Ease of Living Index: ದೇಶದಲ್ಲಿ ಜೀವಿಸಲು ಬೆಂಗಳೂರು ನಗರವೇ ಬೆಸ್ಟ್; ಮಹಾನಗರಗಳ ಪೈಕಿ ಕರ್ನಾಟಕ ರಾಜಧಾನಿಗೆ ಪ್ರಥಮ ಸ್ಥಾನ

|

Updated on: Jun 05, 2021 | 3:34 PM

Bengaluru best: 10 ಲಕ್ಷಕ್ಕಿಂತ ಕಡಿಮೆ ಜನಸಂಖ್ಯೆ ಇರುವ ನಗರಗಳ ಪಟ್ಟಿಯಲ್ಲಿ  ಶಿಮ್ಲಾಗೆ ಮೊದಲ ಸ್ಥಾನ ದಕ್ಕಿದ್ದರೆ ಕರ್ನಾಟಕದ ದಾವಣಗೆರೆಗೆ 9ನೇ ಸ್ಥಾನ ಸಿಕ್ಕಿದೆ ಎಂದು ಕೇಂದ್ರ ವಸತಿ, ನಗರಾಭಿವೃದ್ಧಿ ಇಲಾಖೆಯಿಂದ ನಡೆದ ಮೌಲ್ಯಮಾಪನದಲ್ಲಿ ತಿಳಿಸಲಾಗಿದೆ.  

Ease of Living Index: ದೇಶದಲ್ಲಿ ಜೀವಿಸಲು ಬೆಂಗಳೂರು ನಗರವೇ ಬೆಸ್ಟ್; ಮಹಾನಗರಗಳ ಪೈಕಿ ಕರ್ನಾಟಕ ರಾಜಧಾನಿಗೆ ಪ್ರಥಮ ಸ್ಥಾನ
ಬೆಂಗಳೂರು
Follow us on

ಬೆಂಗಳೂರು: ಭಾರತದ ದೇಶದಲ್ಲಿ ಜೀವನ ನಡೆಸಲು ಕರ್ನಾಟಕದ ರಾಜಧಾನಿ ಬೆಂಗಳೂರು ಮಹಾನಗರವೇ ಬೆಸ್ಟ್ ಅಂತೆ. ದೇಶದ ಮಹಾನಗರಗಳ ಪೈಕಿ ಬೆಂಗಳೂರು ಪ್ರಥಮ ಸ್ಥಾನ ಪಡೆದುಕೊಂಡಿದೆ. ಪುಣೆಗೆ 2ನೇ ಸ್ಥಾನ ದಕ್ಕಿದ್ದರೆ ಅಹಮದಾಬಾದ್ 3 ಮತ್ತು ಚೆನ್ನೈ 4ನೇ ಸ್ಥಾನದಲ್ಲಿದೆ. ಆದರೆ ರಾಷ್ಟ್ರ ರಾಜಧಾನಿ ದೆಹಲಿಗೆ 13ನೇ ಸ್ಥಾನ ಪ್ರಾಪ್ತಿಯಾಗಿದೆ. ಈಸಿ ಆಫ್ ಲಿವಿಂಗ್ ಇಂಡೆಕ್ಸ್ 2020ರಲ್ಲಿ (Ease of Living Index ) ಬೆಂಗಳೂರಿಗೆ ಅಗ್ರ ಸ್ಥಾನ ನೀಡಿದೆ.

ಕೇಂದ್ರದ ವಸತಿ, ನಗರಾಭಿವೃದ್ಧಿ ಇಲಾಖೆಯಿಂದ ಈ ಱಂಕಿಂಗ್ ಕೊಡಮಾಡಲಾಗಿದೆ. 14 ಕೆಟಗರಿಗಳ 49 ಮಾನದಂಡ ಆಧರಿಸಿ ಱಂಕಿಂಗ್ ನೂಡಲಾಗಿದೆ. ಜೀವನದ ಗುಣಮಟ್ಟ, ಆರ್ಥಿಕ ಸಾಮರ್ಥ್ಯ, ಸುಸ್ಥಿರತೆ ಸೇರಿ 49 ಮಾನದಂಡ ಅನುಸರಿಸಿ ನಗರಗಳಿಗೆ ಱಂಕಿಂಗ್ ನೀಡಿಕೆಯಾಗಿದೆ. ದೇಶದ 49 ನಗರಗಳ ಮಹಾ ಮೌಲ್ಯಮಾಪನ ಮಾಡಿ  ಈ ಶ್ರೇಣಿಯನ್ನು ಗುರುತಿಸಲಾಗಿದೆ.

ಇನ್ನು, 10 ಲಕ್ಷಕ್ಕಿಂತ ಕಡಿಮೆ ಜನಸಂಖ್ಯೆ ಇರುವ ನಗರಗಳ ಪಟ್ಟಿಯಲ್ಲಿ  ಶಿಮ್ಲಾಗೆ ಮೊದಲ ಸ್ಥಾನ ದಕ್ಕಿದ್ದರೆ ಕರ್ನಾಟಕದ ದಾವಣಗೆರೆಗೆ 9ನೇ ಸ್ಥಾನ ಸಿಕ್ಕಿದೆ ಎಂದು ಕೇಂದ್ರ ವಸತಿ, ನಗರಾಭಿವೃದ್ಧಿ ಇಲಾಖೆಯಿಂದ ನಡೆದ ಮೌಲ್ಯಮಾಪನದಲ್ಲಿ ತಿಳಿಸಲಾಗಿದೆ.

(Bengaluru adjudged the most liveable among 111 cities in India says Ease of Living Index India)

ಬೆಂಗಳೂರು ಮೆಟ್ರೋ ವಿಸ್ತೃತ ಮಾರ್ಗ ಜುಲೈನಲ್ಲಿ ಸಂಚಾರಕ್ಕೆ ಆರಂಭ: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ