ಕೊರೊನಾ ದೃಢಪಟ್ಟರೂ ಕೇರ್ ಸೆಂಟರ್ಗೆ ಬಾರದೇ ಕಾಡಿಗೆ ಓಡಿದ ದಂಪತಿ; ಬಿಪಿಎಲ್ ಕಾರ್ಡ್, ವಿದ್ಯುತ್ ಕಡಿತಗೊಳಿಸಿದ ಅಧಿಕಾರಿಗಳು
ತಹಶೀಲ್ದಾರ, ಪೊಲೀಸ್ ಅಧಿಕಾರಿಗಳ ಮನವಿಗೂ ಬಗ್ಗದೇ ಪರಾರಿಯಾಗಿ ದೂರದ ಗುಡ್ಡಕ್ಕೆ ಹೋಗಿ ಅಜ್ಞಾತ ಸ್ಥಳದಲ್ಲಿ ಅವಿತುಕೊಂಡಿರುವ ದಂಪತಿ ನಡೆಯಿಂದ ಬೇಸತ್ತ ಅಧಿಕಾರಿಗಳು ಬಿಪಿಎಲ್ ಪಡಿತರ ಚೀಟಿ ರದ್ದುಪಡಿಸಿ, ಮನೆಯ ವಿದ್ಯುತ್ ಸಂಪರ್ಕ ಸ್ಥಗಿತಗೊಳಿಸಿದ್ದಾರೆ.
ರಾಯಚೂರು: ಕೊರೊನಾ ಪಾಸಿಟಿವ್ ದೃಢಪಟ್ಟ ನಂತರವೂ ಕೊವಿಡ್ ಕೇರ್ ಸೆಂಟರ್ಗೆ ತೆರಳಲು ಒಪ್ಪದೆ ಪರಾರಿಯಾಗಿರುವ ದಂಪತಿ ವಿರುದ್ಧ ವಿಪತ್ತು ನಿರ್ವಹಣಾ ಕಾಯ್ದೆಯಡಿ ಪ್ರಕರಣ ದಾಖಲಿಸಿ ಬಿಪಿಎಲ್ ಕಾರ್ಡ್, ಮನೆ ವಿದ್ಯುತ್ ಸಂಪರ್ಕ ಕಡಿತಗೊಳಿಸಿರುವ ಘಟನೆ ರಾಯಚೂರು ಜಿಲ್ಲೆ ದೇವದುರ್ಗ ತಾಲ್ಲೂಕಿನ ವೀರಗೋಟ ಗ್ರಾಮದಲ್ಲಿ ನಡೆದಿದೆ. ದಂಪತಿಗೆ ಕೊರೊನಾ ಇರುವುದು ಖಚಿತವಾದ ಹಿನ್ನೆಲೆ ಮನೆಯ ಬಳಿಗೆ ಬಂದ ಅಧಿಕಾರಿಗಳು ಕೊವಿಡ್ ಕೇರ್ ಸೆಂಟರ್ಗೆ ದಾಖಲಾಗುವಂತೆ ಎಷ್ಟೇ ಕೇಳಿಕೊಂಡರೂ ಅದಕ್ಕೊಪ್ಪದ ಗಂಡ, ಹೆಂಡತಿ ಪರಾರಿಯಾಗಿದ್ದಾರೆ.
ಕೊರೊನಾ ಪೀಡಿತ ದಂಪತಿಯನ್ನು ದೇವಪ್ಪ ಮತ್ತು ಹಮನಂತಿ ಎಂದು ಗುರುತಿಸಲಾಗಿದ್ದು, ಅವರು ಕೊರೊನಾ ಬಗ್ಗೆ ನಿರ್ಲಕ್ಷ್ಯ ತೋರಿದ ಕಾರಣ ಕೊವಿಡ್-19 ವಿಪತ್ತು ಕಾಯ್ದೆ ಉಲ್ಲಂಘನೆ ಆರೋಪದ ಮೇಲೆ ಜಾಲಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತಹಶೀಲ್ದಾರ, ಪೊಲೀಸ್ ಅಧಿಕಾರಿಗಳ ಮನವಿಗೂ ಬಗ್ಗದೇ ಪರಾರಿಯಾಗಿ ದೂರದ ಗುಡ್ಡಕ್ಕೆ ಹೋಗಿ ಅಜ್ಞಾತ ಸ್ಥಳದಲ್ಲಿ ಅವಿತುಕೊಂಡಿರುವ ದಂಪತಿ ನಡೆಯಿಂದ ಬೇಸತ್ತ ಅಧಿಕಾರಿಗಳು ಬಿಪಿಎಲ್ ಪಡಿತರ ಚೀಟಿ ರದ್ದುಪಡಿಸಿ, ಮನೆಯ ವಿದ್ಯುತ್ ಸಂಪರ್ಕ ಸ್ಥಗಿತಗೊಳಿಸಿದ್ದಾರೆ. ಅಲ್ಲದೇ ಅವರು ಪಡೆಯುತ್ತಿದ್ದ ಸರ್ಕಾರಿ ಸೌಲಭ್ಯ ರದ್ದುಪಡಿಸಿ ಕಂದಾಯ ಇಲಾಖೆ ಆದೇಶ ಹೊರಡಿಸಿದೆ.
ಗೆಡ್ಡೆ ಗೆಣಸು ಸಂಗ್ರಹಕ್ಕೆ ಗುಡ್ಡಕ್ಕೆ ತರೆಳಿದ ವ್ಯಕ್ತಿ ಮೇಲೆ ಹುಲಿ ದಾಳಿ ಮೈಸೂರು: ಲಾಕ್ಡೌನ್ ಹಿನ್ನೆಲೆ ಗೆಡ್ಡೆ ಗೆಣಸು ಸಂಗ್ರಹಕ್ಕೆಂದು ಅರಣ್ಯ ಪ್ರದೇಶಕ್ಕೆ ತೆರಳಿದ್ದ ರಾಜು ಎಂಬುವವರ ಮೇಲೆ ಹುಲಿ ದಾಳಿ ಮಾಡಿದೆ. ಹೆಚ್.ಡಿ ಕೋಟೆ ತಾಲ್ಲೂಕು ವ್ಯಾಪ್ತಿಯ ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಡಿ.ಬಿ.ಕುಪ್ಪೆ ಅರಣ್ಯ ಪ್ರದೇಶದಲ್ಲಿ ಘಟನೆ ನಡೆದಿದೆ. 56 ವರ್ಷ ವಯಸ್ಸಿನ ರಾಜು ಅರಣ್ಯ ಪ್ರದೇಶಕ್ಕೆ ಸಮೀಪದ ಹಾಡಿ ನಿವಾಸಿಯಾಗಿದ್ದು ಗೆಡ್ಡೆ ಗೆಣಸು ಸಂಗ್ರಕ್ಕೆಂದು ಕಾಡಿನೊಳಗೆ ಹೋದಾಗ ಹುಲಿ ದಾಳಿ ನಡೆಸಿದೆ. ದಾಳಿ ವೇಳೆ ರಾಜು ಕೂಗಿಕೊಂಡ ಕಾರಣ ಹುಲಿ ಸ್ಥಳದಿಂದ ಕಾಲ್ಕಿತ್ತಿದ್ದು, ನಂತರ ನಿತ್ರಾಣಗೊಂಡರೂ ಘಟನಾ ಸ್ಥಳದಿಂದ ಕಾಲು ನಡಿಗೆಯಲ್ಲೇ ನಡೆದು ಬಂದ ರಾಜು ಹಾಡಿ ಸೇರಿದ್ದಾರೆ. ಹುಲಿ ದಾಳಿಯಿಂದ ಎದೆ ಭಾಗ ಮತ್ತು ತೊಡೆಗಳಿಗೆ ಗಾಯವಾಗಿದ್ದು, ಹೆಚ್.ಡಿ ಕೋಟೆ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಇದನ್ನೂ ಓದಿ: ಅಧಿಕಾರಿಗಳಿಗೆ ಸುಳ್ಳು ಹೇಳಿಕಳಿಸಿ ಅಪ್ರಾಪ್ತ ಮಗಳಿಗೆ ಮದುವೆ ಮಾಡಿದ ಪೋಷಕರು.. ರಕ್ಷಣೆ ಬಳಿಕ ಬಾಲಕಿಗೆ ಕೊರೊನಾ ಪಾಸಿಟಿವ್
ಕೊರೊನಾ ಭಯದ ನಡುವೆ ಮೈಸೂರು ಕಾಡಂಚಿನ ಗ್ರಾಮದ ಜನರಲ್ಲಿ ಹೆಚ್ಚಾದ ಹುಲಿ ಭಯ, ಕೂಂಬಿಂಗ್ ನಡೆಸಿದರೂ ಪ್ರಯೋಜನವಾಗಿಲ್ಲ