಜೂಜಾಟ ಆಡಿದ್ದಾರೆ.

sandhya thejappa

|

May 29, 2021 | 10:41 AM

ತುಮಕೂರು: ಕೊವಿಡ್ ಕೇರ್ ಸೆಂಟರ್​ನಲ್ಲಿ ಕೊರೊನಾ ಸೋಂಕು ತಗುಲಿರುವವರಿಗೆ ಚಿಕಿತ್ಸೆ ನೀಡಲಾಗುತ್ತದೆ. ಸಾಧ್ಯವಾದಷ್ಟು ಬೇಗ ಕೊರೊನಾ ಸೋಂಕು ನಿವಾರಣೆಯಾಗಿ ಮನೆಗಳಿಗೆ ತೆರಳಲಿ ಹಾಗೂ ಗ್ರಾಮದಲ್ಲಿ ಇತರರಿಗೆ ಸೋಂಕು ತಗುಲದೆ ಇರಲಿ ಅಂತಾ ಜಿಲ್ಲಾ ಆರೋಗ್ಯ ಇಲಾಖೆ ಆಯಾ ತಾಲೂಕುಗಳಲ್ಲಿ ಕೊವಿಡ್ ಕೇರ್ ಸೆಂಟರ್​ಗಳನ್ನು ತೆರದಿದೆ. ಪಾಸಿಟಿವ್ ಬಂದವರನ್ನು ಕೂಡಲೇ ಕೊವಿಡ್ ಕೇರ್ ಸೆಂಟರ್​ಗೆ ದಾಖಲಿಸಿ ಚಿಕಿತ್ಸೆ ನೀಡುವ ಜೊತೆಗೆ ಮೂರು ಹೊತ್ತು ಆಹಾರ, ಬಿಸಿ ನೀರು ವ್ಯವಸ್ಥೆ ಕೂಡ ಕಲ್ಪಿಸಲಾಗುತ್ತದೆ. ಈ ನಡುವೆ ಸೋಂಕಿತರು ಕೊವಿಡ್ ಕೇರ್ ಸೆಂಟರ್​ನಲ್ಲಿ ಯಾರ ಭಯವಿಲ್ಲದೆ ಇಸ್ಪೀಟ್ ಆಟವನ್ನು ಶುರು ಮಾಡಿದ್ದಾರೆ.

ಸೋಂಕು ನಿವಾರಿಸಿಕೊಂಡು ಸಾಧ್ಯವಾದಷ್ಟು ಬೇಗ ತಮ್ಮ ಊರಿಗೆ ತೆರಳಬೇಕಾಗಿರುವ ಸೋಂಕಿತರು, ಸೋಂಕು ಬಂದಿರುವುದನ್ನು ಮರೆತು ಕೊವಿಡ್ ಕೇರ್ ಸೆಂಟರ್​ನಲ್ಲಿ ಜೂಜಾಟ ಆಡಿದ್ದಾರೆ. ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ಪಟ್ಟಣದಲ್ಲಿ ಇರುವ ಕೊವಿಡ್ ಕೇರ್ ಸೆಂಟರ್​ನಲ್ಲಿ ಜೂಜಾಟ ಆಡಿದ್ದು, ಪ್ರತ್ಯೇಕವಾಗಿ ಎರಡು ಗುಂಪುಗಳನ್ನು ಮಾಡಿಕೊಂಡು ಜೂಜಾಟ ಆಡಿದ್ದಾರೆ. ಜೂಜಾಟ ಆಡುವ ವಿಡಿಯೋ ವೈರಲ್ ಆಗಿದ್ದು, 100, 200 ರಿಂದ 500 ರೂ.ಗಳ ವರೆಗೆ ಜೂಜಾಟ ಆಡಿದ್ದಾರೆ. ಸೋಂಕಿತರು ಪ್ರತಿದಿನ ಜೂಜಾಟ ಆಡುತ್ತಾರೆ ಎನ್ನುವ ಮಾಹಿತಿ ತಿಳಿದುಬಂದಿದೆ. ಕೊವಿಡ್ ಕೇರ್ ಸೆಂಟರ್​ನ ಅಧಿಕಾರಿಗಳ ನಿರ್ಲಕ್ಷ್ಯದಿಂದ ಸೋಂಕಿತರು ರಾಜಾರೋಷವಾಗಿ ಜೂಜಾಟ ಆಡುತ್ತಿದ್ದಾರೆ.

ಜಿಲ್ಲಾ ಆರೋಗ್ಯ ಇಲಾಖೆ ಅಧಿಕಾರಿ ಡಾ.ನಾಗೇಂದ್ರಪ್ಪ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ಈ ಕುರಿತು ಜಿಲ್ಲಾ ಉಸ್ತುವಾರಿ ಸಚಿವ ಮಾಧುಸ್ವಾಮಿ ಹಾಗೂ ನಮ್ಮ ಗಮನಕ್ಕೂ ಬಂದಿದೆ. ಈ ಬಗ್ಗೆ ಕ್ರಮ ಕೈಗೊಳ್ಳಲು ಚಿಕ್ಕನಾಯಕನಹಳ್ಳಿ ಪೊಲೀಸರಿಗೆ ಸೂಚಿಸಲಾಗಿದೆ ಎಂದಿದ್ದಾರೆ. ಕೊರೊನಾ ಸೋಂಕು ನಿವಾರಣೆಯಾಗಿ ಕೊವಿಡ್ ಕೇರ್ ಸೆಂಟರ್​ನಿಂದ ಬಿಡುಗಡೆಯಾದ ಬಳಿಕ ಜೂಜಾಟದಲ್ಲಿ ಭಾಗಿಯಾಗಿದ್ದ ಸೊಂಕಿತರು ಮೇಲೆ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ ಎಂದಿದ್ದಾರೆ. ಸಚಿವ ಮಾಧುಸ್ವಾಮಿ ಕೂಡ ಈ ಬಗ್ಗೆ ಬೇಸರ ವ್ಯಕ್ತಪಡಿಸಿದ್ದು, ಪೊಲೀಸರಿಗೆ ಕ್ರಮ ಕೈಗೊಳ್ಳುವಂತೆ ಹೇಳಿದ್ದಾರೆ.

ಇದನ್ನೂ ಓದಿ

ಜೂಜುಕೋರರ ಬಗ್ಗೆ ಮಾಹಿತಿ ನೀಡಿದವನನ್ನೇ ಥಳಿಸಿದ ವಿಜಯಪುರ ಪೊಲೀಸರು

ತಿಂಗಳ ಹಿಂದೆ ಇದ್ದ ಭೀಕರ ಪರಿಸ್ಥಿತಿ ಕೊಂಚ ತಿಳಿಯಾಗಿದೆ… ಐಸಿಯು, ವೆಂಟಿಲೇಟರ್ ಬೆಡ್ ಅಭಾವ ಕೊಂಚ ಇಳಿಕೆಯಾಗಿದೆ

(Corona infected people are gambling at Tumkur Covid Care Centre)

Follow us on

Related Stories

Most Read Stories

Click on your DTH Provider to Add TV9 Kannada