ಪಾರ್ಶ್ವವಾಯು ಪೀಡಿತ ತಂದೆ ಮೇಲೆ ಕೊಡಲಿಯಿಂದ ಹಲ್ಲೆ; ಮಗನನ್ನು ಬಂಧಿಸಿದ ಚಿಕ್ಕಮಗಳೂರು ಪೊಲೀಸರು

52 ವರ್ಷದ ಸುಂದರ ಪೂಜಾರಿ ಪಾರ್ಶ್ವವಾಯುವಿನಿಂದ ಬಳಲುತ್ತಿದ್ದರು. ಇವರು ವಿಶೇಷ ಚೇತನ ಇಬ್ಬರು ಮಕ್ಕಳು, ಪತ್ನಿ ಜೊತೆ ವಾಸವಿದ್ದರು. ಹಿರಿಯ ಮಗ ನಿಖೇಶ್ ಎಲ್ಲರನ್ನು ಬಿಟ್ಟು ಬೆಂಗಳೂರು ಸೇರಿದ್ದ. ಲಾಕ್​ಡೌನ್​ ಹಿನ್ನೆಲೆಯಲ್ಲಿ 1 ತಿಂಗಳ ಹಿಂದೆ ಪುತ್ರ ಮನೆಗೆ ಮರಳಿದ್ದ.

ಪಾರ್ಶ್ವವಾಯು ಪೀಡಿತ ತಂದೆ ಮೇಲೆ ಕೊಡಲಿಯಿಂದ ಹಲ್ಲೆ; ಮಗನನ್ನು ಬಂಧಿಸಿದ ಚಿಕ್ಕಮಗಳೂರು ಪೊಲೀಸರು
ತಂದೆಯನ್ನು ಕೊಲೆ ಮಾಡಿದ ನಿಖೇಶ್ನನ್ನು ಪೊಲೀಸರು ಬಂಧಿಸಿದ್ದಾರೆ
Follow us
sandhya thejappa
|

Updated on: May 29, 2021 | 8:41 AM

ಚಿಕ್ಕಮಗಳೂರು: ಪಾರ್ಶ್ವವಾಯು ಪೀಡಿತ ತಂದೆ ಮೇಲೆ ಕೊಡಲಿಯಿಂದ ಹಲ್ಲೆ ಮಾಡಿರುವ ಘಟನೆ ಜಿಲ್ಲೆಯ ಮೂಡಿಗೆರೆ ತಾಲೂಕಿನ ಚನ್ನಡ್ಲು ಗ್ರಾಮದಲ್ಲಿ ಸಂಭವಿಸಿದೆ. ಸುಂದರ್ ಪೂಜಾರಿ ಎಂಬುವವರು ಕೊಲೆಯಾದ ವ್ಯಕ್ತಿ. ಮಗ ನಿಖೇಶ್ ಹಣ ನೀಡುವಂತೆ ತನ್ನ ತಂದೆ, ತಾಯಿಗೆ ಪೀಡಿಸುತ್ತಿದ್ದ. ತಂದೆ, ತಾಯಿ ಹಣ ನೀಡದ ಹಿನ್ನೆಲೆಯಲ್ಲಿ ನಿಖೇಶ್ ತಂದೆ ಮೇಲೆ ಹಲ್ಲೆ ಮಾಡಿದ್ದಾನೆ. ಸದ್ಯ ತಂದೆ ಮೇಲೆ ಹಲ್ಲೆಗೈದ ಮಗ ನಿಖೇಶ್ನ್ನು​ನ ಪೊಲೀಸರು ಬಂಧಿಸಿದ್ದಾರೆ. ಬಾಳೂರು ಪೊಲೀಸ್ ಠಾಣೆಯಲ್ಲಿ ಈ ಪ್ರಕರಣ ದಾಖಲಾಗಿದೆ.

52 ವರ್ಷದ ಸುಂದರ ಪೂಜಾರಿ ಪಾರ್ಶ್ವವಾಯುವಿನಿಂದ ಬಳಲುತ್ತಿದ್ದರು. ಇವರು ವಿಶೇಷ ಚೇತನ ಇಬ್ಬರು ಮಕ್ಕಳು, ಪತ್ನಿ ಜೊತೆ ವಾಸವಿದ್ದರು. ಹಿರಿಯ ಮಗ ನಿಖೇಶ್ ಎಲ್ಲರನ್ನು ಬಿಟ್ಟು ಬೆಂಗಳೂರು ಸೇರಿದ್ದ. ಲಾಕ್​ಡೌನ್​ ಹಿನ್ನೆಲೆಯಲ್ಲಿ 1 ತಿಂಗಳ ಹಿಂದೆ ಪುತ್ರ ಮನೆಗೆ ಮರಳಿದ್ದ. ಹಣ ಕೊಡಿ ಎಂದು ತಂದೆ ತಾಯಿಯನ್ನು ಪೀಡಿಸುತ್ತಿದ್ದ. ಹಣ ನೀಡದ್ದಕ್ಕೆ ಕುಪಿತಗೊಂಡು ತಂದೆಯನ್ನು ಕೊಡಲಿಯಲ್ಲಿ ಕೊಚ್ಚಿ ಕೊಲೆ ಮಾಡಿದ್ದಾನೆ. ಮಂಗಳೂರು ವೆನ್ಲಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ತಂದೆ ಮೃತಪಟ್ಟಿದ್ದಾರೆ.

ಜಗಳ ಬಿಡಿಸಲು ಮಧ್ಯ ಪ್ರವೇಶಿಸಿದವರ ಮೇಲೆ ಹಲ್ಲೆ ತುಮಕೂರು: ಜಗಳ ಬಿಡಿಸಲು ಮಧ್ಯ ಪ್ರವೇಶಿಸಿದವರ ಮೇಲೆ ಹಲ್ಲೆ ನಡೆದಿದೆ. ತುಮಕೂರು ನಗರ ಬಿಜೆಪಿ ಯುವ ಮೋರ್ಚಾ ಉಪಾಧ್ಯಕ್ಷ ಬಸವರಾಜ್, ಆತನ ಸಹಚರರಿಂದ ಹಲ್ಲೆ ನಡೆದಿದೆ. ಈ ಘಟನೆ ತುಮಕೂರಿನ ವಿನಾಯಕ ನಗರದಲ್ಲಿ ನಡೆದಿದೆ. ಕ್ಷುಲ್ಲಕ ವಿಚಾರಕ್ಕೆ ಎರಡು ಗುಂಪುಗಳ ನಡುಗೆ ಜಗಳ ನಡೆಯುತ್ತಿತ್ತು. ಈ ವೇಳೆ ಸ್ಥಳೀಯರಿಬ್ಬರು ಯಾಕಪ್ಪ ಜಗಳ ಆಡುತ್ತೀರಾ ಅಂತಾ ಬಿಡಿಸಲು ಹೋಗಿದ್ದಾರೆ. ಬುದ್ಧಿವಾದ ಹೇಳಲು ಹೋದ ಸಹೋದರರ ಮೇಲೆ ಹಲ್ಲೆ ನಡೆದಿದೆ.

ಬಸವರಾಜ್ ಸಂಬಂಧಿ ಸಂಜಯ್ ಎಂಬಾತ ಮತ್ತೊಂದು ಗುಂಪಿನ ನಡುವೆ ಜಗಳ ಮಾಡಿಕೊಳ್ಳುತ್ತಿದ್ದ. ಈ ವೇಳೆ ಸ್ಥಳೀಯರು ಜಗಳ ಬೇಡ ಸುಮ್ಮನೆ ಇರಿ ಅಂತಾ ಬಿಡಿಸಲು ಹೋಗಿದ್ದರು. ಇದರಿಂದ ಸಂಜಯ್ ತಮ್ಮ ಕಡೆಯವರಾದ ಬಸವರಾಜ್ ಹಾಗೂ ಇತರರನ್ನು ಕರೆದುಕೊಂಡು ಬಂದು ಏಕಾಏಕಿ ಹಲ್ಲೆ ನಡೆಸಿದ್ದಾರೆ. ಹಲ್ಲೆ ಮಾಡಿದಾಗ ಕೇಳಲು ಹೋದವರ ಮಹಿಳೆಯರ ಮೇಲೂ ದೌರ್ಜನ್ಯ ಎಸಗಿದ್ದಾರೆ. ಈ ಬಗ್ಗೆ ತುಮಕೂರು ನಗರ ಪೊಲೀಸರಿಗೆ ದೂರು ನೀಡಿದರೂ ಪೊಲೀಸರು ಸ್ವೀಕರಿಸುತ್ತಿಲ್ಲ. ಹಲ್ಲೆ ಮಾಡುತ್ತಿರುವ ಹಾಗೂ ಬ್ಯಾಟ್ ಹಿಡಿದು ಓಡಾಡುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಸಿಸಿಟಿವಿ ಪೂಟೇಜ್ ಇದ್ದರೂ ಕ್ರಮ ಕೈಗೊಳ್ಳಲು ನಗರ ಠಾಣೆ ಪೊಲೀಸರು ಹಿಂದೇಟು ಹಾಕುತ್ತಿದ್ದಾರೆ.

ತುಮಕೂರು ನಗರ ಬಿಜೆಪಿ ಯುವ ಮೋರ್ಚಾ ಉಪಾಧ್ಯಕ್ಷ ಬಸವರಾಜ್

ಇದನ್ನೂ ಓದಿ

ಕೊರೊನಾ ಬಳಿಕ ಇನ್ನಿತರ ಸೋಂಕು ತಗುಲಿದ ಶೇಕಡಾ 56 ರಷ್ಟು ರೋಗಿಗಳ ಸಾವು: ಐಸಿಎಂಆರ್

ಕೊರೊನಾ ದೃಢಪಟ್ಟರೂ ಕೇರ್​ ಸೆಂಟರ್​ಗೆ ಬಾರದೇ ಕಾಡಿಗೆ ಓಡಿದ ದಂಪತಿ; ಬಿಪಿಎಲ್​ ಕಾರ್ಡ್​, ವಿದ್ಯುತ್ ಕಡಿತಗೊಳಿಸಿದ ಅಧಿಕಾರಿಗಳು

(A son has assaulted a father who was suffering from paralysis in Chikmagalur)

ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್
ಆರ್ಚರಿ ಚಾಂಪಿಯನ್‌ ಶಿಪ್‌ನಲ್ಲಿ ರಾಜ್ಯದ ಕ್ರೀಡಾಪಟುಗಳಿಂದ ಚಿನ್ನದ ಪದಕ ಬೇಟೆ
ಆರ್ಚರಿ ಚಾಂಪಿಯನ್‌ ಶಿಪ್‌ನಲ್ಲಿ ರಾಜ್ಯದ ಕ್ರೀಡಾಪಟುಗಳಿಂದ ಚಿನ್ನದ ಪದಕ ಬೇಟೆ
ನಮ್ಮನ್ನು ಒಂಟಿಯಾಗಿ ಬಿಡ್ರಪ್ಪ ಅಂತ ಶಿವಕುಮಾರ್ ಹೇಳಿದ್ದು ಯಾಕೆ?
ನಮ್ಮನ್ನು ಒಂಟಿಯಾಗಿ ಬಿಡ್ರಪ್ಪ ಅಂತ ಶಿವಕುಮಾರ್ ಹೇಳಿದ್ದು ಯಾಕೆ?