BEML ಖಾಸಗೀಕರಣ ವಿರೋಧಿಸಿ ತಮಟೆ ಚಳುವಳಿ: ಮೋದಿ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಕಾರ್ಮಿಕರ ಆಕ್ರೋಶ

| Updated By: ಸಾಧು ಶ್ರೀನಾಥ್​

Updated on: Feb 16, 2021 | 4:53 PM

BEML ಖಾಸಗೀಕರಣ ವಿರೋಧಿಸಿ ಕಂಪನಿ ನೌಕರರು ಪ್ರತಿಭಟನೆ ನಡೆಸಿದ ಘಟನೆ ನಡೆದಿದೆ. BEML ಕಾರ್ಖಾನೆ ಬಳಿ ಸಂಸ್ಥೆ ಸಿಬ್ಬಂದಿ ತಮಟೆ ಚಳುವಳಿ ನಡೆಸಿ ಧರಣಿಗೆ ಮುಂದಾದರು. ಕಾರ್ಮಿಕರ ಚಳುವಳಿಯಲ್ಲಿ ಮಾಜಿ ಶಾಸಕ M.K.ಸೋಮಶೇಖರ್​ ಸಹ ಭಾಗಿಯಾದರು.

BEML ಖಾಸಗೀಕರಣ ವಿರೋಧಿಸಿ ತಮಟೆ ಚಳುವಳಿ: ಮೋದಿ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಕಾರ್ಮಿಕರ ಆಕ್ರೋಶ
BEML ಖಾಸಗೀಕರಣ ವಿರೋಧಿಸಿ ತಮಟೆ ಚಳುವಳಿ
Follow us on

ಮೈಸೂರು: ಕರ್ನಾಟಕ ಮೂಲದ ಕೇಂದ್ರ ಸರ್ಕಾರಿ ಸ್ವಾಮ್ಯದ ಬಿಇಎಂಎಲ್ (BEML) ಸಂಸ್ಥೆಯ ಪ್ರಸ್ತಾವಿತ ಖಾಸಗೀಕರಣವನ್ನು ವಿರೋಧಿಸಿ ಕಂಪನಿ ನೌಕರರು ಪ್ರತಿಭಟನೆ ನಡೆಸಿದ್ದಾರೆ. BEML ಕಾರ್ಖಾನೆ ಬಳಿ ಸಂಸ್ಥೆಯ ಸಿಬ್ಬಂದಿ ತಮಟೆ ಚಳುವಳಿ ನಡೆಸಿ ಧರಣಿಗೆ ಮುಂದಾದರು. ಕಾರ್ಮಿಕರ ಚಳುವಳಿಯಲ್ಲಿ ಮಾಜಿ ಶಾಸಕ M.K. ಸೋಮಶೇಖರ್​ ಸಹ ಭಾಗಿಯಾದರು.

ಕೇಂದ್ರ BJP ಸರ್ಕಾರದ ಧೋರಣೆ ಖಂಡಿಸಿ ಕಾರ್ಮಿಕರು ಚಳುವಳಿ ನಡೆಸಿದರು. ಮೋದಿ ಸರ್ಕಾರದ ವಿರುದ್ಧ ಘೋಷಣೆ ಕೂಗಿ ತಮ್ಮ ಆಕ್ರೋಶ ಹೊರಹಾಕಿದರು. ಜೊತೆಗೆ, BEML ಕಂಪನಿಯನ್ನು ಖಾಸಗೀಕರಣ ಮಾಡದಂತೆ ಒತ್ತಾಯ ಮಾಡಿದರು.

ಇದನ್ನೂ ಓದಿ: ಬಿಜೆಪಿಗೆ ಹೆಣ್ಣು ಮಕ್ಕಳ ಮೇಲೆ ಗೌರವ ಇಲ್ಲ; ಕಾಂಗ್ರೆಸ್ ವಕ್ತಾರ ಎಂ.ಲಕ್ಷ್ಮಣ