ಬೆಂಗಳೂರು: ನೇಣು ಬಿಗಿದುಕೊಂಡು 12 ವರ್ಷದ ಬಾಲಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಘಟನೆ ಬೆಂಗಳೂರಿನ ರಾಜಾಜಿನಗರದ ಮನೆಯೊಂದರಲ್ಲಿ ನಡೆದಿದೆ. ನೇಣಿಗೆ ಶರಣಾದ ಬಾಲಕ ಒಂದು ಸಾಲಿನ ಡೆತ್ ನೋಟ್ ಬರೆದಿಟ್ಟಿದ್ದಾನೆ. ಡೆತ್ ನೋಟ್ನಲ್ಲಿ ನನ್ನ ಸಾವಿಗೆ ಮತ್ತೊಬ್ಬ ಬಾಲಕ ಕಾರಣ ಎಂದು ಉಲ್ಲೇಖಿಸಿದ್ದಾನೆ. ಬಾಲಕನ ತಂದೆ ಚಾಲಕನಾಗಿ ಕೆಲಸ ಮಾಡಿಕೊಂಡಿದ್ದರು. ಅಮ್ಮ ಮನೆ ಕೆಲಸ ಮಾಡಿಕೊಂಡಿದ್ದರು.
ನಿನ್ನೆ ಸಂಜೆ (ಜೂನ್ 30) ಬಾಲಕನ ತಾಯಿ ಮನೆ ಕೆಲಸ ಮಾಡಿ ಮನೆಗೆ ವಾಪಸ್ಸಾಗಿದ್ದಾರೆ. ಈ ವೇಳೆ ಮಗ ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ. ಬಾಲಕನ ಆತ್ಮಹತ್ಯೆ ನೈಜ ಕಾರಣವೇನು ಎಂದು ಇನ್ನು ತಿಳಿದುಬಂದಿಲ್ಲ. ಸದ್ಯ ಮರಣೋತ್ತರ ಪರೀಕ್ಷೆಗಾಗಿ ಬಾಲಕನ ಮೃತದೇಹ ವಿಕ್ಟೋರಿಯಾ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ.
ಹಣದ ಕಿರುಕುಳ; ವ್ಯಕ್ತಿ ನೇಣಿಗೆ ಶರಣು
ಹಣದ ವಿಚಾರವಾಗಿ ಕಿರುಕುಳ ನೀಡಿದ ಹಿನ್ನೆಲೆ ವ್ಯಕ್ತಿಯೋರ್ವ ನೇಣಿಗೆ ಶರಣಾಗಿದ್ದಾನೆ. ಬಾಗಲಗುಂಟೆಯಲ್ಲಿ ಗುರುಪ್ರಸಾದ್(35) ಎಂಬಾತ ಆತ್ಮಹತ್ಯೆ ಶರಣಾದ ವ್ಯಕ್ತಿ. ಪತ್ನಿ ಶಿಲ್ಪಳನ್ನ ತವರು ಮನೆಗೆ ಕಳಿಸಿ ಮನೆಯಲ್ಲಿ ಫ್ಯಾನಿಗೆ ನೇಣು ಬಿಗಿದುಕೊಂಡಿದ್ದಾರೆ. ಗುರುಪ್ರಸಾದ್ ಉನ್ನತಿ ಚಾರಿಟಬಲ್ ಟ್ರಸ್ಟ್ ಸೆಕ್ರೆಟರಿ. ಸಾರ್ವಜನಿಕರ ಬಳಿ ದೇಣಿಗೆ ಸಂಗ್ರಹಿಸಿ ಎನ್ಜಿಓಗೆ ಹಣ ನೀಡಿದ್ದರು. ಸಂಗ್ರಹಿಸಿ ಕೊಟ್ಟ ಹಣಕ್ಕೆ ಕಮಿಷನ್ ಕೊಡದೆ ಮೋಸ ಮಾಡಿರುವ ಅರೋಪ ಹಿನ್ನೆಲೆ ಕಿರುಕುಳಕ್ಕೆ ಬೇಸತ್ತು ಗುರುಪ್ರಸಾದ್ ಆತ್ಮಹತ್ಯೆಗೆ ಮುಂದಾಗಿದ್ದಾರೆ. ಪತಿ ಆತ್ಮಹತ್ಯೆ ವಿರುದ್ಧ ಬಾಗಲಗುಂಟೆ ಪೋಲಿಸ್ ಠಾಣೆಗೆ ಪತ್ನಿ ಶಿಲ್ಪ ದೂರು ನೀಡಿದ್ದಾರೆ.
ಇದನ್ನೂ ಓದಿ
Twitter Down: ತಾಂತ್ರಿಕ ದೋಷಗಳನ್ನು ಸರಿಪಡಿಸಲಾಗುತ್ತಿದೆ; ಬಳಕೆದಾರರಿಗೆ ಉಂಟಾದ ಅಡಚಣೆಯನ್ನು ಸರಿಪಡಿಸಿದ ಟ್ವಿಟರ್
(Bengaluru 12 year old boy commits suicide in rajajinagar)
Published On - 10:55 am, Thu, 1 July 21