Corona warriors: ಕೊರೊನಾ ಸೋಂಕಿತರ ನೆರವಿಗೆ ನಿಂತ ಉಡುಪಿ ಮೂಲದ ಉದ್ಯಮಿ; ವಿದೇಶದಿಂದಲೇ ಹಳ್ಳಿಗರ ಸಂಕಷ್ಟಕ್ಕೆ ಸಾಥ್
ಉಡುಪಿಯ ಸಮಾಜಸೇವಕರಾಗಿರುವ ಉದ್ಯಮಿ ಮಣೆಗಾರ್ ಮಿರಾನ್ ಸಾಹೇಬ 75 ಸಾವಿರ ರೂಪಾಯಿ ಮೌಲ್ಯದ 50 Corona warriors: ಆಕ್ಸಿಜನ್ ಕನ್ಸಂಟ್ರೆಟರ್ ವಿತರಣೆ ಮಾಡಿ ಮಾನವೀಯತೆ ಮೆರೆದಿದ್ದಾರೆ . ಇನ್ನು ರೋಗಿಗಳ ಸಾಗಾಟಕ್ಕೆ 35 ಲಕ್ಷ ಮೌಲ್ಯದ ಅಂಬ್ಯುಲೆನ್ಸ್, , 25 ಲಕ್ಷಕ್ಕೂ ಹೆಚ್ಚಿನ ಫುಡ್ ಕಿಟ್ಗಳು, 10 ಲಕ್ಷಕ್ಕೂ ಅಧಿಕ ಪ್ರಮಾಣದ ಮೆಡಿಸಿನ್ಗಳನ್ನು ಸಾರ್ವಜನಿಕರಿಗೆ ವಿತರಿಸಿದ್ದಾರೆ.
ಉಡುಪಿ: ಹಳ್ಳಿಹಳ್ಳಿಗೆ ಕೊರೋನಾ ಮಹಾಮಾರಿ ವ್ಯಾಪಿಸು ವುದರ ಜೊತೆಗೆ ಜನರ ಸಾವಿನ ಪ್ರಮಾಣವು ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಗ್ರಾಮಗಳನ್ನು ಕೊರೋನ ಮುಕ್ತಗೊಳಿಸಬೇಕು ಎಂದು ಜಿಲ್ಲಾಧಿಕಾರಿಗೆ ಪ್ರಧಾನಿಯವರು ಕಿವಿಮಾತು ಹೇಳಿದ್ದರು. ಆದರೆ ಉಡುಪಿಯ ಈ ಒಂದು ಪ್ರದೇಶದಲ್ಲಿ ಮಾತ್ರ ಅಧಿಕಾರಿಗಳಿಗಿಂತಲು ಹೆಚ್ಚಿನ ಮುತುವರ್ಜಿ ವಹಿಸಿಕೊಂಡು ಜನರೇ ಕೊರೊನಾ ವಿರುದ್ಧ ಹೋರಾಟಕ್ಕೆ ಇಳಿದಿದ್ದಾರೆ. ಹಿರಿಯ ಉದ್ಯಮಿ ಮತ್ತು ಸಮಾಜಸೇವಕರಾಗಿರುವ ಮಣೆಗಾರ್ ಮಿರಾನ್ ಸಾಹೇಬ ಕುಟುಂಬ ತಮ್ಮ ಊರಾಗಿರುವ ಶಿರೂರನ್ನು ಕುರುಣಾ ಮುಕ್ತಗೊಳಿಸಲು ಕೋಟ್ಯಾಂತರ ರೂಪಾಯಿ ಹಣ ವ್ಯಯಿಸಿದ್ದಾರೆ.
ಆಕ್ಸಿಜನ್ ಸಮಸ್ಯೆಯಿಂದ ಕೊರೋನಾ ರೋಗಿಗಳ ಮರಣ ಪ್ರಮಾಣ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಉಡುಪಿಯ ಸಮಾಜಸೇವಕರಾಗಿರುವ ಉದ್ಯಮಿ ಮಣೆಗಾರ್ ಮಿರಾನ್ ಸಾಹೇಬ 75 ಸಾವಿರ ರೂಪಾಯಿ ಮೌಲ್ಯದ 50 ಆಕ್ಸಿಜನ್ ಕನ್ಸಂಟ್ರೆಟರ್ ವಿತರಣೆ ಮಾಡಿ ಮಾನವೀಯತೆ ಮೆರೆದಿದ್ದಾರೆ . ಇನ್ನು ರೋಗಿಗಳ ಸಾಗಾಟಕ್ಕೆ 35 ಲಕ್ಷ ಮೌಲ್ಯದ ಅಂಬ್ಯುಲೆನ್ಸ್, , 25 ಲಕ್ಷಕ್ಕೂ ಹೆಚ್ಚಿನ ಫುಡ್ ಕಿಟ್ಗಳು, 10 ಲಕ್ಷಕ್ಕೂ ಅಧಿಕ ಪ್ರಮಾಣದ ಮೆಡಿಸಿನ್ಗಳನ್ನು ಸಾರ್ವಜನಿಕರಿಗೆ ವಿತರಿಸಿದ್ದಾರೆ.
ಉಡುಪಿ ಜಿಲ್ಲೆಯ ಉತ್ತರದ ತುದಿಯಾಗಿರುವ ಶಿರೂರು ಪ್ರದೇಶ ಅತ್ಯಂತ ಹಿಂದುಳಿದ ಗ್ರಾಮಗಳನ್ನು ಹೊಂದಿದ್ದು, ಇಲ್ಲಿನ ಅನೇಕ ಗ್ರಾಮಗಳಿಗೆ ಇನ್ನೂ ಮೂಲಭೂತ ಸೌಕರ್ಯಗಳು ಸರಿಯಾಗಿ ತಲುಪಿಲ್ಲ. ಈ ಹಿನ್ನೆಲೆಯಲ್ಲಿ ಮೂಲತಹ ಈ ಊರಿನವರೇ ಆಗಿದ್ದು, ಸದ್ಯ ವಿದೇಶದಲ್ಲಿ ಉದ್ಯಮ ನಡೆಸುತ್ತಿರುವ ಮಿರಾನ್ ಸಾಹೇಬರು ತನ್ನ ಊರಿನ ಉಳಿವಿಗಾಗಿ ಪಣತೊಟ್ಟಿದ್ದಾರೆ.
ಕಳೆದ ವರ್ಷ ಮಿರಾನ್ ಸಾಹೇಬ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ ಒಲಿದುಬಂದಿತ್ತು. ಸದ್ಯ ಮಿರಾನ್ ಸಾಹೇಬ ಅವರು ವಿದೇಶದಲ್ಲಿದ್ದು, ಅವರ ಮನಸ್ಸು ಮಾತ್ರ ಊರಲ್ಲೇ ಇದೆ. ಊರಲ್ಲಿ ಉದ್ಯೋಗ ವಂಚಿತರಾಗಿರುವ ಸುಮಾರು ಎರಡೂವರೆ ಸಾವಿರ ಜನರಿಗೆ ಒಂದು ತಿಂಗಳಿಗಾಗುವಷ್ಟು ಆಹಾರ ಕಿಟ್ಗಳನ್ನು ವಿತರಿಸಿ ಜಿಲ್ಲಾಡಳಿತವೇ ಹುಬ್ಬೇರಿಸುವಂತೆ ಮಾಡಿದ್ದಾರೆ. ಇನ್ನು ಸರಕಾರಿ ಆಸ್ಪತ್ರೆಗಳಲ್ಲಿ ಮೆಡಿಸಿನ್ಗಳ ಕೊರತೆ ಬರಬಾರದು ಎಂದು 200 ಕುಟುಂಬಗಳಿಗೆ ಆಗುವಷ್ಟು ಔಷಧಿಯನ್ನು ಖರೀದಿಸಿ ನೀಡಿದ್ದಾರೆ. ಆಶಾ ಕಾರ್ಯಕರ್ತೆಯರಿಗೆ ಮಿರಾನ್ ಸಾಹೇಬ್ ಅವರು 22 ಆಕ್ಸಿ ಮೀಟರ್ಗಳನ್ನು ನೀಡಿದ್ದಾರೆ.
ಈ ಎಲ್ಲಾ ವಸ್ತುಗಳನ್ನು ಜನಸಾಮಾನ್ಯರಿಗೆ ವಿತರಿಸಲು ಸ್ಥಳೀಯ ಜಮಾತ್ ಮತ್ತು ಕೊರೊನಾ ವಾರಿಯರ್ಸ್ಗಳ ತಂಡವನ್ನು ರಚಿಸಲಾಗಿದೆ. ಗ್ರಾಮೀಣ ಪ್ರದೇಶದಲ್ಲಿ ಒಂದು ಸರಕಾರಿ ವ್ಯವಸ್ಥೆ ಮಾಡಬೇಕಾದ ಕೆಲಸವನ್ನು ತಾವೇ ಮಾಡಿ ಕೋಟ್ಯಾಂತರ ರೂಪಾಯಿ ಖರ್ಚು ಮಾಡಿರುವ ಈ ಕೋಟಿಗೊಬ್ಬನ ಮಾನವೀಯ ಮನಸ್ಸಿಗೆ ನಮ್ಮದೊಂದು ಸಲಾಂ
ಅಮೇರಿಕಾದಲ್ಲಿ ನೆಲೆಸಿರುವ ವ್ಯಕ್ತಿಯಿಂದ ತಮ್ಮೂರಿನ ಜನರಿಗೆ ನೆರವು ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಬೆನಮನಹಳ್ಳಿಗೆ ಅಮೆರಿಕದಲ್ಲಿರುವ ಬಿ.ಕೆ.ಚಿಕ್ಕಸ್ವಾಮಿ ನೆರವು ನೀಡಿದ್ದಾರೆ. ಬೆನಮನಹಳ್ಳಿಯ 200 ಕುಟುಂಬಗಳಿಗೆ ತಲಾ 3 ಸಾವಿರ ರೂಪಾಯಿ ನಗದು ಹಂಚಿದ ಬಿ.ಕೆ.ಚಿಕ್ಕಸ್ವಾಮಿ. ಅಮೇರಿಕಾದಲ್ಲಿ ನೆಲೆಸಿದ್ದರೂ, ಕೊರೊನಾದ ಈ ಸಂದರ್ಭದಲ್ಲಿ ಸಂಕಷ್ಟದಲ್ಲಿರುವ ತಮ್ಮೂರಿನ ಜನರಿಗೆ ಸಹಾಯ ಮಾಡಿದ್ದಾರೆ. ಸಂಬಂಧಿಕರ ಮೂಲಕ ಹಣ ಹಂಚಿಕೆ ಮಾಡಲಾಗಿದ್ದು, ಚಿನ್ನಸ್ವಾಮಿ ಕುಟುಂಬಸ್ಥರು ಊರಿನ ಮನೆ ಮನೆಗೆ ತೆರಳಿ ನೆರವಿನ ಹಣ ನೀಡಿದ್ದಾರೆ.
ಇದನ್ನೂ ಓದಿ:
ಕೊರೊನಾ ಚಿಕಿತ್ಸೆಗೆ ನೆರವು, ಆರ್ಥಿಕ ಸಹಾಯ, ಅರ್ಹ ಮಕ್ಕಳಿಗೆ ಉಚಿತ ಶಿಕ್ಷಣ; ಸುತ್ತೂರು ಮಠದಿಂದ ಹಲವು ಸತ್ಕಾರ್ಯ
ಗ್ರಾಮೀಣ ಭಾಗದ ಜನರಿಗೆ ನನ್ನ ನೆರವು ಬಳಕೆಯಾಗಲಿ! ಕೊರೊನಾ ವಿರುದ್ಧದ ಹೋರಾಟಕ್ಕೆ ಕೈ ಜೋಡಿಸಿದ ರಿಷಭ್ ಪಂತ್